ಇಂದು World Ocean Day: ಕಡಲ ಉಳಿವಿನಲ್ಲಿ ಅಡಗಿದೆ ನಮ್ಮ ಬದುಕು!


Team Udayavani, Jun 8, 2023, 7:01 AM IST

OCEAN

ಸಾಗರಗಳ ಜೀವವೈವಿಧ್ಯತೆ ಮತ್ತು ಸಮುದ್ರದ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಪ್ರತೀ ವರ್ಷ ಜೂ.8 ರಂದು “ವಿಶ್ವ ಸಾಗರ ದಿನ”ವನ್ನು ಆಚರಿಸ ಲಾಗುತ್ತಿದೆ. ಈ ಬಾರಿ “ಮಹಾಸಾಗರ; ಅಲೆಗಳು ಬದಲಾಗುತ್ತಿವೆ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತಿದೆ. ತನ್ಮೂಲಕ ಸಾಗರ ಗಳಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳ ಬಗೆಗೆ ವಿಶ್ವಾದ್ಯಂತದ ಜನರ ಗಮನ ಸೆಳೆಯುವುದರ ಜತೆಯಲ್ಲಿ ಭವಿಷ್ಯದ ಕರಾಳತೆಯ ಕುರಿತಂತೆ ಎಚ್ಚರಿಕೆ ಯನ್ನೂ ನೀಡುವ ಪ್ರಯತ್ನ ಮಾಡಲಾಗುತ್ತಿದೆ.

ಸಾಗರ ಅಥವಾ ಸಮುದ್ರ ಕೇವಲಜಲಜೀವಿಗಳಿಗೆ ಮಾತ್ರವಲ್ಲ, ಭೂಮಿಯ ಮೇಲೆ ವಾಸಿಸುವ ಪ್ರತೀ ಜೀವಿಗೂ ಮುಖ್ಯವೇ. ಭೂಮಿಯ ವಾತಾವರಣದ ಸಮತೋಲನದಲ್ಲಿ ಸಾಗರಗಳ ಪಾತ್ರವೂ ದೊಡ್ಡದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ತಾಪಮಾನ, ಬದಲಾಗುತ್ತಿರುವ ವಾತಾವರಣ ಸಮುದ್ರ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ. ಅದಲ್ಲದೇ ಕಡಲ ಜೀವವೈವಿಧ್ಯತೆಯ ಮೇಲೂ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ. ಇದರ ಜತೆಗೆ ಹೆಚ್ಚುತ್ತಿರುವ ಪ್ಲಾಸ್ಟಿಕ್‌ ಮಾಲಿನ್ಯ ಸಾಗರಗಳಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪರಿಸರ, ಪ್ರಕೃತಿಯ ಜತೆಜತೆಗೆ ಸಾಗರದ ಉಳಿವಿಗಾಗಿ ಹೆಜ್ಜೆ ಇಡಬೇಕಾಗಿದೆ.

 ತಾಪಮಾನ ನಿಯಂತ್ರಣದಲ್ಲಿ ಸಮುದ್ರಗಳ ಪಾತ್ರ
ಸಮುದ್ರ ಸಾವಿರಾರು ಜೀವ ಪ್ರಭೇದಗಳ ಗೂಡು. ಸರಾ ಸರಿ ಶೇ.50ರಷ್ಟು ಆಮ್ಲಜನಕ ಸಮುದ್ರದಿಂದ ಉತ್ಪತ್ತಿಯಾ ಗುತ್ತದೆ. ಅದಲ್ಲದೇ ಕಾರ್ಖಾನೆಗಳಿಂದ ಹೊರಸೂಸುವ ಶೇ.90ರಷ್ಟು ತಾಪಮಾನವನ್ನು ಸಮುದ್ರ ತನ್ನೊಳಗೆ ಎಳೆದು ಕೊಳ್ಳುತ್ತದೆ. ಸಮುದ್ರದಲ್ಲಿ ಹೆಚ್ಚಾಗುತ್ತಿರುವ ಈ ಶಾಖ, ತಾಪ ಮಾನ ಸಮುದ್ರದಲ್ಲಿನ ಜೀವಿಗಳಿಗೆ ಮಾರಕವಾಗುತ್ತಿದ್ದು, ಭೂಮಿಯ ತಾಪಮಾನದ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿಯೇ ವರ್ಷಗಳುರುಳಿದಂತೆಯೇ ತಾಪಮಾನ ಹೆಚ್ಚು ತ್ತಲೇ ಸಾಗಿದೆ. ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಹವಾ ಮಾನ ಬದಲಾವಣೆಗೂ ಹೆಚ್ಚುತ್ತಿರುವ ತಾಪಮಾನವೇ ಬಲುಮುಖ್ಯ ಕಾರಣವಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯ
ತಾಪಮಾನ ಏರಿಕೆಯ ಜತೆಜತೆಗೆ ಕಡಲ ಜೀವವೈವಿಧ್ಯತೆಗೆ ಎದುರಾಗಿರುವ ಬಹುದೊಡ್ಡ ಅಪಾಯ ಎಂದರೆ ಪ್ಲಾಸ್ಟಿಕ್‌ ಮಾಲಿನ್ಯ. ಮಾನವ ಎಸೆಯುವ ಪ್ರತೀ ಚಿಕ್ಕ ಚಿಕ್ಕ ಪ್ಲಾಸ್ಟಿಕ್‌ ವಸ್ತುಗಳಿಂದ ಕಡಲ ಒಡಲು ತುಂಬಿ ಹೋಗಿದ್ದು, ಇದರಿಂದ ಕಡಲು ಹಾಗೂ ಕಡಲ ಜೀವಿಗಳು ತನ್ನ ಸೌಂದರ್ಯ, ಜೀವಿತಾವಧಿಯನ್ನು ಕಳೆದುಕೊಳ್ಳು ತ್ತಿವೆ. 2050ರ ವೇಳೆಗೆ ಸಮುದ್ರಗಳಲ್ಲಿ ಮೀನು ಗಳಿಗಿಂತ ಪ್ಲಾಸ್ಟಿಕ್‌ಗಳು ಹೆಚ್ಚಾಗಿ ಇರಲಿವೆ ಎಂದು ಊಹಿಸಲಾಗಿದೆ. ಸಮುದ್ರದ ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ದೇಶಗಳಲ್ಲಿ ಪಿಲಿಫೈನ್ಸ್‌ ( 3,56,371 ಮೆಟ್ರಿಕ್‌ ಟನ್ಸ್‌ )ಮೊದಲ ಸ್ಥಾನದಲ್ಲಿದ್ದರೆ, ಭಾರತ ( 1,26,513 ಮೆಟ್ರಿಕ್‌ ಟನ್ಸ್‌ ) ಎರಡನೇ ಸ್ಥಾನದಲ್ಲಿದೆ. ಇನ್ನು ಮೊದಲ ಹತ್ತು ಸ್ಥಾನಗಳಲ್ಲಿ ದಕ್ಷಿಣ ಏಷ್ಯಾ ದೇಶಗಳೇ ಹೆಚ್ಚಿವೆ.

ಕಡಲ ರಕ್ಷಣೆಗಾಗಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ. ನಾವುಜಾಗೃತರಾಗಿ ನಮ್ಮವರನ್ನು ಕಡಲ ಉಳಿವಿನೆಡೆಗೆ ಕಾರ್ಯಪ್ರವೃತ್ತರನ್ನಾಗಿಸಿ ಕಡಲ ಉಳಿವಿಗೆ ನೆರವಾಗೋಣ. ಕಡಲ ರಕ್ಷಣೆಯ ಮಾತುಗಳು ಕೇವಲ ಮಾತಾಗಿಯೇ ಉಳಿಯದಿರಲಿ, ಏಕೆಂದರೆ ನಮ್ಮ ಗ್ರಹದ ಉಳಿವು ಇರುವುದು ನಮ್ಮ ಕೈಗಳಲ್ಲೇ.

 

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

beg

Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

MAHALAYA

Mahalaya: ಪಿತೃಋಣ ವಿಮೋಚನೆಯ ಮಹಾಲಯ

GANDHI SHASTR

ಗಾಂಧೀ, ಶಾಸ್ತ್ರಿ ಸ್ಮರಣೆ- ಗಾಂಧೀ, ಶಾಸ್ತ್ರಿ ವಿಸ್ಮರಣೆ

PM VISHWAKARMA

PM ವಿಶ್ವಕರ್ಮ ಯೋಜನೆ: ಸಾಂಪ್ರದಾಯಿಕ ವೃತ್ತಿನಿರತರಿಗೆ ಕೌಶಲದೊಂದಿಗೆ ಆರ್ಥಿಕ ಬಲ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

beg

Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

art of living

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

ny rain

Rain: ದಿಢೀರ್‌ ಪ್ರವಾಹಕ್ಕೆ ನ್ಯೂಯಾರ್ಕ್‌ ತತ್ತರ

AADITYA L 1

Aditya L1: ಪ್ರಭಾವಲಯ ದಾಟಿದ ಆದಿತ್ಯ ಎಲ್‌1

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.