ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫ‌ಲ್ಯ ಕಾಣುತ್ತದೆ ಗೊತ್ತಾ?


Team Udayavani, May 27, 2016, 6:25 PM IST

2.jpg

ಶ್ರೀ ಭಗವದ್ಗೀತೆಯ ಜ್ಞಾನ ಯೋಗ ಅಧ್ಯಾಯದಲ್ಲಿ 39ನೇ ಶ್ಲೋಕ ಬಹು ಮುಖ್ಯವಾದ ವಿಚಾರವೊಂದನ್ನು ಪರಮಶಾಂತಿಯನ್ನು ಪಡೆಯುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ. ಅದು ಹೀಗಿದೆ.

  ಶ್ರದ್ಧಾವಾಂಲ್ಲಭತೇ ಜ್ಞಾನಂ, ತತ್ಪರಃ ಸಂಯತೇಂದ್ರಿಯ/
  ಜ್ಞಾನಂ ಲಭಾª$Ìಪರಾಂ ಶಾಂತಿಂಚಿರಣಾಧಿಗತ್ಛತಿ//

   ಇದರ ಅರ್ಥ ಸರಳವಾಗಿದೆ. ಶ್ರದ್ಧೆ ಎಂಬುದು ಯಾರಿಗಿದೆಯೋ, ಶ್ರದ್ಧೆಯಲ್ಲಿ ನಿರತನೂ, ತತ್ಪರನೂ ಆಗುತ್ತಾನೋ, ಅವನು ಜಿತೇಂದ್ರಿಯನಾಗಿ ಜ್ಞಾನವನ್ನು ಸಂಪಾದಿಸುತ್ತಾನೆ. ಜ್ಞಾನವನ್ನು ಪಡೆದಾಗ ಪರಮ ಅನುಭೂತಿಯನ್ನು ಹೊಂದುವ ದಿವ್ಯಶಾಂತಿಯನ್ನೂ ಅವನು ಪಡೆಯುತ್ತಾನೆ. 

   ಗೀತೆಯನ್ನು ಓದಿಯೇ ಈ ಮೇಲಿನ ವಿಚಾರವನ್ನು ತಿಳಿಯಬೇಕಾಗಿಲ್ಲ. ನಮ್ಮ, ನಮ್ಮ ಅನುಭವಗಳ ನೆಲೆಯಲ್ಲಿ ಯಾವಾಗಲೂ ನಮ್ಮ ಕ್ರಿಯಾಶೀಲತೆಯ ಸೋಲಿಂದ ನಾವು, ನಾವೇ ಪಾರ್ಥರಾದಾಗ, ಅರ್ಜುನರಾದಾಗ, ವಿವೇಕ ಎಂಬ ನಮ್ಮೊಳಗಿನ ದ್ರವ್ಯ ಶ್ರೀ ಕೃಷ್ಣನಾಗಿ ಗೀತೆಯನ್ನು ನಿರಂತರವಾಗಿ ನಮ್ಮ ಜೀವನ ಸಂಗ್ರಾಮದ ಸಂದರ್ಭದಲ್ಲಿ ಬೋಧಿಸುತ್ತಲೇ ಇರುತ್ತದೆ. 

  ಒಂದು ಕಾಲವಿತ್ತು. ಹೆಣ್ಣು ಗಂಡು ಒಂದಾಗಿ ಬಾಳ ದಾರಿಯಲ್ಲಿ ಸಪ್ತಪದಿ ತುಳಿದು ಅಗ್ನಿ ಸಾಕ್ಷಿಯಾಗಿ ಸತಿಪತಿಗಳಾದ ಮೇಲೆ ಈ ಬಂಧನವನ್ನು ಪರಮ ಪಾವಿತ್ರÂìದಿಂದ ಕಾಣುವ ವಿಚಾರ ನಮ್ಮಗಳ ಮೇಲೆ ನಾವೇ ಹೇರಿಕೊಂಡ ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಹೆಣ್ಣು ಹಾಗೂ ಗಂಡಿನ ನಕ್ಷತ್ರಗಳ ವಿಶ್ಲೇಷಣೆಯಲ್ಲಿ ರಚಿತವಾದ್ದೊಂದು ಕೋಷ್ಟಕದ ಪ್ರಕಾರ ಪಡೆದ ಅಂಕಗಳ ಮೇಲಿಂದ ಈ ಮದುವೆಯನ್ನು ನಡೆಸಬಹುದೆಂಬ ವಿಚಾರವನ್ನು ಮನೆಯ ಹಿರಿಯರು ಜೋÂತಿಷಿ ಹಾಗೂ ಪುರೋಹಿತರ ಸನ್ನಿಧಿಯಲ್ಲಿ ನಿಶ್ಚಯಿಸುತ್ತಿದ್ದರು. 

   ಆದರೆ ಇಂದು ಈ ವಿಧಾನ ಸರಿಯೇ?

  ಇಂದು ಈ ಇಂಥದೊಂದು ಕೋಷ್ಟಕದ ಪರಿಣಾಮವಾಗಿ ದೊರೆತ ಅಂಕಗಳು ಒಂದು ವಿವಾಹದ ಗಟ್ಟಿತನವನ್ನು ತನ್ನ ಅರಿಕೆಗೆ ಒಳಪಡಿಸಿಕೊಳ್ಳುವ ವಿಚಾರ ಸಾಧ್ಯವಾಗುತ್ತಿಲ್ಲ. ಬಹು ಪುರಾತನವಾದ ವೈವಾಹಿಕ ಪಾವಿತ್ರÂ ಬಸವಳಿದಿದೆ. ಅಂದರೆ ಈ ಕೋಷ್ಟಕ ತಪ್ಪಿದೆ. ಒಂದು ನಮ್ಮದಾದ ಸಂಸ್ಕೃತಿಯ ಬೇರುಗಳಿಗೆ ಬಂದ ಧಕ್ಕೆ. ಇನ್ನೊಂದು ಹೆಣ್ಣು ಹಾಗೂ ಗಂಡು ಸಮಾನ ಎಂಬ ಧೋರಣೆ. ನಾವು ಬಹುವಾಗಿ ನಂಬಿಕೆ ಇಟ್ಟ ಋತುಮಾನಗಳಲ್ಲೇ ಏರುಪೇರುಗಳು ಸಂಭವಿಸುತ್ತಿರುವಾಗ, ಸರಿಯಾದ ಕಾಲದಲ್ಲಿ, ಸರಿಯಾದ ಮಳೆಗಾಳಿ, ಚಳಿ ಹಾಗೂ ಬೇಸಿಗೆಯ ಕಾಲ ಧರ್ಮ ದಾರಿ ತಪ್ಪಿರುವಾಗ, ವೈವಾಹಿಕ ಜೀವನದ ಪಾವಿತ್ರÂ ಹಾಗೂ ಸಂಯಮ ದಾರಿ ತಪ್ಪಬಾರದು ಎಂದರೆ ಹೇಗೆ? ಹೀಗಾಗಿ ನಕ್ಷತ್ರಗಳ ವಿಶ್ಲೇಷಣೆಯೊಂದಿಗೆ ಬಳಸಿಕೊಂಡ ಕೋಷ್ಟಕದ ಮೂಲಕವಾದ ಅಂಕಗಳನ್ನು ಪಡೆದು ಹಾಂ! ಇದು ಸರಿಹೊಂದಿತು ಎಂಬ ವಿಚಾರವನ್ನು ಮೀರಿ ಇನ್ನೂ ಇತರ ಅಂಶಗಳನ್ನು ಸೂಕ್ಷ್ಮವಾಗಿ ಹೆಣ್ಣುಗಂಡುಗಳು ಜಾತಕದ ಹೊಂದಾಣಿಕೆಯಾಗಿ ಅನುಸರಿಸುವುದು ಈಗ ಈ ಬದಲಾದ ಕಾಲಕ್ಕೆ ಅನಿವಾರ್ಯವಾಗಿದೆ. 

  ಹಾಗಾದರೆ ಮಿಕ್ಕುಳಿದದ್ದು ಯಾವ ದಾರಿ, ಯಾವ ವಿಧಾನ?

   ಹೆಣ್ಣು ಗಂಡು ಸಮಾನರು ಎಂಬು ವಿಚಾರದಲ್ಲಿ ಕಾಲ ಧರ್ಮ ಈಗಿನ ವರ್ತಮಾನದಲ್ಲಿ ಹೌದು ! ಇದು ಸತ್ಯ ಎಂಬ ಠಸ್ಸೆಯನ್ನು ಒತ್ತಿಬಿಟ್ಟಿದೆ. ಈ ವಿಚಾರದಲ್ಲೀಗ ಚರ್ಚೆ, ಅಸಹನೆ, ವಿರೋಧ, ಗೊಣಗುವಿಕೆಗಳಿಗೆ ಅರ್ಥವಿಲ್ಲ. ಕೆಲವು ಬಾರಿ ಅಖೈರಾದ ಸತ್ಯವನ್ನು ಹೇಳಲಿಕ್ಕೆ ಆಗುವುದಿಲ್ಲ. ಈ ಹಿಂಜರಿಕೆಯಿಂದಲೇ ನಮ್ಮ ವೇದ ಹಾಗೂ ಸುಭಾಷಿತಗಳು ಯತ್ರ ನಾರ್ಯಸ್ತು ಪೂಜ್ಯಂತೆ ತತ್ವ ರಮಂತೇ ದೈವಾಃ ಎಂಬ ಮಾತನ್ನು ಉದ್ಘೋಷಿಸಿದೆ. ಅಂತೆಯೇ ನಸ್ತ್ರೀ ಸ್ವಾತಂತ್ರÂ ಮರ್ಹತಿ ಎಂಬು ಮಾತೂ ಇದೆ. ಈ ವಿಭಿನ್ನ ಮಾತುಗಳು ಕೇವಲ ಸ್ತ್ರೀಯರನ್ನು ದೇವರೆಂದು ಉಬ್ಬಿಸಿ ಅವರಿಂದ ಕೆಲಸ ಮಾಡಿಸಿ ಕೊಳ್ಳಲಾಗಲೀ, ಮಹಿಳೆಯರನ್ನು ಗೌಣವಾಗಿ ಕಾಣುವುದಕ್ಕಾಗಲೀ ಬಂದ ಮಾತುಗಳಲ್ಲ. ನಿಜಕ್ಕೂ ಈ ಮಾತುಗಳು ಬೇರೆ ಬೇರೆ ನೆಲೆಯಲ್ಲಿ ಬಂದು ಮಾತುಗಳು. ಒಂದರ್ಥದಲ್ಲಿ ನಮ್ಮ ಸಂಸ್ಕೃತಿ ಪುರುಷರು ಸ್ವಲ್ಪ ಶ್ರೇಷ್ಠ, ಮಹಿಳೆಯರು ತಗ್ಗಿ ನಡೆಯುವ ಸೂಕ್ಷ್ಮಅರಿಯಬೇಕು ಎಂಬುದನ್ನು ಶಾಸನ ಎಂದಲ್ಲದಿದ್ದರೂ, ಒಳ ನಿಯಮವನ್ನಾಗಿ ಸ್ವೀಕರಿಸಿ ಬಿಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಂವಿಧಾನದ ಚೌಕಟ್ಟುಗಳು ಬೇರೆಯಾಗಿವೆ. ಆಧುನಿಕತೆ ಜಗತ್ತಿನ ವ್ಯಾಖ್ಯೆಯನ್ನು ಬದಲಿಸಿದೆ. 

   ಜಾತಕದ ಮೊದಲು ಹಾಗೂ ಎರಡನೇ ಮನಗಳ ಪರಿಶೀಲನೆ ಮುಖ್ಯ

  ಜಾತಕ ಕುಂಡಲಿಯಲ್ಲಿ ಮೊದಲ ಮನೆ ಒಬ್ಬನ/ ಒಬ್ಬಳ ಮನೋಭಾವಗಳನ್ನು, ಎರಡನೇ ಮನೆ ತಾಳ್ಮೆ ಹಾಗೂ ಸೂಕ್ಷ್ಮತೆಗಳೊಡನೆ ಮಾತನಾಡುವ ವಿಧಾನಗಳನ್ನು ಸೂಚಿಸುತ್ತವೆ. ಮನೋಭಾವದಲ್ಲಿ ಹಾಗೂ ಮಾತಿನ ಮೃದುತ್ವ ಮತ್ತು ಕಟುಕುತನಗಳಲ್ಲಿ ಚಂದ್ರನ ಅಪಾರವಾದ ಪ್ರಭಾವವೂ ಸೇರ್ಪಡೆಗೊಳ್ಳುತ್ತದೆ. ಹೀಗಾಗಿ ಚಂದ್ರನ ಕಾರಣಕ್ಕಾಗಿ ಹೆಣ್ಣು ಗಂಡುಗಳು ನಕ್ಷ¤ತ್ರ ಜೋಡಣೆಗೆ ನಮ್ಮ ಹಿಂದಿನ ಕ್ರಮ ಯುಕ್ತವಾಗಿದೆಯಾದರೂ, ಈಗಿನ ಹೊಸ ಸಂವಿಧಾನಕ್ಕೆ ಗಮನ ನೀಡಬೇಕಾಗಿದೆ. ಹೊಸ ಸಂವಿಧಾನದಲ್ಲಿ ಹೆಣ್ಣ ಹಾಗೂ ಗಂಡು ಸಮಾನರು ಎಂಬ ನಿಯಮ ಪ್ರಧಾನವಾದುದರಿಂದ ಹೆಣ್ಣು ಹಾಗೂ ಗಂಡಿನ ಜಾತಕ ಜೋಡಣೆಯ ಸಂದರ್ಭದಲ್ಲಿ ಜ್ಯೋತಿಷಿಯ ಜವಾಬ್ದಾರಿ ಹೆಚ್ಚಾಗಿದೆ. ಬರೇ ನಕ್ಷತ್ರ ಜೋಡಣೆಯೊಂದೇ ಅಲ್ಲದೆ, ಒಬ್ಬನ /ಒಬ್ಬಳ ಮನೋವೇದಿಕೆಯ ಶಕ್ತಿ ಹಾಗೂ ಮಿತಿ, ಅಂತೆಯೇ ಅಭಿವ್ಯಕ್ತಿಗೆ ಬೇಕಾದ ಮಾತಿನ ಶಕ್ತಿ ಹಾಗೂ ಮಿತಿಗಳನ್ನು ವಿಶ್ಲೇಷಿಸಲೇ ಬೇಕಾಗುತ್ತದೆ. ಮನೋವೈಜ್ಞಾನಿಕ ವಿಚಾರಗಳ ಕುರಿತಂತೆ ಜ್ಯೋತಿಷಿ ಜಾತಕದಲ್ಲಿರುವ ಹೆಣ್ಣು ಹಾಗೂ ಗಂಡಿನ ಸೂಕ್ಷ್ಮಗಳನ್ನು ವಿಶ್ಲೇಷಿಸಿಯೇ ಜಾತಕಗಳನ್ನು ಹೊಂದಿಸಬೇಕಾಗುತ್ತದೆ. ಮನುಷ್ಯ ಧರ್ಮ, ಮಾನವೀಯತೆಗಳ ನಿಕ್ಷೇಪಕ್ಕೆ ಗಂಡು ಹೆಣ್ಣುಗಳಲ್ಲಿ ಒಂದು ಜೀವಂತಿಕೆ ದೊರೆತಾಗ ಅಹಂ ಕೆಲಸ ಮಾಡುವುದಿಲ್ಲ. ಅಹಂ ಎಂಬ ಘಟಕದ ಹೆಡೆ ನಾಗರ ವಿಷವನ್ನು ಕಕ್ಕಲು ಮುಂದಾಗದಿದ್ದರೆ ದಾಂಪತ್ಯ ಉಳಿಯುತ್ತದೆ. 

 ಸರಸ್ವತಿಯು ಅವಶ್ಯ ಎಂದಾದರೆ ಸ್ವಂತಿಕೆ ಬೇಕು

  ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಗೆ ದಾಂಪತ್ಯದಲ್ಲಿನ ಸಂಪನ್ನತೆಗೆ ಶಕ್ತಿಬೇಕು. ಭಾರತದ ಮೇಲೆ ಅನ್ಯರ ದಾಳಿ, ಬ್ರಿಟೀಷರು ಹೇರಿದ ದಾಸ್ಯ, ಎಲ್ಲ ಇತರ ಸಂಕಟಗಳು ಕಾಲಕಾಲಕ್ಕೆ ಎರಗಿ ನಮ್ಮನ್ನು ಘಾಸಿಗೊಳಿಸಿದ್ದರೂ, ಭಾರತೀಯ ಸಂಸ್ಕೃತಿಯ ಬೇರುಗಳು ಅದುರಿರಲಿಲ್ಲ. ಆದರೆ ಇಂದಿನ ಜಾಗತೀಕರಣದ ಕ್ರಿಯೆಯಲ್ಲಿ ಜಗತ್ತೆಲ್ಲ ಅಮೇರಿಕಾ ಆಗುತ್ತಿದೆ. ಕೇವಲ ಹಣ ಮಾತ್ರ ಮುಖ್ಯವಾಗಿದೆ. ಹಣಕ್ಕಾಗಿ ಪ್ರತಿಯೊಂದನ್ನು ವಿದ್ಯೆಯನ್ನ, ಸಂಸ್ಕಾರವನ್ನ, ಭಾಷಾ ಶಕ್ತಿಯನ್ನ ಕೊಂಡುಕೊಳ್ಳುತ್ತಿದ್ದೇವೆ. ವಿದ್ಯೆ ಎಂಬುದು ಭಾರತದಲ್ಲಿ ಮಾರಾಟದ ಸರಕಾಗಿರಲಿಲ್ಲ ಹಿಂದೆ. ಆದರೆ ಮಕ್ಕಳು ತಂದೆ ತಾಯಿಗಳು ವಿದ್ಯೆಯನ್ನು ಖರೀದಿಸುತ್ತಿದ್ದಾರೆ. ಟಿವಿ, ಮೊಬೈಲ್‌, ಕಂಪ್ಯೂಟರ್‌ಗಳು ಅನ್ಯವಾದ ಒಂದು ಮಾಯಾಜಾಲ ಬೀಸಿದೆ. ಮಾಯೆಯ ವಿನಾ ಜಗತ್ತಿಲ್ಲ. ಆದಹೆ ಜ್ಞಾನಕ್ಕೆ ಸಮಾನವಾದುದು ಬೇರಿಲ್ಲ. ಹೀಗಾಗಿ ಮಾಯೆಯನ್ನ, ಜ್ಞಾನವನ್ನ ಯುಕ್ತವಾಗಿ ಸಂಭಾಳಿಸಬೇಕಾಗಿದೆ. ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಮಾಯೆಯಾಗಿರುವುದರಿಂದಲೇ , ಜ್ಞಾನದ ಅಂಕುಶ ದಾಂಪತ್ಯಕ್ಕೆ ಬೇಕು. 

ಅನಂತಶಾಸ್ತ್ರಿ 

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.