ಮೃದುವಾದ ಬಟರ್ ನಾನ್ , ಮಶ್ರೂಮ್ ಮಸಾಲ ತಯಾರಿಸೋ ಸಿಂಪಲ್ ವಿಧಾನ

ಶ್ರೀರಾಮ್ ನಾಯಕ್, Oct 3, 2019, 7:03 PM IST

ಬಿಸಿ ಬಿಸಿಯಾದ ಬಟರ್ ನಾನ್ ಜೊತೆಗೆ ಮಶ್ರೂಮ್ ಮಸಾಲ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಅತೀ ಸರಳ ವಿಧಾನದಲ್ಲಿ ಬಟರ್ ನಾನ್ ಹಾಗೂ ಮಶ್ರೂಮ್ ಮಸಾಲ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬಟರ್ ನಾನ್:
ಬೇಕಾಗುವ ಸಾಮಾಗ್ರಿಗಳು:
ಮೈದಾ 1/2 ಕೆ.ಜಿ, ಹಾಲಿನ ಪುಡಿ 2 ಚಮಚ, ಅಡುಗೆ ಸೋಡಾ ಸ್ವಲ್ಪ, ಮೊಸರು 1ಕಪ್ ,ಬೆಣ್ಣೆ ,ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
ಮೈದಾ ಹಿಟ್ಟನ್ನು ಚೆನ್ನಾಗಿ ಜರಡಿ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟು, ಹಾಲಿನ ಪುಡಿ, ಅಡುಗೆ ಸೋಡಾ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿ ಸುಮಾರು 2-3 ಗಂಟೆಗಳ ಕಾಲ ಹಾಗೆ ಇಡಿ. ಆಮೇಲೆ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ ಬೆಣ್ಣೆಯಿಂದ ಕಾಯಿಸಿದರೆ ಬಿಸಿಬಿಸಿ ಮೃದುವಾದ ನಾನ್ ಸವಿಯಲು ಸಿದ್ಧ. ಮಶ್ರೂಮ್ ಮಸಾಲ ಜೊತೆಗೆ ತಿನ್ನಲು ಬಹಳ ರುಚಿಕರ.

ಮಶ್ರೂಮ್ ಮಸಾಲ:
ಬೇಕಾಗುವ ಸಾಮಾಗ್ರಿಗಳು
ಮಶ್ರೂಮ್ 1 ಕಪ್, ಈರುಳ್ಳಿ 3, ಟೊಮೇಟೊ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಪುಡಿ 1 ಚಮಚ, ಅರಸಿನ ಪುಡಿ 1/2 ಚಮಚ, ಎಣ್ಣೆ 2 ಚಮಚ, ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ.

ತಯಾರಿಸುವ ವಿಧಾನ
ಒಂದು ತವಾದಲ್ಲಿ ಏಲಕ್ಕಿ,ಲವಂಗ ಹುರಿದಿಟ್ಟುಕೊಳ್ಳಿ. ನಂತರ ಟೊಮೇಟೊ, ಗೋಡಂಬಿ, ಈರುಳ್ಳಿಯನ್ನು ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ತದನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ  ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೇಟೊ , ಗೋಡಂಬಿ, ಈರುಳ್ಳಿ ಪೇಸ್ಟ್, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಸಿನ ಪುಡಿ ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಮಶ್ರೂಮ್ ಮತ್ತು ಉಪ್ಪು ಸೇರಿಸಿ 15-20 ನಿಮಿಷಗಳವರೆಗೆ ಕುದಿಸಿರಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಬಟರ್ ನಾನ್ ಜೊತೆ ಸವಿಯಿರಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ