Udayavni Special

ಛಲ ಬಿಡದ ಸಾಧನೆ; ಅಂಧತ್ವ ಮೆಟ್ಟಿ ನಿಂತು ನೂರಾರು ಜನರ ಬದುಕಿಗೆ ಬೆಳಕಾದ ಶ್ರೀಕಾಂತ್


ಸುಹಾನ್ ಶೇಕ್, Jan 15, 2020, 6:19 PM IST

00

ಬಾಲ್ಯ ಎನ್ನುವ ಬಂಗಾರದ ದಿನಗಳನ್ನು ಅನುಭವಿಸಿ ಬದುಕಿನ ಬೆರಗನ್ನು ಕಾಣುವ ಅದೃಷ್ಟ ಬಹುಶಃ ನಮ್ಮಲ್ಲಿ ಎಲ್ಲರಿಗೂ ಸಿಗದು. ಬಡತನ, ಕಷ್ಟ ಕಾರ್ಪಣ್ಯದ ಕಠಿಣ ದಿನಗಳನ್ನು ದೇವರು ಕೆಲವರ ಹಣೆಯಲ್ಲಿ ಬರೆದಿರುತ್ತಾನೆ ಅಂತೆ. ದೇವರ ಈ ‘ಹಣೆ ‘ಯ ಬರಹಕ್ಕೆ ನಾವು ನೀವೂ ದೂರವಾಗಿಲ್ಲ ಬಿಡಿ.

ಹುಟ್ಟಿದ ಕೂಡಲೇ ಪಿಳಿ ಪಿಳಿ ಕಣ್ಣು ಬಿಡುತ್ತಾ, ಅಮ್ಮನ ಮಡಿಲಲ್ಲಿ ಕೂತು ಎದೆಹಾಲನ್ನು ಸವಿಯಬೇಕಾದ ಮಗು ದೃಷ್ಟಿಹೀನವಾಗಿ ತಾಯಿಯ ಮಡಿಲಿಗೆ ಸೇರಿದಾಗ ಹೆತ್ತ ತಾಯಿಯ ಕರುಳು ಅದೆಷ್ಟು ನೊಂದಿರಬಹುದು ಅಲ್ವಾ? ಇದು ಬರೀ ನೋವಿನ ನುಡಿಯಲ್ಲ, ವಾಸ್ತವದ ಸಂಗತಿ. ಆಂಧ್ರಪ್ರದೇಶದ ಸೀತಾರಾಮಪುರಂ ನಲ್ಲಿ ಜನಸಿದ ಶ್ರೀಕಾಂತ್ ಬೋಳ ಹುಟ್ಟು ಅಂಧ. ಬಾಲ್ಯ ಎನ್ನುವ ಚಿಗುರು ಮೊಳಕೆಯೊಡಿಯುವ ಮುನ್ನ ಬದುಕಿಗೆ ಅಡ್ಡಲಾಗಿ ಅಂಧತ್ವ ಬಂತು. ಶ್ರೀಕಾಂತ್ ಹುಟ್ಟಿನ  ಬಳಿಕ ಗ್ರಾಮಸ್ಥರು ಎಷ್ಟು ಕಠೋರ ನುಡಿಯನ್ನು ಆಡುತ್ತಾರೆ ಎಂದರೆ ಕೆಲವರು ಈ ಮಗುವನ್ನು ಕೊಂದು ಬಿಡಿ ಮುಂದೆ ಈತ ತಂದೆಗೆ  ಹೊರೆಯಾಗುತ್ತಾನೆ ಎನ್ನುತ್ತಿದ್ದರು.

ಅಪ್ಪ – ಅಮ್ಮನ ಪ್ರೀತಿಯ ಜೋಳಿಗೆಯಲ್ಲಿ.. :  ಮಕ್ಕಳು ಎಷ್ಟೇ ಕ್ರೂರಿಯಾಗಿರಲಿ, ಕುರೂಪಿಯಾಗಿರಲಿ,ಹಟವಾದಿಗಳಾಗಿರಲಿ ಅವರನ್ನು ಉಳಿಸಿ – ಬೆಳೆಸಿ ಉನ್ನತ ಮಟ್ಟಕ್ಕೆ ಹೋಗಬೇಕೆನ್ನುವ ಕನಸು ಕಾಣುವುದು ಹೆತ್ತ ತಂದೆ ತಾಯಿಗಳು ಮಾತ್ರ. ಹಾಗೆ ಕಣ್ಣುಗಳ ದೃಷ್ಟಿ ಇಲ್ಲದೆ ಹುಟ್ಟಿದ ಮಗನನ್ನು ಅಪ್ಪ ಪ್ರತಿನಿತ್ಯ ಗದ್ದೆಯ ಕೆಲಸಕ್ಕೆ ಕರೆದುಕೊಂಡು ಅಲ್ಲಿ ತನ್ನ ಮಾತಿನಿಂದ ಮಗನ ಕೈಗಳು ಕೆಲಸ ಮಾಡುವಂತೆ ಮಾಡುತ್ತಾರೆ. ಆದರೆ ಈ ಕಾಯಕ ಕೆಲ ದಿನಗಳಲ್ಲಿ ನಿಲ್ಲುತ್ತದೆ. ಮಗನ ಕಲಿಯುವ ಉಮೇದನ್ನು ಮನಗಂಡ ತಂದೆ ಶ್ರೀಕಾಂತ್ ನನ್ನು ಸ್ಥಳೀಯ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಾರೆ.

ಎಲ್ಲರಂತೆ ಕಲಿಯುವ ಆಸೆಯಿಂದ ಶಾಲೆಯ ಮೆಟ್ಟಲೇರಿದ  ಶ್ರೀಕಾಂತ್ ಗೆ ನಿರಾಶೆಯಾಗುತ್ತದೆ. ಗೆಳತನದ ಯಾವ ಆಧಾರವೂ ದೊರೆಯುವುದಿಲ್ಲ. ಕೊನೆಯ ಬೆಂಚ್ ನಲ್ಲಿ ಮೌನ ವಿದ್ಯಾರ್ಥಿಯಂತೆ ಸುಮ್ಮನೆ ಕೂತು ಪಾಠವನ್ನುಆಲಿಸುವುದು ಮಾತ್ರ ಶಾಲಾ ದಿನದ ಪ್ರಮುಖ ದಿನ ಅಭ್ಯಾಸವಾಗುತ್ತದೆ. ಕೆಲವೇ ದಿನಗಳ ಬಳಿಕ ಮತ್ತೆ ಶ್ರೀಕಾಂತ್ ನ ತಂದೆ ತನ್ನ ಮಗನನ್ನು ವಿಶೇಷ ಮಕ್ಕಳ ಶಾಲೆಗೆ ಸೇರಿಸುತ್ತಾರೆ. ಇಲ್ಲಿಂದ ಶ್ರೀಕಾಂತ್ ಓದಿನಲ್ಲಿ ತೋರಿಸಿದ ಆಸಕ್ತಿ ಅಪ್ಪ ಅಮ್ಮನಲ್ಲಿ ಹೊಸ ಮಂದಹಾಸವನ್ನು ಮೂಡಿಸುತ್ತದೆ.

ಶ್ರೀಕಾಂತ್ ಓದಿನಲ್ಲಿ ಸಾಧನೆಯನ್ನು ಮಾಡುತ್ತಾನೆ. ಹೈಸ್ಕೂಲಿ ನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಆಗುತ್ತಾನೆ. ಮುಂದೆ ಈತ ಇನ್ನಷ್ಟು ಕಲಿಯುವ ಆಸಕ್ತಿಯ ಭಾಗವಾಗಿ ಪಿಯುಸಿಯ ಕಲಿಕೆಗೆ ಕಾಲೇಜಿನ ಮೆಟ್ಟಿಲನ್ನು ಹತ್ತಲು ಹೊರಡುತ್ತಾನೆ. ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನುಆಯ್ಕೆ ಮಾಡಲು ಹೊರಡುವಾಗ ಅಲ್ಲಿಯ ಕಾಲೇಜು ಬೋರ್ಡ್ ಅಂದರೆ ಆಂಧ್ರ ಸ್ಟೇಟ್ ಬೋರ್ಡ್ ದೃಷ್ಟಿಹೀನ ಮಕ್ಕಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಆಗದು ಎನ್ನುತ್ತಾರೆ .ಶ್ರೀಕಾಂತ್ ಏನೇ ಆಗಲಿ ತಾನು ಮುಂದೆ ಕಲಿಯಲೇ ಬೇಕು ಎನ್ನುವ ಅಚಲ ನಿರ್ಧಾರದಿಂದ ಹಿಂದೆ ಸರಿಯದೇ ಶಿಕ್ಷಕರೊಬ್ಬರ ಸಹಾಯದಿಂದ ಆಂಧ್ರ ಸ್ಟೇಟ್ ಬೋರ್ಡ್ ವಿರುದ್ದ ಕೋರ್ಟಿನಲ್ಲಿ ಪ್ರಶ್ನೆ ಎತ್ತಿ ಆರು ತಿಂಗಳ ಹೋರಾಟದ ಬಳಿಕ ದ್ವಿತೀಯ ಪಿಯುಸಿಯ ಪರೀಕ್ಷೆ ಬರೆದು  ಶೇ.98 ರಷ್ಟು ಅಂಕಗಳನ್ನುಗಳಿಸಿ ಸಾಧನೆಯನ್ನು ಮಾಡುತ್ತಾರೆ. ಸಾಧಿಸಲು ಇಷ್ಟು ಸಲ್ಲದು ಎನ್ನುವ ಮಾತಿಗೆ ಮುನ್ನೆಡೆದು ಶ್ರೀಕಾಂತ್ ಐಐಟಿಯ ಪ್ರವೇಶಕ್ಕಾಗಿ ಪ್ರತಿಷ್ಟಿತ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಅಲೆದಾಡುತ್ತಾನೆ. ಅಲ್ಲಿ ಎಲ್ಲಿಯೂ ಈತನ ಅಂಕಗಳತ್ತ ಯಾರ ನೋಟವೂ ಬೀರದೇ ದೃಷ್ಟಿಹೀನತೆ ನೂನ್ಯತೆಯೇ ಮುಖ್ಯವಾಗಿ ಕಾಣುತ್ತದೆ.

ಅಂಧ ಹುಡುಗ ಅಮೇರಿಕಾದಲ್ಲಿ ಗೆದ್ದ.. :  ಭಾರತೀಯ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ವಿಫಲನಾದ ಶ್ರೀಕಾಂತ್ ಅದೇ ಘಳಿಗೆಯಲ್ಲಿ ಇಂಟರ್ ನೆಟ್ ನಲ್ಲಿ ಹುಡುಕಾಡಿ ತನ್ನಂಥವವರಿಗೆ ಎಲ್ಲಿಯಾದರೂ ಕಲಿಯುವ ಅವಕಾಶವಿದೆಯಾ? ಎನ್ನುವುದನ್ನು ನೋಡಿದಾಗ ಅಮೇರಿಕಾದ ಒಂದು ಖಾಸಗಿ ಕಾಲೇಜಿನಲ್ಲಿ ಅವಕಾಶ ಸಿಗುತ್ತದೆ. ಅಲ್ಲಿ ಶ್ರೀಕಾಂತ್ ಕಠಿಣ ಅಭ್ಯಾಸವನ್ನು ಮಾಡಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗುತ್ತಾನೆ. ಇದರ ಜೊತೆಗೆ ಇಡೀ ಕಾಲೇಜಿನಲ್ಲಿ ದೃಷ್ಟಿಹೀನ ವಿದ್ಯಾರ್ಥಿಯಾಗಿ ತೇರ್ಗಡೆ ಹೊಂದಿದ್ದ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರನಾಗುತ್ತಾನೆ.

ಲಕ್ಷ ಸಂಬಳ ಸಿಗುವ ಕೆಲಸದ ಅವಕಾಶವನ್ನು ಬಿಟ್ಟು ಬಂದ! : ಶ್ರೀಕಾಂತ್ ಎಷ್ಟು ಪ್ರಭಾವ ಬೀರುತ್ತಾನೆ ಅಂದರೆ ಅಮೇರಿಕಾದ ಖಾಸಗಿ ಕಂಪೆನಿಗಳು ಲಕ್ಷ ಸಂಬಳ ಸಿಗುವ ಕೆಲಸವನ್ನು ನೀಡುವುದಾಗಿ ಶ್ರೀಕಾಂತ್ ನನ್ನು ಕರೆಯುತ್ತಾರೆ ಆದರೆ ಶ್ರೀಕಾಂತ್ ಈ ಎಲ್ಲಾ ಅವಕಾಶವನ್ನು ಬಿಟ್ಟು ಭಾರತಕ್ಕೆ ಮರಳಿ ಬರುವ ನಿರ್ಣಯವನ್ನು ಮಾಡುತ್ತಾನೆ. ಭಾರತಕ್ಕೆ ಬಂದು ಶ್ರೀಕಾಂತ್ ಮಾಡಿದ ಕಾರ್ಯ ಎಲ್ಲರಿಗೂ ಅನುಕರ್ಣಿಯ.

ತನ್ನಂತೆ ದೃಷ್ಟೀಹೀನರ ಬದುಕಿಗೆ ಬೆಳಕಾದ ಶ್ರೀಕಾಂತ್ : ತಾನು ಅಂಧತ್ವದಿಂದ ತನ್ನ ಬದುಕನ್ನು ದೂಡುತ್ತಿದ್ದೇನೆ. ನನ್ನಂತೆ ಇಲ್ಲಿ ನೂರಾರು ಮಂದಿ ಈ ದೃಷ್ಟಿ ಹೀನತೆಯಿಂದ ಬದುಕನ್ನು ಕಟ್ಟಿಕೊಳ್ಳಲು  ಅಲೆದಾಟ ನಡೆಸುತ್ತಿರಬಹುದು. ಅವರಿಗಾಗಿ ತಾನು ಏನಾದರೂ ಮಾಡಬೇಕು ಎನ್ನುವ ಮಾತು ಕನಸಾಗಿ ಕಟ್ಟಿ ವಾಸ್ತವಾಗಿಸುವ ದಿನಗಳು ಬರುತ್ತದೆ. ಶ್ರೀಕಾಂತ್  ‘ಬೋಲೆಂಟ್ ಇಂಡಸ್ಟ್ರಿಯಸ್ ‘ ಯನ್ನು ಪ್ರಾರಂಭಿಸುತ್ತಾರೆ. ಈ ಸಂಸ್ಥೆ ದೃಷ್ಟಿ ಹೀನ ಜನರಿಗೆ ಉದ್ಯೋಗದ ಅವಕಾಶವನ್ನು ಮಾಡಿಕೊಡುವುದರ ಜೊತೆಗೆ ಅವರ ಆರ್ಥಿಕ ಸಹಾಯಕ್ಕಾಗಿ ನಿಲ್ಲುತ್ತದೆ. ಶ್ರೀಕಾಂತ್ ಪ್ರಾರಂಭಿಸಿದ ಈ ಕಂಪೆನಿ ವಾರ್ಷಿಕ ಅಂದಾಜು 50 ಕೋಟಿ ಆದಾಯವನ್ನು ಗಳಿಸುತ್ತಿದೆ.

ಇಂದು ಶ್ರಿಕಾಂತ್ ಒಬ್ಬ ಯಶಸ್ವಿ ಉದ್ಯಮಿಗಳ್ಲೊಬ್ಬರು. ಅಂಧತ್ವ ಅವರಿಗೆ ತೊಡಕಾಗಿ ಅವರು ಸುಮ್ಮನೆ ಕೂತು ಕೂರಗುತ್ತಿದ್ದರೆ ಇವತ್ತು ಶ್ರೀಕಾಂತ್ ಇಷ್ಟು ಉನ್ನತ ಮಟ್ಟದಲ್ಲಿ ಬೆಳೆದು ನಿಲುತ್ತಿರಲಿಲ್ಲ. ಅದಕ್ಕಾಗಿಯೇ ಹೇಳೋದು ಒಬ್ಬರನ್ನು ನೋಡುವ ದೃಷ್ಟಿ ಬದಲಾಯಿಸು ಆಗ ಅಲ್ಲಿನ ದೃಶ್ಯವೂ ಬದಲಾಗುತ್ತದೆಂದು..

 

ಸುಹಾನ್ ಶೇಕ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಒಂದೆಡೆ ರೈಲ್ವೆ ಹಳಿ ಮೇಲೆ ತಾಯಿ, ಇಬ್ಬರು ಮಕ್ಕಳ ಶವ, ಮೂರನೇ ಮಗು ಜೀವಂತವಾಗಿತ್ತು

ಒಂದೆಡೆ ರೈಲ್ವೆ ಹಳಿ ಮೇಲೆ ತಾಯಿ, ಇಬ್ಬರು ಮಕ್ಕಳ ಶವ, ಮೂರನೇ ಮಗು ಜೀವಂತವಾಗಿತ್ತು!

ರಾಜ್ಯದಲ್ಲೇ ಸಿಕ್ತಾ ಮಹಾಮಾರಿಗೆ ಔಷಧಿ?; ಯಶಸ್ವಿಯಾಯ್ತು ಕಜೆ ಔಷಧಿ ಪ್ರಯೋಗ!

ರಾಜ್ಯದಲ್ಲೇ ಸಿಕ್ತಾ ಮಹಾಮಾರಿಗೆ ಔಷಧಿ?; ಯಶಸ್ವಿಯಾಯ್ತು ಕಜೆ ಔಷಧಿ ಪ್ರಯೋಗ!

ಮೋದಿ, ಶಾ ಅವರಿಂದ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ: ಖರ್ಗೆ ಆರೋಪ

ಮೋದಿ, ಶಾ ಅವರಿಂದ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ: ಖರ್ಗೆ ಆರೋಪ

ವಿಜಯಪುರ ಕೋವಿಡ್ ಮಹಾ ಸ್ಫೋಟ : ಮತ್ತೆ 39 ಜನರಿಗೆ ಸೋಂಕು

ವಿಜಯಪುರ ಕೋವಿಡ್ ಮಹಾ ಸ್ಫೋಟ : ಮತ್ತೆ 39 ಜನರಿಗೆ ಸೋಂಕು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಕೋವಿಡ್ ಸೋಂಕು ದೃಢ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಕೋವಿಡ್ ಸೋಂಕು ದೃಢ

ರಾಜ್ಯದಲ್ಲಿ ಸೋಂಕು ಸ್ಪೋಟ: 1500 ಪ್ರಕರಣ ; ಬೆಂಗಳೂರಲ್ಲೇ 889 ಸೋಂಕಿತರು!

ರಾಜ್ಯದಲ್ಲಿ ಸೋಂಕು ಸ್ಪೋಟ: 1502 ಪ್ರಕರಣ ; ಬೆಂಗಳೂರಲ್ಲೇ 889 ಸೋಂಕಿತರು!

ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸಲು ಸರ್ಕಾರ ಸಿದ್ಧತೆ

ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸಲು ಸರ್ಕಾರ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

web-tdy-1

ಶವ ಪೆಟ್ಟಿಗೆ ಹೊತ್ತು ಕುಣಿಯುವ ಈ ಗುಂಪಿನ ಹಿಂದೆ ಒಂದು ರೋಚಕ ಪಯಣದ ಕತೆಯಿದೆ..

ನಟನ ಸಾವಿನ ಸುದ್ದಿಯಿಂದ ಧೋನಿಗೆ ಆಘಾತ: ರೀಲ್‌ ಧೋನಿ ಜತೆಗೆ ರಿಯಲ್‌ ಧೋನಿ ಸ್ನೇಹ ಹೇಗಿತ್ತು?

ನಟನ ಸಾವಿನ ಸುದ್ದಿಯಿಂದ ಧೋನಿಗೆ ಆಘಾತ: ರೀಲ್‌ ಧೋನಿ ಜತೆಗೆ ರಿಯಲ್‌ ಧೋನಿ ಸ್ನೇಹ ಹೇಗಿತ್ತು?

web

ರೈಲ್ವೇ ಹಳಿ ಪಕ್ಕ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿರುವ ಪೊಲೀಸ್ ಸಿಬ್ಬಂದಿಗಳ ಕಾರ್ಯ ವೈರಲ್

ಫ್ಲಿಂಟಾಫ್ ನಿಂದ ಸಾರಾ ಟೇಲರ್ ವರೆಗೆ.. ಕ್ರಿಕೆಟ್ ಅಂಗಳದಲ್ಲಿ ಖಿನ್ನತೆ!

ಫ್ಲಿಂಟಾಫ್ ನಿಂದ ಸಾರಾ ಟೇಲರ್ ವರೆಗೆ.. ಕ್ರಿಕೆಟ್ ಅಂಗಳದಲ್ಲಿ ವಿಚಿತ್ರ ಖಿನ್ನತೆ!

web-tdy-1

ಬಾಹುಬಲಿ ಹಾಡನ್ನು ಹಾಡಿ ವೈರಲ್ ಆದ ಈತನಿಗೆ ಕನ್ನಡ ಹಾಡುಗಳೇ ಸಾಧನೆಗೆ ಸ್ಫೂರ್ತಿಯಂತೆ..

MUST WATCH

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar


ಹೊಸ ಸೇರ್ಪಡೆ

ಒಂದೆಡೆ ರೈಲ್ವೆ ಹಳಿ ಮೇಲೆ ತಾಯಿ, ಇಬ್ಬರು ಮಕ್ಕಳ ಶವ, ಮೂರನೇ ಮಗು ಜೀವಂತವಾಗಿತ್ತು

ಒಂದೆಡೆ ರೈಲ್ವೆ ಹಳಿ ಮೇಲೆ ತಾಯಿ, ಇಬ್ಬರು ಮಕ್ಕಳ ಶವ, ಮೂರನೇ ಮಗು ಜೀವಂತವಾಗಿತ್ತು!

ರಾಜ್ಯದಲ್ಲೇ ಸಿಕ್ತಾ ಮಹಾಮಾರಿಗೆ ಔಷಧಿ?; ಯಶಸ್ವಿಯಾಯ್ತು ಕಜೆ ಔಷಧಿ ಪ್ರಯೋಗ!

ರಾಜ್ಯದಲ್ಲೇ ಸಿಕ್ತಾ ಮಹಾಮಾರಿಗೆ ಔಷಧಿ?; ಯಶಸ್ವಿಯಾಯ್ತು ಕಜೆ ಔಷಧಿ ಪ್ರಯೋಗ!

ಮೋದಿ, ಶಾ ಅವರಿಂದ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ: ಖರ್ಗೆ ಆರೋಪ

ಮೋದಿ, ಶಾ ಅವರಿಂದ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ: ಖರ್ಗೆ ಆರೋಪ

ವಿಜಯಪುರ ಕೋವಿಡ್ ಮಹಾ ಸ್ಫೋಟ : ಮತ್ತೆ 39 ಜನರಿಗೆ ಸೋಂಕು

ವಿಜಯಪುರ ಕೋವಿಡ್ ಮಹಾ ಸ್ಫೋಟ : ಮತ್ತೆ 39 ಜನರಿಗೆ ಸೋಂಕು

ಮುಂಗಾರು ಮಳೆಗೆ ದೇಹ ಬೆಚ್ಚಗಾಗಿಸುವ ‘ಗ್ರೀನ್ ಚಿಕನ್ ಚಾಪ್ಸ್’

ಮುಂಗಾರು ಮಳೆಗೆ ದೇಹ ಬೆಚ್ಚಗಾಗಿಸುವ ‘ಗ್ರೀನ್ ಚಿಕನ್ ಚಾಪ್ಸ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.