ಯಾವತ್ತೂ ಸಿನಿಮಾ ಸಾಕು ಎಂದೆನಿಸಿಲ್ಲ


Team Udayavani, Apr 27, 2018, 12:30 AM IST

IMG_0032.jpg

ಬಹುಶಃ ಇಡೀ ಭಾರತೀಯ ಚಿತ್ರರಂಗದಲ್ಲಿ ಇಷ್ಟು ಸುಧೀರ್ಘ‌ವಾಗಿ ಚಿತ್ರ ಮಾಡಿದ ನಿರ್ದೇಶಕರ ಉದಾಹರಣೆ ಸಿಗುವುದು ಬಹಳ ಕಡಿಮೆ. ಕನ್ನಡ ಚಿತ್ರರಂಗದಲ್ಲಿ ಅಂಥದ್ದೊಂದು ಉದಾಹರಣೆಯಾಗಿ ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ನಿಲ್ಲುತ್ತಾರೆ. ನಾಗಾಭರಣ ಅವರು “ಗ್ರಹಣ’ ಮೂಲಕ ನಿರ್ದೇಶಕರಾಗಿ 36 ವರ್ಷಗಳಾಗಿವೆ. ಈ 36 ವರ್ಷಗಳ ಅವರ ಚಿತ್ರಜೀವನದಲ್ಲಿ ಇಂದು ಅವರ 36ನೇ ಚಿತ್ರವಾಗಿ “ಕಾನೂರಾಯಣ’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಶಿಸ್ತಿನ ಬಗ್ಗೆ ಬೆಳಕು ಚೆಲ್ಲಲಾಗಿದೆ. ಕಮರ್ಷಿಯಲ್‌, ಕಲಾತ್ಮಕ, ಬ್ರಿಡ್ಜ್ ಹೀಗೆ ಮೂರು ಪ್ರಕಾರದ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಾಗಾಭರಣ, ತಮ್ಮ ಸುದೀರ್ಘ‌ ಚಿತ್ರ ಜೀವನದ ಬಗ್ಗೆ, ತಮ್ಮ ಚಿತ್ರಗಳ ಬಗ್ಗೆ, ತತ್ವ-ನಿಲುವುಗಳ ಬಗ್ಗೆ ಮನದ ಮಾತುಗಳನ್ನಾಡಿದ್ದಾರೆ.

“ಕಾನೂರಾಯಣ’ ನನ್ನ 36ನೇ ಚಿತ್ರ. ನಾನು ಪ್ರತಿ ಚಿತ್ರದಲ್ಲೂ ನಿರ್ಮಾಪಕರ ಜೊತೆಗೆ ಬೆಳೆದು ಬಂದೆ. ನನ್ನ ನಂಬಿಕೆ ಏನೆಂದರೆ, ಯಾವುದೇ ಚಿತ್ರವಾಗಲೀ ಮೊದಲು ನಿರ್ಮಾಪಕರು ಕನ್ವಿನ್ಸ್‌ ಆಗಬೇಕು. ನಾವು ನಿರ್ಮಾಪಕರನ್ನೇ ಕನ್ವಿನ್ಸ್‌ ಮಾಡುವುದಕ್ಕೆ ಆಗದಿದ್ದರೆ, ಬೇರೆಯವರ ಮನವೊಲಿಸುವುದು ಹೇಗೆ? ಹಾಗಾಗಿ ಮೊದಲು ನಿರ್ಮಾಪಕರು ಒಂದು ಕಥೆ ಒಪ್ಪಬೇಕು. ಒಪ್ಪಿಸಿದಾಗಲೆಲ್ಲಾ ಗೆದ್ದಿದ್ದೀನಿ ಮತ್ತು ಸೋತಾಗಲೆಲ್ಲಾ ಸಿನಿಮಾಗಳು ಸೋತಿವೆ. ಯಾವಾಗ ನಿರ್ಮಾಪಕರು ನಂಬಿ, ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತಾರೋ, ಆಗ ಸಿನಿಮಾಗಳು ಗೆದ್ದಿವೆ. ಅದೇ ಕಾರಣಕ್ಕೆ ನಾನು ಅದೇ ನಿರ್ಮಾಪಕರ ಜೊತೆಗೆ ಮೂರ್‍ನಾಲ್ಕು ಚಿತ್ರಗಳನ್ನು ಮಾಡೋದಕ್ಕೆ ಸಾಧ್ಯವಾಯಿತು. ಮೊದಲ ಸಿನಿಮಾದಲ್ಲೇ ಸಾಕಷ್ಟು ಏಳುಬೀಳು ಕಂಡಿದ್ದರಿಂದ ನನಗೆ ಇದು ಮೊದಲ ಸಿನಿಮಾದಲ್ಲೇ ಚೆನ್ನಾಗಿ ಅರ್ಥವಾಯಿತು. ಇಲ್ಲಿ ಸದಾ ಓಡುವವನಿಗೆ ಮಾತ್ರ ಜಾಗ. ನಿಂತರೆ ಜಾಗ ಇಲ್ಲ. ಹಾಗಾಗಿ ವರ್ಷಕ್ಕೆ ಒಂದು ಸಿನಿಮಾನಾದರೂ ಮಾಡುತ್ತಲೇ ಇರುತ್ತೇನೆ. ಕೆಲವು ಚಿತ್ರಗಳು ಕಾರಣಾಂತರಗಳಿಂದ ತಡವಾಗಬಹುದು. ಆದರೂ ಈ 36 ವರ್ಷಗಳಲ್ಲಿ 36 ಸಿನಿಮಾಗಳನ್ನು ಮಾಡಿದ್ದೀನಿ.

ಪ್ರತೀ ಚಿತ್ರಕ್ಕೂ ನಾನು ಕಥೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹಲವರು ಕೇಳುತ್ತಾರೆ. ಪ್ರಮುಖವಾಗಿ ಯಾವುದೇ ಕಥೆಯಾಗಲಿ, ಅದು ನನ್ನ ಮನಸ್ಸು ಕಲಕಬೇಕು. ಯೋಚನೆಗೆ ಈಡು ಮಾಡಬೇಕು. ಅಂತಃಕರಣಕ್ಕೆ ತಟ್ಟಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದು ವಿಷಯ ಕಮ್ಯುನಿಕೇಟ್‌ ಮಾಡಬೇಕು. ಅಂತಹ ಗುಣಗಳಿರುವ ಕಥೆಗಳಿಗೆ ನನ್ನ ಪ್ರಾಶಸ್ತ್ಯ. ನನ್ನ ಬಳಿ ಹಲವು ಕಥೆಗಳಿವೆ. ಅದರಲ್ಲಿ ಯಾವುದು ಚಿತ್ರ ಆಗುತ್ತದೆ ಅಂತ ಹೇಳ್ಳೋದು ಕಷ್ಟ. ಇದರಲ್ಲಿ ನಿರ್ಮಾಪಕರು ಮತ್ತು ಅವರ ಮನಸ್ಥಿತಿ ಮುಖ್ಯ. ಶಿವರಾಜಕುಮಾರ್‌ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸಬೇಕು ಅಂತ ನಿರ್ಮಾಪಕರು ಬಂದರೆ, ಶಿವರಾಜ ಕುಮಾರ್‌ ಅವರಿಗೆ ಹೊಂದುವ ಕಥೆ ನನ್ನಲ್ಲಿ ಇರಬೇಕಲ್ಲ? ಮೊದಲು ಕಥೆ, ಆ ನಂತರ ಹೀರೋ ಎಂಬುದು ನನ್ನ ನಂಬಿಕೆ. ನನ್ನ ಬಳಿ “ಜನುಮದ ಜೋಡಿ’ ಮತ್ತು “ಚಿಗುರಿದ ಕನಸು’ ಕಥೆಗಳು ಮೊದಲೇ ಇದ್ದವು. ಆ ನಂತರ ಶಿವರಾಜಕುಮಾರ್‌ ಬಂದರು. ವ್ಯಕ್ತಿಗೆ ಹೊಂದಿಸಿ ಬರೆದರೆ ಅಥವಾ ಸುಮ್ಮನೆ ಏನೋ ತುರುಕಿದರೆ ಸಮಸ್ಯೆಯಾಗುತ್ತದೆ. ಆ ಸಮಸ್ಯೆಯನ್ನೂ ಎದುರಿಸಿದ್ದೇನೆ. ಹಾಗಾಗಿ ಮೊದಲು ಕಥೆ ಆಗಬೇಕು. ಕಥೆಯಾದ ಮೇಲೆ ಬೇರೆ ವಿಷಯಗಳ ಮೇಲೆ ಗಮನಹರಿಸುತ್ತೇನೆ.

ಈ ಸಿನಿಮಾ ಮುಗಿಯಿತು, ಮುಂದೇನು ಎಂಬ ಪ್ರಶ್ನೆ ನನ್ನನ್ನು ಯಾವತ್ತೂ ಕಾಡೇ ಇಲ್ಲ. ಏಕೆಂದರೆ, ನಾನ್ಯಾವತ್ತೂ ರಂಗಭೂಮಿ ಮತ್ತು ಕಿರುತೆರೆಯ ನಂಟನ್ನು ಬಿಟ್ಟೇ ಇಲ್ಲ. ಈ ಮಾಧ್ಯಮದಲ್ಲಿ ಒಂದು ಲಕ್ಷ ಕೆಲಸಗಳಿವೆ. ಹಾಗಾಗಿ ಒಂದು ಸಿನಿಮಾ ಮುಗಿದ ಮೇಲೆ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೀನಿ. ಇದು ದೃಶ್ಯ ಮಾಧ್ಯಮದ ಸಾಧ್ಯತೆ. ಕೆಲಸ ಮಾಡಬೇಕು ಎಂದರೆ ಎಲ್ಲೂ ನಿಲ್ಲದೆ ಕೆಲಸ ಮಾಡಬಹುದು. ಹಿರಿತೆರೆ, ಕಿರುತೆರೆಯಲ್ಲಿ ಕೆಲಸ ಮಾಡಿ ಸಾಕಾಗಿದೆ ಎಂದರೆ, ರಂಗಭೂಮಿಯಲ್ಲಿ ತೊಡಗಿಸಿ ಕೊಳ್ಳುತ್ತೇನೆ. ಒಮ್ಮೆ ವೇದಿಕೆ ಹತ್ತಿ ಬಂದರೆ, ಹೊಸ ಶಕ್ತಿ ಬರುತ್ತದೆ. ಇದಲ್ಲದೆ ಓದು, ತರಬೇತಿ, ಭಾಷಣ ಹೀಗೆ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಹಲವು ಪಾಲಿಸಿ ಮ್ಯಾಟರ್‌ ನಿರ್ಧಾರಗಳಲ್ಲಿ ಭಾಗಿಯಾಗಿರುತ್ತೀನಿ. ಇದೆಲ್ಲಾ ಹೊಸ ಚೈತನ್ಯ ಕೊಡುತ್ತದೆ. ಏನೇ ಮಾಡಿದರೂ ರಾಜಕೀಯದಿಂದ ದೂರ ಇರುವುದಕ್ಕೆ ಬಯಸು ತ್ತೀನಿ. ಅದು ಚುನಾವಣೆ ರಾಜಕೀಯ ಇರಬಹುದು ಅಥವಾ ಸಿನಿಮಾ ರಾಜಕೀಯವಿರಬಹುದು. ಅದೇ ಕಾರಣಕ್ಕೆ ನಾನು ಯಾವತ್ತೂ ಗಾಂಧಿನಗರದ ಒಳಗೆ ಇರಲಿಲ್ಲ. ಹೊರಗಿದ್ದುಕೊಂಡೇ ಕೆಲಸ ಮಾಡುತ್ತಾ ಬಂದಿದ್ದೀನಿ. ಹಾಗಾಗಿಯೇ ಎರಡೂ ಕಡೆಯ ವರು ನನ್ನನ್ನು ಒಪ್ಪುವುದಿಲ್ಲ. ಈ ಸಂದಿಗ್ಧತೆ ಇದೆಯಾದರೂ, ನಾನು ನನ್ನ ಪಾಡಿಗೆ ಸಿನಿಮಾ ಮಾಡುತ್ತಲೇ ಇದ್ದೇನೆ.

ಒಂದು ಸಿನಿಮಾ ಯಾವ ರೀತಿ ಇರಬೇಕು? ಅದು ನಿರ್ದೇಶಕ ರೊಬ್ಬರ ವಿಚಾರ ಇರಬೇಕಾ? ಅಥವಾ ಅದೊಂದು ಸಾಂ ಕ ವಿಚಾರವಾಗಿರಬೇಕಾ? ಎಂಬ ಧ್ವಂಧ್ವಗಳು ನಮ್ಮಲ್ಲಿದೆ. ನನ್ನ ಪ್ರಕಾರ ಪ್ರೇಕ್ಷಕರ ಜೊತೆಗೆ ಸಂವಾದ ಮಾಡದಿದ್ದರೆ ಅದು ವ್ಯರ್ಥ. ಹಾಗಾಗಿ ನಾವು ಯಾವುದೇ ರೀತಿಯ ಸಿನಿಮಾ ಮಾಡಿದರೂ ಅದು ಜನರಿಗಾಗಿ ಮಾಡಬೇಕು. ನನ್ನ ಮೊದಲ ಸಿನಿಮಾ ಕಲಾತ್ಮಕ ಸಿನಿಮಾ ಆಗಿತ್ತು. ನಂತರ ಮಾಡಿದ “ಬಂಗಾರದ ಜಿಂಕೆ’ ಕಮರ್ಷಿ ಯಲ್‌ ಸಿನಿಮಾ ಆಗಿತ್ತು. ಹೀಗೆ ಕಲಾತ್ಮಕ ಮತ್ತು ಕಮರ್ಷಿಯಲ್‌ ಪ್ರಕಾರಕ್ಕೆ ಸೇತುವೆಯಾಗಿ ಕೆಲಸ ಮಾಡಿದರೆ, ಜನರನ್ನು ತಲುಪಬಹುದು ಎಂದು ನನಗೆ ಬಹಳ ಅರ್ಥವಾಯಿತು. ಪ್ರತಿ ಸಿನಿಮಾದಲ್ಲೂ ಒಂದು ಕಳಕಳಿ ಇಟ್ಟುಕೊಂಡು, ಕಮರ್ಷಿಯಲ್‌ ಅಂಶಗಳನ್ನು ಕ್ಲೀಷೆಯಾಗಿ ಬಳಸದೆ, ಹೊಸ ಪ್ರಯೋಗಗಳ ಮೂಲಕ ಸಿನಿಮಾ ಮಾಡುತ್ತಾ ಬಂದಿದ್ದೀನಿ. ಅದೇ ಕಾರಣಕ್ಕೆ ನನ್ನ ಸಿನಿಮಾಗಳಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳೂ ಸಿಕ್ಕಿವೆ, ಕಮರ್ಷಿಯಲ್‌ ಭಾಷೆಯಲ್ಲಿ ಹೇಳ್ಳೋ ದಾದರೆ, ಬ್ಲಾಕ್‌ಬಸ್ಟರ್‌ ಸಹ ಆಗಿವೆ. 80 ಲಕ್ಷದಲ್ಲಿ ಮಾಡಿದ “ಜನು ಮದ ಜೋಡಿ’ ಎಂಬ ಚಿತ್ರ ಒಂದೂವರೆ ವರ್ಷಗಳ ಕಾಲ 26 ಸೆಂಟರ್‌ಗಳಲ್ಲಿ ಪ್ರದರ್ಶನ ಕಂಡಿದೆ. 11 ಕೋಟಿ ದುಡ್ಡು ಮಾಡಿದೆ. ಅದೇ ಸಮಯಕ್ಕೆ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪಠ್ಯ ಕ್ರಮ ಆಗಿದೆ. ಇದು ಚಿತ್ರರಂಗದ ಇತಿಹಾಸದಲ್ಲೇ ಒಂದು ದಾಖಲೆ.

ವೃತ್ತಿಯಲ್ಲಿ ಏಳು-ಬೀಳು
ಈ ವೃತ್ತಿಯಲ್ಲಿ ಏಳು-ಬೀಳು ಎನ್ನುವುದು ಸಾಮಾನ್ಯ. ಒಂದು ಚಿತ್ರ ಸೋತಾಗ ಬಹಳ ದುಃಖ ಆಗುತ್ತದೆ. ಬಹಳ ಆಸೆಪಟ್ಟು ಮಾಡಿದ “ಚಿಗುರಿದ ಕನಸು’ ಸೋತು ಹೋಯಿತು. ಆ ಚಿತ್ರದ ನಂತರ ಕಾದಂಬರಿ ಆಧಾರಿತ ಚಿತ್ರಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ಪಾರ್ವತಮ್ಮ ಹೇಳಿದ್ದರು. ಒಂದು ಕಾಲ ದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡಿದವರು ಅವರೇ. ಚಿತ್ರ ಸೋತಾಗ ಬೇಸರದಿಂದ ಹೇಳಿ ದ್ದರು. ಪ್ರೇಕ್ಷಕರು ಆ ಕಾಲಘಟಕ್ಕೆ ಯಾಕೆ ಆ ಸಿನಿಮಾ ಸ್ವೀಕರಿಸಲಿಲ್ಲ ಎಂಬುದು ರಹಸ್ಯ. ಈಗಲೂ ಟಿವಿಯಲ್ಲಿ ಆ ಚಿತ್ರ ಪ್ರದರ್ಶನ ವಾದರೆ, ಮೆಚ್ಚಿ ಮಾತಾಡುವವರಿದ್ದಾರೆ. ಅವರೆಲ್ಲಾ ಆ ಚಿತ್ರವನ್ನು ಆಗಲೇ ನೋಡಿದ್ದರೆ, ಚಿತ್ರ ಸೋಲುತ್ತಿರಲಿಲ್ಲ, ಪಾರ್ವತಮ್ಮ ಬೇಸರಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗಾಗಿ ಒಂದು ಚಿತ್ರದ ಯಶಸ್ಸು ಹಾಗೂ ಸೋಲಿಗೆ ನಿರ್ದಿಷ್ಟ ಕಾರಣ ಹೇಳುವುದಕ್ಕೆ ಸಾಧ್ಯ ಇಲ್ಲ. “ನೀಲ’ ಸಹ ಸೋತಿತು. ಆ ತರಹದ್ದೊಂದು ಅದ್ಭುತ ಜಾನಪದ ಕಲೆಯನ್ನು ಯಾರೂ ಸಿನಿಮಾದಲ್ಲಿ ಬಳಸಿರಲಿಲ್ಲ. “ವಿಮೋಚನೆ’ ಅಪ್ಪಟ ಮಹಿಳಾ ಪ್ರಧಾನ ಚಿತ್ರವಾಗಿತ್ತು. ಆ ಕಾಲಕ್ಕೆ ಸ್ತ್ರೀ ಸಬಲೀಕರಣದ ವಿಷಯದ ಜೊತೆಗೆ ಕರ್ನಾಟಕ ಸಂಗೀತವನ್ನು ಬಹಳ ಅದ್ಭುತವಾಗಿ ಬಳಸಿಕೊಳ್ಳಲಾಗಿತ್ತು. ಆದರೆ, ಚಿತ್ರಗಳು ಗೆಲ್ಲಲ್ಲಿಲ್ಲ. ಇಲ್ಲಿ ಗೆಲುವೊಂದೇ ಮಾನದಂಡ. ಎಲ್ಲರೂ “ಜನುಮದ ಜೋಡಿ’, “ಮೈಸೂರು ಮಲ್ಲಿಗೆ’, “ನಾಗಮಂಡಲ’ ಚಿತ್ರಗಳ ಬಗ್ಗೆಯೇ ಮಾತಾಡುತ್ತಾರೆ. ಆದರೆ, ಸೋತ ಚಿತ್ರಗಳಲ್ಲೂ ಕ್ರಿಯಾಶೀಲತೆ, ಸೃಜನಶೀಲತೆ ಇತ್ತು. ಆ ಬಗ್ಗೆ ಹೆಚ್ಚು ಚರ್ಚೆಯಾಗಲೇ ಇಲ್ಲ. ನನಗೆ ಯಾವತ್ತೂ ಸಿನಿಮಾ ಸಾಕು ಎಂದನಿಸಿಲ್ಲ. ಚಿತ್ರಗಳಲ್ಲಿ ದುಡ್ಡು ಕಳೆದುಕೊಂಡಾಗ, ಸಾಕಪ್ಪಾ ಸಿನಿಮಾ ಸಹವಾಸ ಎಂದನಿಸುವು ದುಂಟು. ಆದರೆ, ತಕ್ಷಣ ಕಿರುತೆರೆಯಲ್ಲಿ ಏನೋ ಸಿಗುತ್ತದೆ. ಕಿರುತೆರೆಯಲ್ಲಿ ಸಾಕೆನಿಸಿದಾಗ ಸಿನಿಮಾ ಸಹಾಯಕ್ಕೆ ಬರುತ್ತದೆ. ಹಾಗಾಗಿ ಈ ಸಾಕು ಎನ್ನುವುದು ಕ್ಷಣಿಕ ಮಾತ್ರ.

ನಾನು ಯಾವತ್ತೂ ನಿರ್ಮಾಪಕರಿಗೆ ಮತ್ತು ನನ್ನ ಸಹಪಾಠಿಗಳಿಗೆ ಹೇಳುತ್ತಲೇ ಇರುತ್ತೇನೆ, ಒಂದು ಐತಿಹಾಸಿಕ ಸಿನಿಮಾ ಮಾಡಿ ಎಂದು. “ಮಯೂರ’ ನಂತರ ಕನ್ನಡತನವಿರುವ ಸಿನಿಮಾಗಳು ಬಂದಿದ್ದು ಕಡಿಮೆ. ಅದೇ ಕಾರಣಕ್ಕೆ ಐತಿಹಾಸಿಕ ಸಿನಿಮಾ ಮಾಡಬೇಕು ಎಂಬ ಆಸೆ ನನಗೆ. ಈ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡಿದೆ. ತ.ರಾ.ಸು ಅವರ “ರಕ್ತ ರಾತ್ರಿ’, “ಕಂಬನಿಯ ಕುಯಿಲು’ ಮತ್ತು “ತಿರುಗು ಬಾಣ’ ಕಾದಂಬರಿಗಳನ್ನಿಟ್ಟುಕೊಂಡು, “ದಳವಾಯಿ ಮುದ್ದಣ್ಣ’ ಸ್ಕ್ರಿಪ್ಟ್ ಮಾಡಿದೆ. ಅದೇ ರೀತಿ “ಕೆಳದಿ ಶಿವಪ್ಪನಾಯಕ’, “ರಾಣಿ ಶಾಂತಲ’ ಚಿತ್ರಕಥೆ ಮಾಡಿಟ್ಟುಕೊಂಡೆ. ಆದರೆ, ಆ ಚಿತ್ರಗಳು ಕಾರಣಾಂತರಗಳಿಂದ ಶುರುವಾಗಲಿಲ್ಲ. ಐತಿಹಾಸಿಕ ಸಿನಿಮಾಗಳೆಂದರೆ, ರಾಜಾಸ್ಥಾನಕ್ಕೆ ಹೋಗಿ ಚಿತ್ರೀಕರಣ ಮಾಡುವುದಲ್ಲ. ಅದರಲ್ಲಿ ಕನ್ನಡತನದ ಜೊತೆಗೆ ಇಲ್ಲಿನ ವಾಸ್ತುಶಿಲ್ಪ ಸಹ ಕಾಣಬೇಕು. ನನ್ನ “ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ ಇಲ್ಲಿನ ವಾಸ್ತುಶಿಲ್ಪವನ್ನು, ಆ ಕಾಲದ ಮನೆಗಳನ್ನು ನೋಡಬಹುದು. ಒಂದು ಐತಿಹಾಸಿಕ ಸಿನಿಮಾ ಮಾಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇದ್ದೇ ಇದೆ. ಈ ಮಧ್ಯೆ “ನಾಡಪ್ರಭು ಕೆಂಪೇಗೌಡ’ ಚಿತ್ರದ ಕೆಲಸ ಮಾಡುತ್ತಿದ್ದೇನೆ. ನಾಲ್ಕು ತಂಡಗಳು ಕೂತು ರೀಸರ್ಚ್‌ ಮಾಡುತ್ತಿದೆ. ಅದು ನನ್ನ ಕನಸು. ಯಾವತ್ತು ನನಸಾಗುತ್ತದೋ ಗೊತ್ತಿಲ್ಲ.

ನಿರೂಪಣೆ: ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.