Udayavni Special

ಬಾಕ್ಸಿಂಗ್ ಡೇ ಇತಿಹಾಸ ರೋಚಕ !


Team Udayavani, Dec 28, 2018, 4:46 PM IST

box.jpg

ಬಾಕ್ಸಿಂಗ್ ಡೇ ಕ್ರಿಕೆಟ್? ಕ್ರಿಕೆಟ್ ಪಂದ್ಯಕ್ಕೆ ಬಾಕ್ಸಿಂಗ್ ಹೆಸರು ಯಾಕೆ ಬಂತು ಎನ್ನುವ ಪ್ರಶ್ನೆ ಹಲವರದ್ದು. ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ನಡೆಯುವ ಬಾಕ್ಸಿಂಗ್ ಡೇ ಪಂದ್ಯದ ಹಿಂದಿನ ಇತಿಹಾಸವೇನು ? ಇಲ್ಲಿದೆ ಉತ್ತರ. 

ಬಾಕ್ಸಿಂಗ್ ಡೇ ಅಂದರೆ ಕ್ರಿಸ್ಮಸ್ ನ ಮರುದಿನ ಅಂದರೆ ಡಿಸೆಂಬರ್ 26. ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್ ಮುಂತಾದ ಕಾಮನ್ ವೆಲ್ತ್ ಆಡಳಿತಕ್ಕೆ ಒಳಪಟ್ಟಿದ್ದ ದೇಶಗಳಲ್ಲಿ ಬಾಕ್ಸಿಂಗ್ ಡೇ ಎಂದರೆ ರಜೆಯ ದಿನ. ಐರ್ಲೆಂಡ್ ನಲ್ಲಿ ಇದನ್ನು ಸೇಂಟ್ ಸ್ಟಿಫನ್ಸ ಡೇ ಎಂದೂ ಗುರುತಿಸಲಾಗುತ್ತದೆ. ಈ ದಿನ ಹಲವಾರು ಕ್ರೀಡೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡುವ ಸಂಪ್ರದಾಯ ಹಲವು ರಾಷ್ಟ್ರಗಳಲ್ಲಿತ್ತು. 

ಪ್ರತಿವರ್ಷ  ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯಾಟ ನಡೆಯುವುದು ಮೆಲ್ಬೋರ್ನ್ ನಲ್ಲಿ. ಕ್ರಿಸ್ಮಸ್  ಹಬ್ಬಕ್ಕೆ ಬಂದ ಉಡುಗೊರೆ ಬಾಕ್ಸ್ ಗಳನ್ನು ತೆರೆಯುವ  ದಿನ ಆರಂಭವಾಗುವ ಪಂದ್ಯಾಟಕ್ಕೆ ಬಾಕ್ಸಿಂಗ್ ಡೇ ಎಂದು ಹೆಸರು. 
 
ಶತಮಾನದ ಹಿಂದೆ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಪಂದ್ಯವನ್ನು ಕ್ರಿಸ್ಮಸ್ ಸಮಯದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಆಟಗಾರರು ಕ್ರಿಸ್ಮಸ್ ಹಬ್ಬವನ್ನು ಆ ಪಂದ್ಯದಿಂದಾಗಿ ತಪ್ಪಿಸಿಕೊಂಡಿದ್ದರು.  1950-51 ಆಶಸ್ ಸರಣಿಯನ್ನು ಡಿಸೆಂಬರ್ 22ರಿಂದ 27ರ ವರೆಗೆ ನಡೆದಿತ್ತು. ಈ ಪಂದ್ಯಾವನ್ನು ಕೂಡ ಬಾಕ್ಸಿಂಗ್ ಡೇ ಎಂದೇ ಕರೆಯುತ್ತಿದ್ದರು.

ಆದರೆ 1953 ರಿಂದ 1967 ರವರೆಗೆ ಮೆಲ್ಬೋರ್ನ್ ನಲ್ಲಿ ಯಾವುದೇ ಬಾಕ್ಸಿಂಗ್ ಡೇ ಪಂದ್ಯಗಳು ನಡೆಯಲಿಲ್ಲ. 1974ರಿಂದ ಡಿಸೆಂಬರ್ 26ರಂದು ಆರಂಭವಾಗುವಂತೆ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗುತ್ತದೆ. ಪ್ರತಿಯೊಂದು ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯಗಳು ಮೆಲ್ಬೋರ್ನ್ ಕ್ರೀಡಾಂಗಣದಲ್ಲೇ ನಡೆಯುವುದು ವಿಶೇಷ. ಮತ್ತು ಪ್ರತಿ ಸಲವೂ ಇದರಲ್ಲಿ ಆಸ್ಟ್ರೇಲಿಯಾ ಭಾಗವಸುತ್ತದೆ. 

ಇಷ್ಟರವರೆಗೆ ಒಟ್ಟು 43 ಟೆಸ್ಟ್ ಪಂದ್ಯಗಳು ಬಾಕ್ಸಿಂಗ್ ಡೇ ಪಂದ್ಯಗಳನ್ನು ನಡೆದಿವೆ. ಪ್ರಸ್ತುತ ಭಾರತ ವಿರುದ್ಧ ನಡೆಯುವ ಪಂದ್ಯಾಟ 44 ಟೆಸ್ಟ್ ಪಂದ್ಯ. 1950ರಲ್ಲಿ ಮೊದಲ ಪಂದ್ಯ ನಡೆದಿತ್ತು.  ಇಂಗ್ಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 28 ರನ್ ಗಳ ಅಂತರದಿಂದ ವಿಜಯಿಯಾಗಿತ್ತು.  ಇಷ್ಟರವರೆಗೆ ಒಟ್ಟು9  ಪಂದ್ಯಗಳು ಡ್ರಾ ಆಗಿದ್ದರೆ 24 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು ಬೀಗಿದೆ.  

ಭಾರತ ತಂಡ ಮೊದಲ ಸಲ ಬಾಕ್ಸಿಂಗ್ ಡೇ ಕಣಕ್ಕಿಳಿದದ್ದು1985ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಅಂದಿನಿಂದ ಭಾರತ ತಂಡ 2014ರವೆರೆಗೆ ಒಟ್ಟು 7 ಮೆಲ್ಬೋರ್ನ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿದ್ದು, ಗೆಲುವು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.  


ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತವಾದ ಬಾಕ್ಸಿಂಗ್ ಡೇ ಏಕೈಕ ಏಕದಿನ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇದು ನಡೆದದ್ದು 1989ರಲ್ಲಿ. ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯಾವಳಿಯಲ್ಲಿ ಸೆಣಸಾಡಿತ್ತು. ಅಂತಿವಾಗಿ ಆತಿಥೇಯ ಆಸ್ಟ್ರೇಲಿಯಾ 30 ರನ್ ಗಳಿಂದ ವಿಜಯಿಯಾಗಿತ್ತು. 

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

rwytju11111111111

ಬುಧವಾರದ ರಾಶಿಫಲ : ಹೇಗಿದೆ ನಿಮ್ಮ ಗ್ರಹಬಲ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?

1-t

ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

Athletics star Simi story

ಬರಿಗಾಲಿನಲ್ಲಿ ಓಡಲಾರಂಭಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥ್ಲೆಟಿಕ್ಸ್‌ ತಾರೆ ʼಸಿಮಿʼ ಪಯಣ

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

why india struggling against new zealand in icc tournaments

ಟೀಂ ಇಂಡಿಯಾಗೆ ಕೇನ್ ಬಳಗ ಕಬ್ಬಿಣದ ಕಡಲೆಯಾಗುತ್ತಿರುವುದ್ಯಾಕೆ?

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.