ಮಾರಕ ಕ್ಯಾನ್ಸರ್ ರೋಗ ಸುಲಭವಾಗಿ ತಡೆಗಟ್ಟುವ ವಿಧಾನ ಹೇಗೆ?

ಕ್ಯಾನ್ಸರ್ ರೋಗ ಲಕ್ಷ್ಮಣ ಕಂಡು ಹಿಡಿಯೋದು ಹೇಗೆ ?

Team Udayavani, Sep 27, 2019, 9:18 PM IST

ಕ್ಯಾನ್ಸರ್ ಎಂಬುದು ಜೀವಕೋಶದಲ್ಲಿ ಪ್ರಾರಂಭವಾಗುವ ರೋಗಗಳ ಒಂದು ಗುಂಪು. ಈ ಕಾಯಿಲೆಯು ಸಂಪೂರ್ಣವಾಗಿ ವಾಸಿಯಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಕ್ಯಾನ್ಸರ್ ಉಂಟು ಮಾಡುವ ಕಾರಕಗಳಾದ ವೈರಸ್ ಗಳು ತಂಬಾಕು, ಮದ್ಯಪಾನ, ರಾಸಾಯನಿಕಗಳು ನಮ್ಮ ಶರೀರದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ಹೆಚ್ಚಿಸುವ ಆಂಶಗಳು. ಯಾವುದಾದರೂ ಅಂಗದ ಜೀವಕೋಶಗಳು ಅಥವಾ ಕಣಗಳು ಮಿತಿಮೀರಿ ಬೆಳೆದರೆ ಇದು ಅನಗತ್ಯ ಗಡ್ಡೆಯಾಗಿ ಬೆಳೆಯುತ್ತದೆ.

ಹಾಗಾದರೆ ಕ್ಯಾನ್ಸರ್ ಬೆಳವಣಿಗೆಯ ಲಕ್ಷಣಗಳನ್ನು ತಿಳಿದುಕೊಳ್ಳೋಣ.

1. ಚರ್ಮದ ಮೇಲೆ ತುರಿಕೆಗಳು ಹೆಚ್ಚುತ್ತಿದ್ದರೆ ಜೊತೆಗೆ ಚರ್ಮದ ಮೇಲೆ ಇರುವ ಮಚ್ಚೆಗಳು, ಗುಳ್ಳೆಗಳ ಮೇಲೆ ಬದಲಾವಣೆಯಾಗುತ್ತಿದ್ದರೆ ಕ್ಯಾನ್ಸರ್ ಲಕ್ಷಣವಾಗಿರಬಹುದು.

2. ದೇಹದಲ್ಲಿ ಎಲ್ಲಾದರೂ ಅಸಹಜ ಗಡ್ಡೆಗಳು ಕಾಣಿಸಿದರೆ ತಕ್ಷಣದಲ್ಲಿ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಅಗತ್ಯ ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು.

3. ಕೆಲವು ರೀತಿಯ ಕ್ಯಾನ್ಸರ್  ಗಳಿಂದ ದೇಹದ ನಿರ್ಧಿಷ್ಟ ಭಾಗಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಉದಾ: ಮೂಳೆಯಲ್ಲಿ ನೋವು ಉಂಟಾದಲ್ಲಿ ಅದನ್ನು “ಬೋನ್ ಕ್ಯಾನ್ಸರ್” ಎಂದು ಹೇಳಲಾಗುತ್ತದೆ.

4. ವಾರಗಳು, ತಿಂಗಳಗಳಿಗಿಂತ ಹೆಚ್ಚು ಸಮಯ ಕೆಮ್ಮು ಕಂಡು ಬಂದರೆ ಅದು ಶ್ವಾಸಕೋಶದ ಕ್ಯಾನ್ಸರ್ ಆಗಿರಬಹುದು. ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

5. ಆಹಾರವು ಸರಿಯಾಗಿ ಜೀರ್ಣವಾಗದೆ ಜೀರ್ಣಕೋಶದಲ್ಲಿ ರಕ್ತಸ್ರಾವಗುತ್ತಿದ್ದರೆ, ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಕೂಡ ಕ್ಯಾನ್ಸರ್ ಒಂದು ಲಕ್ಷಣವಾಗಿರಬಹುದು.

6. ಸೇವಿಸಿದ ಆಹಾರ ಜೀರ್ಣವಾಗದಿದ್ದರೂ, ಅಥವಾ ಆಹಾರವನ್ನು ಸೇವಿಸುವಾಗ ಗಂಟಲಲ್ಲಿ ಉರಿಯಾದರೂ ಅದನ್ನು ಕ್ಯಾನ್ಸರ್ ಎಂದು ಆನುಮಾನಿಸಬಹುದು.

7. ಮಲದಲ್ಲಿ ರಕ್ತ, ಕಫದಲ್ಲಿ ರಕ್ತ ಮತ್ತು ಕೆಮ್ಮುವಾಗ ರಕ್ತ ಸ್ರಾವವಾಗುದು ಕೂಡ ವಿವಿಧ ರೀತಿಯ ಕ್ಯಾನ್ಸರ್ನ ಲಕ್ಷಣವಾಗಿರಬಹು.

8. ನಿಯಮಿತವಾಗಿ ಜ್ವರ ಬರುವುದು ಕೂಡ ಕ್ಯಾನ್ಸರ್ ಲಕ್ಷಣವಾಗಿರಬಹುದು.
ಒಟ್ಟಾರೆ ಮೇಲಿನ ಈ ಎಲ್ಲಾ ಅಂಶಗಳು ಕ್ಯಾನ್ಸರ್ನ ಲಕ್ಷಣವಾಗಿರಬಹುದು. ಆಗಾಗ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಒಳಿತು.

ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದಾದ ಸರಳ ವಿಧಾನಗಳು:
ಕ್ಯಾನ್ಸರ್ ಬಂದ ನಂತರ ಚಿಕಿತ್ಸೆ ತೆಗುದುಕೊಂಡರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕಡಿಮೆ ಹಾಗೂ ಕ್ಯಾನ್ಸರ್ ಗೆ ತಗುಲುವ ವೆಚ್ಚ ಕೂಡ ಅಧಿಕ . ಆದರೆ ಕ್ಯಾನ್ಸರ್ ಕಾಯಿಲೆಯನ್ನು ಕೆಲವೊಂದು ವಿಧಾನಗಳ ಮುಖಾಂತರ ಬರದಂತೆ ತಡೆಗಟ್ಟಬಹುದು. ದೇಹದಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗದಂತೆ ಮಾಡುವ ಸರಳ ವಿದಾನಗಳು:

1) ನಿರಂತರ ವ್ಯಾಯಾಮ ಮನುಷ್ಯನ ಎಲ್ಲಾ ರೋಗಗಳಿಂದಲೂ ದೂರ ವಿಡುವ ಸಾಮರ್ಥ್ಯವನ್ನು ಹೊಂದಿದೆ. ವ್ಯಾಯಾಮ ದೇಹದಲ್ಲಿ ರಾಸಾಯನಿಕಗಳು, ಕಿಣ್ವಗಳು ಮತ್ತು ಹಾರ್ಮೋನ್ ಏರುಪೇರಾಗುವುದನ್ನು ತಪ್ಪಿಸುತ್ತದೆ.

2) ಜಠರದ ಕ್ಯಾನ್ಸರ್ ನ್ನು ತಡೆಯುವಲ್ಲಿ ಬೆಳ್ಳುಳ್ಳಿಯು ತುಂಬಾ ಸಹಕಾರಿಯಾಗಬಲ್ಲದು. ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಬಲವಾಗಿದೆ. ಇದು ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ದೇಹದಲ್ಲಿ ನಿಯಮಿತವಾಗಿ ಹೆಚ್ಚು ಮಾಡುತ್ತದೆ.

3) ಮನುಷ್ಯನ ದೇಹಕ್ಕೆ ದಿನನಿತ್ಯ 8 ಗಂಟೆಗಳಷ್ಟು ನಿದ್ರೆ ಅವಶ್ಯಕ. ಅದರಲ್ಲೂ ಆರೋಗ್ಯಕರ ಹಾರ್ಮೋಗಳ ನಿರ್ವಹಣೆಗೆ ರಾತ್ರಿಯ ಸಮಯದಲ್ಲಿ ನಿದ್ರಿಸುವುದು ಅವಶ್ಯಕ.

4) ಬೆಳಿಗ್ಗೆಯ ಸಮಯದಲ್ಲಿ ನಿರ್ಧಿಷ್ಟ ಸಮಯಗಳ ಕಾಲ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ ಚರ್ಮಕ್ಕೆ “ವಿಟಮಿನ್ ಡಿ” ಸತ್ವ ದೊರೆಯುತ್ತದೆ. ವಿಟಮಿನ್ ಡಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

5) ಪ್ರತಿದಿನ 30ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಉತ್ತಮ ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರನ್ನು ನಿಯಂತ್ರಿಸಲು ಇದು ಅತ್ಯಂತ ಅವಶ್ಯವಾಗಬಹುದು.

6) ಗ್ರೀನ್ ಟೀ ಕುಡಿಯುದರಿಂದ ವಿವಿಧ ರೀತಿಯ ಕ್ಯಾನ್ಸರ್ನ್ನು ಹಾಗೂ ಹೃದಯ ಸಂಬಂಧಿ ರೋಗಗಳು ಬರದಂತೆ ತಡೆಗಟ್ಟಬಹುದು ಎಂಬುದು ಸಂಶೋಧನೆಯಿಂದ ತಿಳಿದು ಬಂದ ಅಂಶವಾಗಿದೆ.

7.) ನೀರು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯವಶ್ಯಕವಾದದ್ದು, ಸಂಶೋದಯೊಂದು ಹೇಳುವ ಪ್ರಕಾರ ಪ್ರತಿದಿನ 8 ಲೋಟಗಳಿಗಿಂತ ಹೆಚ್ಚು ನೀರು ಕುಡಿಯುದರಿಂದ ಕರುಳಿನ ಕ್ಯಾನ್ಸರ್ ತಡೆಗಟ್ಟಬಹುದು.

ಹೀಗೆ ವಿವಿಧ ರೀತಿಯ ಸರಳ ವಿಧಾನವನ್ನು ರೂಢಿಸಿಕೊಳ್ಳುವುದರಿಂದ ಮಾರಕ ರೋಗವು ಬರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬಹುದು. ಕ್ಯಾನ್ಸರ್ ಕಾಯಿಲೆ ಬಂದ ಮೇಲೆ ವೈದ್ಯರನ್ನು ಹುಡುಕುವುದಕ್ಕಿಂತ ಅದು ಬರುವ ಮೊದಲೇ ಜಾಗೃತರಾಗುವುದು ಆರೋಗ್ಯಕರ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ