ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ


ಗಣೇಶ್ ಹಿರೇಮಠ, Mar 29, 2021, 8:30 AM IST

fjxdjrsz

ಮಧ್ಯ ಪ್ರದೇಶ : ಈತ ಎಂಬಿಎ ಪದವಿ ಮುಗಿಸಿ, ಜೀವನದ ನೌಕೆ ಸಾಗಿಸಲು ಒಂದು ಜಾಬ್ ಗಿಟ್ಟಿಸಿಕೊಂಡು ನೆಮ್ಮದಿಯಾಗಿ ಇರಬಹುದಿತ್ತು. ಆದರೆ, ಮಧ್ಯಮ ವರ್ಗದ ಕುಟುಂಬದಲ್ಲಿ ಜನಸಿದ ಈ ಉತ್ಸಾಹಿ ಹುಡುಗ ಹಾಗೆ ಮಾಡಲಿಲ್ಲ. ಇವನ ಕಣ್ಣುಗಳಲ್ಲಿ ನಿರೀಕ್ಷೆಗಳ ಹೊಳೆ ಹರಿಯುತ್ತಿತ್ತು. ತಡಮಾಡದೆ ಶಿಕ್ಷಣಕ್ಕೆ ಶರಣು ಹೇಳಿ ಟೀ ಮಾರಲು ಮುಂದಾಗುತ್ತಾನೆ. ಮುಂದೆ ಈತ ವರ್ಷಕ್ಕೆ 3 ಕೋಟಿ ರೂ. ಸಂಪಾದಿಸುವ ಸಾಹಸಿ ಸಾಧಕನಾಗುತ್ತಾನೆ.

ಹೌದು, ಇದು ಯಾವುದೋ ಸಿನಿಮಾದಲ್ಲಿಯ ಅಥವಾ ಕಾದಂಬರಿಯಲ್ಲಿ ಬರುವ ಕಥೆಯಲ್ಲ. ‘ನಾನು ಎಲ್ಲರಂತೆ ಅಲ್ಲ, ಬದುಕಲು ಡಿಗ್ರಿ ಸರ್ಟಿಫಿಕೇಟ್ ಬೇಕಾಗಿಲ್ಲ, ಬೇಕಿರುವುದು ಆತ್ಮವಿಶ್ವಾಸ ಹಾಗೂ ಛಲ ಎಂದು ಎಲ್ಲರಿಗೂ ತೋರಿಸಿಕೊಟ್ಟ 22 ವರ್ಷ ವಯಸ್ಸಿನ ಸಾಹಸಿ ಯುವಕ ಪ್ರಪುಲ್ ಬಿಲ್ಲೋರ್ ಅವರ ರಿಯಲ್ ಕಹಾನಿ.

ಕಿರಿಯ ವಯಸ್ಸಿನಲ್ಲಿಯೇ ಪ್ರಪುಲ್ ಕೋಟ್ಯಧಿಪತಿಯಾಗಿದ್ದಾನೆ. ನಮ್ಮ ಬದುಕು ಇಷ್ಟಕ್ಕೆ ಮುಗಿತು ಎಂದು ಜಿಗುಪ್ಸೆ ಪಟ್ಟುಕೊಳ್ಳುವ ಅದೆಷ್ಟೋ ಜನರಿಗೆ ಸ್ಪೂರ್ತಿಯ ಚಿಲುಮೆ ಆಗಿದ್ದಾನೆ. ಶ್ರದ್ಧೆ, ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಅಷ್ಟಕ್ಕೂ ಪ್ರಪುಲ್ ಸಾಧಿಸಿದ್ದು ಏನು ಗೊತ್ತಾ? ರಸ್ತೆ ಬದಿ ಚಾಯ್ ಮಾರಿ ಕೋಟಿ ಕೋಟಿ ಹಣ ಗಳಿಸುತ್ತಿರುವ ಈ ಯುವಕನ ಅಸಲಿ ಕಥೆ ಇಲ್ಲಿದೆ ನೋಡಿ.

ಸಿಎಟಿ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗದ ಪ್ರಫುಲ್ ಶಿಕ್ಷಣವನ್ನೇ ಮೊಟಕುಗೊಳಿಸಲು ಮುಂದಾಗುತ್ತಾನೆ. ಆದರೆ, ಈತನ ತಂದೆ ತಾಯಿಗಳು ಕೇಳಬೇಕಲ್ಲ. ಎಲ್ಲ ಪೋಷಕರಂತೆ ತನ್ನ ಮಗ ಒಂದು ಡಿಗ್ರಿ ಮುಗಿಸಿ ಎಲ್ಲಿಯಾದರೂ ಕೆಲಸಕ್ಕೆ ಸೇರಲಿ ಎನ್ನುವುದು ಪ್ರಪುಲ್ ಪಾಲಕರ ಬಯಕೆಯಾಗಿರುತ್ತದೆ.

ಶಿಕ್ಷಣಕ್ಕೆ ಗುಡ್ ಬೈ ಹೇಳಿ ದೇಶ ಸಂಚಾರಕ್ಕೆ ಅಣಿಯಾಗಬೇಕೆಂದು ಯೋಜನೆ ಹಾಕಿಕೊಂಡಿದ್ದ ಪ್ರಫುಲ್, ಪಾಲಕರ ಒತ್ತಾಸೆಗೆ ಮಣಿದು ಅಹ್ಮದಾಬಾದ್‍ನಲ್ಲಿರುವ ಕಾಲೇಜ್‍ವೊಂದರಲ್ಲಿ ಎಂಬಿಎ ಅಡ್ಮಿಷನ್ ಪಡೆಯುತ್ತಾನೆ. ಕಾಲೇಜಿಗೆ ಹೋಗುವುದರ ಜತೆಗೆ ರೆಸ್ಟೋರೆಂಟ್‍ವೊಂದರಲ್ಲಿ ಪಾರ್ಟ್ ಟೈಮ್ ಜಾಬ್‍ಗೆ ಸೇರಿಕೊಳ‍್ಳುತ್ತಾನೆ.

ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ

ಅದೊಂದು ದಿನ ತಾನೇ ಒಂದು ಟೀ ಅಂಗಡಿ ತೆರೆಯುವ ಯೋಚನೆ ಈತನ ಮಿದುಳಿನಲ್ಲಿ ಮಿಂಚಿನಂತೆ ಸುಳಿಯುತ್ತದೆ. ತಡಮಾಡದೆ ಅಹ್ಮದಾಬಾದ್‍ನಲ್ಲಿ ರಸ್ತೆ ಬದಿ ಪುಟ್ಟ ಟೀ ಸ್ಟಾಲ್ ಶುರು ಮಾಡುತ್ತಾನೆ. ಮೊದಲ ದಿನ ಈತ ಮಾರಿದ್ದು ಕೇವಲ ಒಂದು ಟೀ ಮಾತ್ರ.

ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ

ಪ್ರಪುಲ್‍ನ ಈ ನಿರ್ಧಾರಕ್ಕೆ ಯಾರ ಬೆಂಬಲವೂ ಸಿಗುವುದಿಲ್ಲ. ಬದಲಾಗಿ ಈತನನ್ನು ನೋಡಿ ಗೇಲಿ ಮಾಡಿ ಹೀಯಾಳಿಸಿದವರೇ ಜಾಸ್ತಿ. ಸಂಬಂಧಿಕರು, ಸ್ನೇಹಿತರು ಯಾರೂ ಕೂಡ ಪ್ರಪುಲ್‍ನ ಬೆನ್ನಿಗೆ ನಿಲ್ಲುವುದಿಲ್ಲ. ಇದ್ಯಾವುದರಿಂದಲೂ ಎದೆಗುಂದದ ಪ್ರಫುಲ್ ಟೀ ಮಾರುವುದರಲ್ಲಿಯೇ ಮಗ್ನನಾಗುತ್ತಾನೆ. ಕಾಲೇಜು ತೈಜಿಸಿ ಪೂರ್ಣ ಸಮಯ ಟೀ ಅಂಗಡಿಗೆ ಮೀಸಲಿಡುತ್ತಾನೆ. ಕಷ್ಟ ಪಟ್ಟು ದುಡಿಯುತ್ತಾನೆ. ಕೆಲವು ತಿಂಗಳುಗಳ ನಂತರ ತಿಂಗಳಿಗೆ 15,000 ರೂ. ಸಂಪಾದಿಸುತ್ತಾನೆ.

ದಿನಗಳು ಉರುಳಿದಂತೆ ಪ್ರಪುಲ್  ತಯಾರಿಸುವ ಟೀ ಫೇಮಸ್ ಆಗುತ್ತದೆ. ಗ್ರಾಹಕರ ಜತೆ ಈತನ ಒಡನಾಟ ಪ್ರಫುಲ್ ಕೈ ಹಿಡಿಯುತ್ತದೆ. ತನ್ನ ಅಂಗಡಿಗೆ ‘ಎಂಬಿಎ ಚಾಯ್ ವಾಲಾ ’ ಎಂದು ನಾಮಕರಣ ಮಾಡುತ್ತಾನೆ. ನೋಡು ನೋಡುತ್ತಿದ್ದಂತೆ ದೊಡ್ಡ ಉದ್ಯಮಿಯಾಗಿ ಬೆಳೆದು ನಿಲ್ಲುತ್ತಾನೆ. ಸದ್ಯ ಪ್ರಪುಲ್ ಎಂಬಿಎ ಚಾಯ್ ವಾಲಾ ಎಂದು ದೇಶದಲ್ಲಿ ಖ್ಯಾತಿ ಪಡೆದಿದ್ದಾನೆ. ವರ್ಷಕ್ಕೆ 3 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ. ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರಪುಲ್  ಉತ್ತಮ ಉದಾಹರಣೆಯಾಗಿದ್ದಾನೆ.

ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ

ಇಂದು ಪ್ರಪುಲ್ ಹೆಸರು ದೇಶದಾದ್ಯಂತ ಪಸರಿಸಿದೆ. ಐಐಎಮ್‍  ಸೇರಿದಂತೆ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಮೋಟಿವೆಷನ್ ಭಾಷಣ ನೀಡಿದ್ದಾನೆ. ಈತನ ಬಳಿ ಸಲಹೆ ಅರಸಿ ಸಾಕಷ್ಟು ಜನರು ಬರುತ್ತಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.