ನೀವ್ಯಾಕೆ ನನ್ನ ಲಗ್ಗೇಜ್‌ ಎತ್ತಿಕೊಳ್ಳುತ್ತೀರಿ?

ಬಾರೋ ಸಾಧಕರ ಕೇರಿಗೆ...

Team Udayavani, Jun 18, 2019, 5:00 AM IST

ವಿಮಾನ ನಿಲ್ದಾಣ ಗಿಜಿಗುಡುತ್ತಿತ್ತು. ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಿದ್ದ ಕಾರುಗಳೆಲ್ಲ ಒತ್ತೂತ್ತಾಗಿ ಸಿಕ್ಕಿಬಿದ್ದಿದ್ದವು. ತಾವು ಮುಂಗಡ ಕಾಯ್ದಿರಿಸಿದ್ದ ಕಾರುಗಳು ಬರುತ್ತಲೇ ಪ್ರಯಾಣಿಕರು ಜೋರು ಬಾಯಿ ಮಾಡುತ್ತಾ, ಡ್ರೈವರ್‌ಗಳ ಬಳಿ ಬೇಗ ಲಗ್ಗೇಜನ್ನು ಡಿಕ್ಕಿಯಲ್ಲಿ ಹಾಕುವಂತೆ ಆದೇಶಿಸುತ್ತಿದ್ದರು. ಅಂಥ ಪ್ರಯಾಣಿಕರ ಮಧ್ಯದಲ್ಲಿ ಎತ್ತರದ ವ್ಯಕ್ತಿಯೊಬ್ಬರು ತಮ್ಮ ಲಗ್ಗೇಜು, ಬ್ಯಾಗುಗಳನ್ನು ಹಿಡಿದು ತಾನೂ ಮುಂಗಡ ಕಾಯ್ದಿರಿಸಿದ ಕಾರಿಗಾಗಿ ಕಾಯುತ್ತಿದ್ದರು. ಅವರನ್ನು ದೂರದಿಂದಲೇ ನೋಡಿದ್ದ ಕಾರು ಚಾಲಕ ತನ್ನ ಕಾರನ್ನು ಅವರ ಮುಂದೆ ನಿಲ್ಲಿಸುತ್ತಲೇ ಗಡಿಬಿಡಿಯಿಂದ ಓಡಿ ಬಂದು, “ಕ್ಷಮಿಸಿ ಸಾರ್‌… ಜ್ಯಾಮ್‌ ಆಗಿದ್ದುದರಿಂದ ತಡ ಆಯ್ತು. ಬನ್ನಿ, ಹೀಗೆ ಬನ್ನಿ’ ಎಂದು ತಡಬಡಾಯಿಸುತ್ತ ಅವರ ಲಗ್ಗೇಜ್‌ ಎತ್ತಿಕೊಳ್ಳಲು ಕೈ ಹಾಕಿದ. ಆಗ ಆ ವ್ಯಕ್ತಿ, “ನಿಮಗೆ ನಾನು ದುಡ್ಡು ಕೊಡುತ್ತಿರುವುದು ನನ್ನನ್ನು ಕಾರಿನಲ್ಲಿ ಮನೆ ತಲುಪಿಸುವುದಕ್ಕಾಗಿ. ನೀವ್ಯಾಕೆ ನನ್ನ ಲಗ್ಗೇಜ್‌ ಎತ್ತಿಕೊಳ್ಳುತ್ತೀರಿ?’ ಎಂದು ಹೇಳಿ ತಾನೇ ಲಗ್ಗೇಜನ್ನು ಕಾರಿನೊಳಗೆ ಹಾಕಿದರು.

ಸಣ್ಣ ಘಟನೆಯಲ್ಲಿ ಹಾಗೆ ದೊಡ್ಡ ಪಾಠ ಕಲಿಸಿದ ವ್ಯಕ್ತಿ ಟಾಟಾ ಸಂಸ್ಥೆಗಳ ಮಾಲೀಕ ರತನ್‌ ಟಾಟಾ.

– ರೋಹಿತ್‌ ಚಕ್ರತೀರ್ಥ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ