ದೇಶೀ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಜೆಟ್ ಭರವಸೆ ; ಈ ಐದು ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?


ಹರಿಪ್ರಸಾದ್, Feb 2, 2020, 12:58 PM IST

Tourism-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ

ಬಹುವಿಧ ಸಂಸ್ಕೃತಿ ಮತ್ತು ವೈವಿಧ್ಯಮಯ ಭೌಗೋಳಿಕ ಹಿನ್ನಲೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರವಾಸೋದ್ಯಮಕ್ಕಿರುವಷ್ಟು ವಿಫುಲ ಅವಕಾಶಗಳು ಇನ್ನಾವ ಕ್ಷೇತ್ರಕ್ಕೂ ಇಲ್ಲವೆಂದರೆ ತಪ್ಪಾಗಲಾರದು. ಆದರೆ ಕೇರಳ, ಗೋವಾ, ಉತ್ತರ ಭಾರತದ ಕೆಲ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಸ್ಥಳಗಳನ್ನು ದೇಶೀ ಹಾಗೂ ವಿದೇಶೀ ಪ್ರವಾಸಿಗರಿಗೆ ಮುಕ್ತವಾಗಿಸುವಲ್ಲಿ ಮತ್ತು ಈ ಕ್ಷೇತ್ರವನ್ನು ಉದ್ಯಮ ಮತ್ತು ಉದ್ಯೋಗ ಸ್ನೇಹಿಯಾಗಿಸುವಲ್ಲಿ ಸೋತಿವೆ ಎಂದು ಹೇಳಬೇಕಾಗಿರುವುದು ಖೇದಕರ ವಿಚಾರ.

ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) 10% ಕೊಡುಗೆ ನೀಡುವ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಉದ್ಯಮಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರಕಾರಗಳು ಇತ್ತೀಚಿನ ವರ್ಷಗಳಲ್ಲಿ ಗಂಭೀರವಾಗಿ ಯೋಚಿಸುತ್ತಿವೆ ಎಂಬುದು ಸಮಾಧಾನಕರ ವಿಷಯವೇ ಸರಿ.

ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ತಮ್ಮ ಬಜೆಟ್ ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬರೋಬ್ಬರಿ 5,650 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ದೇಶದಲ್ಲಿ ಆರ್ಥಿಕ ಪ್ರಗತಿ ಇಳಿಮುಖವಾಗಿರುವುದರಿಂದ ಎಲ್ಲೆಲ್ಲಾ ಜನರನ್ನು ಆಕರ್ಷಿಸಿ ಹಣದ ಹರಿವು (ಲಿಕ್ವಿಡಿಟಿ) ಆಗುವಂತೆ ಮಾಡಲು ಸಾಧ್ಯವೋ ಆ ಎಲ್ಲಾ ಕ್ಷೇತ್ರಗಳತ್ತ ವಿತ್ತ ಸಚಿವರು ಈ ಬಾರಿ ತಮ್ಮ ಬಜೆಟ್ ನಲ್ಲಿ ಗಮನಹರಿಸಿರುವುದು ಕಂಡುಬಂದಿದೆ. ಅವುಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಒಂದು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶ ಸೃಷ್ಟಿಸಲು ಭರ್ಜರಿ ಅವಕಾಶಗಳಿವೆ. 2018ರಲ್ಲಿ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸುಮಾರು 2.67 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದರೆ ಈ ಸಂಖ್ಯೆ 2029ರಲ್ಲಿ 5.3 ಕೋಟಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ದೂರದೃಷ್ಟಿಯೊಂದಿಗೆ ನಿರ್ಮಲಾ ಅವರು ಈ ಕ್ಷೇತ್ರಕ್ಕೆ ಭರ್ಜರಿ ಅನುದಾನ ಪ್ರಕಟಿಸಿದ್ದಾರೆ. ಆದರೆ ಇಲ್ಲಿ ಇನ್ನೊಂದು ವಿಚಾರವಿದೆ. ಕೇವಲ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಉದ್ದೇಶ ಮಾತ್ರ ಈ ಸರಕಾರದ್ದಲ್ಲ ಬದಲಿಗೆ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯ ಕುರುಹಾಗಿರುವ ಕೆಲವೊಂದು ಪ್ರಮುಖ ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿಗೊಳಿಸುವ ಯೊಜನೆಯೂ ಕೇಂದ್ರದ್ದಾಗಿದೆ.

ಇದಕ್ಕಾಗಿ ಈ ಬಾರಿಯ ಬಜೆಟ್ ನಲ್ಲಿ ಭಾರತೀಯ ಪಾರಂಪರಿಕ ಹಾಗೂ ಸಂರಕ್ಷಣೆ ಸಂಸ್ಥೆಯನ್ನು ಸ್ಥಾಪಿಸುವುದು ಮತ್ತು ಸಂಸ್ಕೃತಿ ಸಚಿವಾಲಯದಡಿ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನದಡಿ ಸಂಸ್ಥೆಯನ್ನು ತೆರೆಯುವ ಉದ್ದೇಶವನ್ನೂ ಸರಕಾರ ಹೊಂದಿದೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸೇರಿದಂತೆ, ದೇಶದ ಐದು ಆಯ್ದ ರಾಜ್ಯಗಳಲ್ಲಿ ಐದು ಪುರಾತತ್ವ ಶಾಸ್ತ್ರ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಕೇಂದ್ರ ಹೊಂದಿದೆ. ಅವುಗಳೆಂದರೆ, ಹರ್ಯಾಣದ ರಾಖೀಗಢ, ಉತ್ತರಪ್ರದೇಶದ ಹಸ್ತಿನಿಪುರ, ಅಸ್ಸಾಂನ ಶಿವಸಾಗರ್, ಗುಜರಾತ್ ನ ದೋಲಾವೀರಾ ಹಾಗೂ ತಮಿಳುನಾಡಿನ ಅದಿಚಾನಲ್ಲೂರು. ಇವುಗಳ ಕುರಿತಾಗಿ ನಾವಿಲ್ಲಿ ಸಂಕ್ಷಿಪ್ತವಾಗಿ ನೋಡುವುದಾದಲ್ಲಿ…

ಸಿಂಧೂ ನಾಗರಿಕತೆಯ ಬೃಹತ್ ಕುರುಹು ರಾಖೀಗಢ

ರಾಷ್ಟ್ರರಾಜಧಾನಿ ದೆಹಲಿಯಿಂದ 150 ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಈ ರಾಖೀಗಢವು ಪ್ರಪಂಚದ ಪ್ರಾಚೀನ ನಾಗರೀಕತೆಗಳಲ್ಲಿ ಒಂದಗಿರುವ ಸಿಂಧೂನದಿ ನಾಗರಿಕತೆಯ ಕುರುಹನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಪ್ರಮುಖ ಸ್ಥಳವಾಗಿ ಉಳಿದುಕೊಂಡಿದೆ. ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಒಂದು ಗ್ರಾಮವಾಗಿದೆ ಈ ರಾಖೀಗಢ. ಇಲ್ಲಿರುವ ಏಳು ಪ್ರಮುಖ ದಿಬ್ಬಗಳು ಹಾಗೂ ಈ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿರುವ ಇನ್ನಷ್ಟು ದಿಬ್ಬಗಳು ಕ್ರಿಸ್ತಪೂರ್ವ 6500 ವರ್ಷಗಳ ಹಿಂದೆ ವ್ಯವಸ್ಥಿತ ನಾಗರಿಕತೆಯೊಂದು ಜನ್ಮ ತಳೆದು, ಬೆಳೆದು ಬಳಿಕ ನಶಿಸಿ ಹೋದುದಕ್ಕೆ ಮೂಕ ಸಾಕ್ಷಿಯಾಗಿ ನಿಂತಿದೆ.

ಸರಿಯಾದ ನಿರ್ವಹಣೆಗಳಿಲ್ಲದೆ ಹಾಗೂ ಈ ಪ್ರದೇಶದ ಉತ್ಖನನಕ್ಕೆ ಜಾರಿಯಾಗುವ ನಿಧಿಯ ಸದ್ಭಳಕೆಯಿಲ್ಲದೆ ಸುಮಾರು 350 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿರುವ ಈ ಪ್ರಾಚೀನ ನಾಗರಿಕತೆಯ ಕುರುಹನ್ನು ಅಗೆದು, ಅಭ್ಯಸಿಸಿ ಈ ಮಾಹಿತಿಗಳನ್ನು ಭವಿಷ್ಯದ ಇತಿಹಾಸ ಕುತೂಹಲರಿಗೋಸ್ಕರ ಸಂರಕ್ಷಿಸಿಡುವ ಉದ್ದೇಶದೊಂದಿಗೆ ಇಲ್ಲಿ ಪುರಾತತ್ವ ಕೇಂದ್ರವನ್ನು ತೆರೆಯಲು ನಿರ್ಧರಿಸಿರುವ ಕೇಂದ್ರ ಸರಕಾರದ ನಿರ್ಧಾರ ಸಕಾಲಿಕವಾದುದು.

ಮಹಾಭಾರತದ ಮೂಲಸ್ಥಾನ ಹಸ್ತಿನಾಪುರ ; ಜೈನ ತೀರ್ಥಂಕರರ ಜನ್ಮಸ್ಥಾನವಾಗಿಯೂ ಮಹತ್ವದ್ದು

ನಮ್ಮ ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದ ಕೇಂದ್ರ ಸ್ಥಾನವಾಗಿರುವ ಹಸ್ತಿನಾಪುರ ಅಥವಾ ಹಸ್ತಿನಾವತಿ ಎಂಬುದು ದ್ವಾಪರ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಕುರು ವಂಶಜರ ರಾಜಧಾನಿಯಾಗಿ ಮೆರೆದಾಡಿತ್ತು. ಇದೀಗ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿರುವ ಹಸ್ತಿನಾಪುರ ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ಮಹತ್ವಗಳನ್ನು ತನ್ನೊಡಲಲ್ಲಿ ಹುದುಗಿಸಿರಿಸಿಕೊಂಡಿದೆ.

ಗಂಗಾ ನದಿಯ ತಟದಲ್ಲಿ ತಲೆಯೆತ್ತಿದ್ದ ಈ ಪ್ರಾಚೀನ ನಗರಿ ಬಳಿಕ ಜೈನ ಶ್ರದ್ಧಾಳುಗಳ ಮಹತ್ವದ ಕೇಂದ್ರವಾಗಿಯೂ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. ಆದರೆ ಮಹಾಭಾರತದ ಹಿನ್ನಲೆಯಲ್ಲಿ ಬರುವ ಈ ಪುರಾಣ ಪ್ರಸಿದ್ಧ ನಗರಿ ಕೇವಲ ಹಿಂದೂಗಳಿಗೆ ಮಾತ್ರವಲ್ಲದೇ ಸಮಸ್ತ ಭಾರತೀಯರಿಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ಅಧ್ಯಯನ ಯೋಗ್ಯ ಪ್ರದೇಶವಾಗಿದೆ. ಇದನ್ನು ಜೈನ ತೀರ್ಥಂಕರರ ಜನ್ಮ ಸ್ಥಳವೆಂದೂ ಸಹ ಜೈನ ಶ್ರದ್ಧಾಳುಗಳು ನಂಬಿಕೊಂಡು ಬರುತ್ತಿದ್ದಾರೆ.

ಹಲವಾರು ಜಿನ ಮಂದಿರಗಳು ಹಾಗೂ ಹಿಂದೂ ಧರ್ಮ ಕೇಂದ್ರಗಳಿರುವ ಇಂತಹ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಮಹತ್ವವುಳ್ಳ ಕ್ಷೇತ್ರವನ್ನು ಪ್ರಾಕ್ತನ ಕೇಂದ್ರದ ಅಡಿಯಲ್ಲಿ ತರುವ ಸರಕಾರದ ಪ್ರಯತ್ನ ನಿಜವಾಗಿಯೂ ಪ್ರಶಂಸನೀಯ.

ಆರು ಶತಮಾನಗಳ ಅಹೋಮ್ ಸಾಮ್ರಾಜ್ಯದ ಆಳ್ವಿಕೆಯ ಕುರುಹಾಗಿರುವ ಅಸ್ಸಾಂನ ಶಿವ್ ಸಾಗರ್

ಭಾರತಕ್ಕೆ ಬ್ರಿಟಿಷರ ಆಗಮನ್ನಕ್ಕೂ ಮೊದಲು ಹಲವಾರು ರಾಜವಂಶಗಳು ಈ ದೇಶವನ್ನು ವಿವಿಧ ಪ್ರಾಂತ್ಯಗಳನ್ನಾಗಿಸಿ ತಮ್ಮ ಸಾಮ್ರಾಜ್ಯದ ಧ್ವಜದಡಿಯಲ್ಲಿ ಆಳುತ್ತಿದ್ದವು. ಈ ದೇಶದ ಸಾಂಕ್ಕೃತಿಕ, ಧಾರ್ಮಿಕ ಮತ್ತು ಶಿಲ್ಪಕಲಾ ಕ್ಷೇತ್ರಕ್ಕೆ ಈ ರಾಜಮನೆತನಗಳ ಕೊಡುಗೆ ಇಂದಿಗೂ ಸ್ಮರಣೀಯವಾದುದು.

ಪ್ರಕೃತಿ ಸೌಂದರ್ಯವೇ ಮೇಳೈಸಿದಂತಿರುವ ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಅಸ್ಸಾಂ ರಾಜ್ಯವನ್ನು ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು 600 ವರ್ಷಗಳಷ್ಟು ಸುದೀರ್ಘ ಅವಧಿಗೆ ಆಳಿದ ರಾಜಮನೆತನವೇ ಅಹೋಮ್ ರಾಜಮನೆತನ.

1699 ರಿಂದ 1788ರವರೆಗೆ ಈ ರಾಜಮನೆತನದ ರಾಜಧಾನಿಯಾಗಿದ್ದ ಶಿವ್ ಸಾಗರ್ ಆ ದಿನಗಳಲ್ಲಿ ರಂಗ್ ಪುರ್ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಹೊಂದಿತ್ತು. ಈ ರಾಜವಂಶದ ದೊರೆ ಶಿವ ಸಿಂಗ ನಗರದ ಹೃದಯಭಾಗದಲ್ಲಿ ದೊಡ್ಡ ಕೆರೆಯೊಂದನ್ನು ಕಟ್ಟಿಸಿ ಅದಕ್ಕೆ ಶಿವ್ ಸಾಗರ್ ಎಂಬ ಹೆಸರನ್ನಿಟ್ಟ ಬಳಿಕ ಈ ನಗರ ಇದೇ ಹೆಸರಿನಿಂದ ಜನಜನಿತವಾಯಿತು.

ಇದೀಗ ಅಸ್ಸಾಂ ರಾಜ್ಯದ ಒಂದು ಜಿಲ್ಲೆಯೂ ಹೌದು. ಡೆಹಿಂಗ್ ಮಳೆ ಕಾಡುಗಳು ಈ ಪಟ್ಟಣವನ್ನು ಸುತ್ತುವರೆದಿದ್ದರೆ, ಬ್ರಹ್ಮಪುತ್ರ ಹಾಗೂ ಲೋಹಿತ್ ನದಿಗಳ ಸಂಗಮ ಸ್ಥಾನವೂ ಈ ಊರಿನಲ್ಲಿದೆ. ಇಂತಹ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಶಿವ್ ಸಾಗರ್ ದೇಶದ ಪ್ರಾಕ್ತನಶಾಸ್ತ್ರ ಅಭ್ಯಾಸಿಗಳಿಗೆ ಮತ್ತು ಇತಿಹಾಸದ ಕುರಿತಾಗಿ ಒಲವುಳ್ಳವರಿಗೆ ಒಂದೊಳ್ಳೆ ಅಧ್ಯಯನ ಕೇಂದ್ರವೂ ಹೌದು.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.