ಕನ್ನಡದ ತೇರು: ಚಿಗುರಿಸೀತೇ ಹಳ್ಳಿಯ ಬೇರು?

ಅನ್ಯಭಾಷಾ ಪಾರಮ್ಯ ಇಂದು ಹಳ್ಳಿಗಳನ್ನೂ ತಲುಪುತ್ತಿದೆ

Team Udayavani, Nov 1, 2019, 5:05 AM IST

45

ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ ಮತ್ತು ಈ ಎಲ್ಲದರ ಹಿಂದಿನ ಉಪಶಾಖೆಗಳನ್ನು ಒಳಗೊಂಡ ಒಂದು ಅಂತಃಪ್ರಜ್ಞೆ.

ನಾವು ಮತ್ತೂಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಇಂತಹ ಆಚರಣೆ, ಸಂಭ್ರಮಗಳು, ಸಮ್ಮೇ ಳನಗಳು ಬಹುತೇಕ ನಗರ ಕೇಂದ್ರಿತವಾಗಿಯೇ ನಡೆಯುತ್ತವೆ. ಸಾರಿಗೆ, ಸಂಪರ್ಕ, ವ್ಯವಸ್ಥೆ ಇತರೆ ಸೌಲಭ್ಯಗಳ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ಸಾಹಿತ್ಯ ಸಂಭ್ರಮಗಳು ಸಣ್ಣ ಮಟ್ಟದಲ್ಲಿ ಯಾದರೂ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ. ರಾಜಕೀಯ ವಿಕೇಂದ್ರೀಕರಣದಂತೆ ಸಾಹಿತ್ಯ ಕೇಂದ್ರಗಳ ಹಾಗೂ ಚಟುವಟಿಕೆಗಳ ವಿಕೇಂದ್ರೀಕರಣವೂ ಮಹತ್ವದ್ದೇ!

ಭಾಷೆಯೇ ನಮ್ಮ ಅಂತಃಸತ್ವ. ಅದೇ ನಮ್ಮ ಸಂಸ್ಕೃತಿ ಸಂವಹನದ ಚೈತನ್ಯ. ಕೃತಿ ರಚನೆಯೊಂದಕ್ಕೆ ಜನಸಾಮಾನ್ಯರ ಭಾಷೆಯೇ ಮೂಲ ದ್ರವ್ಯ, ಕನ್ನಡ ಕೃತಿಯೊಂದನ್ನು ರಚಿಸಲು ಕನ್ನಡ ವಾತಾ ವರಣವಿರಬೇಕು. ಅಂತಹ ಕನ್ನಡದ ಸಾಂಸ್ಕೃತಿಕ ವಾತಾವರಣ ಸಿಗುವುದು ನಮ್ಮ ಹಳ್ಳಿಗಳಲ್ಲಿ. ಪರಂಪರಾಗತವಾಗಿ ಬೆಳೆದು ಬಂದ ಭಾಷೆಯನ್ನು ಆಡುತ್ತಿರುವ ಜನಸಾಮಾನ್ಯರಿರುವುದೇ ಹಳ್ಳಿಗಳಲ್ಲಿ. ಅದರೆ ಇಂದು ಏನಾಗುತ್ತಿದೆ ನೋಡಿ. ನಮ್ಮ ಮೇಲೆ ಸಾಂಸ್ಕೃತಿಕ ಆಕ್ರಮಣ ನಡೆಯುತ್ತಿದೆ. ಪಾಶ್ಚಿಮಾತ್ಯ ದೇಶಗಳ ಭಾಷೆ, ಸಂಸ್ಕೃತಿ, ಜೀವನ ಶೈಲಿ, ನಂಬಿಕೆಗಳು ಮತ್ತು ಧೋರಣೆಗಳು ಯಥೇತ್ಛವಾಗಿ ರಫ್ತಾಗುತ್ತಿವೆ. ಈ ಆಧುನಿಕತೆ ಎಂಬ ಹೆಸರಿನ ಆಕ್ರಮಣ ನಗರಗಳನ್ನೂ ದಾಟಿ ಹಳ್ಳಿ ಹಳ್ಳಿಗಳನ್ನು ತಲುಪಿದೆ. ಈ ಆಕರ್ಷಣೆ ವಿಚ್ಛಿದ್ರಕಾರಿ ಶಕ್ತಿಯಾಗಿ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಸವಾರಿ ನಡೆಸಿದೆ. ಈ ಆಕ್ರಮಣದಿಂದಾಗಿರುವ ಅನಾಹುತಗಳು ಒಂದೆರಡಲ್ಲ. ಕುಟುಂಬಗಳಲ್ಲಿ ಪಾತ್ರಗಳು ಬದಲಾಗುತ್ತಿವೆ. ಮೌಲ್ಯಗಳಿಗೆ ಬೆಲೆ ಇಲ್ಲವಾಗಿದೆ. ಅನ್ಯಭಾಷಾ ಪಾರಮ್ಯ ಇಂದು ಹಳ್ಳಿಗಳನ್ನೂ ತಲುಪುತ್ತಿದೆ. ಎಲ್ಲಕ್ಕಿಂತ ದೊಡ್ಡ ಅನಾಹುತವೆಂದರೆ ಈ ಸಾಂಸ್ಕೃತಿಕ ಪಲ್ಲಟ ಹಳ್ಳಿಗರ ವಲಸೆಗೆ ಕಾರಣವಾಗಿರುವುದು. ಗ್ರಾಮೀಣ ಜನ ಶ್ರಮ ಸಂಸ್ಕೃತಿಯನ್ನು ಧಿಕ್ಕರಿಸಿ ನಗರಗಳೆಡೆ ವಲಸೆ ಹೋಗುತ್ತಿರುವುದು. (ಅಂತಹ ಶ್ರಮ ಸಂಸ್ಕೃತಿಗೆ ಬೆಲೆ ಇಲ್ಲದಂತೆ ಮಾಡಿರುವಲ್ಲಿ ವ್ಯವಸ್ಥೆ ಮತ್ತು ರಾಜಕೀಯ ಹಿತಾಸಕ್ತಿಗಳ ಪಾತ್ರವೂ ಇದೆ ಎಂಬುವುದನ್ನು ಮರೆಯುವಂತಿಲ್ಲ) ಇಂತಹ ವಿಷಮ ಪರಿ ಸ್ಥಿತಿಯಲ್ಲಿ ಹಳ್ಳಿಗಳ ಸಾಂಸ್ಕೃತಿಕ ವಾತಾವರಣವನ್ನು ಕಾಯ್ದಿಟ್ಟು ಕೊಳ್ಳುವುದು ಹೇಗೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಕಾಡುತ್ತದೆ.

ಭಾಷೆಯನ್ನು ಸಂಸ್ಕೃತಿ ಸಂವಹನ, ಸಾಮಾನ್ಯ ಸಂಪರ್ಕ ಮತ್ತು ಸಾಹಿತ್ಯ ರಚನೆಗಾಗಿ ಬಳಸಬಹುದಾಗಿದೆ. ಅದರೆ ಗ್ರಾಮಗಳಲ್ಲಿ ಮೂಲಭೂತವಾದ ಸಂಸ್ಕೃತಿ ಸಂವಹನೆಗೇ ದೊಡ್ಡ ಪೆಟ್ಟು ಬೀಳು ತ್ತಿದೆ. ಸಂಪರ್ಕ ಭಾಷೆಯ ಸ್ಥಾನವನ್ನು ಮತ್ತಾವುದೋ ಭಾಷೆ ಪಡೆದುಕೊಳ್ಳುತ್ತಿದೆ. ಇನ್ನು ಭಾಷೆಯೊಂದಿಗಿನ ಸಾಹಿತ್ಯಕ ಅನು ಸಂಧಾನ ಗ್ರಾಮಗಳಿಂದ ದೂರವೇ ಉಳಿಯುವಂತಾಗಿದೆ. ಜನದ ಸಾಹಿತ್ಯ ಜನದ ಬಾಳುವೆಯ ಜಾಡನ್ನು ಅನುಸರಿಸಿ ನಡೆ ಯುತ್ತದೆ ಎನ್ನುತ್ತಾರೆ ಮಾಸ್ತಿ ವೆಂಕಟೇಶ ಐಯ್ಯಂಗಾರ್‌. ಇಂತಹ ಪರಿಸ್ಥಿತಿ ಯಲ್ಲಿ ಹಳ್ಳಿಗಳಲ್ಲಿ ಕನ್ನಡ ಪರಿಸರ ಹೇಗೆ ಉಳಿಯಲು ಸಾಧ್ಯ ಮತ್ತು ಅಂತಹ ಒಂದು ಪರಿಸರವನ್ನೇ ಮೂಲ ದ್ಯವ್ಯವಾಗಿ ಉಳ್ಳ ಸಾಹಿತ್ಯ ಹೇಗೆ ಹರಳುಗಟ್ಟಿàತು ಎಂಬುದು ಈ ಕಾಲದ ಅತ್ಯಂತ ಗಂಭೀರ ಸಂಗತಿ.

ಕನ್ನಡ ಪರಿಸರ ಎಂದಾಗ ನಾವು ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ ಮತ್ತು ಈ ಎಲ್ಲದರ ಹಿಂದಿನ ಉಪಶಾಖೆಗಳನ್ನು ಒಳಗೊಂಡ ಒಂದು ಅಂತಃಪ್ರಜ್ಞೆ ಎಂದು ನಾವು ಭಾವಿಸಬೇಕು. ಅದು ಭಾಷೆ, ನೆಲ, ಜಲ, ಸಂಸ್ಕೃತಿ, ಭಾವ, ಬುದ್ದಿ, ಸ್ಮತಿ, ನೈತಿಕಪ್ರಜ್ಞೆ, ಕನಸುಗಾರಿಕೆ, ಕಸುಬುಗಾರಿಕೆ ಎಲ್ಲವನ್ನೂ ಒಳಗೊಳ್ಳುತ್ತದೆ ಎಂಬುದನ್ನು ನಾವು ಮರೆಯಬಾರದು. ಆದರೆ ದುರಂತವೆಂದರೆ ನಾವು ಇವೆಲ್ಲವನ್ನೂ ಪ್ರತ್ಯೇಕಿಸಿ ಛಿದ್ರ ಮಾಡಿ, ನಮ್ಮ ಅನುಕೂಲಕ್ಕೆ (ಸ್ವಾರ್ಥಕ್ಕೆ) ಬಳಸಿಕೊಳ್ಳುವುದನ್ನು ರೂಢಿಗತ ಮಾಡಿಕೊಂಡಿದ್ದೇವೆ. ಹಾಗಾಗಿಯೇ ಇಂದು ಭಾಷೆ, ಸಂಸ್ಕೃತಿ, ಸಾಹಿತ್ಯ ಎಲ್ಲಾ ಬೇರೆ ಬೇರೆ ಚಕ್ಕಳಗಳಂತೆ ನಮಗೆ ಗೋಚರವಾಗುತ್ತವೆ. ಈ ಚಕ್ಕಳದ ಮುಖವಾಡಗಳನ್ನು ನಾವು ಆಗಾಗ್ಗೆ ತೊಟ್ಟು ವಿಜೃಂಭಿಸಿ ಪೊರೆ ಕಳಚಿದ ಹಾವಿನಂತೆ ಜವಾಬ್ದಾರಿಯಿಂದ ನುಣುಚಿಕೊಂಡು ಹೋಗುತ್ತಿದ್ದೇವೇನೋ ಅನಿಸುತ್ತದೆ. ಇದಕ್ಕೆ ಉದಾಹರಣೆಯೆಂದರೆ ನಮ್ಮ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ನಾಟಕಗಳು. ಅಭಿವೃದ್ಧಿಯ ನೆಪದಲ್ಲಿ ಅಲ್ಲಿನ ಸಂಪನ್ಮೂಲಗಳನ್ನು ದೋಚಿ, ಕಾಂಕ್ರೀಟ್‌ ಕಾಡುಗಳನ್ನು ನಿರ್ಮಿಸಿ ಹಳ್ಳಿಗರನ್ನು ಬಟ್ಟಾ ಬಯಲಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ ನಮ್ಮ ಅಭಿವೃದ್ಧಿಯ ಹರಿಕಾರರು. ಎಷ್ಟೋ ಹಳ್ಳಿಗಳಲ್ಲಿ ಇಂದೂ ರಸ್ತೆ, ಚರಂಡಿ, ಶಾಲೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಲಭ್ಯಗಳಿಲ್ಲದೆ ಕುಗ್ರಾಮಗಳಾಗಿಯೇ ಉಳಿದಿವೆ. ಅನೈರ್ಮಲ್ಯತೆ, ಕಾಯಿಲೆಗಳು, ನಿರುದ್ಯೋಗ ತಾಂಡವವಾಡುತ್ತಿವೆ. ಸುಸ್ಥಿರವಲ್ಲದ ಕೃಷಿ, ಸಾಲದ ಸುಳಿ, ಕೌಶಲಕ್ಕಿಲ್ಲದ ಬೆಲೆ ಇವುಗಳಿಂದ ಗ್ರಾಮೀಣ ಜನ ಜರ್ಜರಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮತ್ತು ಸಾಹಿತ್ಯದ ಬಗ್ಗೆ ಮಾತಾಡುವುದೇ ಅಪರಾಧವಾಗುತ್ತದೆ. “”ಬೆಳಿಗ್ಗೆ ಎದ್ದರೆ ಹಕ್ಕಿಗೆ ತಿನ್ನುವ ಯೋಚನೆಗಿಂತ ಮೊದಲು ಮುಗಿಲಿಗೆ ಹಾರುವ ಹಂಬಲವಲ್ಲವೇ? ಇದು ಸಂಧಿಕಾಲ, ಅರುಣೋದಯ, ಹೊಸ ಜಗತ್ತು ಹುಟ್ಟುವ ಕಾಲ, ಇಂತಹ ಹೊತ್ತಿನಲ್ಲಿ ಭಿನ್ನಭಾವವೇಕೆ?” ಎಂದು ರವೀಂದ್ರನಾಥ ಠಾಗೋರ್‌ ಕೇಳುತ್ತಾರೆ. ಅದಕ್ಕೆ ಗಾಂಧೀಜಿ ಹೇಳುತ್ತಾರೆ: “”ನನ್ನ ನಾಡಿನ ಹಕ್ಕಿಗೆ ರೆಕ್ಕೆ ಬಡಿಯುವುದಿರಲಿ, ರೆಕ್ಕೆ ಬಿಚ್ಚುವುದೂ ಸಾಧ್ಯವಿಲ್ಲ. ಹಿಂದೂಸ್ಥಾನದ ಮುಗಿಲ ಕೆಳಗೆ ನರಪಕ್ಷಿಗೆ ನಿದ್ದೆ, ವಿಶ್ರಾಂತಿ ಎಲ್ಲಿಯದು? ಕೋಟ್ಯಾನುಕೋಟಿ ಜನರಿಗೆ ಬಾಳು ನಿತ್ಯ ಜಾಗರಣೆ ಅಥವಾ ಶಾಶ್ವತ ಸಮಾಧಿ. ಹಸಿವಿನಿಂದ ತಲ್ಲಣಿಸುವ ಈ ಅಸಂಖ್ಯಾತ ಜನರು ಬೇಡುವ ಕಾವ್ಯ ಒಂದೇ! ಪುಷ್ಟಿಕರವಾದ ಅನ್ನ!” ಗಾಂಧೀಜಿಯ ಈ ಮಾತು ಇಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?

ನಮ್ಮ ಸರ್ಕಾರಗಳು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸೋತಿವೆ ಎಂದಿಟ್ಟುಕೊಳ್ಳೊಣ. ಹಾಗೆಂದು ಸಾಹಿತಿಗಳೂ ಸುಮ್ಮನಿರಬೇಕೇ? ಒಂದು ಜನಾಂಗದ ಜೀವನ ಆರೋಗ್ಯಕರವಾಗಿ ಬೆಳೆಯಬೇಕೆಂದರೆ ಆಯಾ ಕಾಲಘಟ್ಟದ ಲೇಖಕರು ಜನರ ಜೀವನವನ್ನು ಹೇಗೆ ಚೆನ್ನ ಮಾಡಬೇಕು ಎಂದು ಚೆನ್ನಾಗಿ ಆಲೋಚಿಸಿ ಎಚ್ಚರವಹಿಸಿ, ಅವಶ್ಯವಾದ ಶ್ರಮವನ್ನು ಸಹಿಸಿ ನುಡಿಗೆ ಸೇವೆ ಸಲ್ಲಿಸಬೇಕು ಎಂದು ಹಿರಿಯ ಸಾಹಿತಿಗಳು ಹೇಳಿದ್ದಾರೆ. ಹಳ್ಳಿಗಳಲ್ಲಿ ಕನ್ನಡ ಪರಿಸರ, ಸಾಹಿತ್ಯಕ ವಾತಾವರಣ, ಸಾಂಸ್ಕೃತಿಕ ಸೊಗಡು ಎಲ್ಲಾ ಮರೆಯಾಗುತ್ತಿರುವ ಈ ಪರ್ವ ಕಾಲದಲ್ಲಿ ಲೇಖಕರು ಹುಟ್ಟಿಕೊಳ್ಳುವುದಾದರೂ ಹೇಗೆ? ಸಿಟಿಯಲ್ಲಿ ಕುಳಿತ ಲೇಖಕರಿಗೆ ಇದು ಎಷ್ಟು ಸಂಗತವಾದುದು? ಗ್ರಾಮೀಣ ಬದುಕಿನೊಂದಿಗೆ ಒಡನಾಡುವ ಮನಸ್ಸು ಅವರಲ್ಲಿ ಎಷ್ಟು ಜನಕ್ಕಿದೆ? ಅವರು ಮರಳಿ ಹಳ್ಳಿಗಳೆಡೆಗೆ ಬರುವ ಮನಸ್ಸು ಮಾಡುವರೇ? ಕಾರಂತರಂತೆ, ತೇಜಸ್ವಿಯಂತೆ, ಸುಬ್ಬಣ್ಣನವರಂತೆ ಹಳ್ಳಿಗರೊಂದಿಗೆ ನೆಲೆ ನಿಂತು ಅವರ ಬದುಕನ್ನು ಹಸನು ಮಾಡಲು ಸಿದ್ಧªರಿದ್ದಾರೆಯೇ? ನಮ್ಮ ಸಾಹಿತಿಗಳು ವಾಸ್ತವ ಬದುಕಿನಿಂದ ದೂರವಾಗಿ ಬದುಕನ್ನು ಕೇವಲ ಚಿಕಿತ್ಸಕ ಕಸರತ್ತಿನಿಂದ ಗ್ರಹಿಸುತ್ತ ಪಾಲೀಶ್‌ ಮಾಡುವುದರಲ್ಲಿ ಮಗ್ನರಾಗಿದ್ದಾರೆಯೇ ಹೊರತು ಮಧ್ಯಮವರ್ಗದವರ ಬದುಕಿನ ಆಳಕ್ಕೆ ಪಾತಾಳಗರಡಿ ಬಿಟ್ಟು ಬದುಕಿನ ವಿಸ್ತಾರಕ್ಕೆ ಅವರ ಮನಸ್ಸು ಹರಿಯದೆ ಹೋದದ್ದು ದುರಂತ ಎಂಬ ಚದುರಂಗರ ಮಾತು ಸತ್ಯ ಎನಿಸುವುದಿಲ್ಲವೇ? ಇಂಗ್ಲಿಷ್‌ ಸಾಹಿತಿಗಳಂತೆ ಶ್ರೇಷ್ಠರಾಗಲೀ, ಕನಿಷ್ಟರಾಗಲೀ ಯಾಕೆ ನಮ್ಮ ಎಲ್ಲಾ ಸಾಹಿತಿಗಳು ಜನರ ಏಳಿಗೆಗೆ ದುಡಿದಿಲ್ಲ ಎಂಬುದು ಜಿಜ್ಞಾಸೆಯಾಗೇ ನಿಲ್ಲುತ್ತದೆ.

ಸಾಹಿತ್ಯದ ಜಾತ್ರೆ, ಉತ್ಸವ ಎಂದು ಸಂಭ್ರಮ ಪಡುವ ಬೆನ್ನಲ್ಲೇ ಮೇಲಿನ ವೈರುಧ್ಯಗಳೊಂದಿಗೆ ಅನುಸಂಧಾನ ಮಾಡಲೇಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಲೇಬೇಕಿದೆ.! ಶಿಷ್ಟ ಸಾಹಿತ್ಯ ಮತ್ತೆ ಜನಪದದ ಒರತೆಯಲ್ಲಿ ಹೊರಳಿ ಸಮ್ಮಿಲನಗೊಂಡು ಸಮೃದ್ಧವಾಗುವ ಸಂಧಿ ಕಾಲ ಇದು ಎಂದು ಭಾವಿಸಬೇಕಿದೆ. ಹಾಗೆಯೇ ಈ ಸಂಭ್ರಮ ಜಾನ್‌ ರಸ್ಕಿನ್‌ ಮತ್ತು ಗಾಂಧೀಜಿಯವರ ಮರಳಿ ಮಣ್ಣಿಗೆ ಸಿದ್ಧಾಂತದ ಆಶಯಗಳ ಪುನರುತ್ಥಾನದ ಸಂಕೇತ ಎಂಬುದನ್ನೂ ನಾವು ಮರೆಯಬಾರದು.

ತುರುವೇಕೆರೆ ಪ್ರಸಾದ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.