ಧಮ್ಮಿದ್ರೆ ಒಮ್ಮೆ ಹತ್ತಿ ನೋಡಿ: ಇಲ್ಲಿವೆ ವಿಶ್ವದ ಅತೀ ರಿಸ್ಕೀ ಬೆಟ್ಟಗಳು!!

ಜಗತ್ತನ್ನೇ ಬೆಚ್ಚಿ ಬೀಳಿಸುವ ಟಾಪ್ 10 ‘ರಿಸ್ಕೀ ಮೌಂಟೇನ್'

Team Udayavani, Aug 25, 2019, 7:10 PM IST

ಪ್ರಕೃತಿ ಅತೀ ಸುಂದರವಾಗಿ ತನ್ನನ್ನು ಸೃಷ್ಟಿಸಿಕೊಂಡಿದ್ದಾಳೆ. ತನ್ನ ಮೇಲೆ ಈ ಹಿಂದಿನಿಂದ ಅದೆಷ್ಟೋ ಬಾರಿ ಹಲವು ರೀತಿಯ ಪ್ರಹಾರಗಳು ನಡೆದರೂ ಅವನ್ನೆಲ್ಲಾ ಗಂಭೀರವಾಗಿ ಪರಿಗಣಿಸಲಿಲ್ಲ. ತನಗೆ ಕೆಡುಕನ್ನು ಬಯಸುವವರು/ಹಾನಿ ಮಾಡುವವರಿಗೂ ನೆರಳಾಗುವ ಪ್ರಕೃತಿಯ ತಾಳ್ಮೆ ಅನನ್ಯವಾದುದೇ.

ಈ ಪ್ರಕೃತಿ ಜಗತ್ತಿನಾದ್ಯಂತ ಅತೀ ಮನೋಹರವಾದ ಅಂದವನ್ನು ರೂಪಿಸಿಕೊಂಡಿದ್ದಾಳೆ. ನಮ್ಮ ದೇಶದಲ್ಲೇ ಹಲವಾರು ತಾಣಗಳು ಇದ್ದು, ಇದೇ ತರಹ ಜಗತ್ತಿನಾದ್ಯಂತ ನಾವು ಸಂದರ್ಶಿಸಬಹುದಾದ ಅನೇಕ ಪ್ರಕೃತಿಯ ಮಡಿಲುಗಳು ಇವೆ.

ಇಂತಹ ಸಾವಿರಾರು ತಾಣಗಳಲ್ಲಿ ಅತೀ ಅಪಾಯದ ಕೆಲವು ತಾಣಗಳು ಇವೆ. ನೋಡುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತವೆ. ಮನಸ್ಸನ್ನು ಉಲ್ಲಸಿತಗೊಳಿಸುವ ಇಂತಹ ತಾಣಗಳನ್ನು ಏರುವ ಹವ್ಯಾಸಿಗಳು ಇದ್ದಾರೆ. ಚೂರು ಗೊಂದಕ್ಕೀಡಾಗಿ ಕಾಲಿಟ್ಟ ಅಡಿ ತಪ್ಪಿದರೆ ಬಹುಶಃ ದೇಹವೂ ಸಿಗುತ್ತವೆ ಎಂಬುದು ಅಸ್ಪಷ್ಟ. ಇಂತಹ ನೂರಾರು ತಾಣಗಳಲ್ಲಿ 10 ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.

ಹುಯೆನಾ ಪಿಚು ಟ್ರೈಲ್

ಇದು ಪೆರುವಿನಲ್ಲಿರುವ ಒಂದು ತಾಣವಾಗಿದೆ. ಮಚ್ಚು ಪಿಚ್ಚು ನಗರದ ಸನಿಹ ಇರುವ ಈ ತಾಣ ಅತ್ಯಂತ ಕಿರಿದಾದ ಮೆಟ್ಟಿಲುಗಳಿರುವ ದೊಡ್ಡ ಶಿಖರವಾಗಿದೆ. ಯಾವುದೇ ವಾಹನ ಚಲಿಸದೇ ಇರುವ ತಾಣವಾಗಿದೆ. ಈ ಪ್ರದೇಶವನ್ನು ಏರುವುದು ಅತ್ಯಂತ ಕಡಿದಾದ ಜಾಗದ ಮೂಲಕ. ಮಳೆಗಾಲದಲ್ಲಿ ಮಾತ್ರ ಇಲ್ಲಿಗೆ ಪ್ರವೇಶ ನಿಷಿದ್ಧ.

ದಿ ಮೇಜ್, ಕ್ಯಾನ್ಯನಾಲ್ಲ್ಯಾಂಡ್ಸ್

ಅಮೆರಿಕದ ಉತಾಹ್ನಲ್ಲಿರುವ ಇದು ಚಕ್ರವ್ಯೂಹ ಮಾದರಿಯ ದಾರಿಯನ್ನು ಹೊಂದಿರುವ ಸ್ಥಳವಾಗಿದ್ದು, ಇಳಿಜಾರು, ಕಡಿತಗಳು, ಗಲ್ಲಿಗಳಿಂದ ಕೂಡಿದೆ. ಕೆಲವು ಪ್ರದೇಶಗಳಲ್ಲಿ ಡೆಡ್ ಎಂಡ್ ಜಾಗಗಳಿವೆ. ಇವುಗಳು ಯಾವುತ್ತೂ ಅಸ್ಥಿತವಾಗಿದ್ದು, ಮರದು ಮಣ್ಣಿನಿಂದ ಕೂಡಿದೆ.

ಮೌಂಟ್ ಹು ಆಸ್

ಚೀನದ ಈ ಈ ಸ್ಥಳ ಅತ್ಯಂತ ಅಪಾಯಕಾರಿಯಾಗಿದೆ. ಹವ್ಯಾಸಿಗಳಿಗೆ ಈ ಮೂಲಕ ಸಂಚರಿಸಲೆ ಬೇಕು ಎಂದರೆ ಧೈರ್ಯ ಮಾತ್ರ ಹೆಚ್ಚೇ ಇರಬೇಕು. ಕಲ್ಲುಗಳಿಗೆ ತೂತು ಮಾಡಿ ಕೊರೆಸಿ, ಅವುಗಳ ಮೂಲಕ ಸಂಚರಿಸಲು ಹಲಗೆ ಇಡಲಾಗಿದೆ.

ಎಲ್ಕ್ಯಾಮಿನಿಟೋ ಡೆಲ್ ರೇ

ಇದು ಸ್ಪೈನ್ ನಲ್ಲಿರುವ ತಾಣ. ನೋಡಲು ಸುಂದರವಾಗಿದ್ದು, ಸುತ್ತಲೂ ಕಲ್ಲು ಬಂಡೆಗಳಿಂದ ಆವರತವಾಗಿದ್ದು, ಕೆಳಗೆ ದೊಡ್ಡ ಪಾತಾಳವೇ ಇದೆ.

ಬ್ರೈಟ್ ಏಂಜೆಲ್ ಟ್ರೈಲ್

ಅರಿಜೋನದ ವಿಪರೀತ ಸೆಖೆಯ ವಾತಾವರಣ ಇದೆ. ಈ ಮದ್ಯೆಯೂ ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳತ್ತ ಜನರು ಹೆಚ್ಚು ಬರುತ್ತಿದ್ದಾರೆ. ಇಲ್ಲಿ ಚಾರಣ ಮಾಡುವವರು ಅತೀ ಕಡಿದಾದ ಹಾದಿಯಲ್ಲಿ ಸಾಗಬೇಕಾಗಿದೆ.

ಮೌಂಟ್ ವಾಷಿಂಗ್ಸ್ಟನ್

ಅಮೆರಿಕದಲ್ಲಿರುವ ಈ ಮೌಂಟ್ ವಾಷಿಂಗ್ಸ್ಟನ್ ನೋಡಲು ಅತ್ಯಂತ ಸುಲಭವಾಗಿ ಕಾಣುತ್ತದೆ. ಆದರೆ ಅಲ್ಲಿ ಮೇಲಕ್ಕೆ ಏರುವುದು ಅತ್ಯಂತ ಕಠಿನವಾಗಿದೆ. ದೊಡ್ಡ ಡೊಡ್ಡ ಕಲ್ಲುಗಳನ್ನು ಮೆಟ್ಟಿ ಸಾಗಬೇಕಾಗಿದೆ. ಜತೆಗೆ ಅತೀ ಶೀತ ವಾತಾವರಣವೂ ಅಲ್ಲಿ ಇದೆ.

ಫೆರೆಟಾ ಮೌಂಟೇನ್

ಇದು ಇಟಲಿ ಆಸ್ಟ್ರೀಯಾದಲ್ಲಿ ಇದ್ದು, ಯುರೋಪಿನ ಅತೀ ಅಪಾಯದ ಮೌಂಟೇನ್ ಎಂದೂ ಇದನ್ನು ಕರೆಯುತ್ತಾರೆ. ಇದನ್ನು ಏರಬೇಕಾದರೆ ಅತೀ ಸಣ್ಣ ಕೇಬಲ್ ಸಹಾಯದಿಂದ ಒಂದು ಬಂದಿಯಿಂದ ಇನ್ನೊಂದು ಬದಿಗೆ ಸಾಗಬೇಕು. ಇದು ಭೂಮಿಯಿಂದ ಸಾವಿರರಾರು ಅಡಿ ಎತ್ತರದಲ್ಲದೆ.

ಲಾಂಗ್ಸ್ ಪೀಕ್

ಇದು ಕೊಲೊರಾಡೋದಲ್ಲಿರುವ ಶಿಖರವಾಗಿದೆ. ನೋಡಲು ಚಿನ್ನದ ಹೊದಿಕೆಯಂತಿರುವ ಇದಕ್ಕೆ ಏರುವುದೂ ಕಷ್ಟವೇ. ಮೊನಚಾದ ಬೆಟ್ಟ ಇದಾಗಿದ್ದು ಅತೀ ಕಿರು ದಾರಿಯನ್ನು ಹೊಂದಿದೆ.

ಏಂಜೆಲ್ಸ್ ಲ್ಯಾಂಡಿಂಗ್

ಇದು ಅಮೆರಿಕದಲ್ಲಿರುವ ಮತ್ತೂಂದು ಆಕರ್ಷಣೀಯ ತಾಣ. ಇದನ್ನು ಏರುವುದು ಅತೀ ಅಪಾಯಕಾರಿಯಾಗಿದೆ. ಕೃತಕ ದಾರಿಗಳು ಇಲ್ಲದೇ, ನಾವೇ ಸ್ವತಃ ದಾರಿಯನ್ನು ರೂಪಿಸಿಕೊಂಡು ಸಾಗಬೇಕಾಗಿದೆ. ಆಧಾರಕ್ಕೆ ಕಬ್ಬಿಣದ ಚೈನ್ ಗಳಿವೆ.

ಕ್ಯಾಸ್ಕೇಡ್ ಸ್ಯಾಡಲ್

ಇದು ನ್ಯೂಜಿಲ್ಯಾಂಡ್ ನಲ್ಲಿರುವ ಒಂದು ಶಿಖರವಾಗಿದೆ. ಇಲ್ಲಿನ ಕಲ್ಲುಗಳು ಅಷ್ಟೊಂದು ಗಟ್ಟಿಯಾಗಿಲ್ಲ. ನಾವು ಹತ್ತುತ್ತಾ ಸಾಗಿದಂತೆ ಕಲ್ಲುಗಳು ಬಿರುಕು ಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವು ಪ್ರಕರಣದಿಂದ ಪಾದಯಾತ್ರಿಗಳು ಸಾವನ್ನಪ್ಪುತ್ತಿದ್ದಾರೆ.

ಸಂಗ್ರಹ ಬರಹ : ಕಾರ್ತಿಕ್ ಅಮೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ