ಬಾರೋ ಫಿರಂಗಿಪೇಟೆಗೆ…

Team Udayavani, Jul 4, 2019, 5:00 AM IST

ಒಂದು ಕಾಲದ ಯುದ್ಧಗಳಿಂದ ಜರ್ಝರಿತವಾಗಿದ್ದರ ನೆನಪಿಗೆ ಮತ್ತು ಶಾಂತಿಯ ದ್ಯೋತಕವಾಗಿ ರಷ್ಯಾ ದೇಶದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ ನಗರದಲ್ಲಿ ಬೃಹದಾಕೃತಿಯ ಒಂದು ಫಿರಂಗಿ ಮತ್ತು ಒಂದು ಗಂಟೆಯನ್ನು ಇಡಲಾಗಿದೆ. ಇವೆರಡೂ ಕೂಡ ತಮ್ಮ ಗಾತ್ರಗಳಿಂದ ವಿಶ್ವ ದಾಖಲೆ ಸ್ಥಾಪಿಸಿವೆ.

ಸಮರ ಕಾಲದಲಿ ಗುಂಡುಗಳನ್ನು ಸಿಡಿಸಲು ಬಳಸುತ್ತಿದ್ದ ಫಿರಂಗಿ ಮತ್ತು ತೂಗಾಡುವ ಕಂಚಿನ ಗಂಟೆಗಳಿಗೆ ಒಂದು ಬಗೆಯ ಅವಿನಾಭಾವ ಸಂಬಂಧ ರಷ್ಯ ದೇಶದಲ್ಲಿ ಕಂಡುಬರುವುದು. ಯುದ್ಧ ಸಂಭವಿಸಿದಾಗ ಕಂಚನ್ನು ಕರಗಿಸಿ ಫಿರಂಗಿಗಳನ್ನು ತಯಾರಿಸುವುದು, ಶಾಂತಿ ಸಮಯದಲ್ಲಿ ಅದೇ ಫಿರಂಗಿಗಳನ್ನು ಕರಗಿಸಿ ಗಂಟೆಗಳನ್ನು ಎರಕ ಹೊಯ್ಯುವುದು ಆ ದೇಶದ ಪದ್ಧತಿ. ಆ ರೀತಿ ತಯಾರಾದ ಶತಮಾನಗಳಷ್ಟು ಹಳೆಯದಾದ ಫಿರಂಗಿ ಮತ್ತು ಗಂಟೆಯನ್ನು ನೋಡಲು ವರ್ಷ ವರ್ಷವೂ ಸಹಸ್ರಾರು ಯಾತ್ರಿಕರು ಅಲ್ಲಿಗೆ ಭೇಟಿ ನೀಡುತ್ತಾರೆ.

ಗಂಟೆ ಮೇಲೆ ಕುಸುರಿ
ಜಾರ್‌ಕ್ಯಾನನ್‌ ಫಿರಂಗಿ ನಲವತ್ತು ಟನ್‌ ಭಾರವಿದೆ. 5.34 ಮೀಟರ್‌ ಉದ್ದವಾಗಿದೆ. ಗುಂಡು ಸಿಡಿಯುವ ಬ್ಯಾರಲ್‌(ಕೊಳವೆ) ಒಳಗಿನ ವ್ಯಾಸ 890 ಮಿ. ಮೀ. ಗಳಷ್ಟಿದ್ದರೆ ಬಾಹ್ಯ ವ್ಯಾಸ 1200 ಮಿ. ಮೀ. ಇದೆ. 1586ರಲ್ಲಿ ಕಂಚಿನ ಕುಶಲಕರ್ಮಿ ಆಂಡ್ರೆ ಚೆಕೊವ್‌ ಇದನ್ನು ತಯಾರಿಸಿದ. ಇದರ ಬ್ಯಾರೆಲ್‌ ಮೇಲೆ ಇವಾನೊವಿಚ್‌ ದೊರೆಯ ಕುದುರೆ ಸವಾರಿ, ಕಿರೀಟ ಮುಂತಾದ ಚಿತ್ರಗಳಿವೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಫಿರಂಗಿ ತಯಾರಾದ ಬಳಿಕ ಅದು ಜಗತ್ತಿನಲ್ಲಿ ದೊಡ್ಡ ಗಾತ್ರದ್ದೆಂಬ ದಾಖಲೆಗೆ ಪಾತ್ರವಾಗಿದ್ದೇನೋ ಸರಿ. ಆದರೆ, ಅದರಿಂದ ಬೃಹದ್ಗಾತ್ರದ ಗುಂಡುಗಳನ್ನು ಹಾರಿಸುವುದೇ ಕಷ್ಟಸಾಧ್ಯವೆನಿಸಿತು. ಇಪ್ಪತ್ತನೆಯ ಶತಮಾನದಲ್ಲಿ ಒಂದು ಗುಂಡನ್ನು ಪ್ರಾಯೋಗಿಕವಾಗಿ ಹಾರಿಸಲಾಯಿತು. ಅದು ಪರಿಣಾಮಕಾರಿ ಎನಿಸಲಿಲ್ಲ. ಮಿಲಿಟರಿ ಬಳಕೆಗಿಂತ ಹೆಚ್ಚಾಗಿ ಅದು ಗಮನ ಸೆಳೆಯುವ ಪ್ರದರ್ಶನಕ್ಕೆ ಸೀಮಿತವಾಯಿತು.

ಗುಂಡುಗಳು ಹತ್ತಿರದಲ್ಲೇ ಇವೆ
ಈ ಫಿರಂಗಿ ಬಳಕೆಯಾಗದೆ ಒಂದು ಶತಮಾನಕ್ಕಿಂತ ಹೆಚ್ಚು ಕಾಲ ಬಿಸಿಲು, ಮಳೆಗಳಿಗೆ ಮೈಯೊಡ್ಡಿಕೊಂಡು ಹೊರಗೆ ಉಳಿದಿತ್ತು. ಬಳಿಕ ಕ್ರೆಮ್ಲಿನ್‌ ರೆಡ್‌ಸ್ಕ್ವೇರ್‌ನಲ್ಲಿ ಪ್ರವಾಸಿಗಳ ಆಕರ್ಷಣೆಯಾಗಿ ಮತ್ತೆ ಹಸರು ಮಾಡುತ್ತಿದೆ. ರಷ್ಯನ್‌ ಭಾಷೆಯಲ್ಲಿ ಇದಕ್ಕೆ “ಬಾಂದಾರ್ದಾ’ ಎಂಬ ಹೆಸರಿದೆ. ಫಿರಂಗಿಯಲ್ಲಿ ಹಾರಿಸಲೆಂದು ತಯಾರಾದ ಭಾರೀ ಗಾತ್ರದ ಗುಂಡುಗಳೂ ಅದರ ಬಳಿಯಲ್ಲೇ ಇಟ್ಟಿದ್ದಾರೆ.

ಒಡೆಯುವ ಗಂಟೆ
ಫಿರಂಗಿಯ ಸನಿಹದಲ್ಲೇ ಜಗತ್ತಿನಲ್ಲೇ ದೊಡ್ಡದಾದ ಜಾರ್‌ ಕಂಚಿನ ಗಂಟೆಯೂ ಇದೆ. ಅದ ಮೇಲ್ಮೆ„ಯಲ್ಲಿ ಕಿನ್ನರರು, ಸಂತರು, ಸಾಮ್ರಾಜ್ಞೆ ಆಯಾನ್ನಾ, ಜಾರ್‌ ಅಲೆಕ್ಸ್‌ ಮೊದಲಾದವರ ಜೀವನದ ಕತೆ ಹೇಳುವ ಚಿತ್ರಗಳಿವೆ. ಈ ಗಂಟೆ ತಯಾರಿಕೆಯ ಹಿಂದೆ ಒಂದು ರೋಚಕ ಕತೆಯೂ ಇದೆ. 18,000 ಕೆ.ಜಿ ತೂಗುವ ಈ ಗಂಟೆಯನ್ನು ಮೊದಲು ಎರಕ ಹೊಯ್ಯಲಾಯಿತು. ಆದರೆ ಬಳಸುವ ಮೊದಲೇ ಅದು ಒಡೆದುಹೋಯಿತು. ಅದನ್ನು ಸೇರಿಸಿ ಒಂದು ಲಕ್ಷ ಕಿಲೋ ಭಾರದ ಎರಡನೆಯ ಗಂಟೆಯನ್ನು ಎರಕ ಹೊಯ್ದರು. ಅದೂ ಒಡೆಯಿತು. ಆಗ ಇದರ ಎರಡು ಪಟ್ಟು ಭಾರವಿರುವ ಮೂರನೆಯ ಗಂಟೆ ತಯಾರಾಯಿತು.

ಗಂಟೆ ಆಕಾರದ ಹೊಂಡವನ್ನು ನೆಲದಲ್ಲಿ ತೆಗೆದು ಅದರಲ್ಲಿ ಕರಗಿದ ಕಂಚನ್ನು ಎರಕ ಹೊಯ್ದರು. ಈ ಸಲ 72 ಕಿಲೋ ಚಿನ್ನ, ಬೆಳ್ಳಿ ಸೇರಿಸಿಕೊಂಡರು. ಗಂಟೆ ಸರಿಯಾಗಿಯೇ ಇತ್ತು. ಆದರೆ ಕೆಲಸದವರು ಒಂದು ಎಡವಟ್ಟು ಮಾಡಿದರು. ಬಿಸಿ ಆರುವ ಮೊದಲೇ ಅದರ ಮೇಲೆ ನೀರು ಎರಚಿದರು. ಗಂಟೆಯನ್ನು ಎತ್ತರದಲ್ಲಿ ತೂಗಾಡಿಸಿದ ಕೂಡಲೇ ಅದು ಒಡೆಯಿತು. 11,500 ಕಿಲೋ ತೂಕದ ತುಂಡೊಂದು ಕೆಳಗೆ ಬಿದ್ದಿತು. ಮರಳಿ ಇನ್ನೊಂದು ಗಂಟೆ ಎರಕ ಹೊಯ್ಯುವ ಕೆಲಸ ನಡೆಯಲಿಲ್ಲ. ತುಂಡಾದ ಗಂಟೆಯನ್ನು ಕಳಚಿದ ತುಂಡಿನ ಜೊತೆಗೆ ಶತಮಾನ ಕಾಲ ಅಲ್ಲಿಯೇ ಬಿಟ್ಟರು.

ಪ. ರಾಮಕೃಷ್ಣ ಶಾಸ್ತ್ರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಳದ ದಿಬ್ಬಗಳು "ಗ್ರೇಟ್‌ ಬ್ಯಾರಿಯರ್‌ ರೀಫ್' ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ...

  • ಮಲೆನಾಡಿನ ಒಂದು ಸುಂದರ ಹಳ್ಳಿ ಸೋಮನಾಥಪುರ. ಅಲ್ಲಿನ ಸೋಮನಾಥ ದೇವಾಲಯವು ಸುತ್ತಲೂ ಪ್ರಸಿದ್ಧಿ ಪಡೆದಿತ್ತು. ಸೋಮನಾಥಪುರ ನದಿಯ ದಂಡೆಯ ಮೇಲೆ ಇದ್ದುದರಿಂದ ಆ ಊರವರಿಗೆ...

  • ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು...

  • ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು? ಅದು ಪರಿಶುದ್ಧವಾದ ನೀರಿನಿಂದ ತುಂಬಿದ...

ಹೊಸ ಸೇರ್ಪಡೆ