ಮಹಿಳೆಯರಿಗೆ ಯೋಗ ಯಾಕೆ ಮುಖ್ಯ

Team Udayavani, Jun 30, 2019, 5:00 AM IST

ಪುರುಷ‌ರಿಗೆ ಹೋಲಿಸಿದರೆ ಮಹಿಳೆಯರು ಅತೀ ಹೆಚ್ಚು ಒತ್ತಡಕ್ಕೆ ಗುರಿ ಯಾಗುವವರು. ಯೋಗ ಮಹಿಳೆಯರ ಮನಸ್ಸನ್ನು ಶಾಂತವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಚಿಂತೆಗೀಡಾಗದಂತೆ ತಡೆಯುವ ಯೋಗ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ನೆರವಾ ಗುತ್ತದೆ. ಜತೆಗೆ ಮಾನಸಿಕ ಸಮಸ್ಯೆಗಳು, ಮನೋದೈಹಿಕ (ಸೈಕೋಸೊಮ್ಯಾಟಿಕ್‌) ಸಮಸ್ಯೆಗಳಾಗುತ್ತವೆ. ಇಲ್ಲಿ ಮನಸ್ಸಿನ ವೇದನೆಗಳು ಅಥವಾ ಯಾವುದೋ ಕಿರಿಕಿರಿಗಳು ದೈಹಿಕ ಸಮಸ್ಯೆಯಾಗಿ ರೂಪ ಪಡೆಯುವುದುಂಟು. ಉದಾಹರಣೆಗೆ ಸೋರಿಯಾಸಿಸ್‌, ಬಿಪಿ, ಅಲ್ಸರ್‌, ಹೃದಯದ ಸಮಸ್ಯೆಗಳು ಇತ್ಯಾದಿ. ಇವೆಲ್ಲದಕ್ಕೂ ಯೋಗ ಪ್ರಯೋಜನಕಾರಿ.

ದೇಹದ ಆರೋಗ್ಯ
ಪ್ರತಿ ಮನೆಯಲ್ಲಿ ಬೇಗನೇ ಎದ್ದು ತಡವಾಗಿ ಮಲಗುವುದು ಮಹಿಳೆ ಮಾತ್ರ. ಉದಾಹರಣೆಗೆ ಅಮ್ಮ. ಒಂದು ಮಹಿಳೆ ಪ್ರತಿ ಕ್ಷಣವನ್ನೂ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾಳೆ. ಇದರಿಂದ ಅವರ ದೇಹ ಮತ್ತು ಮನಸ್ಸು ತುಂಬಾ ದಣಿದಿರುತ್ತದೆ. ಯೋಗ ಈ ನಿಟ್ಟಿನಲ್ಲಿ ಸಹಾಯಕ್ಕೆ ಬರಲಿದ್ದು, ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಕಚೇರಿ ಕೆಲಸ ಮಾಡುವ ಮಹಿಳೆ
ಕಚೇರಿ ಕೆಲಸ ಮಾಡುವ ಮಹಿಳೆಯರಿಗೆ ಯೋಗ ಅತೀ ಅವಶ್ಯ. ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾ ಡುವವರು ಸಂಧಿ ನೋವು ಸೇರಿದಂತೆ ಕೆಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ರಕ್ತ ಸಂಚಲನ ‌ೂ ಕ್ರಮೇಣ ಕಡಿಮೆಯಾಗಿ ಜೀರ್ಣ ಶಕ್ತಿಯನ್ನೂ ಕುಂದಿಸಬಹುದು. ಇದಕ್ಕೆ ಯೋಗ ಪರಿಹಾರ.

ಪ್ರಮುಖ ಆಸನಗಳು
ಯಾವಾಗಲು ಕೆಲಸ, ಬ್ಯುಸಿ ಎನ್ನುವವರಿಗೆ ಕೆಲವು ಉಪಯುಕ್ತ ಆಸನಗಳಿವೆ. ಇವುಗಳಲ್ಲಿ ಪದ್ಮಾಸನ, ನಾಡಿ ಶೋಧನ ಪ್ರಾಣಾಯಾಮ ಮತ್ತು ಭುಜಂಗಾಸನ ಪ್ರಮುಖವಾದುವು. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ವೀರಭದ್ರಾಸನ ಬಲು ಪ್ರಯೋಜನಕಾರಿ.ಆಸನಗಳ ಜತೆಗೆ, ಪ್ರಾಣಾಯಾಮ, ಮುದ್ರೆ, ಧ್ಯಾನದ ರೂಢಿಯಿಂದ ಆರೋಗ್ಯ ಲಾಭವಿದೆ. ಇವುಗಳನ್ನು ಬಳಸಿ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು.

ಈ ಆಸನ ಪ್ರಯತ್ನಿಸಬಹುದು
·  ಅರ್ಧ ಕಟಿ ಚಕ್ರಾಸನ
·  ಉತ್ಕಟಾಸನ
·  ತ್ರಿಕೋನಾಸನ
·  ಪಾರ್ಶ್ವಕೋನಾಸನ
·  ವೀರಭದ್ರ ಆಸನ
·  ಪ್ರಸಾರಿತ ಪಾದೋತ್ತಾನಾಸನ
·  ಪಾದ ಅಂಗುಷ್ಟ ಆಸನ
·  ಪಶ್ಚಿಮ ತಾನಾಸನ
·  ಬದ್ಧ ಕೊಣಾಸನ
·  ಜನು ಶೀರ್ಷಾಸನ

ಸಿಟ್ಟು ಶಮನಕ್ಕೆ ಮುದ್ರೆಗಳು
ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ವ್ಯತ್ಯಯದಿಂದ ಸಿಟ್ಟಿಗೀಡಾಗುವ ಸಂದರ್ಭ ಹೆಚ್ಚು. ಇದನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಧ್ಯಾನ ಕ್ರಮ ಸಹಕಾರಿ. ಸಿಟ್ಟು ಸಹಜಗುಣ. ಅದನ್ನು ನಿಯಂತ್ರಿಸುವುದೂ ಅಷ್ಟೇ ಮುಖ್ಯ. ಸಿಟ್ಟಿನ ಭರದಲ್ಲಿ ಕೈಗೊಳ್ಳುವ ನಿರ್ಧಾರಗಳು, ಕ್ರಮಗಳು ಅಪಾರ ಪ್ರಮಾಣದ ನಷ್ಟ ಮತ್ತು ಸ್ನೇಹ, ಸಂಬಂಧಗಳನ್ನೂ ನಾಶ ಮಾಡಬಹುದು. ಹಾಗಾಗಿ ಯೋಗದಲ್ಲಿ ಕೆಲವು ಮುದ್ರೆಗಳ ಅಭ್ಯಾಸ ಪರಿಹಾರ ಒದಗಿಸಬಲ್ಲದು. ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಇವು ಮುಖ್ಯ.

ಶಕ್ತಿಚಾಲಿನಿ ಮುದ್ರೆ
ಇದರಿಂದ ಜಡತ್ವ, ಸಿಟ್ಟು ಹಾಗೂ ಹತಾಶೆಗಳನ್ನು ಹಿಮ್ಮೆಟ್ಟಿಸಬಹುದು. ವಜ್ರಾಸನದಲ್ಲಿ ಕುಳಿತು ಎರಡೂ ಕೈಗಳನ್ನು ಮೊಣಕಾಲುಗಳ ಮೇಲಿರಿಸಿ ಮುಂಬಾಗಿ, ಹೊಟ್ಟೆಯ ಸ್ನಾಯುಗಳನ್ನು ಸಂಕುಚಿಸುವ ಹಾಗೂ ವಿಕಸಿಸುವ ಮೂಲಕ ಜೀರ್ಣಾಂಗಗಳನ್ನು ಚಲಿಸುವಂತೆ ಮಾಡಬೇಕು. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಮಾಡಬಹುದು.

ಮುಷ್ಟಿ ಮುದ್ರೆ
ಈ ಮುದ್ರೆಯಿಂದ ಸುಪ್ತಾವಸ್ಥೆಯಲ್ಲಿದ್ದ ಕೋಪ, ತಲ್ಲಣಗಳು, ಹತಾಶೆ, ಕಿರಿಕಿರಿ ಹಾಗೂ ಋಣಾತ್ಮಕ ಭಾವನೆಗಳು ದೂರವಾಗುತ್ತವೆ. ನಾಲ್ಕೂ ಬೆರಳುಗಳು ಹೆಬ್ಬೆರಳ ಅಡಿಯಲ್ಲಿ ಬರುವಂತೆ ಮಡಚಿ ಸಾಧ್ಯವಾದಷ್ಟು ಬಿಗಿಯಾಗಿಸಿ. ಈ ಪರಿಯಲ್ಲಿ ಮುಷ್ಟಿಕಟ್ಟಿ ಸುಮಾರು ಐದರಿಂದ ಹತ್ತು ನಿಮಿಷ ಕಣ್ಣುಮುಚ್ಚಿಕೊಂಡು ಇರಬೇಕು.

ಉನ್ಮಣಿ ಮುದ್ರೆ
ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಿ ಈ ಮೂಲಕ ಮನಸ್ಸಿನ ಒತ್ತಡ ಹಾಗೂ ಇದರ ಪರೋಕ್ಷ ಪರಿಣಾಮಗಳಿಂದ ದೂರವಿರಲು ಉನ್ಮಣಿ ಮುದ್ರೆ ಸಹಕಾರಿ. ಮೊದಲು ಪದ್ಮಾಸನದಲ್ಲಿ ಕುಳಿತುಕೊಂಡು ನಿಮ್ಮ ಎರಡೂ ಹುಬ್ಬುಗಳ ನಡುವಣ ಭಾಗ (ತಿಲಕ ಇಡುವ ಭಾಗ) ದ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು. ಇದರಿಂದ ಮನಸ್ಸನ್ನು ಆವರಿಸುವ ಋಣಾತ್ಮಕ ಯೋಚನೆ ದೂರವಾಗುತ್ತದೆ.

ಕ್ಷೇಪನ ಮುದ್ರೆ
ಈ ಮುದ್ರೆಯು ನಮ್ಮಲ್ಲಿರುವ ಅಹಂ ಅನ್ನು ನಿವಾರಿಸುತ್ತದೆ. ಖನ್ನತೆ, ಸಿಟ್ಟಿನ ಸಮಯದಲ್ಲಿ ದೇಹವನ್ನು ಆವರಿಸುವ ಋಣಾತ್ಮಕ ಶಕ್ತಿಗಳನ್ನು ದೂರವಿಡಬಲ್ಲದು.
ಈ ಮುದ್ರೆಗಾಗಿ ಮೊದಲು ಎರಡೂ ಹಸ್ತಗಳನ್ನು ಪರಸ್ಪರ ತಾಕಿಸಿ ಐದು ಬೆರಳುಗಳು ಸಂಧಿಸುವಂತೆ ಕೈಮುಗಿ ಯಬೇಕು. ಬಳಿಕ ಕೇವಲ ತೋರು ಬೆರಳು ಗಳು ಮಾತ್ರ ಒಂದಕ್ಕೊಂದು ತಾಗಿರುವಂತೆ ಉಳಿದೆಲ್ಲಾ ಬೆರಳುಗಳನ್ನು ಪರಸ್ಪರ ಬೆರಳುಗಳ ನಡುವೆ ಬಿಗಿಯಾಗಿಸಬೇಕು.

ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಯೋಗ ಪ್ರಬಲ ಅಸ್ತ್ರ. ಮುಖ್ಯವಾಗಿ ಮಹಿಳೆಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಯೋಗದ ಪಾತ್ರ ಮಹತ್ವದ್ದು. ಗರ್ಭಿಣಿಯರೂ ಕೆಲವು ಆಸನಗಳನ್ನು ಮಾಡುವುದರಿಂದ ಸಹಜ ಹೆರಿಗೆ ಸಾಧ್ಯ.
-ಡಾ| ಮಂಜರಿ ಚಂದ್ರ
ಯೋಗ ಥೆರಪಿಸ್ಟ್‌, ಉಡುಪಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ