ನಿಮಗೆ ಗೊತ್ತಿರಲಿ: ಹಲವು ಖನಿಜಗಳ ಗಣಿ…ಬೆಳ್ಳುಳ್ಳಿಯಲ್ಲಿದೆ ಹಲವು ಔಷಧೀಯ ಗುಣಗಳು

Team Udayavani, Nov 22, 2019, 9:03 PM IST

ಪ್ರತಿನಿತ್ಯವು ನಾವು ಅಡುಗೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥದಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ. ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲ ಅಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಇಂತಹ ಬೆಳ್ಳುಳ್ಳಿಯಲ್ಲಿ ಸಾರಜನಕ, ರಂಜಕ ಪಿಷ್ಟ. ಮೇದಸ್ಸು ಸುಣ್ಣ, ಮುಂತಾದ ಜೀವಸತ್ವ ಇರುವ ಔಷಧಿಯ ಗುಣಗಳಿವೆ. ಪ್ರತಿದಿನ ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದು. ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ಆಹಾರದ ಜೊತೆಗೆ ಸೇವಿಸುವ ಮೂಲಕ ಆರೋಗ್ಯವೂ ವೃದ್ಧಿಯಾಗುತ್ತದೆ.

ಬೆಳ್ಳುಳ್ಳಿಯ ಔಷಧೀಯ ಔಷಧೀಯ ಗುಣಗಳು:

ಜೀರ್ಣಕ್ರಿಯೆಗೆ ನೆರವಾಗುವುದು
ಬೆಳ್ಳುಳ್ಳಿಯಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳು ಮತ್ತು ವಿಟಮಿನ್ ಗಳು ಯಕೃತ್, ಮೂತ್ರನಾಳ ಮತ್ತು ಕಿಡ್ನಿಯ ಆರೋಗ್ಯವನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರೊಂದಿಗೆ ಬೆಳ್ಳುಳ್ಳಿಯಲ್ಲಿ ಇರುವಂತಹ ಒತ್ತಡ ವಿರೋಧಿ ಅಂಶಗಳು ಹೊಟ್ಟೆಯಲ್ಲಿ ಹೆಚ್ಚು ಆಮ್ಲವು ಬಿಡುಗಡೆ ಆಗುವುದನ್ನು ತಡೆಯುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ ಆಗಿರುವಂತೆ ಮಾಡುವುದು.

ತೂಕ ಇಳಿಸಲು ನೆರವಾಗುವುದು
ದೇಹದಲ್ಲಿ ಬೊಜ್ಜು ಆವರಿಸಿಕೊಂಡು, ಅನಾರೋಗ್ಯಕಾರಿ ಆಗಿ ತೂಕ ಬೆಳೆದಿದ್ದರೆ ಹಸಿ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳಿಯಲ್ಲಿ ಕೆಟ್ಟ ಮತ್ತು ಅಧಿಕ ಕೊಬ್ಬನ್ನು ಕರಗಿಸುವಂತಹ ಅಂಶಗಳು ಇವೆ. ವಿವಿಧ ರೀತಿಯ ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯು ಚಯಾಪಚಯ ಕ್ರಿಯೆ ವೃದ್ಧಿಸುವುದು ಎಂದು ಕಂಡುಕೊಳ್ಳಲಾಗಿದೆ.

ರಕ್ತದಲ್ಲಿ ಸಕ್ಕರೆ ಮಟ್ಟ ಕಾಪಾಡಲು
ಮಧುಮೇಹಿಗಳಿಗೆ ಬೆಳ್ಳುಳ್ಳಿಯು ತುಂಬಾ ಪ್ರಯೋಜನಕಾರಿ. ಇದರಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ದಿನದಲ್ಲಿ ಎರಡು ಸಲ ಸೇವಿಸಿದರೆ, ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.

ಖಿನ್ನತೆ ನಿವಾರಿಸುವುದು
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಆಗ ಅದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವುದು. ದೇಹದಲ್ಲಿನ ರಾಸಾಯನಿಕಗಳನ್ನು ಇದು ಸಮತೋಲನದಲ್ಲಿ ಇಡುವುದು. ಖಿನ್ನತೆಯು ಮೆದುಳಿನ ರಾಸಾಯನಿಕದ ಅಸಮತೋಲನದಿಂದ ಬರುವುದು ಮತ್ತು ಬೆಳ್ಳುಳ್ಳಿಯು ಖಿನ್ನತೆ ವಿರುದ್ಧ ಹೋರಾಡಲು ನೆರವಾಗವುದು.

ಹಲವು ಖನಿಜಗಳ ಗಣಿಯಾಗಿದೆ
ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಸೆಲೆನಿಯಂ, ವಿಟಮಿನ್ ಸಿ, ವಿಟಮಿನ್ B6 ಹಾಗೂ ಕರಗುವ ನಾರು ಇದೆ. ಇದರ ಹೊರತಾಗಿ ಚಿಕ್ಕ ಪ್ರಮಾಣದಲ್ಲಿ ಪೊಟ್ಯಾಶಿಯಂ, ಗಂಧಕ, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ B1 ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ
ಬೆಳ್ಳುಳ್ಳಿಯಲ್ಲಿ ಅಜೋವೀನ್ (ajoene) ಎಂಬ ಪೋಷಕಾಂಶವಿದೆ. ಈ ಪೋಷಕಾಂಶ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಕ್ಷಮತೆ ಹೊಂದಿದೆ. ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುತ್ತ ಬಂದರೆ ದೇಹದಲ್ಲಿ ಉತ್ತಮ ಪ್ರಮಾಣದ ರಕ್ಷಣೆ ದೊರೆಕುತ್ತದೆ.

ಹೃದಯವನ್ನು ರಕ್ಷಿಸುತ್ತದೆ
ಪ್ರತಿದಿನ ಊಟದಲ್ಲಿ ಕೆಲವು ಎಸಳು ಬೆಳ್ಳುಳ್ಳಿ ಸೇವಿಸುವ ಮೂಲಕ ರಕ್ತನಾಳಗಳು ಸಡಿಲಗೊಳ್ಳುತ್ತವೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ಇವೆರಡೂ ಹೃದಯದ ಆರೋಗ್ಯ ಹೆಚ್ಚಿಸಲು ನೆರವಾಗುತ್ತವೆ.

ಹೀಗೆ ಅನೇಕ ಔಷಧೀಯ ಗುಣ ಹೊಂದಿರುವ ಬೆಳ್ಳುಳ್ಳಿ ಅಮೃತಕ್ಕೆ ಸಮಾನ .


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ