ಇವರೆಲ್ಲಾ ಪ್ರತಿಷ್ಠಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಭಾರತೀಯ ಮಹಿಳೆಯರು

ಮಿಥುನ್ ಪಿಜಿ, Nov 5, 2019, 6:00 PM IST

ವರ್ಷಂಪ್ರತಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದಾಗ ಈ ಬಾರಿಯು ಕೂಡ ಹುಡುಗಿಯರದ್ದೆ ಮೇಲುಗೈ ಎಂಬ ಮಾತನ್ನು ಕೇಳಿರುತ್ತೇವೆ. ಅದೇ ರೀತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದ್ದವು. ಇಂದು ಭಾರತದಲ್ಲಿ ವಿದ್ಯುನ್ಮಾನ ವಿಭಾಗ, ಕಂಪ್ಯೂರ್ ಸೈನ್ಸ್ ವಿಭಾಗ, ಐಟಿ ವಿಭಾಗ, ಬಯೋ ಇಂಜಿನಿಯರಿಂಗ್ ವಿಭಾಗಗಳಲ್ಲಿ ದಾಖಲಾಗುವ ಯುವತಿಯರ ಸಂಖ್ಯೆ  ಗಮನಾರ್ಹವಾಗಿ ಏರಿದೆ. ಆ ಕಾರಣದಿಂದ  ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಕೂಡ ಇಂದು ಪ್ರಮುಖವಾದ ಪಾತ್ರವಹಿಸುತ್ತಿದ್ದಾರೆ. ಭಾರತದ ಜಿಡಿಪಿ ಹೆಚ್ಚಳ ದಲ್ಲೂ ಇವರ ಕೊಡುಗೆಯಿರುವುದು ಗಮನಾರ್ಹ.

ಅಶ್ವಿನಿ ಅಶೋಕನ್

ಇವರು ಮ್ಯಾಡ್ ಸ್ಟ್ರೀಟ್ ನ ಡೆನ್ ನ ಸಂಸ್ಥಾಪಕಿಯಾಗಿದ್ದಾರೆ.  ತಮ್ಮ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದ ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದ ಕಂಪೆನಿ ಸ್ಥಾಪಿಸಿದ ಶ್ರೇಯಸ್ಸು ಅಶ್ವಿನಿ  ಆಶೋಕನ್ ಅವರಿಗೆ ಸಲ್ಲುತ್ತದೆ. ಅನ್ ಲೈನ್ ಪೋರ್ಟಲ್ ಗೆ ಈ ಸಂಸ್ಥೆ ವಿಷುವಲ್ ಸರ್ಚ್ ಗೆ ಸಹಕಾರಿಯಾಗಿದೆ. ಆನ್‌ಲೈನ್ ಶಾಪಿಂಗ್ ಮಾಡುವಾಗ ಅದರಲ್ಲೂ ಬಟ್ಟೆಗಳನ್ನು ಕೊಳ್ಳುವಾಗ ಆ ಬಟ್ಟೆ ನಮಗೆ ಹೊಂದಬಲ್ಲದೇ, ನಮ್ಮ ದೇಹದ ಆಕಾರಕ್ಕೆ ಬಣ್ಣಕ್ಕೆ ಹೊಂದಬಲ್ಲದೇ ಎಂಬೆಲ್ಲ ಗೊಂದಲಗಳಿಗೆ ಎಐ ಮೂಲಕ ಅಶ್ವಿನಿ ಉತ್ತರ ಕಂಡುಹಿಡಿದಿದ್ದಾರೆ. ಚೆನ್ನೈ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಎರಡು ತಂಡಗಳನ್ನಿಟ್ಟು ಕೆಲಸಮಾಡುತ್ತಿದ್ದಾರೆ. ಇವರ ಕಂಪನಿಯಲ್ಲಿ ಶೇ.60 ರಷ್ಟು ಮಹಿಳಾ ಉದ್ಯೋಗಿಗಳೇ ಇದ್ದಾರೆ. ಇವರು ತಂತ್ರಜ್ಞಾನ ಕ್ಷೇತ್ರದಲ್ಲಿ ನಮಗೆ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ.

ರೇಷ್ಮಾಸೌಜನಿ

ಭಾರತ ಮೂಲದ  ಅಮೆರಿಕ ನಿವಾಸಿ  ರೇಷ್ಮಾಸೌಜನಿ 2012 ರಲ್ಲಿ ತಂತ್ರಜ್ಙಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.  ‘ಗರ್ಲ್ಸ್ ಊ ಕೋಡ್’ ಎಂಬ ಕಂಪೆನಿಯನ್ನು ಹುಟ್ಟು ಹಾಕಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದದಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶವನ್ನು ಒದಗಿಸಿಕೊಡುತ್ತಾರೆ. ರೋಬಾಟಿಕ್ಸ್, ವೆಬ್ ಡಿಸೈನ್ ಮತ್ತು ಪ್ರೋಗ್ರಾಮಿಂಗ್ ಗಳನ್ನು ಸಾವಿರಾರು ಮಂದಿಗೆ ಕಲಿಸಿಕೊಟ್ಟು  ಇಲ್ಲಿಯವರೆಗೆ ಸುಮಾರು 50,000 ಮಹಿಳಾ ಟೆಕ್ಕಿಗಳನ್ನು ರೂಪಿಸಿದ್ದಾರೆ. 2020ರ ವೇಳೆಗೆ 1 ಮಿಲಿಯನ್ ಜನರನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತರನ್ನಾಗಿ ಮಾಡುವ ಯೋಜನೆಯನ್ನು ಇರಿಸಿಕೊಂಡಿದ್ದಾರೆ.

ದೇಬ್‌ ಜಾನಿ ಘೋಷ್

ಇವರು ವ್ಯಾವಹಾರಿಕ ಕ್ಷೇತ್ರದ ಸಮರ್ಥ ನಾಯಕಿ. ಇಂಟೆಲ್ ಸೇಲ್ಸ್ ಹಾಗೂ ಮಾರಾಟ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿರುವ ಇವರು ಸುಮಾರು 17 ವರ್ಷಗಳ ಕಾಲ ದಕ್ಷಿಣ ಏಷಿಯಾದ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದರು. ಕಾರ್ಫೋರೇಟ್ ಸಂಸ್ಥೆಯ ಹಂತಗಳನ್ನು ಏರುವ ಹಾಗೂ ಸ್ವಂತ ಉದ್ಯಮ ಸ್ಥಾಪಿಸುವ ಯಾವುದೇ ಕನಸನ್ನಾದರೂ ಮುಕ್ತವಾಗಿ ಕಾಣಿ ಮತ್ತು ನನಸು ಮಾಡಿಕೊಳ್ಳುವತ್ತ ಪ್ರಯತ್ನಿಸಿ. ಇದು ದೇಬ್‌ ಜಾನಿ ಭಾರತೀಯ ಮಹಿಳೆಯರಿಗೆ ಉಪದೇಶಿಸುವ ಮಂತ್ರ. ಮಹಿಳೆಯರ ಸರ್ವಾಂಗಿಣ ಅಭಿವೃದ್ಧಿಗೆ ಇಂಟೆಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಯಾವುದೇ ಉದ್ಯಮ ಬೆಳೆಯಬೇಕೆಂದರೆ ಅಲ್ಲಿ ಲಿಂಗಬೇಧವಿರಬಾರದು ಎನ್ನುತ್ತಾರೆ. ಈ ಎಲ್ಲಾ ಕಾರಣದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.

ಗೀತಾಕಣ್ಣನ್

ಭಾರತದಲ್ಲಿರುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬಲ್ಲ ಪರಿಸರವನ್ನು ನಿರ್ಮಾಣ ಮಾಡಲು ‘ದಿ ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್’ ಶ್ರಮಿಸುತ್ತಿದೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಗಳಾದ, ‘ನ್ಯಾಶನಲ್ ಸೈನ್ಸ್ & ಟೆಕ್ನಾಲಜಿ ಎಂಟರ್ ಪ್ರಿನರ್ ಶಿಪ್  ಡೆವಲಪ್‍ಮೆಂಟ್ ಬೋರ್ಡ್’, `ಗವರ್ನ್‍ಮೆಂಟ್ ಆಫ್ ಇಂಡಿಯಾ & ದಿ ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್’ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. `ವುಮೆನ್ ಎಂಟರ್ ಪ್ರಿನರ್ ಕ್ವೆಸ್ಟ್ ಪ್ರೋಗ್ರಾಮ್’ ಮೂಲಕ ಅಂತಹ ಪರಿಸರ ನಿರ್ಮಾಣಕ್ಕೆ `ಎಬಿಐ’ ಯೋಜನೆ ರೂಪಿಸಿದೆ. ಭಾರತದ ಶಕ್ತಿಯುತ ಆರ್ಥಿಕತೆಗೆ ಪೂರಕವಾಗುವಂತೆ ತಳಮಟ್ಟದಿಂದ ಅವರನ್ನು ಪ್ರೋತ್ಸಾಹಿಸುವುದು ಅತ್ಯಂತ ಕಷ್ಟಕರ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮುನ್ನಡೆಸುತ್ತಿರುವ ಉದ್ಯಮಗಳ ಸಂಖ್ಯೆ ಹೆಚ್ಚಾಗಿದೆ, ಇದು ನಿಜಕ್ಕೂ ಉತ್ತಮ ಬೆಳವಣಿಗೆ” ಎಂದು ಅನಿತಾ ಬೊರ್ಗ್ ಇನ್‍ಸ್ಟಿಟ್ಯೂಟ್‍ನ ಇಂಡಿಯಾ ಎಂಡಿ  ಗೀತಾ ಕಣ್ಣನ್  ಹೇಳುತ್ತಾರೆ. ಈ ಮೂಲಕ ಪ್ರತಿವರ್ಷ ವೂ ಹೊಸ ಮಹಿಳಾ ಉದ್ಯಮಿಗಳನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.

ದೀಪಾ ಮಾಧವನ್‌

ದೀಪಾ ಮಾಧವನ್‌ ಪೇ ಪಾಲ್‌ ಸಂಸ್ಥೆಯನಲ್ಲಿ ನಿರ್ದೇಶಕಿಯಾಗಿದ್ದಾರೆ. ಇವರು ಮೂಲತಃ  ಚೆನ್ನೈನವರು. ಪೇ ಪಾಲ್‌ ನಲ್ಲಿ ಮಹಿಳೆಯರನ್ನು ಮರಳಿ ಉದ್ಯೋಗದತ್ತ ಕರೆತರುವ ರೀಚಾರ್ಜ್‌ ಕಾರ್ಯಕ್ರಮ ಹಿಂದೆ ಇವರದ್ದೇ ಶ್ರಮವಿದೆ. ಈ ಮೊದಲು ಡೆಲಾಯಿಟಿಯಲ್ಲಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಇವರು ತಮ್ಮ ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ ಎಂಬ ಕಾರಣ ನೀಡಿ  ಉದ್ಯೋಗ ತೊರೆದಿದ್ದರು. ಆದರೆ ಮತ್ತೆ ಉದ್ಯೋಗದತ್ತ ಹೊರಳಿದಾಗ, ತನ್ನ ಮಾದರಿಯಲ್ಲೇ  ಅನೇಕ ಮಹಿಳೆಯರು ಉದ್ಯೋಗ ಅರುಸುವವರಿರುತ್ತಾರೆ ಎಂದು ಅರಿತು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದರು. ಪೇ ಪಾಲ್‌ ಮೂಲಕ ‘ಗರ್ಲ್ಸ್‌ ಇನ್‌ ಟೆಕ್‌’ಮತ್ತು ‘ಯೂನಿಟಿ’ಹೆಸರಿನ ಕಾರ್ಯಕ್ರಮಗಳ ಮೂಲಕ ಮಹಿಳಾ ಜಾಲವನ್ನು ಕಟ್ಟಿದರು. ನಾಯಕತ್ವದ ಕೌಶಲ್ಯಗಳು ಬೆಳೆಸಿಕೊಳ್ಳಲು ಅಗತ್ಯವಾದ ನೆರವನ್ನು ಪೂರೈಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...