ಲಸಿಕೆ ಜಗತ್ತು, ಅಭಿವೃದ್ಧಿಯದ್ದೇ ಕಸರತ್ತು!


Team Udayavani, Jan 8, 2021, 6:25 AM IST

ಲಸಿಕೆ ಜಗತ್ತು, ಅಭಿವೃದ್ಧಿಯದ್ದೇ ಕಸರತ್ತು!

ಸಾಂದರ್ಭಿಕ ಚಿತ್ರ

ರವಿವಾರ ಡಿಸಿಜಿಎ ಕೊವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಲಸಿಕೀಕರಣಕ್ಕೆ ಈಗಾಗಲೇ ಡ್ರೈ ರನ್‌ ಕೂಡ ನಡೆಸಿವೆ. ಈಗ ಜನವರಿ 13ರಂದು ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಆಕ್ಸ್‌ಫ‌ರ್ಡ್‌ನ ಕೊವಿಶೀಲ್ಡ್‌ ಲಸಿಕೆ ಹಾಗೂ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ದೇಶೀಯ ಕೊವ್ಯಾಕ್ಸಿನ್‌ ಲಸಿಕೆಗಳ ಫ‌ಲಪ್ರದತೆ, ಕಾರ್ಯವೈಖರಿ ಹೇಗಿದೆ. ಅವಕ್ಕೆ ಹೋಲಿಸಿದರೆ ಈಗ ಜಾಗತಿಕವಾಗಿ ಅನುಮತಿ ಪಡೆದಿರುವ ಲಸಿಕೆಗಳ ಗುಣವೇನು? ಇಲ್ಲಿದೆ ಮಾಹಿತಿ…

ಸೀರಂ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್‌ ಲಸಿಕೆ
ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ-ಆಸ್ಟ್ರಾಜೆನೆಕಾ ಸಂಶೋಧನ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಸಾವಿರಾರು ಜನರ ಮೇಲೆ ಈ ಲಸಿಕೆಯ ಪ್ರಯೋಗಗಳನ್ನೂ ಮಾಡಿದೆ. ಕೊವಿಶೀಲ್ಡ್‌ ಇದೆಯಲ್ಲ, ಇದು “ಅಡಿನೋ ವೈರಸ್‌ ವೆಕ್ಟರ್‌ ಲಸಿಕೆ’. ಈ ರೀತಿಯ ಲಸಿಕೆ ಪ್ರಯೋಗವನ್ನು ಕೇವಲ ಆಕ್ಸ್‌ಫ‌ರ್ಡ್‌ ಅಷ್ಟೇ ಅಲ್ಲದೇ ರಷ್ಯಾದ ಸ್ಪುಟ್ನಿಕ್‌ ಲಸಿಕೆಯ ಅಭಿವೃದ್ಧಿಗೂ ಬಳಸಲಾಗಿದೆ

ಅಡಿನೋ ವೈರಸ್‌ ವೆಕ್ಟರ್‌
1. ಮೊದಲ ಹಂತವಾಗಿ ವಿಜ್ಞಾನಿಗಳು ಚಿಂಪಾಂಜಿಗಳಲ್ಲಿ ಸೋಂಕು ಉಂಟುಮಾಡುವ ವೈರಸ್‌(ಅಡಿನೋವೈರಸ್‌) ಅನ್ನು ಹೊರತೆಗೆಯುತ್ತಾರೆ. ಅನಂತರ ಅದನ್ನು ಮಾನವನಿಗೆ ತೊಂದರೆಯುಂಟುಮಾಡದಂತೆ ಪರಿವರ್ತಿಸಲಾಗುತ್ತದೆ.

2. ಕೊರೊನಾ ವೈರಸ್‌ನ ಮೇಲ್ಮೆ„ಯಲ್ಲಿ ಮುಳ್ಳಿನ ರೀತಿಯ ಆಕೃತಿ (ಸ್ಪೈಕ್‌ ಪ್ರೊಟೀನುಗಳು) ಇರುವ ಚಿತ್ರವನ್ನು ನೀವು ನೋಡಿರುತ್ತೀರಿ. ಕೊರೊನಾದಲ್ಲಿ ಈ  ರೀತಿಯ ಸ್ಪೈಕ್‌ ಪ್ರೋಟೀನುಗಳನ್ನು ಸೃಷ್ಟಿಸುವ ಜೀನೋಮುಗಳನ್ನು ಪ್ರತ್ಯೇಕಿಸಿ ಅದನ್ನು ಚಿಂಪಾಂಜಿಯಿಂದ ಈಗಾಗಲೇ ಸಂಗ್ರಹಿಸಿ ನಿಷ್ಕ್ರಿಯಗೊಳಿಸಲಾದ ಅಡಿನೋ ವೈರಸ್‌ಗೆ ಸೇರಿಸಲಾಗುತ್ತದೆ. ಇದರಿಂದಾಗಿ ಅಡಿನೋವೈರಸ್‌ನ ಮೇಲ್ಮೆ„ಯಲ್ಲಿ ಕೊರೊನಾ ವೈರಸ್‌ಗೆ ಇರುವಂಥದ್ದೇ ಮುಳ್ಳಿನ ಆಕೃತಿಗಳು ಸೃಷ್ಟಿಯಾಗುತ್ತವೆ. ಆದರೆ ಇದು ಕೊರೊನಾದಂತೆ ಮನುಷ್ಯನಿಗೆ ಹಾನಿ ಮಾಡುವುದಿಲ್ಲ. ಇದೇ ಕೊವಿಶೀಲ್ಡ್‌ ಲಸಿಕೆ.

3. ಯಾವಾಗ ಈ ಲಸಿಕೆಯನ್ನು ಮಾನವನ ದೇಹದೊಳಕ್ಕೆ ಬಿಡಲಾಗುತ್ತದೋ, ಆಗ ನಮ್ಮ ರೋಗ ನಿರೋಧಕ ಶಕ್ತಿಯು ಕೊರೊನಾದ ಆಕೃತಿಯನ್ನು ಹೋಲುವ ವೈರಸ್‌ನ ಮೇಲೆ ದಾಳಿ ಮಾಡುತ್ತದೆ. ದಾಳಿ ಮಾಡುವ ಸಂದರ್ಭದಲ್ಲಿ ಆ ವೈರಸ್‌ನ ಮೇಲಿರುವ ಸ್ಪೆ$R„ಕ್‌ ಪ್ರೊಟೀನುಗಳ ಆಕೃತಿಯನ್ನು ನಮ್ಮ ದೇಹ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಮುಂದೆ ಏನಾದರೂ ಕೊರೊನಾ ವೈರಸ್‌ ನಮ್ಮ ದೇಹ ಪ್ರವೇಶಿಸಿತು ಎಂದರೆ ಕೂಡಲೇ ಅದರ ಮೇಲಿನ ಮುಳ್ಳಿನ ರೀತಿಯ ಆಕೃತಿಗಳನ್ನು ಗುರುತಿಸಿ, ಅದನ್ನು ಪುಡಿಗಟ್ಟುವಂಥ ಪ್ರತಿಕಾಯಗಳನ್ನು ಅತ್ಯಂತ ವೇಗವಾಗಿ ನಮ್ಮ ದೇಹ ಬಿಡುಗಡೆ ಮಾಡಿ, ವೈರಸ್‌ ಅನ್ನು ಹೊಡೆದುರುಳಿಸುತ್ತದೆ!

ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌
ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಅನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಮತ್ತು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ(ಎನ್‌ಐವಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಸೋಂಕಿತರೊಬ್ಬರಿಂದ ಕೊರೊನಾ ವೈರಸ್‌ಗಳನ್ನು ಹೊರತೆಗೆದ ಎನ್‌ಐವಿ, ಲಸಿಕೆ ಅಭಿವೃದ್ಧಿಗಾಗಿ ಆ ಮಾದರಿಯನ್ನು ಭಾರತ್‌ ಬಯೋಟೆಕ್‌ಗೆ ಕೊಟ್ಟಿತ್ತು. ಭಾರತ್‌ ಬಯೋಟೆಕ್‌ ಹೇಗೆ ಲಸಿಕೆಯನ್ನು ಅಭಿವೃದ್ಧಿ ಮಾಡಿತು?

ಇನ್‌ಆ್ಯಕ್ಟಿವೇಟೆಡ್‌ ವೈರಸ್‌
1. ಮೊದಲ ಹಂತವಾಗಿ ಅದು ಎನ್‌ಐವಿಯಿಂದ ಸಂಗ್ರಹಿಸಿದ ಕೊರೊನಾ ವೈರಸ್‌ ಅನ್ನು ಪ್ರಯೋಗಾಲಯದಲ್ಲೇ ಕೃತಕವಾಗಿ ಬೆಳೆಸಿತು. ಅನಂತರ ರಾಸಾಯನಿಕಗಳು, ರೇಡಿಯೇಶನ್‌ಗಳು ಅಥವಾ ವಿವಿಧ ತಾಪಮಾನದ ಮೂಲಕ ಕೋವಿಡ್‌ನ‌ ರೋಗಕಾರಕ ಶಕ್ತಿಯನ್ನು ಸಂಪೂರ್ಣ ತಗ್ಗಿಸಲಾಯಿತು. ಅಂದರೆ ಆ ವೈರಸ್‌ಗೆ ರೋಗ ಉಂಟುಮಾಡುವ ಸಾಮರ್ಥ್ಯ ಹಾಗೂ ದ್ವಿಗುಣಗೊಳ್ಳುವ ಸಾಮರ್ಥ್ಯ ಹೋಗಿಬಿಡುತ್ತದೆ. ಇದೇ ಕೊವ್ಯಾಕ್ಸಿನ್‌ ಲಸಿಕೆ .

2. ಕೋವಿಡ್‌ ರೋಗಕಾರಕ ಶಕ್ತಿ ಕಳೆದುಕೊಂಡು ನಿಷ್ಕ್ರಿಯಗೊಂಡಿದ್ದರೂ ಅದರ ದೇಹರಚನೆಯಲ್ಲಿ ಬದಲಾವಣೆಯೇನೂ ಆಗಿರುವುದಿಲ್ಲ. ಲಸಿಕೆಯ ರೂಪದಲ್ಲಿ ಈ ನಿಷ್ಕ್ರಿಯ ವೈರಸ್‌ಗಳನ್ನು ಮಾನವನ ದೇಹಕ್ಕೆ ನುಸುಳಿಸಲಾಗುತ್ತದೆ. ಜತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುವಂಥ ಅಂಶಗಳೂ ಈ ಲಸಿಕೆಯಲ್ಲಿ ಇರುತ್ತವೆ. ಕೂಡಲೇ ನಮ್ಮ ರೋಗ ನಿರೋಧಕ ವ್ಯವಸ್ಥೆಯು ಈ ನಿಷ್ಕ್ರಿಯ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ. ಅಲ್ಲದೇ ಹೋರಾಡುವ ಮುಂದೆ ಶತ್ರುವಿನ ಸಾಮರ್ಥ್ಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳುತ್ತದೆ. ಮುಂದೆ ರೋಗಕಾರಕ ಕೊರೊನಾ ದೇಹ ಪ್ರವೇಶಿಸಿತು ಎಂದಿಟ್ಟುಕೊಳ್ಳಿ ಆಗ ಅದು ಕೂಡಲೇ ತನ್ನ ನೆನಪಿನ ಶಕ್ತಿಯ ಆಧಾರದಲ್ಲಿ ಅಪಾರ ಪ್ರಮಾಣದಲ್ಲಿ ನಿರ್ದಿಷ್ಟ ರೂಪದ ಪ್ರತಿಕಾಯಗಳನ್ನು ಬಿಡುಗಡೆ ಮಾಡಿ, ಅದನ್ನು ನಾಶ ಮಾಡುತ್ತದೆ.

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.