ಆತ್ಮವು ದೇವರನ್ನು ಸೇರಲು ಏನು ಮಾಡಬೇಕು?

Team Udayavani, Nov 10, 2018, 6:37 AM IST

ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. 

ಆತ್ಮವು ದೇಹದ ಒಳಗೆ ಇದ್ದಷ್ಟು ಹೊತ್ತು ಮಾತ್ರ ನಮ್ಮ ದೇಹಕ್ಕೆ ಬೆಲೆ. ಆತ್ಮವು ದೇಹವನ್ನು ತ್ಯಜಿಸಿದ ತಕ್ಷಣ ಅದು ಜೀವ ಎಂದು ಕರೆಸಿಕೊಳ್ಳದೆ ಶವ, ಕಳೇಬರ ಮೊದಲಾದ ಶಬ್ದಗಳಿಂದ ಕರೆಸಿಕೊಳ್ಳುತ್ತದೆ. ಆ ಕ್ಷಣದಿಂದ, ಅದೊಂದು ಬೇಗನೆ ಕೆಡುವ ವಸ್ತುವಾಗಿಬಿಡುತ್ತದೆ. ಆತ್ಮವೆಂಬುದೇ ನಮ್ಮ ಅಸ್ತಿತ್ವ. ಹಾಗಾಗಿ, ಜೀವನದ ಅಂತ್ಯದಲ್ಲಿ ಆತ್ಮವು ದೇವರನ್ನು ಸೇರಲಿ ಎಂದು ಪ್ರತಿಯೊಬ್ಬನೂ ಪ್ರಾರ್ಥಿಸುತ್ತಾನೆ. ಯೋಚಿಸುತ್ತಾನೆ.  ಮತ್ತೂಂದು ಜನ್ಮ ಈ ಭುವಿಯಲ್ಲಿ ಬೇಡ ಎಂಬ ನಿರ್ಧಾರ ತಳೆಯುವವರೇ ಹೆಚ್ಚು. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೂ, ಮಾನವನು ಕೊನೆಯಲ್ಲಿ ಬಯಸುವುದು ಈ ದೇಹದಿಂದ ಬಿಡುಗಡೆ ಪಡೆಯುವುದು ಮತ್ತು ತನ್ನ ಆತ್ಮ ದೇವರನ್ನು ಸೇರುವುದು. ನಮ್ಮ ಆತ್ಮ ದೇವರನ್ನು ಸೇರಲು ಏನು ಮಾಡಬೇಕು? ಎಂಬ ಪ್ರಶ್ನೆ ಕೊನೆಯ ಘಳಿಗೆಯಲ್ಲಿ ಎಲ್ಲರಿಗೂ ಬರುವಂಥದ್ದು. ಪ್ರತಿಯೊಬ್ಬ ಹಿರಿಯರೂ ಅಂದರೆ ಸಾವಿನಂಚಿನಲ್ಲಿರುವವರು ದೇವರಪಾದವನ್ನು ಸೇರಿದರೆ ಸಾಕಪ್ಪ! ಎಂದು ಉದ್ಗರಿಸುವುದೇ ಇದಕ್ಕೆ ಉದಾಹರಣೆ.

ಬದುಕಿನ ಕೊನೆಯಲ್ಲಿರುವ ಹಿರಿಯರು ಯಾವಾಗಲೂ ಶಿವಶಿವ ಅಂತಲೋ, ರಾಮರಾಮ ಅಂತಲೋ, ಕೃಷ್ಣಕೃಷ್ಣ ಅಂತಲೋ ಪ್ರಾಣ ಬಿಟ್ಟರೆ ಸಾಕು ಎಂದುಕೊಳ್ಳುವುದನ್ನು ಕೇಳಿರುತ್ತೇವೆ. ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆದರೆ, ಈ ದೇವರ ಸಾನಿಧ್ಯವನ್ನು ಸೇರಲು ಮಾಡಬೇಕಾದುದಾದರೂ ಏನು? ಹಿರಿಯರು ಅಂದುಕೊಂಡಂತೆ, ಪರಿಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತ ಸದ್ಭಾವವನ್ನು ಹೊಂದಿದ್ದಾಗ ಮಾತ್ರವೇ ನಮ್ಮ ಆತ್ಮ ದೇವರನ್ನ ಸೇರಲು ಸಾಧ್ಯ.

ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಇದನ್ನೇ ಹೇಳುತ್ತಾನೆ.
ಯಂ ಯಂ ವಾಪಿ ಸ್ಮರನ್‌ ಭಾವಂ ತ್ಯಜತ್ಯನೆ¤à ಕಲೇವರಮ್‌| ತಂ ತಮೇವೈತಿ ಕೌಂತೇಯ ಸದಾ ತದ್ಭಾವಿತಃ ||,
(ಅಧ್ಯಾಯ  8, ಶ್ಲೋಕ 6) ಅಂದರೆ, ಮನುಷ್ಯನು ತನ್ನ ದೇಹವನ್ನು ಬಿಡುವ ವೇಳೆಯಲ್ಲಿ ಯಾವ ಭಾವವನ್ನು ಸ್ಮರಿಸುತ್ತಾನೋ ಅದೇ ಭಾವವನ್ನು ಖಂಡಿತವಾಗಿಯೂ ಪಡೆಯುತ್ತಾನೆ ಎಂದರ್ಥ.

ಮರಣಕಾಲದಲ್ಲಿ ದೇವ ಸ್ಮರಣೆಯಂಥ ಆಧ್ಯಾತ್ಮಿಕ ಭಾವದಲ್ಲಿದ್ದರೆ ದೇಹವನ್ನು ಬಿಟ್ಟ ಆತ್ಮವು ದಿವ್ಯವಾದ ಭಾವವನ್ನೇ ಪಡೆಯುತ್ತದೆ ಮತ್ತು ದೇವರನ್ನು ಸೇರುತ್ತದೆ. ಇದಕ್ಕೆ ಎಲ್ಲರಿಗೂ ತಿಳಿದಿರುವ ಶ್ವೇತಕುಮಾರ ಚರಿತ್ರೆ ಸಾಕ್ಷಿಯಾಗಿದೆ. ಶ್ವೇತಕುಮಾರನು, ಸಾಯುವ ಸಮಯದಲ್ಲಿ ಶಿವಶಿವ ಎಂದು ಉಚ್ಚರಿಸಿದ ಕಾರಣದಿಂದಾಗಿ ಮತ್ತೆ ಅವನ ಆತ್ಮ ದೇಹವನ್ನು ಸೇರುತ್ತದೆ ಎಂಬುದು ಈ ಕಥೆಯ ಸಾರಾಂಶ. ಯದ್ಭಾವಂ ತದ್ಭವತಿ ಎಂಬಂತೆ ನಾವು ಏನನ್ನು ಅಂದುಕೊಳ್ಳುತ್ತೇವೆಯೋ ಅದೇ ಆಗುತ್ತಲೇ ಹೋಗುತ್ತದೆ. ನಮ್ಮ ಯೋಚನೆಗಳು ಸದಾ ಸಕಾರಾತ್ಮಕವಾಗಿರಬೇಕು. ಪ್ರತಿಯೊಂದು ಕ್ಷಣವೂ ನಮಗೆ ಹೊಸತೇ; ಕಳೆದ ಪ್ರತಿಯೊಂದು ಕ್ಷಣವೂ ಹಳೆಯದು, ಮರಳಿ ಪಡೆಯಲಾಗದ್ದು. ಹಾಗಾಗಿ, ಸದಾಕಾಲ ದೇವಚಿಂತನೆಯಿಂದ ಉತ್ತಮಭಾವವನ್ನು ಬೆಳಸಿಕೊಂಡಾಗ ಪ್ರತಿಕ್ಷಣವೂ ನಮಗೆ ಒಳ್ಳೆಯದಾಗುತ್ತದೆ. ಸಣ್ತೀಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವಿತಾವಧಿಯಲ್ಲೂ ಮರಣಾನಂತರದಲ್ಲೂ ದಿವ್ಯತೆಯನ್ನು ಹೊಂದಲು ಸಾಧ್ಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ