ಜಾತಕ ಫ‌ಲ

Team Udayavani, Nov 17, 2014, 8:59 AM IST

ಪ್ರಸನ್ನ ರಾಜ ಪ್ರಸಾದ, ಹ್ಯೂಸ್ಟನ್‌ ಅಮೇರಿಕ
ನಾನು ಅಮೆರಿಕಾಕಕ್ಕೆ ಬಂದು ಏಳು ವರ್ಷಗಳಾಗಿವೆ. ಮಕ್ಕಳಿಗೀಗ ಕ್ರಮವಾಗಿ 3 ಹಾಗೂ 5 ವರ್ಷ. ಭಾರತಕ್ಕೆ ಹಿಂದಿರುಗೋಣ ಎಂಬುದು ನನ್ನವಳ ಅಭಿಪ್ರಾಯ. ದೇಶದ ಬಗೆಗೆ ಗೌರವವಿದೆ. ಆದರೆ ಬಿಟ್ಟು ಬರುವ ಕೆಲಸದಲ್ಲಿ ಆತಂಕವಿದೆ. ಏನು ಮಾಡಬಹುದು? ಸಲಹೆ ನೀಡಿ.

ನಿಮ್ಮ ಜಾತಕದ ಪಂಚಮ ಭಾವ ಮತ್ತು ಪಂಚಮಾಧಿಪತಿಗಳ ಸಂಬಂಧ ನೇರವಾಗಿ ಜಲ ತತ್ವಗಳಿಗೆ ಸಂಬಂಧ ಪಡೆದು ಸಿದ್ಧಿ ಯೋಗದಲ್ಲಿ ಗಟ್ಟಿಗೊಂಡಿದ್ದರಿಂದ ನಿಮಗೆ ಮಕ್ಕಳ ವಿಚಾರದಲ್ಲಿ ತೊಂದರೆ ಬರದು. ಉತ್ತಮ ಸಂಸ್ಕಾರಗಳು ಕೌಟುಂಬಿಕ ವಲಯಕ್ಕೆ ಶ್ರೀ ರಕ್ಷೆಯಾಗಲು ಧರ್ಮ ಭಾವವು ಶುಕ್ರನಿಂದ ಬಲಗೊಂಡಿದೆ. ಅಮೇರಿಕಾದಲ್ಲೇ ಇದ್ದರೂ ತೊಂದರೆ ಆಗದು.

ಜಾನ್‌ಜಯಶೀಲ, ಗೋಣಿಕೊಪ್ಪ
ನನಗೆ ದೇವರ ದಯದಿಂದ ಹಣಕಾಸಿನ ತೊಂದರೆ ಇಲ್ಲ. ಸಂಜೆಯ ಹೊತ್ತು ಮಾದಕ ದ್ರವ್ಯ ಸೇವಿಸದೆ ನಿದ್ದೆ ಹತ್ತುವುದಿಲ್ಲ. ಲಿವರ್‌ ಕೊಂಚ ಘಾಸಿಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಕ ನಿಷ್ಠೆಯಿಂದ ಮದ್ಯಪಾನದಿಂದ ದೂರಾಗಲು ದಾರಿ ತಿಳಿಸಿ.

ರಾಹು ಗ್ರಹವು ಲಗ್ನಸ್ಥವಾಗಿ ದುಷ್ಟ ಕುಜನ ಪೈಶಾಚಿಕ ಮುಷ್ಟಿಯಲ್ಲಿ ಬಂಧಿತವಾಗಿದೆ. ಚಂದ್ರನ ನಿಮ್ನ ಹಾಗೂ ನೀಚ ಸ್ಥಿತಿ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತದೆ.ಅನುಕೂಲ ಮಾಡಿಕೊಂಡು ಪ್ರತಿ ದಿನ ನೆರವೇರಿ ಸುವುದಾದರೆ, ಸಂಜೆಯ ಆರರ ಹೊತ್ತಿಗೆ ಸ್ನಾನ ಪೂರೈಸಿ, ಆಲದ ಅಥವಾ ಅರಳೀ ಮರದ ಎಲೆಯೊಂದರಲ್ಲಿ 5 ಅವರೆಕಾಳನ್ನು ಜೇನು ತುಪ್ಪದಲ್ಲಿ ಬೆರೆಸಿ ಮನೆಯ ನೈಋತ್ಯ ಮೂಲೆಯಲ್ಲಿರಿಸಿ ಏಕಾಗ್ರತೆಯಿಂದ ಏಸುವಿನ ಧ್ಯಾನದಲ್ಲಿ ಒಂದು ತಾಸು ಕಳೆಯಿರಿ. ಈ ಅವರೇ ಕಾಳನ್ನು ನಿಂಬೆ ಹಣ್ಣಿನ ಜೊತೆ ನಂತರು ಶುದ್ಧ ಹಾಲಿನೊಂದಿಗೆ ಸೇವಿಸಿ. ಪರಿಣಾಮ ಉತ್ತಮ.

ಸತ್ಯವತಿ ತಡಸಲಕೊಪ್ಪ
ಕನಸಲ್ಲಿ ಬಾಧೆಯಾಗುತ್ತಿದೆ. ನಿರ್ಜನ ಪ್ರದೇಶ ಒಂದರಲ್ಲಿ ಹುಲಿ, ಸಿಂಹ, ಕರಡಿಗಳು ಮೈಮೇಲೆ ಎರಗಿ ಬಂದಂತಾಗುತ್ತವೆ. ಕಷ್ಟಪಟ್ಟು ಓಡಿ ಅವುಗಳಿಂದ ತಪ್ಪಿಕೊಂಡಂತೆ ಅನಿಸಿದಾಗ ಎಚ್ಚರವಾಗುತ್ತದೆ. ಎಚ್ಚರವಾದಾಗ ಕೂಗದೇ ಇರಲಾಗದು. ಮನೆಯಲ್ಲಿ ಪತಿ ಹಾಗೂ ಮಕ್ಕಳಿಗೆ ಯಕ್ಷ ಪ್ರಶ್ನೆಯಾಗಿದ್ದೇನೆ. ಈ ಗೊಂದಲದಿಂದ ಹೊರಬರಲು ಏನು ಮಾಡಲಿ?

ಕುಜನು ಅಷ್ಟಮ ಭಾವದಲ್ಲಿ ನೀಚ ಗುರುವಿನೊಂದಿಗೆ ಇದ್ದಿರುವುದು, ಗುರುವಿನ ಕೇಂದ್ರಾಧಿಪತ್ಯ ದೋಷಕ್ಕೆ ಇನ್ನಿಷ್ಟು ದುರ್ಬಲತೆ ತುಂಬಿದೆ. ಎಳ್ಳೆಣ್ಣೆಯಿಂದ ಪಂಚಮುಖೀ ಹನುಮಂತನನ್ನು ಪ್ರತಿ ಶನಿವಾರ ಹಾಗೂ ಮಂಗಳವಾರ ಪೂಜಿಸಿ. ಈ ಎಣ್ಣೆಯ ನಯವನ್ನು ಪ್ರತಿ ದಿನ ತುಸುವೇ ಕಣ್ಣಿಗೆ ಲೇಪಿಸಿಕೊಂಡು ಪ್ರತಿ ದಿನ ನಿದ್ದೆ ಮಾಡಿ. ಪೂಜೆಯ ಸಮಯದಲ್ಲಿ ಮಹಾಕಾಳಿಯ ಸ್ತುತಿ ಮಾಡಿ.

ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:
Email: bahumukhi@manipalmedia.com
 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುಂದಿನ ತಿಂಗಳು ಏನು ಮಾಡೋದು..ಅಂದುಕೊಂಡ ಕೆಲಸ ಆಗುತ್ತಾ? ಹಣ ಹೊಂದಿಸೋದು ಹೇಗೆ? ಬೇಸಿಗೆ ರಜೆಗೆ ದೂರ ಪ್ರಯಾಣ ಹೊರಡಬೇಕು..ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು...

  • ರಾಮದಾಸ ಬಂಗೇರ, ನಾಸಿಕ ನಮ್ಮ ತಾಯಿಯವರಿಗೆ ಈಗ ಇದ್ದಕ್ಕಿದ್ದಂತೆ ಭಯ ಸಂವೇದನೆಗಳಾಗುತ್ತವೆ. ತನ್ನನ್ನು ಯಾರೋ ಎದುರಿಗೇ ಬಂದು ಕೊಲ್ಲಲು ಹೊರಟಿದ್ದಾರೆ ಎಂಬ ತಲ್ಲಣದಲ್ಲಿ...

  • ರಾಗಿಣಿ ಅಣ್ಣಪ್ಪ, ಮುದ್ದೇಬಿಹಾಳ *ಗೂರೂಜಿ, ನನ್ನ ಮಗಳಿಗೆ ಯಾರೋ ಕೃತ್ರಿಮ ನಡೆಸಿ ವಾಮಾಚಾರ ಗೈದಿದ್ದಾರೆ. ಗೆಲುವಾಗಿಯೇ ಇದ್ದವಳು ಈಗ 6 ತಿಂಗಳಿನಿಂದ ಮಂಕಾಗಿದ್ದಾಳೆ....

ಹೊಸ ಸೇರ್ಪಡೆ