ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಲಿ 


Team Udayavani, Apr 19, 2018, 7:00 AM IST

15.jpg

ಸ್ತ್ರೀಯನ್ನು ಮಾತೆಯ ಸ್ವರೂಪದಲ್ಲಿ ಗೌರವಿಸುವ ನಮ್ಮ ದೇಶದಲ್ಲಿ ಮಹಿಳೆ ಇನ್ನೂ ತನ್ನ ಹಕ್ಕುಗಳಿಗಾಗಿ ಹೋರಾಡಬೇಕಾದ ಸ್ಥಿತಿ ಇದೆ. ತ್ರಿವಳಿ ತಲಾಖ್‌ನಿಂದ ಆರಂಭಿಸಿ ಬೇಟಿ ಬಚಾವೋ, ಬೇಟಿ ಪಢಾವೋ ತನಕ ಚರ್ಚೆಗಳಾಗುತ್ತಿವೆ. ರಾಜಕಾರಣಿಗಳು ಈ ಬಗ್ಗೆ ಮಾತನಾಡಲಷ್ಟೇ ಬಯಸುತ್ತಾರೋ ಅಥವಾ ಮಹಿಳೆಯರಿಗೆ ಅಧಿಕಾರ ನೀಡಲು ಸಿದ್ಧರಿದ್ದಾರೋ ಎಂಬ ಪ್ರಶ್ನೆ ಉದ್ಭವಿಸಿದೆ. 

ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು. ಆದರೆ, ಅಂಥ ಅವಕಾಶ ಮಹಿಳೆಯರಿಗೆ ಸಿಕ್ಕಿದೆಯೇ ಎಂಬ ಪ್ರಶ್ನೆ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಎದ್ದು ನಿಂತಿದೆ. ಸ್ತ್ರೀಯನ್ನು ಮಾತೆಯ ಸ್ವರೂಪದಲ್ಲಿ ಗೌರವಿಸುವ ನಮ್ಮ ದೇಶದಲ್ಲಿ ಮಹಿಳೆ ಇನ್ನೂ ತನ್ನ ಹಕ್ಕುಗಳಿಗಾಗಿ ಹೋರಾಡಬೇಕಾದ ಸ್ಥಿತಿ ಇದೆ. ತ್ರಿವಳಿ ತಲಾಖ್‌ನಿಂದ ಆರಂಭಿಸಿ ಬೇಟಿ ಬಚಾವೋ, ಬೇಟಿ ಪಢಾವೋ ತನಕ ಚರ್ಚೆಗಳಾಗುತ್ತಿವೆ. ರಾಜಕಾರಣಿಗಳು ಈ ಬಗ್ಗೆ ಮಾತನಾಡಲಷ್ಟೇ ಬಯಸುತ್ತಾರೋ ಅಥವಾ ಮಹಿಳೆಯರಿಗೆ ಅಧಿಕಾರ ನೀಡಲು ಸಿದ್ಧರಿದ್ದಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ಮಹಿಳಾ ಸಮಾನತೆ ಭಾಷಣ, ಸೆಮಿನಾರುಗಳಿಗೆ ಸೀಮಿತವಾಗಿದೆ. ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದೆ.

149ನೇ ಸ್ಥಾನ
ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ಅಂಕಿ-ಅಂಶಗಳಲ್ಲಿ 193 ದೇಶಗಳ ಪೈಕಿ ಭಾರತ 149ನೇ ಸ್ಥಾನದಲ್ಲಿದೆ. ಮಹಿಳಾ ಪ್ರಾತಿನಿಧ್ಯದ ಜಾಗತಿಕ ಸರಾಸರಿ ಶೇ. 22 ಇದ್ದರೆ, ಭಾರತದಲ್ಲಿ ಅದು ಶೇ. 11.8ಕ್ಕೆ ಕುಸಿದಿದೆ. ರವಾಂಡಾ, ಬುರುಂಡಿ, ಜಿಂಬಾಬ್ವೆ, ಇರಾಕ್‌, ಸೋಮಾಲಿಯಾ, ಸೌದಿ ಅರೇಬಿಯಾ, ಫಿಜಿ ಮತ್ತು ಘಾನಾ ಅಲ್ಲದೆ, ನೆರೆ ರಾಷ್ಟ್ರಗಳಾದ ನೇಪಾಳ (48ನೇ ಸ್ಥಾನ), ಅಫ‌ಘಾನಿಸ್ಥಾನ (54), ಪಾಕಿಸ್ತಾನ (90) ಹಾಗೂ ಬಾಂಗ್ಲಾದೇಶ (92) ಕೂಡ ನಮಗಿಂತ ಎಷ್ಟೋ ವಾಸಿ. ಬೇರೆ ರಾಜಕೀಯ ಪಕ್ಷಗಳೂ ಸ್ವಯಂಪ್ರೇರಿತವಾಗಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಟ್ಟು ಸಮಾನತೆಯತ್ತ ಹೆಜ್ಜೆಯಿಟ್ಟಿವೆ.

ಬೆರಳೆಣಿಕೆ ಮಹಿಳೆಯರು
ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 428 ಸ್ಥಾನಗಳ ಪೈಕಿ 38ರಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ಕೊಟ್ಟಿತು. ಕಾಂಗ್ರೆಸ್‌ 60 ಕಡೆ ಮಹಿಳೆಯರನ್ನು ಕಣಕ್ಕಿಳಿಸಿತ್ತು. ಬಿಎಸ್ಪಿ 21, ಸಿಪಿಐ 6, ಸಿಪಿಎಂ 11 ಹಾಗೂ ಎನ್‌ ಸಿಪಿ 4 ಮಹಿಳೆಯರನ್ನು ಸ್ಪರ್ಧೆಗಿಳಿಸಿದ್ದವು. ಸಂಸತ್ತಿನಲ್ಲಿ 545 ಸದಸ್ಯರ ಪೈಕಿ ಮಹಿಳೆಯರ ಸಂಖ್ಯೆ (62) ಶೇ. 11.37ರಷ್ಟು ಮಾತ್ರ ಇದೆ.  ಸೋನಿಯಾ ಗಾಂಧಿ (ಕಾಂಗ್ರೆಸ್‌), ಮಮತಾ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್‌) ಹಾಗೂ ಮಾಯಾವತಿ (ಬಿಎಸ್ಪಿ) ಮುಖ್ಯಸ್ಥರಾಗಿದ್ದ ಪಕ್ಷಗಳೂ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಲು ಹಿಂಜರಿದವು. ಪಶ್ಚಿಮ ಬಂಗಾಲದ 293 ವಿಧಾನಸಭಾ ಸ್ಥಾನಗಳ ಪೈಕಿ ಟಿಎಂಸಿ 43 ಕಡೆ ಮಹಿಳೆಯರಿಗೆ ಅವಕಾಶ ನೀಡಿತು. 403 ಶಾಸಕ ಸ್ಥಾನವುಳ್ಳ ಉತ್ತರ ಪ್ರದೇಶದಲ್ಲಿ ಬಿಎಸ್ಪಿಯಿಂದ ಕಣಕ್ಕಿಳಿದ ಮಹಿಳೆಯರ ಸಂಖ್ಯೆ 21. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಆಗಿನ ತಮಿಳುನಾಡು ವಿಧಾನಸಭೆ ಚುನಾವಣೆ ಯಲ್ಲಿ 29 ಮಹಿಳೆಯರಿಗೆ ಅವಕಾಶ ಕೊಟ್ಟಿತ್ತು. ನಮ್ಮ ದೇಶದ ಎಲ್ಲ ವಿಧಾನಸಭೆಗಳ ಒಟ್ಟು 4,128 ಸ್ಥಾನಗಳ ಪೈಕಿ ಕೇವಲ 364ರಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಮೂರು ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಮಿಜೋರಾಮ್‌ ಮತ್ತು ನಾಗಾಲ್ಯಾಂಡ್‌ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿ ನಿಧ್ಯವೇ ಇಲ್ಲ. ಕರ್ನಾಟಕದಲ್ಲಿ ಆರು ಶಾಸಕಿಯರಿದ್ದಾರೆ. ವಿಶೇಷವೆಂದರೆ ಹೆಣ್ಣು ಭ್ರೂಣಹತ್ಯೆ ಗರಿಷ್ಠ ಪ್ರಮಾಣದಲ್ಲಿರುವ ಹರಿಯಾಣ ರಾಜ್ಯದಲ್ಲಿ 13 ಶಾಸಕಿಯರು (ಶೇ. 14.44) ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 42, ರಾಜಸ್ಥಾನದಲ್ಲಿ 28 ಶಾಸಕಿಯರಿದ್ದಾರೆ. ಪಕ್ಷಗಳ ಪ್ರಾಬಲ್ಯವಿರುವ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಹಾಗೂ ಗೆಲ್ಲುವುದು ಸುಲಭವಲ್ಲ. 16ನೇ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದ ಎಲ್ಲ 206 ಮಹಿಳೆಯರೂ ಸೋತರೆಂದರೆ ಅಚ್ಚರಿ ಆಗಲಿಕ್ಕಿಲ್ಲ.

ಸ್ಫೂರ್ತಿಯುತ ಸಾಧನೆ
“ಮಹಿಳಾ ಮೀಸಲಾತಿ’ ಕೂಗಿಗೂ ಮೊದಲೇ ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕೆಳದಿ ಚೆನ್ನಮ್ಮ, ಅಬ್ಬಕ್ಕ, ಕಿತ್ತೂರು ಚೆನ್ನಮ್ಮ ಮುಂತಾದವರು ಲೋಕವಿಖ್ಯಾತಿ ಪಡೆದರು. ಇಂದಿರಾ ಗಾಂಧಿ ಸುದೀರ್ಘ‌ ಅವಧಿಗೆ ಪ್ರಧಾನಿಯಾಗಿ ಸಮರ್ಥ ಆಡಳಿತ ನೀಡಿದರು. ಸ್ವಾತಂತ್ರ್ಯ ಸೇನಾನಿ ಸರೋಜಿನಿ ನಾಯ್ಡು, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌, ಖಡಕ್‌ ಐಪಿಎಸ್‌ ಅಧಿಕಾರಿಯಾಗಿದ್ದ ಕಿರಣ್‌ ಬೇಡಿ, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮುಜುಂದಾರ್‌ – ಹೀಗೆ ನೂರಾರು ನೀರೆಯರ ಸಾಧನೆಗೆ ದೇಶವೇ ಬೆರಗಾಗಿದೆ.

ಎಸ್‌.ಪಿ.ಗಳ ಕಾರುಬಾರು!
ಪ್ರಧಾನಿ ನರೇಂದ್ರ ಮೋದಿ ಅವರಿಗೇ ವ್ಯಕ್ತಿಯೊಬ್ಬ ತಾನು ಎಸ್ಪಿ ಎಂದು ಪರಿಚಯಿಸಿಕೊಂಡಿದ್ದನಂತೆ (ಸರಪಂಚ್‌ ಕಾ ಪತಿ!). ಚುನಾಯಿತ ಪತ್ನಿಯ ಪರವಾಗಿ ಆತನೇ ಸಭೆಗೆ ಬಂದಿದ್ದ ಎಂದರಿತ ಮೋದಿ, “ಆಯ್ಕೆಯಾದ ಮಹಿಳೆಯರೇ ಗ್ರಾ.ಪಂ.ಗಳಲ್ಲಿ  ಆಡಳಿತ ನಡೆಸಬೇಕು. ಅವರ ಪತಿಯೋ ಅಥವಾ ಕುಟುಂಬದ ಇನ್ನಾವ ಪುರುಷರೋ ಅಲ್ಲ. ಬೇರೊಬ್ಬರು ಅವರ ಅಧಿಕಾರದಲ್ಲಿ ಮೂಗು ತೂರಿಸಬಾರದು’ ಎಂದು ಖಾರವಾಗಿ ಹೇಳಿದರು. ಛತ್ತೀಸಗಡ ಹೈಕೋರ್ಟ್‌ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಲೇವಾರಿ ವೇಳೆ ಇದೇ ಅಭಿಪ್ರಾಯದ ಆದೇಶ ನೀಡಿತು. ಮೋದಿ ಮಾತಿನಿಂದ ಪ್ರಭಾವಿತವಾದ ಮಧ್ಯ ಪ್ರದೇಶ “ಎಸ್‌.ಪಿ.’ ಪದ್ಧತಿಗೆ ತಿಲಾಂಜಲಿ ಇಟ್ಟಿತು. ಬೇರೊಬ್ಬರು ಅಧಿಕಾರ ಚಲಾಯಿಸಿದರೆ ಮಹಿಳೆಯ ಸದಸ್ಯತ್ವವನ್ನೇ ವಜಾ ಗೊಳಿಸುವ ಆದೇಶ ಹೊರಡಿಸಿತು. ಚುನಾಯಿತ ಮಹಿಳೆಯೇ ಸಭೆಯಲ್ಲಿ ಭಾಗಿಯಾಗುತ್ತಿರುವ ಕುರಿತು ಮನವರಿಕೆ ಮಾಡಿ ಕೊಳ್ಳಲು ಗ್ರಾಮ ಸಭೆಗಳಲ್ಲಿ ವಿಡಿಯೊ ವ್ಯವಸ್ಥೆ ಮಾಡಿತು. ನಡೆದು ಬಂದ ಹಾದಿ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ, “ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾನು ಏಕೈಕ ವಿದ್ಯಾರ್ಥಿನಿಯಾಗಿದ್ದೆ ಮತ್ತು ಅಲ್ಲಿ ಮಹಿಳೆಯರ ಶೌಚಾಲಯವೇ ಇರಲಿಲ್ಲ’ ಎಂದಿದ್ದನ್ನು ಗಮನಿಸಿ. ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಿಸಲು ಮಹಿಳೆ ಯರಿಗೆ ಅವಕಾಶ ನೀಡದಿರುವ ದೇಶಗಳು ಪ್ರತಿಭೆಯ ಒಂದು ದೊಡ್ಡ ಭಾಗದಿಂದ ವಂಚಿತವಾಗುತ್ತವೆ ಎಂದು ಅಮೆರಿಕದ ಪ್ರಥಮ ಮಹಿಳಾ ರಾಜ್ಯಾಂಗ ಕಾರ್ಯದರ್ಶಿ ಮೆಡಲಿನ್‌ ಆಲ್‌ಬ್ರೈಟ್‌ ಹೇಳಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ನೋಡಿದರೂ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದು ಅಪೇಕ್ಷಣೀಯ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ಕುರಿತ ಚರ್ಚೆಯನ್ನು ಆರಂಭಿಸಿದ್ದು ರಾಜೀವ ಗಾಂಧಿ. 1989ರಲ್ಲಿ ರಾಜ್ಯಸಭೆಯಲ್ಲಿ ವಿಪಕ್ಷಗಳು ವಿರೋಧಿಸಿದರೂ 1993ರಲ್ಲಿ 73 ಮತ್ತು 74ನೇ ತಿದ್ದುಪಡಿಗಳಿಗೆ ಅಂಗೀಕಾರ ದೊರಕಿದೆ.

ಎಡಪಕ್ಷಗಳನ್ನೇ ಅವಲಂಬಿಸಿದ್ದ ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು 1996ರ ಸೆಪ್ಟಂಬರ್‌ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿತು. ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಿದ ಬೆನ್ನಿಗೇ 11ನೇ ಲೋಕಸಭೆ ವಿಸರ್ಜನೆ ಆಗುವ ಮೂಲಕ ಮಸೂದೆ ಧೂಳು ಹಿಡಿಯಿತು.1999ರ ಡಿಸೆಂಬರ್‌ ತಿಂಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರಕಾರ ಮತ್ತೂಮ್ಮೆ (ಸಂವಿಧಾನಕ್ಕೆ 84ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು. ಆಗಲೂ ಲೋಕಸಭೆ ವಿಸರ್ಜನೆಗೊಂಡಿತು. 2008ರ ಮೇ 6ರಂದು ರಾಜ್ಯಸಭೆಯಲ್ಲಿ ಪುನಃ ಈ ಮಸೂದೆ ಮಂಡಿಸಿದಾಗಲೂ ಗದ್ದಲವಾಗಿ ಅಧಿವೇಶನವೇ ಕೊನೆಗೊಂಡಿತು. ಮಾರ್ಚ್‌ 9, 2010ರಂದು ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು. ಬಿಜೆಪಿಗೆ ಸದ್ಯ ಲೋಕಸಭೆಯಲ್ಲಿ ಬಹುಮತ ವಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಬೇಕೆಂದೂ, ಅದಕ್ಕೆ ಕಾಂಗ್ರೆಸ್‌ ಬೆಂಬಲ ನೀಡುವುದೆಂದೂ ಸೋನಿಯಾ ಗಾಂಧಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಆಶಾ ಕಿರಣಗಳು
ಪುಟ್ಟ ಮಗುವಿನೊಂದಿಗೆ ಪಾರ್ಲಿಮೆಂಟಿಗೆ ಬಂದು ಇಟಲಿಯ ಸಂಸದೆ ಲಿಸಿಯಾ ರೋನ್‌ ಜುಲ್ಲಿ ಸುದ್ದಿಯಾದರು. ಗ್ರಾಮೀಣ ಭಾರತದ ಅಭಿವೃದ್ಧಿಯ ಕನಸು ಹೊತ್ತು ಕಾರ್ಪೊರೇಟ್‌ ಉದ್ಯೋಗ ತೊರೆದ ಲೇತ್‌ ಛವಿ ರಾಜಾವತ್‌ ಅವರು ಜೈಪುರದಿಂದ 60 ಕಿ.ಮೀ. ದೂರದ ಹಳ್ಳಿಯೊಂದರ ಸರಪಂಚರಾದರು. ಹರಿಯಾಣದ ಬೀಬಿಪುರ ರಾಜಕೀಯದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿದೆ. ಮದ್ಯದ ಅಂಗಡಿಗಳು ಇಲ್ಲಿಲ್ಲ. ಪಾನ್‌ ಕಾರ್ಡ್‌ ಹೊಂದಿದ ದೇಶದ ಮೊದಲ ಗ್ರಾ.ಪಂ. ಇದು. ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಒಂದು ಆಶಾಕಿರಣ. ಸಚಿವರಾಗಿ ಸುಷ್ಮಾ ಸ್ವರಾಜ್‌, ನಿರ್ಮಲಾ ಸೀತಾರಾಮನ್‌, ಸ್ಮತಿ ಇರಾನಿ ಮುಂತಾದವರು ಮಾಡಿದ ಸಾಧನೆಯೂ ಉಲ್ಲೇಖನೀಯ.

ಹೆಸರಿಗೆ ಮಹಿಳೆ, ಅಧಿಕಾರ ಪುರುಷನದು!
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕೇಳುತ್ತಿದ್ದಾರೆ. ಆದರೆ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಕಡ್ಡಾಯವಾಗಿದೆ. ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲೂ ಶೇ. 30ಕ್ಕಿಂತ ಹೆಚ್ಚಿನ ಮೀಸಲಾತಿ ಚಾಲ್ತಿಯಲ್ಲಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಶೇ. 50ರಷ್ಟು ಮಹಿಳಾ ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಲು ಅವರ ಸಂಗಾತಿ, ಕುಟುಂಬದ ಸದಸ್ಯರು ಅಥವಾ ಪುರುಷ ಸದಸ್ಯರನ್ನು ಅವಲಂಬಿಸಿದ್ದರೆಂದು ಕರ್ನಾಟಕದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.

ರಾಜಕಾರಣಿಗಳ ಪತ್ನಿ – ಪುತ್ರಿಯರು ಸ್ಪರ್ಧಿಸುವುದಾದರೆ ಮೀಸಲಾತಿಗೆ ಅರ್ಥವಿದೆಯೇ? ಸಾಮಾನ್ಯ ಹಾಗೂ ಬಡ ವರ್ಗದ ಮಹಿಳೆಯರ ಪ್ರತಿನಿಧಿಗಳಾಗಿ ಅವರು ಕೆಲಸ ಮಾಡಬಲ್ಲರೇ? ಹೆಂಡತಿ ಅಥವಾ ಮಗಳ ಪರವಾಗಿ ಟಿಕೆಟ್‌ಗಾಗಿ ಲಾಬಿ ನಡೆಸುವ ಪುರುಷ, ಆಕೆ ಗೆದ್ದ ಮೇಲೆ ಅಧಿಕಾರ ಚಲಾಯಿಸಲು ಬಿಡುವನೇ? ಇಂತಹ “ಡಮ್ಮಿ’ ಜನಪ್ರತಿನಿಧಿಗಳಿಂದ ಮೀಸಲಾತಿಯ ಆಶಯ ಈಡೇರುವುದೇ? ಉನ್ನತ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ಮೀಸಲಾತಿ ನೀಡಿದ ಮಾತ್ರಕ್ಕೆ ಮಹಿಳೆಯರ ಸ್ಥಾನಮಾನ ತಾನಾಗಿಯೇ ಉತ್ತಮಗೊಳ್ಳಲಾರದು, ಸಮಾನತೆ ಬರಲಾರದು. ರಾಜಕೀಯ ಪ್ರಾತಿನಿಧ್ಯ ಮಾತ್ರವಲ್ಲ, ಹೆಣ್ಣು ಮಗುವಿನ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ನೈರ್ಮಲ್ಯದ ಶೋಚನೀಯ ಕೊರತೆಯನ್ನು ತುರ್ತಾಗಿ ನೀಗಿಸಬೇಕಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ಸ್ಥಾನಮಾನಗಳನ್ನು ಉತ್ತಮಪಡಿಸಬೇಕಿದೆ. ಆರ್ಥಿಕ ಸ್ವಾವಲಂಬನೆಯ ಜತೆಗೆ ವಿದ್ಯಾವಂತ ಯುವತಿಯರು ರಾಜಕೀಯ ಪ್ರವೇಶಿಸಿ, ದೇಶಾಭಿವೃದ್ಧಿಗೆ ಆಸಕ್ತಿ ವಹಿಸಿದರೆ ಮಾತ್ರ ಮೀಸಲಾತಿ ಅರ್ಥಪೂರ್ಣ ಹಾಗೂ ಸಾರ್ಥಕವಾಗುತ್ತದೆ.

ಅನಂತ ಹುದೆಂಗಜೆ

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.