ಮಾನವೀಯತೆಯ ಸಾಕಾರ ಮೂರ್ತಿ


Team Udayavani, Sep 25, 2019, 5:00 AM IST

r-25

ಪಂಡಿತ್‌ ದೀನ ದಯಾಳ್‌ ಅವ ರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು. ಹೆಸರಿಗೆ ತಕ್ಕಂತೆ ಯೇ ಅವರ ಚಿಂತನೆಯೂ ಇತ್ತು. ವ್ಯಕ್ತಿ ಮತ್ತು ಸಮಷ್ಟಿಗಳ ಮನೋಭಾವದಲ್ಲಿ ಸಾಮರಸ್ಯ ಉಂಟಾದಾಗ ಸುಖೀ ಸಮಾಜ, ಸುಖೀ ರಾಷ್ಟ್ರ, ತನ್ಮೂಲಕ ಸುಖೀ ವಿಶ್ವದ ಕಲ್ಪನೆಯನ್ನು ಪಂಡಿತ್‌ ಅವರು “”ಏಕಾತ್ಮ ಮಾನವ ದರ್ಶನದ” ಮುಖಾಂತರ ಪ್ರಕಟಿಸಿದರು. ಅಪಾರವಾದ ಅನುಭವ, ಚಿಂತನೆ, ಸಂಶೋಧನೆಗಳ ಮೂಲಕ ಹೊರಹೊಮ್ಮಿದುದೇ “ಏಕಾತ್ಮ ಮಾನವ ದರ್ಶನ ಸಿದ್ಧಾಂತ’.

ಬಲಶಾಲಿಯು ದುರ್ಬಲರನ್ನು ನುಂಗುವ ಪ್ರವೃತ್ತಿ ಲೋಕದಲ್ಲಿ ಎಲ್ಲೆಲ್ಲೂ ಕಾಣುತ್ತೇವಾದರೂ ನಮ್ಮಲ್ಲಿನ ಬಲಶಾಲಿಗಳು ದುರ್ಬಲರನ್ನು ನುಂಗಲಿಲ್ಲ, ಬದಲು ಅವರನ್ನು ಸಮಾನರಂತೆ ಕಂಡರು ಎನ್ನುವ ಮಾತನ್ನು ಮೇಲಿಂದ ಮೇಲೆ ಉಚ್ಚರಿಸುತ್ತಿದ್ದರು. ದೀನದಯಾಳರ ಕೃತಿಗಳಲ್ಲಿ, ಭಾಷಣಗಳಲ್ಲಿ ಮಾನವೀಯತೆ ಮೆರೆಯುವುದನ್ನು ಕಾಣುತ್ತೇವೆ. ಅವರ ಚಿಂತನೆಗಳಲ್ಲಿ ಸಾಮಾನ್ಯ ಜನರ, ಬಡವರ, ದೀನ ದಲಿತರ ಬಗ್ಗೆ ಪ್ರಕಟವಾಗುವ ಕರುಣೆ, ವಾತ್ಸಲ್ಯ ಭಾವಗಳನ್ನು ಕಾಣುತ್ತೇವೆ. ದೇಶ ಪರಂಪರೆ ಬಗ್ಗೆ ಅವರಿಗಿದ್ದ ಗೌರವ, ಭಕ್ತಿ ಜೊತೆಗೆ ಪ್ರಕೃತಿಯೊಂದಿಗೆ ಸಾಮರಸ್ಯ ಕಾಣುತ್ತೇವೆ.

ಅಂತ್ಯೋದಯ
ಅಂತ್ಯೋದಯವೇ ಸಂಘಟನೆಯ ಸಿದ್ಧಾಂತ. ಈ ಒಂದು ಸಿದ್ಧಾಂತ ದೀನದಯಾಳರ ಕಲ್ಪನೆಯಿಂದ ಮೂಡಿಬಂದಿತು. ಅಂತ್ಯೋದಯ ಅರ್ಥಾತ್‌ “ಅಂತ್ಯದ ಉದಯ’. ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ವಂಚಿತ ವ್ಯಕ್ತಿಗೆ ಅವಕಾಶಗಳು ದೊರಕಬೇಕು. ಅವನ ಬಾಳೂ ಹಸನಾಗಬೇಕು. ಆರ್ಥಿಕ ಯೋಜನೆಗಳು ಹಾಗೂ ಪ್ರಗತಿ ಕೇವಲ ಉಳ್ಳವರಿಗ‌ಷ್ಟೇ ಅಲ್ಲ, ಜೊತೆಗೆ, ಕೆಳಸ್ತರದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗಳಿಗೂ ತಲುಪಬೇಕು. ಇದೇ ಅಂತ್ಯೋದಯದ ಸಿದ್ಧಾಂತ. ಇವರಿಗೆ ವಾಸಿಸಲು ಉತ್ತಮ ಮನೆಗಳನ್ನು ಕಟ್ಟಿಸಿಕೊಡಬೇಕು, ಇವರ ದಣಿದ ಕೈಗಳ ಬಿರುಕುಗಳನ್ನು ತುಂಬಬೇಕು, ಇವರಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಡಬೇಕು, ಶಿಕ್ಷಣ ನೀಡಿ ವರಮಾನ ಹೆಚ್ಚಿಸಬೇಕು, ಅಲ್ಲಿಯವರೆಗೆ ನಾವು ಈ ರಾಷ್ಟ್ರದ ಬಲವನ್ನು-ಚೈತನ್ಯವನ್ನು ಹೆಚ್ಚಿಸಲಾರೆವು.

ಯಾವುದೇ ಒಂದು ವಿಶಿಷ್ಟ ವರ್ಗದ ಅಥವಾ ಕೋಮಿನ ಸೇವೆಯನ್ನಲ್ಲ, ಆದರೆ ಇಡೀ ರಾಷ್ಟ್ರದ ಸೇವೆಯ ವ್ರತವನ್ನು ನಾವು ಸ್ವೀಕರಿಸಿದ್ದೇವೆ. ನಮ್ಮೆಲ್ಲ ಬಂಧುಗಳಿಗೂ ಭಾರತ ಮಾತೆಯ ಸುಪುತ್ರರಾಗುವ ನೈಜ ಗೌರವವನ್ನು ದೊರಕಿಸಿ ಕೊಡುವವರೆಗೆ ನಾವು ಸುಮ್ಮನೆ ಕೂಡುವುದಿಲ್ಲ ಎನ್ನು ವುದು ದೀನದಯಾಳರ ವಿಚಾರವಾಗಿತ್ತು.

ಈ ಒಂದು ಸಿದ್ಧಾಂತದ ಆಧಾರದ ಮೇಲೆ ಕೇಂದ್ರದ ಮೋದಿಯವರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ನರೇಂದ್ರ ಮೋದಿಯವರು ತಮ್ಮ ಬಹುತೇಕ ಭಾಷಣಗಳ‌ಲ್ಲಿ ದೀನದಯಾಳರನ್ನು ಸ್ಮರಿಸುತ್ತಾರೆ.

ಹೆಸರಿಗೆ ತಕ್ಕಂತೆ ಮಾನವೀಯತೆಯ ಗುಣಗಳು ದೀನದಯಾಳರಿಗೆ ರಕ್ತಗತವಾಗಿ ಬಂದಿದ್ದವು. ಅದಕ್ಕೆ ಹಲವಾರು ಉದಾಹರಣೆಗಳಿವೆ. ಒಂದೆರಡನ್ನು ಇಲ್ಲಿ ಸ್ಮರಿಸಬಹುದು. ಕರುಣೆ, ಸಹಾನುಭೂತಿಯೊಂದಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಹೊಂದಿದ್ದ ದೀನದಯಾಳರು ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸದಲ್ಲಿ ದಾಖಲೆಯನ್ನೇ ನಿರ್ಮಿಸಿದರು. ಕಾಲೇಜಿನಲ್ಲಿ ಕಲಿಯುವಾಗ ಅವರ ಸಹಪಾಠಿಗಳನೇಕರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಲಿಲ್ಲ. ಅವರೆಲ್ಲರನ್ನೂ ಪ್ರೋತ್ಸಾಹಿಸುವ ದೃಷ್ಟಿಯಿಂದ “ಜೀರೋ’ ಎಂಬ ಹೆಸರಿನ ಅಸೋಸಿಯೇಷನ್‌ ಮಾಡಿ ಆ ಮೂಲಕ ಸಹಪಾಠಿಗಳಿಗೆ ಪ್ರತಿದಿನ ಜೊತೆಯಲ್ಲೇ ಓದಿಸುತ್ತಾ, ಪಾಠ ಹೇಳಿಕೊಡುತ್ತಾ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು. ಇದರ ಪರಿಣಾಮ ಸಹಪಾಠಿಗಳು ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಕೆಲವರು ಅಧಿಕ ಅಂಕಗಳನ್ನು ಪಡೆದರು.

ದೀನದಯಾಳರಿಗೆ ಸ್ತ್ರೀಯರನ್ನು ಕಂಡರೆ ಅಪಾರವಾದ ಗೌರವ. ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೂ ಸಹಿಸುತ್ತಿರಲಿಲ್ಲ. ಒಮ್ಮೆ ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಾ ಗೆಳೆಯರೊಂದಿಗೆ ನಿಂತಿದ್ದರು. ಹೆಣ್ಣು ಮಗಳೊಬ್ಬಳು ಭಿಕ್ಷೆ ಬೇಡುತ್ತಾ ಬಂದಳು. ಒಬ್ಬ ಪೊಲೀಸ್‌ ಪೇದೆ ದರ್ಪ ತೋರುತ್ತಾ ಆ ಹೆಂಗಸಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹೊಡೆಯಲು ಹೋಗುತ್ತಿದ್ದಂತೆ ದೀನದಯಾಳರು ಕೂಡಲೇ ಅಲ್ಲಿಗೆ ಧಾವಿಸಿ ಬಂದರು. “”ನೋಡಪ್ಪಾ ಹಾಗೆಲ್ಲಾ ಸ್ತ್ರೀಯರ ಮೇಲೆ ಕೈ ಮಾಡಬಾರದು” ಎಂದು ಸೌಜನ್ಯದಿಂದ ಹೇಳಿದರು. ಪೊಲೀಸ್‌ ಪೇದೆ-“”ಅವರು ಕಳ್ಳರು. ಅವರ ವಿಷಯ ನಿಮಗೇಕೆ?” ಎಂದು ಆಕೆ ಯ ನ್ನು ಹೊಡೆಯಲು ಹೋದ ಕೂಡಲೇ ದೀನ ದಯಾಳರು ಅವನ ಕೈಯನ್ನು ಬಿಗಿಯಾಗಿ ಹಿಡಿದು, ಹೊಡಿ ನೋಡೋಣ ಅಂದರು. ಅವರ ರೌದ್ರಾವತಾರವನ್ನು ನೋಡಿ ಪೊಲೀಸ್‌ ತಣ್ಣಗಾದ. ದೀನ ದಯಾಳರ ವಿಚಾರ ಹೀಗಿತ್ತು. ಮತ್ತೂಂದು ಘಟನೆ. ದೀನ ದಯಾಳರು ಹೇಳುತ್ತಿದ್ದರು: “”ಆತ್ಮಗೌರವ ವಿದ್ಯಾವಂತರಿಗೂ ಇರಬೇಕು. ವನದಲ್ಲಿ ವಾಸಿಸುವ ವನವಾಸಿಗಳಿಗೂ ಇರಬೇಕು, ಕಲಿತವರಿಗೂ ಸಮಾಜದಲ್ಲಿ ಸನ್ಮಾನ ಸಿಗಬೇಕು, ಗಿರಿವಾಸಿ ವನವಾಸಿಗಳಿಗೂ ಮಾನ ಮರ್ಯಾದೆ ದೊರೆಯುವಂತೆ ಆಗಬೇಕು. ಆಗ ಮಾತ್ರ ಸ್ವಾತಂತ್ರ್ಯ, ಸ್ವರಾಜ್ಯಕ್ಕೆ ನಿಜವಾದ ಅರ್ಥ ದಕ್ಕುತ್ತದೆ.”

ಮಧ್ಯಪ್ರದೇಶದಲ್ಲಿ ವನವಾಸಿಗಳು ಬೇಸಾಯ ಮಾಡುತ್ತಾ ಅದಕ್ಕೆ ಪ್ರತಿಯಾಗಿ ಅರಣ್ಯ ಬೆಳೆಸುವ ಸರ್ಕಾರದ ಯೋಜನೆಯನ್ನು ಕಾರ್ಯಗತ ಮಾಡುತ್ತಿದ್ದರು. ಈ ಪದ್ಧತಿ “ಟಾಂಗ್ಯಾ’ ಎಂದು ಹೆಸರು ಪಡೆದಿತ್ತು. ಸರ್ಕಾರ ಅನೇಕ ಕಾರಣ ಒಡ್ಡಿ, ವನವಾಸಿಗಳ ಜಾಗ ಖಾಲಿ ಮಾಡಿಸಲು ಬೆದರಿಕೆ ಹಾಕಿತ್ತು. ಲಕ್ಷಾಂತರ ಜನ ನಿರ್ಗತಿಕರಾದರು. ಇದರ ವಿರುದ್ಧ ಆಗಿನ ಜನಸಂಘ ಪ್ರತಿಭಟನೆ ಮಾಡಿತು. ಆದರೆ ಸರ್ಕಾರ ಜನ ಸಂಘದ ಮೇಲೆ ಗೂಬೆ ಕೂರಿಸಿ ಇವರೆಲ್ಲಾ ವನ-ವಿರೋಧಿಗಳೆಂದು ಪ್ರಚಾರ ಮಾಡಿತು. ವಿಷಯ ದೀನದಯಾಳರಿಗೆ ತಲುಪಿದಾಗ ಅವರು ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು. ಅರಣ್ಯಗಳು ರಾಷ್ಟ್ರದ ಸಂಪತ್ತು ನಿಜ, ಅದಕ್ಕಿಂತ ವನವಾಸಿಗಳೂ ರಾಷ್ಟ್ರದ ಸಂಪತ್ತು. ಅವರು ನಿರ್ಗತಿಕರಾಗಬೇಕೆ? ಎಲ್ಲರಂತೆ ಅವರೂ ಗೌರವದಿಂದ ಬದುಕುವಂತೆ ಆಗಬೇಕು ಎಂದಾಗ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದು ಪ್ರತಿಭಟನೆ ಮುಂದುವರೆಸಿ ಯಶಸ್ವಿಯಾದರು. ವನರಕ್ಷಣೆಗೂ ಕೂಡ ಅನುಕೂಲವಾಯಿತು.

ಹೀಗೆ ನೂರೆಂಟು ರೀತಿಯ ಘಟನೆಗಳು ಅವರ ಜೀವನದಲ್ಲಿ ಸಂಭವಿಸಿವೆ. ಅದಕ್ಕಾಗಿಯೇ ವಾಜಪೇಯಿಯವರು ಅವರ ಬಗ್ಗೆ ಹೇಳಿದ್ದು-“”ದೇಶವೇ ಅವರ ಮನೆ, ಸಮಾಜವೇ ಅವರ ಕುಟುಂಬ. ಅವರ ಕಣ್ಣೆದುರಿಗೆ ಇದ್ದದ್ದು ಒಂದೇ ಕನಸು. ಸಮಾಜ-ದೇಶದ ಕಲ್ಯಾಣ. ಅವರ ಜೀವನವೇ ಒಂದು ತಪಸ್ಸು.”

– 1916 ಸೆ.25ರಂದು ರಾಜಸ್ಥಾನದಲ್ಲಿ ಜನನ.

– 1952ರಲ್ಲಿ ಜನಸಂಘಕ್ಕೆ ಸೇರ್ಪಡೆ- ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. 1967ರವರೆಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಕೆ. ನಂತರ ಜನಸಂಘದ ಅಧ್ಯಕ್ಷರಾದರು.

– ದೀನದಯಾಳರ ಸಂಪಾದಕತ್ವದಲ್ಲಿ “ಪಾಂಚಜನ್ಯ’ (ವಾರಪತ್ರಿಕೆ) ಮತ್ತು “ಸ್ವದೇಶ’ ಎಂಬ ದಿನಪತ್ರಿಕೆ ಲಕ್ನೋದಿಂದ ಪ್ರಕಟವಾಗುತ್ತಿತ್ತು. “ಚಂದ್ರಗುಪ್ತ ಮೌರ್ಯ’ ಎಂಬ ಕಾದಂಬರಿಯನ್ನು ಮತ್ತು ಶಂಕರಾಚಾರ್ಯರ ಜೀವನಚರಿತ್ರೆಯನ್ನು ಹಿಂದಿಯಲ್ಲಿ ರಚಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಹೆಡೆವಾರ್‌ರವರ ಮರಾಠಿ ಜೀವನಚರಿತ್ರೆಯನ್ನು ಹಿಂದಿಗೆ ಅನುವಾದಿಸಿದ್ದರು.

– 1968 ಫೆ.11ರಂದು ಅತ್ಯಂತ ಘೋರ ಸನ್ನಿವೇಶದಲ್ಲಿ ಎರಗಿದ ಅವರ ಸಾವು ಇಡೀ ದೇಶಕ್ಕೆ ಸರಿಪಡಿಸಲಾಗದ ನಷ್ಟವನ್ನು ತಂದಿತು.

ಎಂ.ನರಸಿಂಹಮೂರ್ತಿ

ಟಾಪ್ ನ್ಯೂಸ್

cow herd

ಖಾಸಗಿ ಬಸ್‌ ಡಿಕ್ಕಿ : 14 ಹಸುಗಳು ಸಾವು

ಯುಗಾದಿ ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್

ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್

sambeeth patra

ರಾಹುಲ್‌ ಗಾಂಧಿ ಆಧುನಿಕ ಭಾರತದ ಮಿರ್‌ ಜಾಫರ್‌ – ಸಂಬಿತ್‌ ಪಾತ್ರ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

shirwa

ಕುರ್ಕಾಲು:ಯುವತಿ ನಾಪತ್ತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ವಿಶ್ವ ಮಾನವ ಮಹಾಕವಿ ಕುವೆಂಪು

ವಿಶ್ವ ಮಾನವ ಮಹಾಕವಿ ಕುವೆಂಪು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

cow herd

ಖಾಸಗಿ ಬಸ್‌ ಡಿಕ್ಕಿ : 14 ಹಸುಗಳು ಸಾವು

ಯುಗಾದಿ ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್

ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್

sambeeth patra

ರಾಹುಲ್‌ ಗಾಂಧಿ ಆಧುನಿಕ ಭಾರತದ ಮಿರ್‌ ಜಾಫರ್‌ – ಸಂಬಿತ್‌ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.