ಯುವ ಯೋಗ

Team Udayavani, Jun 23, 2019, 5:00 AM IST

ಯೋಗ ಜೀವನ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಆರಂಭವಾದ ತಿಂಗಳ ಅಂಕಣ. ಇದರಲ್ಲಿ ನಿತ್ಯವೂ ಯೋಗಾಭ್ಯಾಸ ಕುರಿತ ಪ್ರಶ್ನೆಗಳಿಗೆ ಪರಿಣತರು ಉತ್ತರಿಸುತ್ತಾರೆ. ಪ್ರತಿ ರವಿವಾರ (ನಾಲ್ಕು) ಯೋಗದ ಸಾಧ್ಯತೆಯನ್ನು ವಿಭಿನ್ನ ನೆಲೆಗಳಲ್ಲಿ
ಕಾಣುವ ಪ್ರಯತ್ನ. ಈ ಬಾರಿ ಯುವ ಜನರಿಗೆ ಹೆಚ್ಚು ಸಂಬಂಧಿಸಿದ್ದು.

ವಿದ್ಯಾರ್ಥಿಗಳಿಗೆ ಹಲವು ದಿಶೆಯಲ್ಲಿ ಯೋಗ ಅನುಕೂಲವನ್ನು ತಂದುಕೊಡಬಲ್ಲದು. ಅವರು ಮಾನಸಿಕವಾಗಿ ಬಳಲದಂತೆ, ಒತ್ತಡ ಹಾಗೂ ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರ ನೆರವಿಗೆ ಬರುವುದು ಯೋಗ.

ವಿದ್ಯಾರ್ಥಿಗಳಿಗೆ ಯೋಗ

ಯಾಕೆ?
1 ಯೋಗವು ನಮ್ಮೊಳಗನ್ನು ಅರಿಯಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಸು ಮತ್ತು ದೇಹ ಆರೋಗ್ಯಪೂರ್ಣವಾಗಬಲ್ಲದು. ಪ್ರಾಣಾಯಾಮದಂಥ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಒತ್ತಡ ಬಾಧಿಸಲಾರದು.

ಹೇಗೆ?
2ಏಕಾಗ್ರತೆ ಹೆಚ್ಚಿಸುವಲ್ಲಿ ಸಹಕಾರಿ. ಪ್ರಮುಖವಾಗಿ ಗೊಂದಲ ಗೂಡಾಗಿರುವ ಮನಸ್ಸನ್ನು ತಿಳಿಗೊಳಿಸಿ, ಗುರಿಯನ್ನು ಸ್ಪಷ್ಟಗೊಳಿಸಬಲ್ಲದು.

3ಅಂತರ್ಮುಖೀಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಕಲಿಸುತ್ತದೆ.

4ಕೀಳರಿಮೆ ತ್ಯಜಿಸಿ ಸ್ವ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಇದಕ್ಕಿಂತ ಸುಲಭವಾದ ಮಾರ್ಗ ಬೇರೊಂದಿಲ್ಲ.

ಬಹುತೇಕ ಸಂದರ್ಭ ವಿದ್ಯಾರ್ಥಿಗಳು ಅಂತರ್ಮುಖೀಗಳು. ಯಾರೊಂದಿಗೂ ಮಾತನಾಡಲಾರರು, ಬೆರೆಯಲಾರರು. ಇಂತಹ ಸಂದರ್ಭವನ್ನು ನಾವು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷ್ಯಿಸುವ ಸಂಭವವಿರುತ್ತದೆ. ಆದರೆ ಮಕ್ಕಳು ಹೆಚ್ಚು ಸಮಾಜಮುಖೀಯಾಗಲು ಯೋಗ ಸಹಾಯ ಮಾಡಬಲ್ಲದು. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಲು ನೆರವಾಗುವುದೇ ಯೋಗ. ನಮ್ಮನ್ನು ಆಧ್ಯಾತ್ಮಿಕ ನೆಲೆಯಲ್ಲಿ ರೂಪಿಸುವಂಥದ್ದು. ಇದೊಂದು ರೀತಿಯಲ್ಲಿ ಸಾವಯವ ಮಾರ್ಗ. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರ ಅನುಪಮ. ಕೇವಲ ಬದುಕಿಗೆ ಒಂದು ಶಿಸ್ತನ್ನಷ್ಟನ್ನೇ ಕಲಿಸುವುದಿಲ್ಲ ; ಬದಲಾಗಿ ನೆಮ್ಮದಿಯಿಂದ ಬದುಕುವುದನ್ನೂ ಕಲಿಸುತ್ತದೆ.

ಏನು?
ಉಸಿರಾಟದ ವ್ಯಾಯಾಮ
ಆರೋಗ್ಯಕಾರಿ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ನೆರವಾಗಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಉಸಿರಾಟ ಪ್ರಕ್ರಿಯೆಯು ಶ್ವಾಸಕೋಸದ ಆರೋಗ್ಯಕ್ಕೆ ನೆರವಾಗುತ್ತದೆ.

ಸಮತೋಲನ
ಸಮತೋಲನ ಕಾಯ್ದುಕೊಳ್ಳುವ ಭಂಗಿಗಳು ಮನಸ್ಸನ್ನು ಶಾಂತ, ಆರೋಗ್ಯವಾಗಿ ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತವೆ. ಇದು ಶಕ್ತಿಯನ್ನು ಹೆಚ್ಚಿಸಬಲ್ಲದು.

ಸ್ಟ್ರೆಚ್ಚಿಂಗ್‌
ಇದು ನಮ್ಮ ಮಾಂಸಖಂಡಗಳನ್ನು ಬಲಿಷ್ಟಗೊಳಿಸಿ ದೈಹಿಕ ಸಾಮರ್ಥ್ಯದೊಂದಿಗೆ ಮಾನಸಿಕ ಆರೋಗ್ಯ ವನ್ನೂ ಹೆಚ್ಚಿಸಬಹುದು.

ಧ್ಯಾನವಿರಲಿ ಜತೆಯಲಿ…
ಏಕಾಗ್ರತೆ
ಏಕಾಗ್ರತೆ ಬದುಕಿಗೆ ಅವಶ್ಯ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ತೀರಾ ಅವಶ್ಯ. ಉಸಿರಾಟವನ್ನು ನಿಧಾನಗೊಳಿಸುತ್ತಾ, ಧ್ಯಾನ ಮಾಡುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ Attention deficit hyperactivity disorder (ADHD) ಎಂಬುದು ಇರುತ್ತದೆ. ಪ್ರತಿದಿನ ಧ್ಯಾನದಲ್ಲಿ ತೊಡಗಿಕೊಂಡರೆ ಈ ಸಮಸ್ಯೆ ಕಾಡದು.

ಪರೀಕ್ಷೆ ಭಯಕ್ಕೆ ಗುಡ್‌ ಬೈ
ಸರಿಯಾದ ಓದು ಸಾಧ್ಯವಾಗದಿದ್ದಾಗ ಪರೀಕ್ಷೆಯ ಭಯ ನಮ್ಮನ್ನು ಆವರಿಸುತ್ತದೆ. ಓದಿನ ಕುರಿತ ನಿರಾಸಕ್ತಿಗೆ ಏಕಾಗ್ರತೆ ಕೊರತೆ ಪ್ರಮುಖ ಕಾರಣ. ಜತೆಗೆ ಕೆಲವು ಮಾನಸಿಕ ದೌರ್ಬಲ್ಯಗಳು ಓದಿನೆ‌ಡೆಗಿನ ಆಸಕ್ತಿಯನ್ನು ವಿಮುಖಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಆಸಕ್ತಿಯನ್ನು ಮರು ಸಿದ್ಧಿಸಿಕೊಳ್ಳಲು ಬೆಳಗ್ಗೆ ಓದಲು ಕುಳಿತುಕೊಳ್ಳುವ ಮೊದಲು ಸೂಕ್ತ ಯೋಗ ಆಭ್ಯಾಸವನ್ನು ಮಾಡುವುದು ಸೂಕ್ತ.

ಶಿಖರವೇರುವ ಸಾಮರ್ಥ್ಯ
ತರಗತಿ, ಕ್ರೀಡೆ, ಫೆಸ್ಟ್‌ಗಳು, ಸಂಭ್ರಮಾಚರಣೆಗಳು, ಪರೀಕ್ಷೆ ಮೊದಲಾದವು ವಿದ್ಯಾರ್ಥಿ ಜೀವನದಲ್ಲಿ ಸಹಜ. ಇದರಿಂದ ಮನಸ್ಸು ತರಗತಿಗೆ ಬಂದಾಗ ಚಂಚಲಿತವಾಗಿರುತ್ತದೆ. ಇದನ್ನು ನಿಯಂತ್ರಿಸಲು ಯೋಗ ಮತ್ತು ಧ್ಯಾನ ಸಹಕಾರಿ. ಪ್ರಶಾಂತ ಸ್ಥಳದಲ್ಲಿ ಧ್ಯಾನಸ್ಥರಾದರೆ ನವ ಚೈತನ್ಯ ಬರುತ್ತದೆ. ಇದೇ ಶಿಖರವೇರುವ ಸಾಮರ್ಥ್ಯ ತುಂಬುವಂಥದ್ದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಧುನಿಕ ಯುಗದಲ್ಲಿ ಹೀಮ್ಯಾನ್‌, ಸ್ಪೈಡರ್‌ಮ್ಯಾನ್‌ಗಳನ್ನು ಕಂಡಿದ್ದೆವು. ಪಿಜ್ಜಾಮ್ಯಾನ್‌ಗಳು ಬದಿಗೆ ಸರಿದು ಫ‌ುಡ್‌ ಮ್ಯಾನ್‌ಗಳಿಗೆ ದಾರಿ ಬಿಡುತ್ತಿದ್ದಾರೆ....

  • ಮಣಿಪಾಲ: 2014ರಲ್ಲಿ ಭಾರತದ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಪರಿಚಯಿಸಲಾಯಿತು. ಟೋಲ್‌ಗ‌ಳಲ್ಲಿ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿರುವುದನ್ನು...

  • 1958ರ ಆ. 17ರಂದು ಅಮೆರಿಕ ಕಳುಹಿಸಿದ್ದ ಪಯೋನಿಯರ್‌ ಆರ್ಬಿಟರ್‌ನ ಪ್ರಯತ್ನದಿಂದ ಹಿಡಿದು ಇಲ್ಲಿಯತನಕ ಹಲವಾರು ಬಾರಿ ಮನುಷ್ಯ ಚಂದ್ರನ ಅಧ್ಯಯನಕ್ಕೆ ಮುಂದಾಗಿದ್ದಾನೆ....

  • ಚಂದ್ರಯಾನ-1 ರ ಮೂಲಕ ತನ್ನ ಮೊದಲ ಪ್ರಯತ್ನದಲ್ಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆಯನ್ನು ಮಾಡಿ ತೋರಿಸಿದ್ದ ಇಸ್ರೊ, ಇದೀಗ ಮತ್ತೂಂದು ಜೈತ್ರಯಾತ್ರೆಗೆ...

  • ಐದು ವರ್ಷಗಳಿಗೆ ಅಧಿಕಾರ ನಡೆಸಲು ಜನ ತೀರ್ಪು ಕೊಟ್ಟು ಒಂದು ವರ್ಷವಾಗುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಶಾಸಕರು ಮನೆಯಲ್ಲಿ ಕುಳಿತುಕೊಂಡಿದ್ದರೆ ಜನ ಏನು...

ಹೊಸ ಸೇರ್ಪಡೆ