Udayavni Special

ಕ್ಷೇತ್ರ ಮಹಾತ್ಮೆಗಳ ಪರ್ವ;ನಿರಂತರ 7 ದಿನ ಯಕ್ಷೋತ್ಸವದ ಸಂಭ್ರಮ 


Team Udayavani, Dec 23, 2018, 12:32 PM IST

333.jpg

ಯಕ್ಷಗಾನ ರಂಗದಲ್ಲಿ  ಪ್ರಸ್ತುತದಲ್ಲಿ  ಹೆಚ್ಚಾಗಿ ಕ್ಷೇತ್ರ ಮಹಾತ್ಮೆಗಳನ್ನು ಹೆಚ್ಚಾಗಿ ಇಷ್ಟ ಪಡುವ ಅಭಿಮಾನಿಗಳು ಹೆಚ್ಚಿದ್ದಾರೆ. ಬಯಲಾಟ ಮೇಳಗಳು ಪೌರಾಣಿಕ ಪ್ರಸಂಗಳಿಗಿಂತ ಕ್ಷೇತ್ರ ಮಹಾತ್ಮೆಗಳನ್ನು ಆಡುವುದು ಅಭಿಮಾನಕ್ಕೆ ಸಾಕ್ಷಿಯಾಗಿದೆ. 

ಉಡುಪಿ ಜಿಲ್ಲೆಯ ಕುಂಜಾಲಿನ ನೀಲಾವರ ಕ್ರಾಸ್‌ ಬಳಿ ನಿರಂತರ 7 ದಿನಗಳ ಕಾಲ ನಡೆದ ಕ್ಷೇತ್ರ ಮಹಾತ್ಮೆಗಳ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸಿತು. 

ನೀಲಾವರ ಕ್ರಾಸ್‌ ಫ್ರೆಂಡ್ಸ್‌ ಮತ್ತು ರೋಟರಿ ರಾಯಲ್‌ ಬ್ರಹ್ಮಾವರದ ಸಹಭಾಗಿತ್ವದಲ್ಲಿ ಅದ್ಧೂರಿ 7 ದಿನಗಳ ಯಕ್ಷೋತ್ಸವ ಯಶಸ್ವಿಯಾಗಿ ನಡೆದು ಹೊಸ ದಾಖಲೆಗೆ ಪಾತ್ರವಾಯಿತು. 

ಡಿಸೆಂಬರ್‌ 16 ರಂದು ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಸ್ಥಳೀಯ ಪ್ರಸಿದ್ದ ನಾಟಿ ವೈದ್ಯ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯವರು ನೀಲಾವರ ಕ್ಷೇತ್ರ ಮಹಾತ್ಮೆಯನ್ನು  ಕಾಲಮಿತಿಯಲ್ಲಿ  ಸೊಗಸಾಗಿ ಪ್ರದರ್ಶಿಸಿದರು.  

ಮರುದಿನ ಡಿಸೆಂಬರ್‌ 17 ರಂದು ಶನೀಶ್ವರ ಮೇಳ ಆಜ್ರಿ, ಚೋನೆಮನೆ ಇವರಿಂದ ಶ್ರೀ ಶನೀಶ್ವರ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಲಾಯಿತು.

18 ರಂದು ಅಮೃತೇಶ್ವರಿ ಮೇಳ ಕೋಟ ಇವರು ಅಮೃತೇಶ್ವರಿ ಕ್ಷೇತ್ರ ಮಹಾತ್ಮೆಯನ್ನು ಪ್ರದರ್ಶಿಸಿದರು. 

 19 ರಂದು ಶ್ರೀ ದುರ್ಗಾಪರಮೇಶ್ವರಿ ಮೇಳ ಮೇಗರವಳ್ಳಿ ಅವರು ಮಹಿಮೆದ ಮಹಾಂಕಾಳಿ ಮಹಾತ್ಮೆಯನ್ನು ಆಡಿ ತೋರಿಸಿದರು.

20 ರಂದು ಹಟ್ಟಿಯಂಗಡಿ ಮೇಳದವರು ಸಾಲಿಗೆದ್ದೆ ವೀರ ಕಲ್ಕುಡ ಮಹಾತ್ಮೆ ಯನ್ನು ಪ್ರದರ್ಶಿಸಿದರು.

ಡಿಸೆಂಬರ್‌ 21 ರಂದು ದುರ್ಗಾಪರಮೇಶ್ವರಿ ಮೇಳ ಸೌಕೂರು ಇವರು ಸೌಕೂರು ಕ್ಷೇತ್ರ ಮಹಾತ್ಮೆಯನ್ನು ವೈಭವಯುತವಾಗಿ ಆಡಿ ತೋರಿಸಿದರು.

ಎಲ್ಲಾ ಪ್ರದರ್ಶನಗಳು ಕಾಲಮಿತಿಯಲ್ಲಿ  ನಡುರಾತ್ರಿಯ ವರೆಗೆ ನಡೆದು ಯುವ ಪ್ರೇಕ್ಷಕರಿಗೆ ಭರ್ಜರಿ ಮನ ರಂಜನೆ ನೀಡುವಲ್ಲಿ ಯಶಸ್ವಿಯಾದವು. 

ಯಕ್ಷೋತ್ಸವದ ಕೊನೆಯ ದಿನ ಡಿಸೆಂಬರ್‌ 22 ರಂದು ಶನಿವಾರ ವೀರಭದ್ರಸ್ವಾಮಿ ಮೇಳ ಹಿರಿಯಡಕ ಇವರು ಹಿರಿಯಡಕ ಕ್ಷೇತ್ರ ಮಹಾತ್ಮೆಯನ್ನು ಅದ್ಧೂರಿಯಾಗಿ ಆಡಿ ತೋರಿಸಿದರು.

ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಎರಡೂ ಪ್ರಕಾರಗಳು ಕೂಡಿರುವ ಮೇಳ ಅದ್ದೂರಿಯಾಗಿ ಯಕ್ಷೋತ್ಸವಕ್ಕೆ ಮಂಗಳ ಹಾಡಿತು. 

ಹಲವು ದಿಗ್ಗಜ ಕಲಾವಿದರನ್ನು ರಂಗಕ್ಕೆ ನೀಡಿರುವ ಕುಂಜಾಲಿನ ಪ್ರದೇಶದಲ್ಲಿ 7 ದಿನಗಳ ಕಾಲ ನಡೆದ ಯಕ್ಷೋತ್ಸವ ಹಲವು ಯುವ ಕಲಾವಿದರ ಪ್ರತಿಭೆಯನ್ನು ಹೊರ ಸೂಸಲು ವೇದಿಕೆಯಾಯಿತು. ಸಾವಿರಾರು ಮಂದಿ ಯಕ್ಷಾಭಿಮಾನಿಗಳು ದೂರದ ಊರುಗಳಿಂದಲೂ ಆಗಮಿಸಿ ಯಶಸ್ಸಿಗೆ ಸಹಕರಿಸಿದರು.

ಪುಣ್ಯ ಕ್ಷೇತ್ರಗಳ ಸ್ಥಳ ಮಹಿಮೆ, ದೈವಗಳ ಪ್ರಭಾವ ಏನು ಎನ್ನುವುದನ್ನು ಕಥಾ ಭಾಗಗಳ ಮೂಲಕ ನೂರಾರು ಕಲಾವಿದರು ಪ್ರೇಕ್ಷಕರಿಗೆ ಮನ ಮುಟ್ಟಿಸಿದರು. 

ಕಾರ್ಯಕ್ರಮದ ಸಮಾರೋಪದಂದು ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಿದ್ದು ಕಾರ್ಯಕ್ರಮವನ್ನು  ಇನ್ನಷ್ಟು ಸ್ಮರಣೀಯವಾಗಿಸಿತು.

ಟಾಪ್ ನ್ಯೂಸ್

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

shrikrishna gmail com movie review

ಶ್ರೀಕೃಷ್ಣ ಅಟ್‌ ಜಿಮೇಲ್‌. ಕಾಂ ಚಿತ್ರ ವಿಮರ್ಶೆ: ಫ್ಯಾಮಿಲಿ ಟೈಮ್‌ ನಲ್ಲಿ ಕೃಷ್ಣ ಸುಂದರ ಯಾನ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

ಪೂಂಚ್ ನಲ್ಲಿ ಕೂಂಬಿಂಗ್: ಉಗ್ರರ ಹತ್ಯೆ, 48 ಗಂಟೆಗಳ ಬಳಿಕ ಇಬ್ಬರು ಯೋಧರ ಮೃತದೇಹ ಪತ್ತೆ!

cm-bommai

ಸಂಗೂರ ಸಕ್ಕರೆ ಕಾರ್ಖಾನೆ ಮುಚ್ಚುವುದರಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ: ಸಿಎಂ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?

1-t

ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

Athletics star Simi story

ಬರಿಗಾಲಿನಲ್ಲಿ ಓಡಲಾರಂಭಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥ್ಲೆಟಿಕ್ಸ್‌ ತಾರೆ ʼಸಿಮಿʼ ಪಯಣ

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

why india struggling against new zealand in icc tournaments

ಟೀಂ ಇಂಡಿಯಾಗೆ ಕೇನ್ ಬಳಗ ಕಬ್ಬಿಣದ ಕಡಲೆಯಾಗುತ್ತಿರುವುದ್ಯಾಕೆ?

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

9

ಮಲೀನ ನೀರು ರಸೆಗೆ ಹರಿಯದಂತೆ ಕ್ರಮವಹಿಸಿ

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪರಿಣಾಮಕಾರಿ: ಡಿಸಿ

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪರಿಣಾಮಕಾರಿ: ಡಿಸಿ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.