ಜನಮನ ಗೆದ್ದ ‘ನಿರ್ಮಾ’ ವಾಶಿಂಗ್ ಪೌಡರ್ ಹುಟ್ಟಿ ಬೆಳೆದರ ಹಿಂದೆ ನೋವಿನ ಕಥೆಯಿದೆ

ಸುಹಾನ್ ಶೇಕ್, Feb 5, 2020, 6:43 PM IST

001

ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ವ್ಯಕ್ತಿಗೆ ನೂರಾರು ಪೆಟ್ಟುಗಳು ಆತ್ಮವಿಶ್ವಾಸಕ್ಕೆ ಬರೆ ಎಳೆದು ಬಿಡುತ್ತವೆ. ಅವೆಲ್ಲಾವನ್ನು ಸಹಿಸಿಕೊಂಡು,ನೋಯಿಸಿಕೊಂಡು ನಡೆದವ ಮಾತ್ರ ಸಾಧಕನಾಗಲು ಸಾಧ್ಯ.

ಏಪ್ರಿಲ್ 13 , 1944 ರಲ್ಲಿ ಅಹಮದಬಾದ್ ನ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿದ ಕರ್ಸನ್ ಭಾಯಿ ಪಟೇಲ್, ರಸಾಯನಶಾಸ್ತ್ರದಲ್ಲಿ ಬಿಎಸ್ ಎಸ್ಸಿ ಪದವಿಯನ್ನುಗಳಿಸುತ್ತಾರೆ. ನಂತರ ಅಹಮದಬಾದ್ ನ ಲ್ಯಾಬ್ ವೊಂದರಲ್ಲಿ ಸಹಾಯಕನಾಗಿ ಹುದ್ದೆಯನ್ನು ಪಡೆಯುತ್ತಾರೆ. ಆದರೆ ಈ ಕೆಲಸದಲ್ಲಿ ನೆಮ್ಮದಿಯಿಲ್ಲದೆ ಸದಾ ಏನಾದರೂ ಒಂದು ಮಾಡಬೇಕೆನ್ನುವ ಯೋಚನೆಯಲ್ಲಿ ಇರುತ್ತಾರೆ. ಕೆಮೆಸ್ಟ್ರಿ ವಿದ್ಯಾರ್ಥಿಯಾಗಿದ್ದ ಕಾರಣ  ಕರ್ಸನ್ ಭಾಯಿ ಪಟೇಲ್ ಬಿಡುವಿನ ವೇಳೆಯಲ್ಲಿ ಕೆಮಿಕಲ್ ಗಳನ್ನು ಬಳಸಿಕೊಂಡು ಏನೇನಾದರೂ ಮಾಡುತ್ತಿದ್ದರು. ಇದು ದಿನ ನಿತ್ಯದ ಹವ್ಯಾಸವಾಗಿ ಬೆಳೆದಾಗ ಅದೊಂದು ದಿನ ಕರ್ಸನ್ ಭಾಯಿ ಪಟೇಲ್ ರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟವುಳ್ಳ ಡಿಟರ್ಜೆಂಟ್ ಪೌಡರ್ ವೊಂದನ್ನು ತಯಾರಿಸಬೇಕು ಎನ್ನುವ ಯೋಚನೆ ಬರುತ್ತದೆ. ಈ ಯೋಚನೆಯನ್ನು ಮರುದಿನದಿಂದಲೇ ಯೋಜನೆಯಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗುತ್ತಾರೆ.

ಸೈಕಲ್ ತುಳಿಯುತ್ತಾ ಮನೆ ಮನ ತಲುಪಿದ.. :  ಸಂಜೆ ಕೆಲಸದ ಬಳಿಕ, ತನ್ನ ಮನೆಯ ಆವರಣದ ಹಿಂದೆ ಇರುವ ಖಾಲಿ ಜಾಗದಲ್ಲಿ ಕೆಮಿಕಲ್ ಹಾಗೂ ಇತರ ಪರಿಕರಗಳನ್ನು ಬಳಿಸಿಕೊಂಡು ಡಿಟರ್ಜೆಂಟ್ ತಯಾರಿಸುವ ನಿಟ್ಟಿನಲ್ಲಿ ನಾನಾ ಬಗೆಯ ವಿಧಾನಗಳಲ್ಲಿ ಪ್ರಯೋಗವನ್ನು ಮಾಡಲು ಶುರು ಮಾಡುತ್ತಾರೆ. ಅದು ಹೇಗೋ ಹಲವು ಪ್ರಯತ್ನದ ಪ್ರತಿಫಲವಾಗಿ ಹಳದಿ ಬಣ್ಣದ ಡಿಟರ್ಜೆಂಟ್ ಪೌಡರ್ ಒಂದನ್ನು ತಯಾರಿಸಿಯೇ ಬಿಡುತ್ತಾರೆ. ಇಷ್ಟು ಮಾತ್ರವಲ್ಲದೆ ಆ ಪೌಡರ್ ಅನ್ನು ಜನರ ಬಳಿಗೆ ತಲುಪಲು ಅದನ್ನು ಸೈಕಲ್ ನಲ್ಲಿ ಕೆಲಸಕ್ಕೆ ಹೋಗುವ ಸಮಯದಲ್ಲಿ ಒಂದು ಲಕೋಟೆಯಲ್ಲಿ ತೆಗೆದುಕೊಂಡು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ.

ಕರ್ಸನ್ ಭಾಯಿ ತಯಾರಿಸಿದ ಹಳದಿ ಬಣ್ಣದ ಪೌಡರ್ ಸಣ್ಣ ಪಾಕೆಟ್ ನಲ್ಲಿ ಊರ ಮಂದಿಗೆ  ಬರೀ 3 ರೂಪಾಯಿಗೆ ಒಂದು ಕೆ.ಜಿಯಂತೆ ಮಾರುತ್ತಾರೆ. ಇವರ ಪೌಡರ್ ಬಗ್ಗೆ ಎಷ್ಟು ವಿಶ್ವಾಸವಿತ್ತು ಎಂದರೆ ಗ್ರಾಹಕರಿಗೆ ಇಷ್ಟವಾಗದಿದ್ದಲ್ಲಿ ಹಣ ವಾಪಸ್ ಕೊಡುತ್ತೇನೆ ಎನ್ನುತ್ತಿದ್ದರು. ಅದೇ ಸಮಯದಲ್ಲಿ ಹಿಂದೂಸ್ಥಾನ್ ಲಿವರ್ ಕಂಪೆನಿಯ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಕರ್ಸನ್ ಭಾಯಿ ತಯಾರಿಸಿದ ಪೌಡರ್ ಉತ್ತಮ ಗುಣಮಟ್ಟದಿಂದ ಜನರ ಮನ ಗೆದ್ದಿತ್ತು.  ಇದೇ ಸಮಯದಲ್ಲಿ ಕರ್ಸನ್ ಭಾಯಿ ತನ್ನ ಡಿಟರ್ಜೆಂಟ್ ಪೌಡರ್ ಜನಪ್ರಿಯತೆಯನ್ನು ಕಂಡು ಅದನ್ನು ಇನ್ನಷ್ಟು ಮುಂದುವರೆಸಲು ಕೈಯಲ್ಲಿದ್ದ ಸರ್ಕಾರಿ ಕೆಲಸವನ್ನು ಬಿಟ್ಟು ಹೊರಬರುತ್ತಾರೆ.

ನಿರ್ಮಾ’ ಹೆಸರಿನ ಹಿಂದೆ ನೋವಿನ ನೆನಪು.. : ಕರ್ಸನ್ ಭಾಯಿ ಪಟೇಲ್ ಜೀವನದಲ್ಲಿ ಹೆಚ್ಚಾಗಿ ಪ್ರೀತಿಸುತ್ತಿದದ್ದು ತನ್ನ ಮಗಳು ನಿರುಪಮಾರನ್ನು, ಕೈಯಾರೆ ಆಡಿಸಿ, ಮುದ್ದಿಸಿ, ಬೆಳೆಸಿದ ಮಗಳು ನಿರುಪಮಾರನ್ನು ಲೋಕ ಗುರುತಿಸುವ ವ್ಯಕ್ತಿಯನ್ನಾಗಿ ಮಾಡಬೇಕು ಎನ್ನುವುದು ಕರ್ಸನ್ ಭಾಯಿ ಕನಸು ಆಗಿತ್ತು. ಕೆಲ ಕನಸುಗಳು ಸಾಕಾರಗೊಳ್ಳುವ ಮುನ್ನವ ಕಮರಿ ಹೋಗುತ್ತವೆ ಅಂತೆ. ಹಾಗೆಯೇ ಕರ್ಸನ್ ಭಾಯಿ ಜೀವನದಲ್ಲಿಯೂ ಆಯಿತು. ನಿರುಪಮಾ ಅದೊಂದು ದಿನ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪುತ್ತಾರೆ. ಇದು ಕರ್ಸನ್ ಭಾಯಿ ಜೀವನದಲ್ಲಿ ಕರಾಳ ನೋವಿನ ನೆನಪಾಗಿ ಉಳಿಯುತ್ತದೆ.

ತನ್ನ ಮಗಳನ್ನು ಪ್ರೀತಿಯಿಂದ ನಿರ್ಮಾ ಎಂದು ಕರೆಯುತ್ತಿದ್ದ ಕರ್ಸನ್ ಭಾಯಿ ತಾನು ತಯಾರಿಸಿದ  ಡಿಟರ್ಜೆಂಟ್ ಪೌಡರ್ ಗೆ ‘ನಿರ್ಮಾ’ ಎಂದು ಹೆಸರಿಡುತ್ತಾರೆ. ನಿರ್ಮಾ ಪೌಡರ್ ನೋಡು ನೋಡುತ್ತಿದ್ದಂತೆ ಗುಜರಾತ್ ನಲ್ಲಿ ತನ್ನ ಹಲವು ಶಾಖೆಯನ್ನು ಪ್ರಾರಂಭಿಸುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಹೆಸರುಗಳಿಸುತ್ತದೆ.

ಜನಪ್ರಿಯ ಜಾಹೀರಾತಿನಿಂದ ರಾತ್ರೋ ರಾತ್ರೀ ಪ್ರಸಿದ್ಧಿ : ನಿರ್ಮಾ ಪೌಡರ್ ಮಾರುಕಟ್ಟೆಯಲ್ಲಿ ಹೆಸರುಗಳಿಸಿದ್ರೂ, ಅಕ್ಕಪಕ್ಕದ ಅಂಗಡಿಗಳಿಗೆ ನಿರ್ಮಾ ಪೌಡರ್ ಸಾಲವಾಗಿ ನೀಡಲಾಗುತ್ತಿತ್ತು. ಸರಿಯಾದ ಸಮಯಕ್ಕೆ ಅಂಗಡಿ ಮಾಲಕರು ಹಣ ನೀಡಲು ಹಿಂದೇಟು ಹಾಕುತ್ತಿದ್ದರಿಂದ, ನಿರ್ಮಾದ ಸ್ಥಾಪಕರಾದ ಕರ್ಸನ್ ಭಾಯಿ ಎಲ್ಲಾ ಉದ್ಯೋಗಿಗಳಿಗೂ ಇನ್ನು ಮುಂದೆ ಸಾಲವಾಗಿ ಪೌಡರ್ ಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ನಿರ್ಣಯ ಮಾಡುತ್ತಾರೆ.

ಕರ್ಸನ್ ಭಾಯಿ ಅಂದಿನ ಕಾಲದಲ್ಲಿ ಜನಮನದಲ್ಲಿ ಬೇರೂರಿದ್ದ ದೂರದರ್ಶನದಲ್ಲಿ ನಿರ್ಮದ ಕುರಿತು ಜಾಹೀರಾತು ನೀಡುತ್ತಾರೆ. “ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮ…” ಈ ಹಾಡಿನ ಜಾಹೀರಾತು ಬಂದಾಗ ಪ್ರತಿಯೊಬ್ಬರ ತುಟಿ ತನ್ನಷ್ಟಗೆ ಮುಂದುವರೆದು ನಿರ್ಮಾದ ಜಾಹೀರಾತನ್ನು ಹಾಡುವಷ್ಟು ಪ್ರಸಿದ್ಧಿ ಆಗುತ್ತದೆ. ಎಲ್ಲೆಡೆಯಿಂದ ನಿರ್ಮಾದ ಬೇಡಿಕೆ ಹೆಚ್ಚುತ್ತದೆ. ನಿರ್ಮದ ತಯಾರಕರು ಸಾಲವಾಗಿ ಪೌಡರ್ ಗಳನ್ನು ನೀಡುವುದಿಲ್ಲ ಎನ್ನುವ ಪಟ್ಟಿಯನ್ನು ನಮೂದಿಸಿ ಎಲ್ಲೆಡೆ ನಿರ್ಮಾ ಪೌಡರನ್ನು ಕಳುಹಿಸುತ್ತಾರೆ. ನಂತರದಲ್ಲಿ ನಿರ್ಮಾದ ಜಾಹೀರಾತು ಜನಪ್ರಿಯ ನಟ ನಟಿಯರಿಂದ ಆಗುತ್ತದೆ. ನಿರ್ಮಾ ಮಾರುಕಟ್ಟೆಯಲ್ಲಿ ಬೇಡಿಕೆಯ ಬ್ರ್ಯಾಂಡ್ ಆಗುತ್ತದೆ.

ನಿರ್ಮಾ ಬ್ರ್ಯಾಂಡ್ ಎಷ್ಟು ಜನಪ್ರಿಯವಾಗುತ್ತದೆ ಎಂದರೆ ಮಾರುಕಟ್ಟೆಯಲ್ಲಿ ನಿರ್ಮಾ ಹೆಸರಿನಲ್ಲಿ ನಿರ್ಮಾ ಉಪ್ಪು, ನಿರ್ಮಾಸಕ್ಕರೆ, ನಿರ್ಮಾ ಸೋಪ್ .. ಹೀಗೆ ನಿರ್ಮಾದ ವಿವಿಧ ಪ್ರಾಡೆಕ್ಟ್ ಗಳು ಲಗ್ಗೆಯಿಡುತ್ತವೆ. ಮಗಳ ಹೆಸರು ನಿರ್ಮಾ ರೂಪದಲ್ಲಿ ಪ್ರಸಿದ್ದಿಗಳಿಸುತ್ತದೆ. ನಿರ್ಮಾ ಪ್ಯಾಕೆಟ್ ನಲ್ಲಿ ಮಗಳ ರೇಖಾ ಚಿತ್ರವನ್ನು ಸೃಷ್ಟಿಸುತ್ತಾರೆ.

ಒಂದು ಖಾಲಿ ಜಾಗದಲ್ಲಿ, ಒಂಟಿ ಹುಡುಗನ ಯೋಚನೆಯಿಂದ ಆರಂಭವಾದ ನಿರ್ಮಾ ಹಲವು ಸಮಾಜಮುಖಿ ಕೆಲಸವನ್ನು ಮಾಡುತ್ತಾ, ಅಹಮದಬಾದ್ ನಲ್ಲಿ ನಿರ್ಮಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದಾರೆ. ಇಂದು ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ನಿರ್ಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಕೋಟಿಗಟ್ಟಲೆ ಆದಾಯವನ್ನು ನಿರ್ಮಾಗಳಿಸುತ್ತಿದೆ.

ಸುಹಾನ್ ಶೇಕ್

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.