- Saturday 07 Dec 2019
ಪ್ರತಿಷ್ಠಿತ ದುಬಾರಿ ಕಾರು ಲ್ಯಾಂಬೋರ್ಗಿನಿ ನಿರ್ಮಾಣದ ಹಿಂದಿದೆ ಛಲದ ಕಹಾನಿ
ಮಿಥುನ್ ಪಿಜಿ, Nov 12, 2019, 6:00 PM IST
ದುಬಾರಿ ಹಾಗೂ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಲ್ಯಾಂಬೋರ್ಗಿನಿಗೆ ಮೊದಲ ಸ್ಥಾನ. ಇದರ ಪರ್ಫಾಮೆನ್ಸ್, ಲುಕ್, ಎಂಜಿನ್ ಗೆ ಸರಿಸಾಟಿ ಇಲ್ಲ. ಆದ ಕಾರಣ ಈ ಕಾರು ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿದೆ. ಈ ಸಂಸ್ಥೆಯ ಹೊಸ ಕಾರು ಬಿಡುಗಡೆಯಾದರೇ ಅದು ವಿಶ್ವದಾದ್ಯಂತ ಕ್ಷಣ ಮಾತ್ರದಲ್ಲಿ ಜನಪ್ರಿಯವಾಗುತ್ತದೆ. ಎಷ್ಟೋ ಹಣವಂತರು ಈ ಕಾರನ್ನು ಖರೀದಿ ಮಾಡಲು ಮುಗಿಬೀಳುತ್ತಾರೆ. ಈ ಕಾರಿನ ಡಿಸೈನ್ ಮತ್ತು ಫೀಚರ್ ಗಳನ್ನು ನೋಡಿ ಮೂಕವಿಸ್ಮಿತರಾದವರು ಹಲವರು. ಆಟೋಮೊಬೈಲ್ ಕ್ಷೇತ್ರದಲ್ಲಿ ಈ ಲ್ಯಾಂಬೋರ್ಗಿನಿ ವಿಶಿಷ್ಟ ಛಾಪು ಮೂಡಿಸಿದೆ. ಇದರ ಬೆಲೆಯೇ ಕೋಟಿಗಟ್ಟಲೇ ಇರುವುದರಿಂದ ಸಿರಿವಂತರು ಮಾತ್ರ ಇದನ್ನು ಖರೀದಿಸುತ್ತಾರೆ. ಮಾತ್ರವಲ್ಲದೆ ಈ ಕಾರು ಕೊಂಡರೆ ಪ್ರತಿಷ್ಟೆ ಹೆಚ್ಚಾಗುತ್ತದೆ ಎಂದು ಭಾವಿಸುವವರೂ ಇದ್ದಾರೆ. ಈ ದುಬಾರಿ ಕಾರಿನ ಹಿನ್ನಲೆಯೇ ಒಂದು ರೋಚಕ.
ಲ್ಯಾಂಬೋರ್ಗಿನಿ ಸಂಸ್ಥೆ ಆರಂಭವಾದದ್ದು 1963ರಲ್ಲಿ. ಫೆರೊಶಿಯಾ ಲ್ಯಾಂಬೋರ್ಗಿನಿ ಎನ್ನುವವರು ಇದನ್ನು ಆರಂಭ ಮಾಡುತ್ತಾರೆ. ಫೆರೊಶಿಯಾ ಇಟಲಿಯ ರೆನಾಜೋ ಎಂಬ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ 1916ರಲ್ಲಿ ಜನಿಸಿದ್ದರು. ಇವರ ತಂದೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದರು. ಫೆರೊಶಿಯಾ ಲ್ಯಾಂಬೋರ್ಗಿನಿ ಚಿಕ್ಕ ವಯಸ್ಸಿನಿಂದಲೂ ಎಂಜಿನ್ ಗಳತ್ತ ಮತ್ತು ಮೆಕ್ಯಾನಿಸಮ್ ನತ್ತ ಹೆಚ್ಚು ಆಕರ್ಷಿತನಾಗಿದ್ದ. ಅದೇ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿ ತದನಂತರ ಇಟಲಿಯ ರಾಯ್ ಏರ್ ಪೋರ್ಸ್ ನಲ್ಲಿ ಕೆಲಸ ಮಾಡುತ್ತಾನೆ. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿ, ಯುದ್ಧ ಮುಗಿದ ನಂತರ ಸಣ್ಣ ಗ್ಯಾರೆಜ್ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದ.
ಇದೇ ವೇಳೆ ಒಂದು ಉತ್ತಮ ಕಾರನ್ನು ಕೊಂಡುಕೊಂಡು ಅದನ್ನು ರೂಪಾಂತರ ಮಾಡಿಕೊಂಡು ಚಲಾಯಿಸುತ್ತಿದ್ದರು. ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅಲ್ಲಿದ್ದ ಹಳೆ ಇಂಜಿನ್ ಗಳನ್ನು ತೆಗೆದುಕೊಂಡು ಟ್ರ್ಯಾಕ್ಟರ್ ಗಳನ್ನು ಉತ್ಪಾದಿಸುವ ಕೆಲಸ ಆರಂಭಿಸಿದರು. ಆಗಷ್ಟೆ ಯುದ್ಧ ಮುಗಿದು ಜನರು ಕೃಷಿಯತ್ತ ಗಮನ ಹರಿಸಿದ್ದರಿಂದ ಇದು ಬಹಳ ಬೇಡಿಕೆ ಪಡೆಯಿತು. 1946 ರಲ್ಲಿ ಲ್ಯಾಂಬೋರ್ಗಿನಿ ಟ್ರ್ಯಾಕ್ಟರ್ ಎಂಬ ಕಂಪೆನಿಯನ್ನು ಆರಂಭಿಸುತ್ತಾರೆ. ಇಟಲಿಯ ಬಹಳ ದೊಡ್ಡ ಟ್ರ್ಯಾಕ್ಟರ್ ಕಂಪೆನಿಗಳಲ್ಲಿ ಇದು ಕೂಡ ಒಂದಾಗಿ ಬೆಳೆಯುತ್ತದೆ ಮಾತ್ರವಲ್ಲದೆ ಆದಾಯ ಕೂಡ ದ್ವಿಗುಣಗೊಂಡಿತು.
ನಂತರದ ದಿನಗಳಲ್ಲಿ ಯಾವುದಾದರೂ ಸ್ಪೋರ್ಟ್ಸ್ ಕಾರನ್ನು ಕೊಳ್ಳಬೇಕೆಂದು ಆಲೋಚಿಸಿದ ಫೆರೊಶಿಯಾ, ಫೆರಾರಿ 250 ಯನ್ನು ಖರೀದಿ ಮಾಡುತ್ತಾರೆ. ಆದರೇ ಕೆಲವೇ ತಾಸಿನಲ್ಲಿ ಕಾರಿನ ಕ್ಲಚ್ ಸರಿಯಿಲ್ಲ ಎಂದು ತಿಳಿದು ಬರುತ್ತದೆ. ಆಗ ಫೆರಾರಿ ಸಂಸ್ಥೆಯ ಸಂಸ್ಥಾಪಕ ಆ್ಯಂಜೋ ಫೆರಾರಿ ಬಳಿ ತನ್ನ ಸಮಸ್ಯೆ ಹೇಳಿದಾಗ “ನೀವೆಲ್ಲಾ ಟ್ರ್ಯಾಕ್ಟರ್ ಅನ್ನು ಓಡಿಸಲು ಮಾತ್ರ ಲಾಯಕ್ಕು, ಫೆರಾರಿಯಂತಹ ಸೂಪರ್ ಕಾರನ್ನು ಓಡಿಸಲು ಯೋಗ್ಯತೆಯಿಲ್ಲಾ” ಎಂಬಂತೆ ಅವಮಾನ ಮಾಡುತ್ತಾರೆ.
ಇದರಿಂದ ತಾನೇ ಒಂದು ಕಾರು ಉತ್ಪಾದನೆ ಮಾಡಿ ಫೆರಾರಿಗೆ ಬುದ್ದಿ ಕಲಿಸಬೇಕೆಂದು ಯೋಚಿಸಿದ ಫೆರೊಶಿಯಾ, ಇಟಲಿಯ ಸೆಂಟ್ ಅಗಾಟ ಎಂಬಲ್ಲಿ ಲ್ಯಾಂಬೋರ್ಗಿನಿ ಆಟೋಮೊಬೈಲ್ ಎಂಬ ಕಾರ್ಖಾನೆಯನ್ನು ಆರಂಭಿಸುತ್ತಾರೆ. ಅದಕ್ಕೆ ಫೆರಾರಿ ಕಂಪೆನಿಯ ಹಳೆಯ ಉದ್ಯೋಗಿಗಳನ್ನು ಸೇರಿಸಿಕೊಂಡು ಕಾರಿನ ಉತ್ಪಾದನೆಯನ್ನು ಆರಂಭಿಸಿದರು. ಹೀಗೆ ಲ್ಯಾಂಬೋರ್ಗಿನಿಯ ಮೊದಲ ಕಾರು ಲ್ಯಾಂಬೋರ್ಗಿನಿ 350 ಜಿಟಿ 1964ರಲ್ಲಿ ಬಿಡುಗಡೆಯಾಗುತ್ತದೆ. ಆದರೇ ಲ್ಯಾಂಬೋರ್ಗಿನಿ ಸಂಸ್ಥೆಗೆ ಹೆಸರು ತಂದುಕೊಟ್ಟಿದ್ದು 1966ರಲ್ಲಿ ಬಿಡುಗಡೆಯಾದ ಲ್ಯಾಂಬೋರ್ಗಿನಿ ಮ್ಯೂರಾ ಸ್ಪೋರ್ಟ್ಸ್ ಕಾರ್. ಈ ಕಾರಿನ ಹೈ ಪರ್ಫಾಮೆನ್ಸ್, ಲುಕ್ಸ್, ವಿಶೇಷ ತಂತ್ರಜ್ಙಾನಗಳಿಂದ ಇದು ಗ್ರಾಹಕರ ಮನಗೆಲ್ಲಲು ಯಶಸ್ವಿಯಾಯಿತು. ಈ ಮೂಲಕ ಫೆರೊಶಿಯಾ ಲ್ಯಾಂಬೋರ್ಗಿನಿ ಜಗತ್ಪ್ರಸಿದ್ಧರಾದರು.
ಆ ಬಳಿಕ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರು, ಲ್ಯಾಂಬೋರ್ಗಿನಿ ಹುರಾಕಾನ EVO ಸ್ಪೈಡರ್ ಸೂಪರ್ ಕಾರ್. ಲ್ಯಾಂಬೋರ್ಗಿನಿ ಉರುಸ್ ಕಾರುಗಳು ವಿಭಿನ್ನ ಶೈಲಿಯಲ್ಲಿ ಬಿಡುಗಡೆಯಾದವು. ವಿಶೇಷ ಎಂದರೇ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರನ್ನು ಮೊದಲು ಖರೀದಿಸಿದ ಹೆಗ್ಗಳಿಕೆ ಬೆಂಗಳೂರಿಗೆ ಸಲ್ಲುತ್ತದೆ.
ಆ ಮೂಲಕ ಫೆರೊಶಿಯಾ ಲ್ಯಾಂಬೋರ್ಗಿನಿ, ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದರು. ಅಂದು ಅವಮಾನವನ್ನೇ ಸವಾಲಾಗಿ ಸ್ವೀಕರಿಸದಿದ್ದರೇ ಇಂದು ಲ್ಯಾಂಬೋರ್ಗಿನಿ ಕಾರು ಇರುತ್ತಿರಲಿಲ್ಲ. ಅವಮಾನದಿಂದಲೇ ಸನ್ಮಾನ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.
ಮಿಥುನ್ ಮೊಗೇರ
ಈ ವಿಭಾಗದಿಂದ ಇನ್ನಷ್ಟು
-
ಒಗ್ಗರಣೆ ಅಥವಾ ಆಹಾರದ ಪರಿಮಳ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು...
-
ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ...
-
ಜೀವನ ಹಾಗೆಯೇ ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು ಕೊನೆಗೆ ನಾವು ಮಾಡೋದೇ ಬೇರೊಂದು. ಕೆಲ ವ್ಯಕ್ತಿಗಳಿಗೆ ತಾನು ಕಲಿತ ಕ್ಷೇತ್ರದಲ್ಲಿ ಏನಾದರೂ...
-
ಸ್ಮಾರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು...
-
ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಈ ಅತ್ಯುನ್ನತ...
ಹೊಸ ಸೇರ್ಪಡೆ
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
-
ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನ ಸಹಿತ ಇತರೇ ನಾಲವರು ದುಷ್ಕರ್ಮಿಗಳಿಂದ ಗುರುವಾರದಂದು ಹಲ್ಲೆಗೊಳಗಾಗಿ ಬಳಿಕ ಬೆಂಕಿ ಹಚ್ಚಲ್ಪಟ್ಟಿದ್ದ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...