Udayavni Special

ವ್ಯಾಸರಾವ್‌ ಇನ್ನಿಲ್ಲ ; ಕಳಚಿ ಬಿದ್ದ ಸಾಹಿತ್ಯ ಲೋಕದ ಕೊಂಡಿ 

Team Udayavani, Jul 15, 2018, 4:45 PM IST

25dfdsf.jpg

ರವಿ ಕಾಣದನ್ನು ಕವಿ ಕಂಡ ಎನ್ನುವ ಮಾತಿನಂತೆ ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ಅದೆಷ್ಟೋ ಮರೆಯಾದ  ಮೇರು ಸಾಹಿತಿಗಳು  ಅದ್ಭುತ ಗೀತೆಗಳ ಸಾಲುಗಳನ್ನು   ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ಅಂತಹ ಗೀತೆಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗುತಾದ ಭೂತಾಯಿ ಮನಸು. ರಾಜಂಗೂ ರಾಣಿಗೂ ಮುರಿದೊದ್ರೆ ಮನಸು ಅರಮನೆಯಾಗೇನೈತೆ ಸೊಗಸೂ..ಎನ್ನುವ ಶುಭಮಂಗಳ ಚಿತ್ರದ  ಗೀತೆ ಇಂದಿಗೂ ಎಂದೆಂದಿಗೂ ನೆನಪಿನಲ್ಲುಳಿಯುವ ಅದ್ಭುತ ಸಾಹಿತ್ಯವುಳ ಚಿತ್ರಗೀತೆ. ಈ ಗೀತೆಯನ್ನು ಬರೆದ ಎಂ. ಎನ್‌.ವ್ಯಾಸರಾಯರು ಸಾಹಿತ್ಯ ಲೋಕವನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. 

ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವ್ಯಾಸರಾಯರು ಕವಿಯಾಗಿಯೂ,ಕಥೆಗಾರರಾಗಿಯೂ, ಕಾದಂಬರಿಕಾರರಾಗಿ,ಅನುವಾದಕರಾಗಿ  ತನ್ನ ಸಾಹಿತ್ಯ ಸೇವೆ ಸಲ್ಲಿಸಿದವರು. 

ಮೈಸೂರಿನಲ್ಲಿ 1945 ಜನವರಿ 27 ರಂದು ನರಸಿಂಗ ರಾವ್‌, ಸುಶೀಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ವ್ಯಾಸರಾವ್‌ ಅವರು ಬೆಂಗಳೂರು ವಿವಿಯಲ್ಲಿ ಬಿಎ ಪದವಿ ಪಡೆದರು. ಡ್ರಾಮಾಟಿಕ್ಸ್‌ನಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದರು. 

ಅವರಲ್ಲಿದ್ದ ಸಾಹಿತ್ಯದ ಸ್ಪೂರ್ತಿ ಹಲವು ಬರಹಗಳು ಪ್ರಕಟಗೊಳ್ಳುವಂತೆ ಮಾಡಿತ್ತು. ಪತ್ತೇದಾರಿ ಕಾದಂಬರಿಯಿಂದ ಹಿಡಿದು ಪ್ರೇಮಗೀತೆಗಳನ್ನೂ ವ್ಯಾಸರಾಯರು ಬರೆದಿದ್ದರು. ಉತ್ತಮ ವಿಚಾರಗಳನ್ನೊಳಗೊಂಡ ಅವರ ಕಾದಂಬರಿಗಳು ತೆಲುಗು, ಹಿಂದಿ, ಸಿಂಧ್‌ ಮತ್ತು ಆಂಗ್ಲ ಭಾಷೆಗೆ ಭಾಷಾಂತರಗೊಂಡಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿ . 

‘ಬೆಳ್ಳಿ ಮೂಡುವ’ ಕವನ ಸಂಕಲನ,’ಮಳೆಯಲ್ಲಿ ನೆನದ’ ಕಥಾ ಸಂಕಲನ, ‘ಉತ್ತರ ಮುಖಿ’ ನೀಳ್ಗತೆಗಳ ಸಂಕಲನ, ‘ಸ್ಕಾಟ್‌ ಡಬಲ್‌ ಎಕ್ಸ್‌’ , ‘ಅಖಿಲಾ ಮೈ ಡಾರ್ಲಿಂಗ್‌’ ಎನ್ನುವ ಪತ್ತೇದಾರಿ ಕಾದಂಬರಿಗಳು, ಕತ್ತಲಲ್ಲಿ ಬಂದವರು ಎನ್ನುವ ನಾಟಕ ಪ್ರಮುಖವಾದ ಕೃತಿಗಳು. 

ಚೀನಿ, ಸಿಂಧಿ,ಇಂಗ್ಲೀಷ್‌,ಫ್ರೆಂಚ್‌‌, ಉರ್ದು ಕಥೆಗಳನ್ನು ಭಾಷಾಂತರಿಸಿದ ಹೆಗ್ಗಳಿಕೆಯೂ ವ್ಯಾಸರಾವ್‌ ಅವರದ್ದು. ವರನಟ ಡಾ.ರಾಜ್‌ ಕುಮಾರ್‌, ಕವಿ ಜಿ.ಎಸ್‌.ಶಿವರುದ್ರಪ್ಪ , ಡಾ.ಯು.ಆರ್‌.ಅನಂತಮೂರ್ತಿ ಸೇರಿದಂತೆ ಹಲವು ದಿಗ್ಗಜರ ಸಂದರ್ಶನ ನಡೆಸಿದ್ದ ವ್ಯಾಸರಾವ್‌ ಅವರು ತಮ್ಮ ಸಾಹಿತ್ಯ ಪ್ರೌಢಿಮೆಗೆ ಅನುಗುಣವಾಗಿ ಅದ್ಭುತ ಎನಿಸುವಂತ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇತರರ ಸಾಹಿತ್ಯ ದ ಕುರಿತು ಅಪಾರ ಕಾಳಜಿ, ಯುವ ಬರಹಗಾರರಿಗೆ ಪ್ರೇರೆಪಕರಾಗಿದ್ದ ವ್ಯಾಸರಾಯರು ನೂರಾರು ಮಂದಿ ಬರಹಗಾರರ ಕಥೆ, ಸಾಹಿತ್ಯ, ಹಾಸ್ಯ, ಕವನ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ. 

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಿರಿತೆರೆ ಮಾತ್ರವಲ್ಲನೆ ಕಿರುತೆರೆಗೂ ಸಾಹಿತಿಯಾಗಿ ಪರಿಚಿತರಾಗಿದ್ದ ವ್ಯಾಸರಾಯರು 35 ಜನಪ್ರಿಯ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ ರಚಿಸಿದ್ದರು. 

ನೂರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು  ಬರೆದಿದ್ದ  ವ್ಯಾಸರಾಯರ ಹಾಡುಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನೀನಿಲ್ಲದೇ ನನಗೇನಿದೆ.., ಚಂದ ಚಂದ ಸಂಗಾತಿ ನೋಟವೇ ಚಂದ.. ಮೊದಲಾದವು ಜನಪ್ರಿಯತೆಯ ಉತ್ತುಂಗಕ್ಕೇರಿದ ಗೀತೆಗಳು. 

ಶ್ರೇಷ್ಠ ಸಾಹಿತ್ಯಕ್ಕೆ ಸಾಕ್ಷಿ, ಪ್ರೇರಣೆಯಾಗಿದ್ದ ಅವರ ಸಾಹಿತ್ಯವುಳ್ಳ ‘ಮೈಸೂರು ಮಲ್ಲಿಗೆ’, ‘ಆಸ್ಫೋಟ’, ‘ದಂಗೆ ಎದ್ದ ಮಕ್ಕಳು’, ‘ವಾತ್ಸಲ್ಯ ಪಥ’ ಚಿತ್ರಗಳು ಪ್ರಶಸ್ತಿಗೆ ಭಾಜನವಾಗಿವೆ. 

ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳಿಗೆ ವ್ಯಾಸರಾವ್‌ ಅವರು ಭಾಜನರಾಗಿದ್ದರು. 

ಬೆಂಗಳೂರಿನ ನಿವಾಸದಲ್ಲಿ  ಜುಲೈ 15 ರ ಭಾನುವಾರ ಬೆಳ್ಳಂಬೆಳಗ್ಗೆ ಸಾಹಿತ್ಯ ಲೋಕದ ಯಾತ್ರೆ ಮುಗಿಸಿ ವ್ಯಾಸರಾಯರು ಮರೆಯಾಗಿದ್ದಾರೆ. 

ಬಹುಮುಖ ಪ್ರತಿಭೆಯನ್ನು  ಹೊಂದಿದ್ದ ಮೇರು ಸಾಹಿತಿಯ ಅಗಲುವಿಕೆ ಕನ್ನಡ ಸಾರಸ್ವತ ಲೋಕಕ್ಕೆ ,ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಬಹದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯುಕೆ

ಬ್ರಿಟನ್ ನಲ್ಲಿ ಕೋವಿಡ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ.ಜಿತೇಂದ್ರ ಕುಮಾರ್ ಸಾವು

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಯಾದಗಿರಿ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಯಾದಗಿರಿಯ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vವೀಕ್ಷಕರನ್ನು ಮೋಡಿ ಮಾಡುವ ಕ್ರಿಕೆಟ್ ನ ಕಂಚಿನ ಕಂಠದ ಕಾಮೆಂಟೇಟರ್

ವೀಕ್ಷಕರನ್ನು ಮೋಡಿ ಮಾಡುವ ಕ್ರಿಕೆಟ್ ನ ಕಂಚಿನ ಕಂಠದ ಕಾಮೆಂಟೇಟರ್

ಗುಟ್ಟಾಗಿ ರಿಯಲ್ ಲೈಫ್ ನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಕೆಲಸ ಮಾಡಿ ಸ್ಟಾರ್ ನಟನಾಗಿ ಮಿಂಚಿದ್ದ

ಗುಟ್ಟಾಗಿ ರಿಯಲ್ ಲೈಫ್ ನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಕೆಲಸ ಮಾಡಿ ಸ್ಟಾರ್ ನಟನಾಗಿ ಮಿಂಚಿದ್ದ!

google-5

ಬಿಗ್ ಸಲ್ಯೂಟ್: ಕೋವಿಡ್-19 ವಿರುದ್ಧ ಹೋರಾಡಲು ಕೈ ಜೋಡಿಸಿದ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳು

ಅಡುಗೆ ಮನೆ: ಬಾಯಲ್ಲಿ ನೀರೂರಿಸುವ ಮೇಥಿ(ಮೆಂತ್ಯ ಸೊಪ್ಪು) ಪರೋಟ ಸರಳ ವಿಧಾನ

ಅಡುಗೆ ಮನೆ: ಬಾಯಲ್ಲಿ ನೀರೂರಿಸುವ ಮೇಥಿ(ಮೆಂತ್ಯ ಸೊಪ್ಪು) ಪರೋಟ ಸರಳ ವಿಧಾನ

0

ಎಂ.ಬಿ.ಎ. ಮಾಡಬೇಕಾದ ಹುಡುಗ ರಸ್ತೆ ಬದಿ ಚಹಾ ಮಾರಿ ಕೋಟಿ ಗಳಿಸಿದ ಯಶೋಗಾಥೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಯುಕೆ

ಬ್ರಿಟನ್ ನಲ್ಲಿ ಕೋವಿಡ್ ಗೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ.ಜಿತೇಂದ್ರ ಕುಮಾರ್ ಸಾವು

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ದೇಶ ಕಟ್ಟಿದವರು ಮಾಡದ ತಪ್ಪಿಗೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: HDK

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ  ರೈತಾಪಿ ವರ್ಗ

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ ರೈತಾಪಿ ವರ್ಗ

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ:

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ