ಸ್ವಾದಿಷ್ಟ ಪನ್ನೀರ್ ಚಿಕನ್ ಕರ್ರಿ ಮಾಡೋದು ಹೇಗೆ…ಇಲ್ಲಿದೆ ಸುಲಭ ವಿಧಾನ

ಶ್ರೀರಾಮ್ ನಾಯಕ್, Nov 21, 2019, 7:27 PM IST

ಚಿಕನ್‌ ಎಂದಾಗ ಎಲ್ಲರ ಬಾಯಿಯಲ್ಲಿ ನೀರು ಬಂದೆ ಬರುತ್ತದೆ. ಚಿಕನ್‌ ನಿಂದ ಅನೇಕ ರೀತಿಯಲ್ಲಿ ಅಡುಗೆಯನ್ನು ಮಾಡಬಹುದಾಗಿದೆ. ಅದರಲ್ಲೂ ಪನ್ನೀರ್‌ ಚಿಕನ್‌ ಕರ್ರಿ ತುಂಬಾ ಸ್ವಾದಿಷ್ಟವಾಗಿ ಇರುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಹಾಗೂ ರುಚಿಕಾರವಾಗಿರುತ್ತದೆ. ನೀವು ಮನೆಯಲ್ಲೇ ಸಿದ್ಧ ಪಡಿಸಿ ಮಾಂಸಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಪನ್ನೀರ್‌ ಚಿಕನ್‌ ಕರ್ರಿಯನ್ನು ನೀವೂ ಒಮ್ಮೆ ಸವಿದು ನೋಡಿ.

ಬೇಕಾಗುವ ಸಾಮಗ್ರಿಗಳು
ಚಿಕನ್‌ 250 ಗ್ರಾಂ, ಪನ್ನೀರ್‌ 100 ಗ್ರಾಂ, ಈರುಳ್ಳಿ 3, ನಿಂಬೆ ಹಣ್ಣು 1, ಧನಿಯಾ ಪುಡಿ 1ಚಮಚ, ಅರಿಶಿನ ಪುಡಿ 1ಚಮಚ, ಬೆಳ್ಳುಳ್ಳಿ 1, ಟೊಮೆಟೋ 2, ಮೆಣಸಿನ ಪುಡಿ 2ಚಮಚ, ಜೀರಾ ಪುಡಿ ಅರ್ಧ ಚಮಚ, ಶುಂಠಿ ಸ್ವಲ್ಪ, ತುಪ್ಪ 2ಚಮಚ, ಗರಂ ಮಸಾಲೆ ಅರ್ಧ ಚಮಚ, ಕ್ಯಾಪ್ಸಿಕಮ್‌ 1, ಕೊತ್ತಂಬರಿ ಸೊಪ್ಪು, ಎಣ್ಣೆ ಬೇಕಾಗುವಷ್ಟು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲು ಚಿಕನ್‌ನನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪೀಸ್‌ ಮಾಡಿಟ್ಟುಕೊಳ್ಳಿ. ಈರುಳ್ಳಿ ಉದ್ದಕ್ಕೆ ಹೆಚ್ಚಿಕೊಂಡು ಎಣ್ಣೆಗೆ ಹಾಕಿ ಕೆಂಪಗೆ ಕರಿದಿಟ್ಟುಕೊಳ್ಳಿ. ಒಂದು ಬೋಲ್‌ ಗೆ ಚಿಕನ್‌ ಪೀಸ್‌ಗಳನ್ನು ಹಾಕಿ.ಮೆಣಸಿನ ಪುಡಿ,ಧನಿಯಾ ಪುಡಿ,ಜೀರಾ ಪುಡಿ,ಅರಿಶಿನ ಪುಡಿ,ಉಪ್ಪು,ಕರಿದಿರುವ ಈರುಳ್ಳಿ ಚೂರುಗಳು,ಕಟ್‌ ಮಾಡಿರುವ ಪನ್ನೀರ್‌ ತುಂಡುಗಳು,ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ.ಈ ರೀತಿ ಮ್ಯಾರಿನೇಡ್‌ ಮಾಡಿರುವ ಚಿಕನ್‌ ಪೀಸ್‌ಗಳನ್ನು ಒಂದು ಗಂಟೆಗಳ ಕಾಲ ನೆನೆಸಿ.ಕ್ಯಾಪ್ಸಿಕಮ್‌ ಉದ್ದಕ್ಕೆ ಹೆಚ್ಚಿಕೊಳ್ಳಿ.ಟೊಮೆಟೋ ಸಹ ಸಣ್ಣಗೆ ಹೆಚ್ಚಿಕೊಳ್ಳಿ.ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮಾಡಿಟ್ಟುಕೊಳ್ಳಿ. ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ,ಬಿಸಿಯಾದ ನಂತರ ಈರುಳ್ಳಿ ಚೂರುಗಳನ್ನು ಹಾಕಿ.ಕೆಂಪಗೆ ಹುರಿದುಕೊಳ್ಳಿ.ಶುಂಠಿ,ಬೆಳ್ಳುಳ್ಳಿ ಪೇಸ್ಟ್‌ ಹಾಕಿ.ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಿ.ಕ್ಯಾಪ್ಸಿಕಮ್‌ ಚೂರುಗಳು ಸ್ವಲ್ಪ ಅರಿಶಿನ ಹಾಕಿ ಕೆಂಪಗೆ ಫ್ರೈ ಮಾಡಿ ಟೊಮೆಟೋ ಚೂರುಗಳನ್ನು ಹಾಕಿ. ಚಿಕನ್‌ ಮಿಶ್ರಣವನ್ನು ಕಲೆಸಿ ನಂತರ ಗರಂ ಮಸಾಲೆಯನ್ನು ಹಾಕಿರಿ. ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ಅವಶ್ಯಕತೆಗೆ ತಕ್ಕಷ್ಟು ನೀರು ಸೇರಿಸಿ ನಂತರ ಉಪ್ಪು ಹಾಕಿ.ಖಾದ್ಯ ಚೆನ್ನಾಗಿ ಕುದಿಸಿದ ನಂತರ ಇಳಿಸುವ ಮೊದಲು ತುಪ್ಪ ಹಾಕಿ,ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿರಿ.

ಚಪಾತಿ,ಪರೋಟ,ಅನ್ನದ ಜೊತೆ ಸವಿಯಲು ಪನ್ನೀರ್‌ ಚಿಕನ್‌ ಕರ್ರಿ ತುಂಬಾ ಸ್ವಾದಿಷ್ಟವಾಗಿ ಇರುತ್ತದೆ.

ಒಂದು ಸಲ ಈ ರೆಸಿಪಿ ಮಾಡಿ ನೋಡಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ