ಗರ್ಭಿಣಿಯರ ಆರೈಕೆಗಿರುವ ಯೋಗ
Team Udayavani, Jun 30, 2019, 5:21 AM IST
ಗರ್ಭಿಣಿಯಲ್ಲಿ ಮಗುವಿನ ಜನನದ ಬಗ್ಗೆ ಉಂಟಾಗುವಂತಹ ಒತ್ತಡ ನಿವಾರಣೆಗೆ ಯೋಗಾಸನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಗರ್ಭಿಣಿಯರನ್ನು ಯೋಗ ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧಗೊಳಿಸುತ್ತದೆ. ಇದರಿಂದ ಮಹಿಳೆಯಲ್ಲಿ ಸ್ಥಿತಿಸ್ಥಾಪಕತ್ವ ಗುಣ ಹೆಚ್ಚಾಗಲಿದೆ. ಇದು ಪರೋಕ್ಷವಾಗಿ ಮಗುವಿನ ಜನನದ ವೇಳೆ ಸಂಭವಿಸುವ ಒತ್ತಡ ನಿವಾರಣೆಯಾಗಲು ಸಹಕಾರಿ.
ಗರ್ಭಿಣಿಯರು ಕೆಲವು ಆಸನಗಳನ್ನು ಮಾತ್ರ ಮಾಡಬಹುದು. ಪ್ರಾಣಾಯಾಮ, ಧ್ಯಾನ, ಮುದ್ರೆ ಮೊದಲಾದವುಗಳನ್ನು ಪ್ರಯತ್ನಿ ಸಬಹುದು. ಯೋಗಾಸನಗಳು ಬೆನ್ನುಹುರಿಯನ್ನು ಬಲಗೊಳಿಸಿ ದೇಹವು ಆರಾಮವಾಗಿರುವಂತೆ ನೋಡಿಕೊಳ್ಳುತ್ತವೆ.
ಯೋಗನಿದ್ರೆ
ಇದನ್ನು ಗರ್ಭಿಣಿಯರು ಮಾಡಲೇಬೇಕು. ಇದು ಒತ್ತಡ ಕಡಿಮೆ ಮಾಡಿ ಮನಸ್ಸನ್ನು ತಿಳಿಗೊಳಿಸುತ್ತದೆ. ಇದರಿಂದ ಆರೋಗ್ಯವೂ ವೃದ್ಧಿಸಲಿದೆ. ಜತೆಗೆ ಮಗುವಿನ ಬೆಳವಣಿಗೆಗೂ ಸಹಕಾರಿ. ಧನಾತ್ಮಕ ಶಕ್ತಿ ಹಾಗೂ ಆಲೋ ಚನೆಗಳನ್ನು ತುಂಬುವುದು ಇದರ ಶ್ರೇಷ್ಠತೆ. ಖಂಡಿತಾ, ಗರ್ಭಿಣಿಯರಷ್ಟೇ ಅಲ್ಲ. ಎಲ್ಲರೂ ಸೂಕ್ತ ಯೋಗಗುರುಗಳ ಸಲಹೆ ಪಡೆದು ಅವರಿಂದ ಮಾರ್ಗ ದರ್ಶನ ಪಡೆದೇ ಯೋಗಾಭ್ಯಾಸ ಮಾಡಬೇಕು. ಆದೇ ಸೂಕ್ತ.
ಇದು ಸುಲಭ ಉಸಿರಾಟಕ್ಕೆ ನೆರ ವಾಗಿ ಮಾನಸಿಕ ಹಾಗೂ ದೈಹಿಕ ಆರಾಮ ಪ್ರಾಪ್ತಿಯಾಗುತ್ತದೆ. ಹಾಗೆಯೇ ಮನಸ್ಸನ್ನು ಉಲ್ಲಾಸ ದಿಂದ ಇಟ್ಟುಕೊಳ್ಳಲು ಯೋಗವೇ ಪ್ರಬಲ ಅಸ್ತ್ರ. ಜತೆಗೆ ಭಯ, ಆತಂಕವನ್ನು ಕಡಿಮೆ ಮಾಡುತ್ತದೆ. ಧ್ಯಾನವೂ ಇದಕ್ಕೆ ಪೂರಕ ಎನ್ನುತ್ತಾರೆ ಯೋಗ ಗುರುಗಳು.