Udayavni Special

ಹೊಸತನದ ರಸ ಚೈತನ್ಯದ ಯುಗ ಯುಗಾದಿ ಕಳೆದರೂ…ಯುಗಾದಿ ಮರಳಿ ಬರುತ್ತಿದೆ..!

ಎಲ್ಲ ರೀತಿಯ ರೋಗಗಳ ನಾಶ, ಆರೋಗ್ಯ ಸಂಪತ್ತಿನ ಪ್ರಾಪ್ತಿಗಾಗಿ ಈ ಬೇವು-ಬೆಲ್ಲದ ಸೇವನೆ.

Team Udayavani, Apr 13, 2021, 3:25 PM IST

Ugadi Special Article on the occation Of Chandarmana Ugadi

ಮನುಷ್ಯನ ಬದುಕು ಒಂದು ರೀತಿಯಲ್ಲಿ ಯಂತ್ರದಂತೆ. ಒಂದೇ ಕ್ರಮದಲ್ಲಿ ನಿಯತವಾದ ಕ್ರಿಯೆಗಳು ಪದೇ ಪದೇ ಚಕ್ರದಂತೆ ಸುತ್ತುತ್ತಾ ಜೀವನವು ಕೆಲವೊಮ್ಮೆ ತೀರಾ ಯಾಂತ್ರಿಕವಾಗಿ ಬಿಡುತ್ತದೆ. ಜೀವನದಲ್ಲಿ ಒಂದಿಷ್ಟು ವಿವಿಧತೆ, ಹೊಸತನ, ರಸ ತುಂಬಿ ಚೈತನ್ಯಮಯವಾಗಿಸಲು ಮನುಷ್ಯ ಕಂಡುಕೊಂಡ ದಾರಿ ಹಬ್ಬಗಳ ಆಚರಣೆ.

`ಉತ್ಸವ ಪ್ರಿಯಾ ಖಲು ಮನುಷ್ಯಾಃ’ ಎಂಬಂತೆ ಉತ್ಸವ, ಸಂಭ್ರಮ ಪ್ರಿಯಾರಾದ ನಾವು ನಿತ್ಯ ಜೀವನದ ಜಂಜಾಟದ ನಡುವೆಯೇ ಸ್ವಲ್ಪ ಬಿಡುವು ಮಾಡಿಕೊಂಡು ಹಬ್ಬಗಳನ್ನು ಆಚರಿಸಿ ನವೋತ್ಸಾಹದಿಂದ ಮುಂದುವರಿಯುತ್ತೇವೆ. ಈ ರೀತಿ ರೂಪಿತವಾದ ಒಂದೊಂದು ಹಬ್ಬಕ್ಕೂ ತನ್ನದೇ ಆದ ಚಾರಿತ್ರಿಕ, ಪೌರಾಣಿಕ ಮತ್ತುಸಾಮಾಜಿಕ ಹಿನ್ನೆಲೆ, ಸಂದರ್ಭ ಹಾಗೂ ಸಂದೇಶಗಳು ಇವೆ. ಹಬ್ಬಗಳಿಲ್ಲದೆ ನಾವು ಇರಲಾರೆವು, ಬಾಳಲಾರೆವು ಎಂಬಷ್ಟು ಮಟ್ಟಿಗೆ ಹಬ್ಬ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಓದಿ : ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ.? ಭಾರತೀಯ ರೈಲ್ವೆಯ ಕೋವಿಡ್ ಗೈಡ್ಲೈನ್ಸ್ ಗಮನಿಸಿ

ಹಬ್ಬದಲ್ಲಿ ಮುಳುಗಿ ಖುಷಿಪಡಿ ಎಂದು ಸಾರಲೆಂದೇ ಮತ್ತೆ ಯುಗಾದಿ ಬಂದಿದೆ. ಯುಗಾದಿಗೆ ಹಬ್ಬಗಳ ಯಾದಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಕಾರಣ ಹೊಸ ವರುಷ ಪ್ರಾರಂಭವಾಗುವ ದಿನವದು.

`ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಕವಿ ಅಂಬಿಕಾತನಯದತ್ತರು ಹೇಳುವಂತೆ ಹೊಸ ವರುಷಕೆ ಹೊಸ ಹರುಷ ತರುವ ಹಬ್ಬ ಯುಗಾದಿ. ಯುಗಾದಿಯೇ ಏಕೆ ಹೊಸವರುಷದ ಮೊದಲ ಹಬ್ಬವಾಗಬೇಕು ಎನ್ನುವವರಿಗೆ ನಮ್ಮ ಪ್ರಾಚೀನ ಶಾಸ್ತ್ರ ಗಳೇ ಉತ್ತರ ಹೇಳಿವೆ.

ನೈಸರ್ಗಿಕ, ಐತಿಹಾಸಿಕ, ಆಧ್ಯಾತ್ಮಿಕ ಕಾರಣಗಳನ್ನೊಳಗೊಂಡ ಚೈತ್ರ ಶುದ್ಧ ಪ್ರತಿಪದೆಯನ್ನು ವರ್ಷಾರಂಭದ ದಿನವೆಂದು ಪ್ರಕೃತಿಯೇ ಒಪ್ಪಿಕೊಂಡಿದೆ.

ನೈಸರ್ಗಿಕವಾಗಿ ಚೈತ್ರ ಶುದ್ಧ ಪಾಡ್ಯದಂದು ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ ಆಗ ವಸಂತ ಋತು ಆರಂಭವಾಗಿ ಪ್ರಕೃತಿ ಹಳೆ ಬಟ್ಟೆ ಕಳಚಿ ಹೊಸ ಬಟ್ಟೆ ತೊಟ್ಟು ಮೆರೆಯುತ್ತಾಳೆ. ತರು ಲತೆಗಳು ಹೊಸ ಚಿಗುರಿನಿಂದ ಕಂಗೊಳಿಸುತ್ತವೆ. ಈ ಕಾಲದಲ್ಲಿ ಉಷ್ಣಶೀತಗಳು ಸಮವಾಗಿದ್ದು, ಉತ್ಸಾಹದಾಯಕವಾಗಿ, ಆಹ್ಲಾದದಾಯಕ ಹವಾಗುಣವಿರುವುದರಿಂದ ಚೈತನ್ಯ ಶಕ್ತಿ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಹಿಂದೆ ಶಾಲಿವಾಹನನೆಂಬ ಚಕ್ರವರ್ತಿ ನಮ್ಮ ದೇಶದ ಮೇಲೆ ದಾಳಿ ಮಾಡಿದ ಶಕರೆಂಬ ಪರಕೀಯರನ್ನು ಸೋಲಿಸಿ ಹೊರಗಟ್ಟಿ ತನ್ನ ವಿಜಯದ ಸಂಕೇತವಾಗಿ ಈ ದಿನದಂದೇ ಶಾಲಿವಾಹನ ಶಕೆ ಆರಂಭಿಸಿದ. ಬ್ರಹ್ಮದೇವನು ಇದೇ ದಿನ ಸೃಷ್ಟಿಯನ್ನು ನಿರ್ಮಿಸಿ ಸತ್ಯಯುಗ ಪ್ರಾರಂಭಿಸಿದ್ದರಿಂದಲೂ ಈ ದಿನವನ್ನು ವರ್ಷದ ಆರಂಭವೆಂದು ಹೇಳಲಾಗಿದೆ.

ಓದಿ : ಮಂಗಳೂರು ಆಳಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ: ಮೂವರು ಸಾವು, 6 ಮಂದಿ ನಾಪತ್ತೆ

ಪ್ರಕೃತಿಯು ಹೊಸ ಹೂ ಚಿಗುರು ಹೊತ್ತು ನಳನಳಿಸುತ್ತಿರುವ ಹಾಗೆ ನಾವು ಕೂಡ ಹೊಸಬಟ್ಟೆ ತೊಟ್ಟು ದೇವತಾ ಪೂಜೆಯನ್ನು ಮಾಡಿ ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆರ್ಶಿವಾದ ಸ್ವೀಕರಿಸಬೇಕು. ಆನಂತರ ಬೇವು ಬೆಲ್ಲದ ಮಿಶ್ರಣ ತಿನ್ನಬೇಕು. ಈ ಬೇವು-ಬೆಲ್ಲ ಯುಗಾದಿಯಂದೇ ಏಕೆ ಬೇಕು? ಎಂಬುದಕ್ಕೆ ಆಯುರ್ವೇದವು ಹೇಳುವಂತೆ ವಸಂತ ಋತುವಿನಲ್ಲಿ ತಲೆದೋರುವ ಶಾರೀರಿಕ ವಿಕಾರಗಳಿಗೆ ಬೇವು ಒಳ್ಳೆಯ ಔಷಧ. ಬಹುಕಾಲ ಬಾಳುವ ಗಟ್ಟಿಮುಟ್ಟಾದ ದೇಹ, ಎಲ್ಲ ರೀತಿಯ ರೋಗಗಳ ನಾಶ, ಆರೋಗ್ಯ ಸಂಪತ್ತಿನ ಪ್ರಾಪ್ತಿಗಾಗಿ ಈ ಬೇವು-ಬೆಲ್ಲದ ಸೇವನೆ. ನಮ್ಮ ಬಾಳಿನಲ್ಲಿ ನಾವು ಕಹಿಯನ್ನೆಂದೂ ಬಯಸುವುದಿಲ್ಲ, ಯಾವಾಗಲೂ ಸಿಹಿಯೇ ಇರಲೆಂದು ಅಪೇಕ್ಷೆ ಪಡುವೆವಾದರೂ,ವಾಸ್ತವದಲ್ಲಿ ಜೀವನವು ಸುಖ-ದುಃಖಗಳ, ಲಾಭ-ನಷ್ಟಗಳ, ನಿಂದೆ-ಹೊಗಳಿಕೆಗಳ, ಜಯ-ಅಪಜಯಗಳ ಮಿಶ್ರಣವಾಗಿದೆ. ಸಿಹಿಯಾದ ಸುಖಕ್ಕೆ ಹಿಗ್ಗದೆ, ಕಹಿಯಾದ ಕಷ್ಟಕ್ಕೆ ಕುಗ್ಗದೆ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದೇ ಬೇವು-ಬೆಲ್ಲದ ಸಂಕೇತ. ಹಳೆಯ ತಗಾದೆಗಳೆಲ್ಲ ಅಳಿದು, ಹೊಸತು ಉಳಿದು ಬೆಳೆಯಲಿ ಈ ಯುಗಾದಿ ವಿಶ್ವದ ಜೀವಕೋಟಿಗೆ ಶುಭ ತರಲಿ.

 

ಪ್ರಥ್ವಿನಿ ಡಿಸೋಜ

ಓದಿ : ಮಂಗಳೂರು ಆಳಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ: ಮೂವರು ಸಾವು, 6 ಮಂದಿ ನಾಪತ್ತೆ

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!

Arathi won the battle

ಸಮರ ಗೆದ್ದ ಆರತಿ

desiswara

ಮೌನದ ಹಿಂದಿನ ಕಾರಣ ತಿಳಿದುಬಿಡೋಣ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

anivasi kannadiga

ಅವನ ಕಣ್ಣಲ್ಲಿ ನನ್ನೂರಿನ ಬೆಳಕು

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.