Udayavni Special

ಪಾಸಿಟಿವ್ ಗೆದ್ದೇ ಗೆಲ್ಲುತ್ತದೆ : ಓದುಗರೊಬ್ಬರಿಂದ ಪಿಡಿಎಫ್ ಆದ ಉದಯವಾಣಿ ಸುದ್ದಿಗಳು ವೈರಲ್

ಉದಯವಾಣಿಯ ಪಾಸಿಟಿವ್ ಸುದ್ದಿಗಳನ್ನು ಪಿಡಿಎಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಗೋಪಾಲ್ ಪೈ ಮಾಣಿ

Team Udayavani, Jun 10, 2021, 4:49 PM IST

Udayavani News

ನಮಗೆ  ‘ಉದಯವಾಣಿ’ ಎಂದಿಗೂ ‘ಜನ ಪರ ಧ್ವನಿ’ ಎಂದು ಪ್ರಮಾಣ ಪತ್ರ ಕೊಟ್ಟಿದ್ದು ನಮ್ಮ ಓದುಗರು. ಉದಯವಾಣಿ ಓದುಗರ ವಿಶ್ವಾಸವನ್ನು ಕಳೆದ 52 ವರ್ಷಗಳಿಂದಲೂ ಉಳಿಸಿಕೊಂಡು ಬಂದಿದೆ. ಎಂದಿಗೂ ಅಭಿವೃದ್ಧಿ ಪರ, ವಸ್ತುನಿಷ್ಠ ಪತ್ರಿಕೋದ್ಯಮ ನಮ್ಮದು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆ ಇದೆ.

ಕಳೆದ ವರ್ಷ ಕೋವಿಡ್ ಸಂಕಷ್ಟ ತಂದೊಡ್ಡಿದ ಪರಿಸ್ಥಿತಿಯಲ್ಲಿ, ಹಾಗೂ ಈ ವರ್ಷ ಕೋವಿಡ್ ಸೋಂಕಿನ ಎರಡನೇ ಅಲೆ ಸೃಷ್ಟಿಸಿದ ಪ್ರಾಣ ಸಂಕಟದ ವಾತಾವರಣದಲ್ಲಿ  ಉದಯವಾಣಿ ಜನರಿಗೆ ಧನಾತ್ಮಕ ಸುದ್ದಿಗಳನ್ನು ಸಾಮಾಜಿಕ ಜವಾಬ್ದಾರಿಯಿಂದ, ಪ್ರಾಮಾಣಿಕತೆಯಿಂದ ನೀಡುತ್ತಾ ಬಂದಿದೆ. ಈ ಸುದ್ದಿಗಳಿಗೆ ನಮ್ಮ ಓದುಗರಿಂದ ಮನ್ನಣೆಯೂ ಸಿಕ್ಕಿದೆ.

ಕೋವಿಡ್ ಎರಡನೇ ಅಲೆ ಆರಂಭವಾದಾಗಿನಿಂದ ಕೆಲವು ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿನ ಸುದ್ದಿಗಳನ್ನು ಒಳಗೊಂಡು ಋಣಾತ್ಮಕ ಸುದ್ದಿಗಳಿಗೇ ಪ್ರಾಶಸ್ಯ ಪಡೆಯುತ್ತಿರುವಾಗ, ಕೋವಿಡ್ ನ ನಿವಾರಣೆಯತ್ತ ಚಿಂತನೆಯಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಉದಯವಾಣಿ ಪತ್ರಿಕೆ ಪ್ರಕಟ ಮಾಡಿದ ಸುದ್ದಿಗಳು ನೂರಾರು. ಈ ಪಾಸಿಟಿವ್ ಸುದ್ದಿಗಳು ಜನರನ್ನು ಮುಟ್ಟಿವೆ ಎನ್ನುವ ಸಾರ್ಥಕತೆ ನಮಗಿದೆ.

ಇದನ್ನೂ ಓದಿ : ಬಿಜೆಪಿ ವಿರುದ್ಧ ಎಲ್ ಡಿ ಎಫ್ ಷಡ್ಯಂತ್ರ : ಕುಂಬ್ಡಾಜೆ ಪಂಚಾಯಿತಿಯಲ್ಲಿ ಪ್ರತಿಭಟನೆ

ಇದಕ್ಕೆ ಸಾಕ್ಷಿ ಎಂಬಂತೆ, ಮೇ 1 2021ರಿಂದ ಇಂದಿನವರೆಗೆ ನಿಮ್ಮ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುಮಾರು 46 ಪ್ರಮುಖ ಸುದ್ದಿಗಳನ್ನು ಸಂಗ್ರಹಿಸಿ ಅದನ್ನು ಪಿಡಿಎಫ್ ಮಾದರಿಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಗಳೂರಿನ ಖಾಸಗಿ ಕಂಪೆನಿಯೊಂದರ  ಆರ್ಥಿಕ ವಿಶ್ಲೇಷಕ ಮಾಣಿಯ ಗೋಪಾಲ ಪೈ ಎನ್ನುವ ನಮ್ಮ ಓದುಗ ಮಿತ್ರರೊಬ್ಬರು ಹಂಚಿಕೊಂಡಿರುವುದು ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ ಎನ್ನುವುದು ನಮಗೆ ನಮ್ಮ ಕರ್ತವ್ಯದ ಬಗ್ಗೆ ಇನ್ನೂ ಹೆಚ್ಚಿನ ಹೆಮ್ಮೆಯನ್ನು ತಂದುಕೊಟ್ಟಿದೆ.

ಉದಯವಾಣಿ ಬಳಗ ಮಾಡಿದ ಸರಣಿ ವೈದ್ಯಕೀಯ ಮಾಹಿತಿ ಫೇಸ್ ಬುಕ್ ಕಾರ್ಯಕ್ರಮಗಳ ಸುದ್ದಿಗಳು, ಕೋವಿಡ್ ಲಸಿಕೆಗಳು, ಬ್ಲ್ಯಾಕ್ ಫಂಗಸ್ ಸೇರಿ ಹತ್ತು ಹಲವು ವಿಷಯಗಳ ವಿಸ್ತೃತ ಸುದ್ದಿಗಳು ಪಿಡಿಎಫ್ ನಲ್ಲಿ ಒಂದೆಡೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿವೆ.

ಇದನ್ನೂ ಓದಿ : ಬಿಹಾರ: ಹಾಡಹಗಲೇ ಖಾಸಗಿ ಬ್ಯಾಂಕ್ ಗೆ ನುಗ್ಗಿ 1.19 ಕೋಟಿ ರೂಪಾಯಿ ದರೋಡೆ!

ಇನ್ನು, ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿಗಳ ಪಿಡಿಎಫ್, ಅಧಿಕಾರಿಯೊಬ್ಬರ ಮುಖಾಂತರ ಆಶಾಕಾರ್ಯಕರ್ತರಿಗೆ ತಲುಪಿ ಮನೆಮನೆಗೆ ತಲುಪುತ್ತಿದೆ ಎನ್ನುತ್ತಾರೆ ಈ ಪಿಡಿಎಫ್ ಮಾಡಿದ ಗೋಪಾಲ್ ಪೈ ಮಾಣಿ.

(ಗೋಪಾಲ್ ಪೈ ಮಾಣಿ)

ಇದರ ಎಲ್ಲಾ ಕ್ರೆಡಿಟ್ ಉದಯವಾಣಿಗೆ ಸಲ್ಲಬೇಕು 

ಉದಯವಾಣಿಯೊಂದಿಗೆ ಮಾತನಾಡಿದ ಅವರು, ಈ ಎಲ್ಲದರ ಕ್ರೆಡಿಟ್ ಉದಯವಾಣಿಗೆ ಸಲ್ಲಬೇಕು. ಎಲ್ಲೆಡೆ ಕೋವಿಡ್ ನ ಬಗ್ಗೆ ಋಣಾತ್ಮಕ ಸುದ್ದಿಗಳೇ ಹೆಚ್ಚು ಕೇಳಿ ಬರುತ್ತಿರುವ ದಿನಗಳಲ್ಲಿ ಉದಯವಾಣಿ ಸಾಮಾಜಿಕ ಜವಾಬ್ದಾರಿಯಿಂದ ಪಾಸಿಟಿವ್ ಸುದ್ದಿಗಳನ್ನು ಪ್ರಕಟಿಸುವುದರ ಮೂಲಕ ಜನರಲ್ಲಿ ಇದ್ದ ಭಯವನ್ನು ದೂರಮಾಡಿದೆ ಎಂದಿದ್ದಾರೆ.

ಬ್ಯಾಂಕ್ ಲೋನ್ ವಿಚಾರಕ್ಕೆ ಸಂಬಂಧಿಸಿದ ಇಎಮ್ಐ ವಿಸ್ತರಣೆಯ ಸುದ್ದಿ, ಆಕ್ಸಿಮೀಟರ್ ಬಳಕೆಯ ಹೇಗೆ ಮಾಡುವುದು ಎನ್ನುವುದರ ಸುದ್ದಿ…ಹೀಗೆ ಹಲವಾರು ಸುದ್ದಿಗಳನ್ನು ರಾಜಕೀಯದ ಹೊರತಾಗಿ ಪ್ರಕಟಿಸುವುದರ ಮೂಲಕ ಉದಯವಾಣಿ ವೃತ‍್ತಿಧರ್ಮವನ್ನು ಎತ್ತಿ ಹಿಡಿದಿದೆ.  ಜನರಿಗೆ ಪಾಸಿಟಿವ್ ಸುದ್ದಿಗಳನ್ನು ನೀಡುವುದಕ್ಕೆ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪತ್ರಿಕೆಗಳಲ್ಲಿ ಓದದವರಿಗೆ ಸಹಾಯವಾಗಲಿ ಎಂಬ ಕಾರಣದಿಂದ ಎಲ್ಲಾ ಪ್ರಮುಖ ಸುದ್ದಿಗಳನ್ನು ಸಂಗ್ರಹಿಸಿ ಪಿಡಿಎಫ್ ಮಾಡಿ ವಾಟ್ಸ್ಯಾಪ್ ಗ್ರೂಪ್ ಗಳ ಮೂಲಕ ಹಂಚಿಕೊಂಡಿದ್ದೇನೆ. ಅದು ಆಶಾಕಾರ್ಯಕರ್ತರ ಮೂಲಕ ಜನರಿಗೆ ತಲುಪುತ್ತಿದೆ ಎನ್ನುವುದು ಖುಷಿಕೊಟ್ಟಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ಬೆಳವಣಿಗೆಗೆ ಉದಯವಾಣಿ ಕಾರಣ

ಉದಯವಾಣಿಯನ್ನು ನಾನು ನನಗೆ ಬುದ್ಧಿ ಬಂದಾಗಿನಿಂದ ಓದುತ್ತಾ ಬಂದವ.  ನನ್ನ ತಂದೆಯವರು ಸುಮಾರು 50 ವರ್ಷಗಳ ಕಾಲ ಉದಯವಾಣಿಯ ಏಜೆಂಟ್ ಆಗಿದ್ದರು. ಹಾಗಾಗಿ ಉದಯವಾಣಿ ಪತ್ರಿಕೆ ಓದು ನನ್ನ ಬಾಲ್ಯದಿಂದಲೇ ಆರಂಭವಾಗಿದೆ. ಉದಯವಾಣಿ ನನ್ನ ಬೆಳವಣಿಗೆಯ ಒಂದು ಭಾಗ ಎನ್ನುತ್ತಾರೆ ಪೈ.

ಒಟ್ಟಿನಲ್ಲಿ, ಉದಯವಾಣಿಯ ನಿಷ್ಪಕ್ಷಪಾತ, ಗಟ್ಟಿತನದ ನಿಲುವು ಓದುಗರಿಗೆ ತಲುಪುತ್ತಿದೆ ಎಂಬುವುದಕ್ಕೆ ಇದೊಂದು ಸಾಕ್ಷಿಯಾಗಿದೆ.

ಇದನ್ನೂ ಓದಿ : ನಾಯಕತ್ವ ಬದಲಾವಣೆ ಊಹಾಪೋಹ: ಪ್ರಧಾನಿ ಮೋದಿ, ಶಾ ಭೇಟಿಗೆ ದೌಡಾಯಿಸಿದ ಸಿಎಂ ಯೋಗಿ

ಟಾಪ್ ನ್ಯೂಸ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

rekha-kadiresh

ರೇಖಾ ಕದಿರೇಶ್ ಕೊಲೆ ಪ್ರಕರಣ: ಸಂಬಂಧಿಗಳಿಂದಲೇ ಕೊಲೆ! ಫೈರಿಂಗ್ ಮಾಡಿ ಇಬ್ಬರ ಬಂಧನ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

dfghjkjhg

ಖುರ್ಚಿ ಉಳಿಸಿಕೊಳ್ಳಲು ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ರು : ಸಿಎಂ

ರಮೇಶ್ ಜಾರಕಿಹೊಳಿ

ರಾಜೀನಾಮೆ ವಿಚಾರ ಮುಂಬೈನಲ್ಲಿ ಹೇಳುತ್ತೇನೆ: ಬಂಡಾಯದ ಎಚ್ಚರಿಕೆ ನೀಡಿದ ರಮೇಶ್ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ

ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

sdfghjhgfdsa

ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಪತ್ರ : ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ ಎಂದ ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.