ಔಷಧೀಯ ಗುಣ ಹೊಂದಿರೋ “ಮಾಡ ಹಾಗಲ ಕಾಯಿ” ಬಗ್ಗೆ ಗೊತ್ತಾ?

ಶ್ರೀರಾಮ್ ನಾಯಕ್, Aug 29, 2019, 7:30 PM IST

ನೀವು ಹಾಗಲಕಾಯಿಯ ಹೆಸರನ್ನು ಕೇಳಿರಬಹುದು. ಆದರೆ ಮಾಡ ಹಾಗಲ ಕಾಯಿಯ ಹೆಸರನ್ನು ಕೇಳಿದ್ದೀರಾ ! ನಿಮಗೆ ಮಾಡ ಹಾಗಲ ಕಾಯಿಯ ಬಗ್ಗೆ ಏನಾದರೂ ಮಾಹಿತಿ ಗೊತ್ತಾ ? ಒಂದು ವೇಳೆ ಗೊತ್ತಿಲ್ಲ ವೆಂದರೆ ಇದೊಂದು ಹಾಗಲಕಾಯಿ ಜಾತಿಗೆ ಸೇರಿದ ತರಕಾರಿ.

ಇದು ಪಶ್ವಿಮ ಘಟ್ಟ ಕಾಡುಗಳ ಫಲವತ್ತಾದ ಮಣ್ಣಿನಲ್ಲಿ ಗಡ್ಡೆಯಿಂದ ಬೆಳೆದು ಬಳ್ಳಿಯಾಗಿ ಕಾಯಿ ಬಿಡುವ ಒಂದು ಸಸ್ಯ.

ಮಾಡ ಹಾಗಲ ಕಾಯಿಯನ್ನು ಕಾಡು ಹಾಗಲ, ಕಾಡು ಕಂಚಲ,ಮೂಡ ಹಾಗಲ ಹಾಗೂ ಗೌಡ ಸಾರಸ್ವತರು ಪಾಗಿಳವೆಂದು ಕರೆಯುತ್ತಾರೆ. ಮಾಡ ಹಾಗಲ ನೋಡಲು ಹಾಗಲಕಾಯಿ ತರಹವೇ ಇರುತ್ತದೆ. ಆದರೆ ಇದು ಕಹಿ ಇರುವುದಿಲ್ಲ ನೋಡಲು ಗುಂಡಾಗಿ ಅದರ ಮೇಲೆ ಚಿಕ್ಕ ಚಿಕ್ಕ ಮುಳ್ಳಿನಂತೆ ಇರುತ್ತದೆ.

ಆರೋಗ್ಯಕ್ಕೆ ಉತ್ತಮ:
ಮಾಡ ಹಾಗಲ ಕಾಯಿ ಆರೋಗ್ಯಕ್ಕೆ ಉತ್ತಮ ಔಷಧಿ. ಮಾಡ ಹಾಗಲದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಮಾಡ ಹಾಗಲ ಕಾಯಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮೂತ್ರ ಪಿಂಡ ಸಮಸ್ಯೆಯಿಂದ ಬಳಲುವವರು ಮೂಡ ಹಾಗಲಕಾಯಿಯನ್ನು ತಿಂದರೆ ಒಳ್ಳೆಯದು.

ಮಾರುಕಟ್ಟೆಯಲ್ಲಿ ಮಾಡ ಹಾಗಲ ಕಾಯಿ ಮುಂಚೂಣಿ:
ಹಬ್ಬದ ಸಮಯದಲ್ಲಿ ಮಾಡ ಹಾಗಲಕಾಯಿಯ ಬೆಲೆ ಕಿ.ಲೋಗೆ 120 ರಿಂದ 190ರೂ. ವರೆಗೂ ದಾಟುತ್ತದೆ. ಆದರೆ ಹಬ್ಬದ ಸಂದರ್ಭ ಹೊರತು ಪಡಿಸಿ ಬೇರೆ ದಿನಗಳಲ್ಲಿ ಕಿ.ಲೋಗೆ 70 ರಿಂದ 90ರೂ. ವರೆಗೆ ದರ ಇರುತ್ತದೆ.

ಅಡುಗೆಗೂ ಸೈ:
ಮಾಡ ಹಾಗಲಕಾಯಿಂದ ರುಚಿ ರುಚಿಯಾದ ಪಲ್ಯ, ಪದಾರ್ಥ ಹಾಗೂ ತಿಂಡಿ ತಿನಿಸುಗಳನ್ನು ಮಾಡಬಹುದು. ಕಡ್ಲೆ ಹಿಟ್ಟು/ಅಕ್ಕಿ ಹಿಟ್ಟಿನಿಂದ ಕರಿದ ಪೋಡಿ, ಫ್ರೈ ರುಚಿ ತಿಂದವರೇ ಬಲ್ಲರು. ಹಾಗಿದ್ದರೆ ಮಾಡ ಹಾಗಲ ಕಾಯಿಯಿಂದ ಪೋಡಿ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ..

ಬೇಕಾಗುವ ಸಾಮಾಗ್ರಿಗಳು:
1.ಮಾಡ ಹಾಗಲಕಾಯಿ 5 ರಿಂದ 7
2.ಮೆಣಸಿನ ಪುಡಿ 2 ಚಮಚ
3.ಕಡ್ಲೆ ಹಿಟ್ಟು 2 ಕಪ್
4. ಹಿಂಗಿನ ನೀರು ಸ್ವಲ್ಪ
5. ಕಾಯಿಸಲಿಕ್ಕೆ ಎಣ್ಣೆ
ರುಚಿಗೆ ಉಪ್ಪು.

ಮಾಡುವ ವಿಧಾನ:

ಮಾಡ ಹಾಗಲಕಾಯಿಯನ್ನು ದುಂಡಗೆ ಚಕ್ರದಂತೆ ಹೆಚ್ಚಿ. ಒಂದು ಪಾತ್ರೆಗೆ ಹಾಕಿ. ಸ್ವಲ್ಪ ಉಪ್ಪು ಹಾಕಿ 5 ನಿಮಿಷದವರೆಗೆ ಇಡಿ. ಒಂದು ಪಾತ್ರೆಗೆ ನೀರನ್ನು ಹಾಕಿ ಸ್ವಲ್ಪ ಹಿಂಗು, ಮೆಣಸಿನ ಪುಡಿ, ಉಪ್ಪು, ಕಡ್ಲೆ ಹಿಟ್ಟನ್ನು ಕಲಸಿರಿ. ನಂತರ ಕಾದ ಎಣ್ಣೆಯಲ್ಲಿ ಒಂದೊಂದೇ ಪೋಡಿಯನ್ನು ಹಾಕಿ ಕರಿಯಿರಿ. (ಅಕ್ಕಿ ಹಿಟ್ಟಿನಿಂದಲೂ ಪೋಡಿ ಮಾಡಬಹುದು). ರುಚಿ ರುಚಿಯಾದ ಮಾಡ ಹಾಗಲಕಾಯಿಯ ಪೋಡಿ ಸವಿಯಿರಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಯಾದಗಿರಿ: ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಷನ್‌ ರಸ್ತೆ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಎರಡು ದಿನಗಳವರೆಗೆ...

  • ಕೋಲಾರ: ನಗರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕೈಷಿ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನ ನೋಡಿಗರ ಕಣ್ಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ...

  • ಮಸ್ಕಿ: ಮನುಷ್ಯನಿಗೆ ಆರೋಗ್ಯವೇ ಸಂಪತ್ತು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು. ಪಟ್ಟಣದ...

  • ಕೊಲ್ಹಾರ: ಇಂದಿನ ದಿನಮಾನಗಳಲ್ಲಿ ಯುವಕರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಭಕ್ತಿಮಾರ್ಗವನ್ನು ರೂಢಿಸಿಕೊಂಡು ಅಧ್ಯಾತ್ಮದ ಒಲವಿನಿಂದ ಧರ್ಮದ ದಾರಿಯಲ್ಲಿ...

  • ಹಳೇಬೀಡು: ಫೆ.1ರಿಂದ 9ರವರಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹಳೇಬೀಡು ಭರದ ಸಿದ್ಧತೆ ನಡೆಯುತ್ತಿದೆ. ಹಳೇಬೀಡು ಸಮೀಪದ ಮಾಯಗೊಂಡನಹಳ್ಳಿ ವಿಶಾಲ...