Udayavni Special

ಏನಿದು ಪಿಂಕ್ ಬಾಲ್ ಟೆಸ್ಟ್‌ : ಭಾರತದಲ್ಲಿ ಬಳಸಲು ಭಯವೇಕೆ? 


ಕೀರ್ತನ್ ಶೆಟ್ಟಿ ಬೋಳ, Nov 11, 2019, 4:50 PM IST

pink-ball

ಕಳೆದ ಕೆಲ ದಿನಗಳಿಂದ ಭಾರತ ತಂಡದಲ್ಲಿ ಬದಲಾವಣೆಯ ಪರ್ವ ನಡೆಯುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ನಂತರ ಹಲವಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅದರಲ್ಲೊಂದು ಪಿಂಕ್ ಬಾಲ್ ಟೆಸ್ಟ್‌ .

ಸಾಮಾನ್ಯವಾಗಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಕೆಂಪು ಬಣ್ಣದ ಬಾಲ್ ಗಳನ್ನು ಬಳಸಿದರೆ, ನಿಗದಿತ ಓವರ್ ಕ್ರಿಕೆಟ್ ನಲ್ಲಿ ಬಿಳಿ ಬಣ್ಣದ ಚೆಂಡನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಎರಡು.  ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಬಿಳಿ ಬಣ್ಣದ ಸಮವಸ್ತ್ರ ಧರಿಸುವುದರಿಂದ ಬಿಳಿ ಬಣ್ಣದ ಚೆಂಡು ಬಳಸಿದರೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಕೆಂಪು ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ಅದೇ ರೀತಿ ಏಕದಿನ ಪಂದ್ಯದಲ್ಲಿ ಆಟಗಾರರು ಬಣ್ಣದ ಸಮವಸ್ತ್ರ ಧರಿಸುವ ಕಾರಣಕ್ಕೆ ಬಿಳಿ ಚೆಂಡು ಬಳಸಲಾಗುತ್ತಿದೆ. ಕೆಂಪು ಬಣ್ಣದ ಚೆಂಡಿನ ಸೀಮ್ ಸುಮಾರು 80 ಓವರ್ ಹಾಳಾಗದೇ ಉಳಿಯಬಲ್ಲದು. ಆದರೆ ಬಿಳಿ ಚೆಂಡಿನ ಸೀಮ್ ಬೇಗನೆ ಹಾಳಾಗಿ ಹೋಗುತ್ತದೆ.

ಯಾಕೆ ಗುಲಾಬಿ ಬಣ್ಣದ ಚೆಂಡು ? 

ಕ್ರಿಕೆಟ್ ನಲ್ಲಿ ಗುಲಾಬಿ ಬಣ್ಣದ ಚೆಂಡಿನ ಬಳಕೆ ಇದೇ ಮೊದಲೇನಲ್ಲ. ಈ ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದುಬೈನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತದಲ್ಲೂ ಬೆರಳೆಣಿಕೆಯ ಪಿಂಕ್ ಬಾಲ್ ಮ್ಯಾಚ್ ನಡೆದಿವೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟೆಸ್ಟ್ ಕ್ರಿಕೆಟ್ ನ ಹಗಲು- ರಾತ್ರಿ ಪಂದ್ಯದಲ್ಲಿ ಮಾತ್ರ ಪಿಂಕ್ ಬಾಲ್ ಬಳಸಲಾಗುತ್ತದೆ. ಟೆಸ್ಟ್‌ ಪಂದ್ಯದಲ್ಲಿ ಬಳಸುವ ಕೆಂಪು ಬಣ್ಣದ ಚೆಂಡು ರಾತ್ರಿ ಸರಿಯಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಪಿಂಕ್ ಚೆಂಡಿನೊಂದಿಗೆ ಆಡಲಾಗುತ್ತದೆ.

ಮೊದಲು ಪಿಂಕ್ ಬಾಲ್ ಗಳಿಗೆ ಬಿಳಿ ಬಣ್ಣದ ನೂಲಿನಿಂದ ಹೊಲಿಯಲಾಗುತ್ತಿತ್ತು. (ಸೀಮ್) ಆದರೆ ಮೊದಲ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಬಿಳಿ ನೂಲು ಸರಿಯಾಗಿ ಕಾಣುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಐಸಿಸಿ ಬಿಳಿ ನೂಲಿನ ಬದಲು ಕಪ್ಪು ನೂಲಿನ ಮೊರೆ ಹೋಯಿತು. ( ಚೆಂಡಿನ್ನು ಸ್ವಿಂಗ್ ಮಾಡಲು ಸೀಮ್ ಅತೀ ಮುಖ್ಯ)

ಭಾರತದಲ್ಲಿ ಪಿಂಕ್ ಬಾಲ್ 
ಭಾರತದಲ್ಲಿ ಈ ಮೊದಲು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಉಪಯೋಗಿಸಲಾಗಿತ್ತು. ಬೆಂಗಾಲ್ ಸೂಪರ್ ಲೀಗ್ ನಲ್ಲೂ ಬಳಸಲಾಗಿತ್ತು. ( ಸೌರವ್ ಗಂಗೂಲಿ ಬೆಂಗಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಸಮಯ ) ಸದ್ಯ ಭಾರತ ತಂಡದಲ್ಲಿರುವ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ ಮಾತ್ರ ಪಿಂಕ್ ಬಾಲ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಇದುವರೆಗೆ ಒಟ್ಟು 11 ಡೇ ನೈಟ್ ಪಂದ್ಯಗಳು ನಡೆದಿದ್ದು, ಅವೆಲ್ಲಾ ಆಯಾ ದೇಶದ ಬೇಸಿಗೆ ಕಾಲದಲ್ಲಿ ನಡೆದಿದೆ. ಆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ  ನಡೆಯುತ್ತಿರುವ ಈ  ಪಂದ್ಯ ಮೊದಲ ಚಳಿಗಾಲದ ಡೇ ನೈಟ್ ಪಂದ್ಯ ಎನ್ನುವುದು ವಿಶೇಷ.

ಇಬ್ಬನಿ ತಬ್ಬಿದರೆ?

ನೀವು ಹಗಲು ರಾತ್ರಿ ಏಕದಿನ ಪಂದ್ಯದಲ್ಲಿ ಗಮನಿಸಿರಬಹುದು. ಬೌಲರ್ ಗಳು ಆಗಾಗ ತಮ್ಮ ಕರವಸ್ತ್ರದಿಂದ ಚೆಂಡನ್ನು ಒರೆಸುತ್ತಿರುತ್ತಾರೆ. ಇದಕ್ಕೆ ಕಾರಣ ರಾತ್ರಿ ಪಾಳಿಯಲ್ಲಿ ಬೀಳುವ ಇಬ್ಬನಿ. ಇದು ಬೌಲರ್ ಗಳ ಪಾಲಿಗೆ ಶಾಪವಿದ್ದಂತೆ. ಇಬ್ಬನಿಯಿಂದ ಒದ್ದೆಯಾದ ಚೆಂಡನ್ನು ಬಿಗಿಯಾಗಿ ಹಿಡಿಯಲಾಗುವುದಿಲ್ಲ. ಸರಿಯಾಗಿ ಸ್ಪಿನ್‌ ಮಾಡಲು ಕಷ್ಟ . ಕೈಯಿಂದ ಜಾರುತ್ತದೆ. ಚೆಂಡು ಕೂಡ ಬೇಗನೆ ಹಾಳಾಗುತ್ತದೆ. ಚಳಿಗಾಲದಲ್ಲಿ ಇಬ್ಬನಿ ಜಾಸ್ತಿ ಬೀಳುವುದರಿಂದ ಹಗಲು ರಾತ್ರಿಯ ಪಂದ್ಯದಲ್ಲಿ ಚೆಂಡನ್ನು 80 ಓವರ್ ಸರಿಯಾದ ಆಕಾರದಲ್ಲಿ ಕಾಪಾಡುವುದು ಕೂಡಾ ಸವಾಲಿನ ಕೆಲಸವೇ ಸರಿ.

ಏನಿದು ಎಸ್ ಜಿ  ಬಾಲ್
ವಿಶ್ವದಾದ್ಯಂತ ಪ್ರಮುಖ ಮೂರು ಕ್ರಿಕೆಟ್ ಚೆಂಡು ತಯಾರಿಕಾ ಕಂಪನಿಗಳಿವೆ. ಡ್ಯೂಕ್, ಕುಕಬುರಾ ಮತ್ತು ಎಸ್ ಜಿ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ ನಲ್ಲಿ ಡ್ಸೂಕ್ಸ್ ಬಾಲ್ ಗಳನ್ನು ಬಳಸಿದರೆ, ಆಸ್ಟ್ರೇಲಿಯಾ , ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕುಕಬುರಾ ಚೆಂಡನ್ನು ಬಳಸಲಾಗುತ್ತದೆ. ಇನ್ನು ಭಾರತ ಮತ್ತು ಏಷ್ಯಾದ ದೇಶಗಳಲ್ಲಿ ಎಸ್ ಜಿ ಚೆಂಡಿನಲ್ಲಿ ನಿಗದಿತ ಓವರ್ ಮತ್ತು ಟೆಸ್ಟ್ ಕ್ರಿಕೆಟ್ ಆಡಲಾಗುತ್ತದೆ. ಆಯಾ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣವಿರುವ ಚೆಂಡನ್ನೇ ಇಲ್ಲಿ ಬಳಸಲಾಗುತ್ತದೆ.

ಇದುವರೆಗೆ ಎಸ್ ಜಿ ಪಿಂಕ್ ಚೆಂಡಿನಲ್ಲಿ ಟೆಸ್ಟ್ ಪಂದ್ಯ ನಡೆದಿಲ್ಲ. ದುಲೀಪ್ ಟ್ರೋಫಿಯಲ್ಲೂ ಕುಕಬುರಾ ಚೆಂಡನ್ನೇ ಬಳಸಲಾಗಿತ್ತು. ಆದರೆ ಈ ಬಾರಿ ಎಸ್ ಜಿ ಚೆಂಡಿನಿಂದ ಆಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಎಸ್ ಜಿ ಕೆಂಪು ಚೆಂಡನ್ನು ಬಳಸುವುದರ ಕಾರಣಕ್ಕೆ  ಹಗಲು ರಾತ್ರಿ ಪಂದ್ಯಕ್ಕೂ ಎಸ್ ಜಿ ಚೆಂಡನ್ನೇ ಬಳಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಟೆಸ್ಟ್ ಕ್ರಿಕೆಟ್ ನ ಗತ ವೈಭವ ಮರಳಿ ತರುವ ಪ್ರಯತ್ನಗಳಲ್ಲಿ ಒಂದಾಗಿರುವ ಡೇ ನೈಟ್ ಟೆಸ್ಟ್ ಗೆ ಭಾರತವೂ ಸಜ್ಜಾಗಿದೆ. ಸದ್ಯ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಹೇಗೆ ಈ ಹೊಸ ಮಾದರಿಗೆ ಹೊಂದಿಕೊಳ್ಳುತ್ತದೆ ಎಂದು ಕಾಲವೇ ಉತ್ತರಿಸಬೇಕು.

ಕೀರ್ತನ್ ಶೆಟ್ಟಿ ಬೋಳ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

savadi

ಕೋವಿಡ್-19 ಲಾಕ್ ಡೌನ್ ದಲ್ಲಿ ರಾಜ್ಯ ಸಾರಿಗೆಗೆ 2652 ಕೋಟಿ ರೂ. ನಷ್ಟ: ಡಿಸಿಎಂ ಸವದಿ

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಬೆಂಗಳೂರಿನಲ್ಲಿ ಭಾನುವಾರದ ಜೊತೆ ಶನಿವಾರವೂ ಲಾಕ್ ಡೌನ್ ಗೆ ಚಿಂತನೆ!

ಬೆಂಗಳೂರಿನಲ್ಲಿ ಭಾನುವಾರದ ಜೊತೆ ಶನಿವಾರವೂ ಲಾಕ್ ಡೌನ್ ಗೆ ಚಿಂತನೆ!

ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿಎಂ ಕಾರಜೋಳ

ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿಎಂ ಕಾರಜೋಳ

ಪುತ್ತೂರು: ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೇರಿ ಐದು ಮಂದಿಗೆ ಕೋವಿಡ್ ಸೋಂಕು ದೃಢ

ಪುತ್ತೂರು: ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೇರಿ ಐದು ಮಂದಿಗೆ ಕೋವಿಡ್ ಸೋಂಕು ದೃಢ

ಹನೂರು ಪಟ್ಟಣಕ್ಕೂ ಕಾಲಿಟ್ಟ ಕೋವಿಡ್ 19 ಸೋಂಕು: ಮಹಿಳೆಗೆ ಸೋಂಕು ದೃಢ

ಹನೂರು ಪಟ್ಟಣಕ್ಕೂ ಕಾಲಿಟ್ಟ ಕೋವಿಡ್ 19 ಸೋಂಕು: ಮಹಿಳೆಗೆ ಸೋಂಕು ದೃಢ

ಜು.13 ರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ

ಜು.13 ರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿ20 ವಿಶ್ವಕಪ್ ಗಿಂತಲೂ ಐಪಿಎಲ್ ಮುಖ್ಯ! ಕಾರಣವೇನು ಗೊತ್ತಾ?

ಟಿ20 ವಿಶ್ವಕಪ್ ಗಿಂತಲೂ ಐಪಿಎಲ್ ಮುಖ್ಯ! ಕಾರಣವೇನು ಗೊತ್ತಾ?

web-tdy-02

ಮಿಮ್ಸ್ ಗಳಲ್ಲಿ ವೈರಲ್ ಆಗಿರುವ ಇವರು ನೈಜಿರಿಯಾ ಸಿನಿಮಾ ರಂಗದ ಖ್ಯಾತ ಸೆಲೆಬ್ರೆಟಿಗಳು..!

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

web-tdy-1

ಶವ ಪೆಟ್ಟಿಗೆ ಹೊತ್ತು ಕುಣಿಯುವ ಈ ಗುಂಪಿನ ಹಿಂದೆ ಒಂದು ರೋಚಕ ಪಯಣದ ಕತೆಯಿದೆ..

ನಟನ ಸಾವಿನ ಸುದ್ದಿಯಿಂದ ಧೋನಿಗೆ ಆಘಾತ: ರೀಲ್‌ ಧೋನಿ ಜತೆಗೆ ರಿಯಲ್‌ ಧೋನಿ ಸ್ನೇಹ ಹೇಗಿತ್ತು?

ನಟನ ಸಾವಿನ ಸುದ್ದಿಯಿಂದ ಧೋನಿಗೆ ಆಘಾತ: ರೀಲ್‌ ಧೋನಿ ಜತೆಗೆ ರಿಯಲ್‌ ಧೋನಿ ಸ್ನೇಹ ಹೇಗಿತ್ತು?

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home


ಹೊಸ ಸೇರ್ಪಡೆ

ಕನಿಷ್ಟ ವೇತನಕ್ಕೆ “ಆಶಾ’ಗಳ ಆಗ್ರಹ

ಕನಿಷ್ಟ ವೇತನಕ್ಕೆ “ಆಶಾ’ಗಳ ಆಗ್ರಹ

savadi

ಕೋವಿಡ್-19 ಲಾಕ್ ಡೌನ್ ದಲ್ಲಿ ರಾಜ್ಯ ಸಾರಿಗೆಗೆ 2652 ಕೋಟಿ ರೂ. ನಷ್ಟ: ಡಿಸಿಎಂ ಸವದಿ

ಪ್ರವಾಹ-ಕೋವಿಡ್ ಎದುರಿಸಲು ಸಜ್ಜಾಗಿ

ಪ್ರವಾಹ-ಕೋವಿಡ್ ಎದುರಿಸಲು ಸಜ್ಜಾಗಿ

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಬೆಂಗಳೂರಿನಲ್ಲಿ ಭಾನುವಾರದ ಜೊತೆ ಶನಿವಾರವೂ ಲಾಕ್ ಡೌನ್ ಗೆ ಚಿಂತನೆ!

ಬೆಂಗಳೂರಿನಲ್ಲಿ ಭಾನುವಾರದ ಜೊತೆ ಶನಿವಾರವೂ ಲಾಕ್ ಡೌನ್ ಗೆ ಚಿಂತನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.