ಎಲ್ಲರಿಗೂ ಮಹಾತ್ಮರಾಗುವ ಅವಕಾಶವಿದ್ದೇ ಇದೆ, ಹಾಗೆ ಬದುಕಬೇಕಾಗಿದೆಯಷ್ಟೆ…

2017ರ ಭವಿಷ್ಯ 2019ರಲ್ಲಿ ಕರಾರುವಾಕ್ಕಾದುದು ಹೇಗೆ ?

Team Udayavani, Aug 5, 2020, 10:30 AM IST

ಎಲ್ಲರಿಗೂ ಮಹಾತ್ಮರಾಗುವ ಅವಕಾಶವಿದ್ದೇ ಇದೆ, ಹಾಗೆ ಬದುಕಬೇಕಾಗಿದೆಯಷ್ಟೆ…

ನ. 24ರಿಂದ 26ರ ವರೆಗೆ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ 15ನೆಯ ಅಧಿವೇಶನದ ಉದ್ಘಾಟನ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡಿದ್ದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು.

ಉಡುಪಿಗೂ ಅದರಲ್ಲೂ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೂ ಹಿಂದೂ ಚಟುವಟಿಕೆಗಳಿಗೂ ಅವಿನಾಭಾವ ಸಂಬಂಧ. 1969ರ ಡಿಸೆಂಬರ್‌ನಲ್ಲಿ ಪೇಜಾವರ ಶ್ರೀಗಳ ಎರಡನೆಯ ಪರ್ಯಾಯದ ಅವಧಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ ಮೊದಲ ಪ್ರಾಂತ ಸಮ್ಮೇಳನದಿಂದ ಈ ಸಂಬಂಧ ಆರಂಭವಾಗಿತ್ತು. ಇದಕ್ಕೂ ಮುನ್ನ ಮುಂಬಯಿಯಲ್ಲಿ ಆರಂಭಗೊಂಡ ವಿಶ್ವ ಹಿಂದೂ ಪರಿಷತ್‌ ಸ್ಥಾಪನೆಯಲ್ಲಿಯೂ ಪಾಲ್ಗೊಂಡಿದ್ದ ಪೇಜಾವರ ಶ್ರೀಗಳು 1985ರ ಅ.31- ನ. 1ರಂದು ನಡೆದ ಎರಡನೆಯ ಧರ್ಮ ಸಂಸದ್‌ ಅಧಿವೇಶನದಲ್ಲಿ “ತಾಲಾ ಖೋಲೋ’ ಆಂದೋಲನವನ್ನು ಉದ್ಘೋಷಿಸಿದ್ದರು. ಅನಂತರ ಪ್ರಧಾನಮಂತ್ರಿಗಳಾಗಿದ್ದ ರಾಜೀವ್‌ ಗಾಂಧಿಯವರು 1947ರಿಂದ ಅಯೋಧ್ಯೆ ರಾಮ ಜನ್ಮಭೂಮಿ ಯಲ್ಲಿದ್ದ ಬೀಗವನ್ನು ತೆಗೆಸಿದರು. 2017ರ ಐತಿಹಾಸಿಕ ಐದನೆಯ ಪರ್ಯಾಯ ಅವಧಿಯಲ್ಲಿ ನ. 24ರಿಂದ 26ರ ವರೆಗೆ ನಡೆದ ಧರ್ಮಸಂಸದ್‌ 15ನೆಯ ಅಧಿವೇಶನದ ಉದ್ಘಾಟನ ಸಮಾರಂಭದ ಅಧ್ಯ ಕ್ಷತೆ ವಹಿಸಿ 2019ರ ಒಳಗೆ ಸಮಸ್ಯೆ ಇತ್ಯರ್ಥವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಗ ಶ್ರೀಗಳು ಹೇಳಿದ್ದ ಮಾತನ್ನು “ಉದಯವಾಣಿ’ ಹೀಗೆ ದಾಖಲಿಸಿತ್ತು: “ಇನ್ನೆರಡು ವರ್ಷದೊಳಗೆ (2019) ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆರಂಭವಾಗಬಹುದು. ಮಂದಿರ ನಿರ್ಮಾಣಕ್ಕೆ ಬೇಕಾದ ಪೂರಕ ವಾತಾವರಣ ಕಂಡುಬರುತ್ತಿದೆ. ಹೀಗಾಗಿ ಇದು ಕೇವಲ ಘೋಷಣೆ ಅಲ್ಲ, ಆಗುತ್ತದೆ ಎಂಬ ವಿಶ್ವಾಸ. ಈಗ ಅಲ್ಲಿ ಕಾರಾಗೃಹದ ವಾತಾವರಣವಿದೆ. ಅಂಥಲ್ಲಿ ಭವ್ಯಮಂದಿರದ ಒಳಗೆ ವಿರಾಜಮಾನನಾದ ರಾಮನ ದರ್ಶನ ಮಾಡುವ ಸ್ಥಿತಿ ಬಂದರೆ ಬಹಳ ಸಂತೋಷವಾಗುತ್ತದೆ’.

2019ರ ನ. 9ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪೇಜಾವರ ಮಠದಲ್ಲಿ ವೀಕ್ಷಿಸಿದ ಪೇಜಾವರ ಶ್ರೀಗಳು, “ತೀರ್ಪು ಸಂತೃಪ್ತಿಯನ್ನು ಕೊಟ್ಟಿದೆ. ಇದು ಸ್ವಾಗತಾರ್ಹ ತೀರ್ಪು’ ಎಂದು ಹರ್ಷ ವ್ಯಕ್ತಪಡಿಸಿದ್ದರು. ಶ್ರೀಗಳು ಡಿ. 19ರ ರಾತ್ರಿ ಅಸ್ವಸ್ಥರಾದರು, ಡಿ. 20ರಂದು ಅವ ರನ್ನು ಆಸ್ಪತ್ರೆಗೆ ದಾಖ ಲಿಸಲಾ ಯಿತು. ಚೇತರಿಕೆ ಕಂಡಿದ್ದ ಅವರ ಆರೋಗ್ಯ ಡಿ. 26ರ ಸೂರ್ಯಗ್ರಹಣದ ದಿನ ದಿಂದ ಕ್ಷೀಣಿಸಲಾರಂಭಿಸಿತು. ಡಿ. 29ರಂದು ಇಹಲೋಕ ತ್ಯಜಿಸಿದರು.

ಮಹಾತ್ಮರು ಹೇಳಿದ್ದೇ ಭವಿಷ್ಯ
“ಇಂತಹ ಬಲು ದೊಡ್ಡ ಭವಿಷ್ಯ ಹೇಗೆ ನಿಜ ಆಯಿತು’ ಎಂದು ಈಗ ಪೇಜಾ ವರ ಮಠವನ್ನು ಅಲಂಕರಿಸಿ ರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಕೇಳಿದಾಗ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ: “ಬುದ್ಧಿ ಪ್ರೇರಣೆ ಮಾಡುವವನು ನಾನು ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ- ಮತ್ತಃ ಸ್ಮತಿಃ ಜ್ಞಾನಂ ಅಪೋಹನಂ ಚ… ಸಾಮಾನ್ಯ ಜನರು “ಧಿಯೋಯೋನಃ ಪ್ರಚೋದಯಾತ್‌’ (ಒಳ್ಳೆಯ ಬುದ್ಧಿಯನ್ನು ಕೊಡು) ಎಂದು ಹೇಳುತ್ತಾರೆ. ಕಾಳಿದಾಸ ಮಹಾಕವಿ “ರಘುವಂಶ’ ಕಾವ್ಯದಲ್ಲಿ “ಋಷೀಣಾಂ ಪುನರಾದ್ಯಾನಾಂ…’ ಅಂದರೆ ಮಹಾತ್ಮರು ಹೇಳಿದ ಬಳಿಕ ಅನಂತರ ಅದಕ್ಕೆ ಬೇಕಾದ ಘಟನಾವಳಿಗಳು ನಡೆಯುತ್ತವೆ ಎಂದು ಹೇಳುತ್ತಾನೆ. ನಮ್ಮ ಗುರುಗಳು ಜ್ಞಾನ ಸೇವೆಯ ಜತೆಗೆ ಎಲ್ಲರೊಳಗೆ ಭಗವಂತನನ್ನು ಕಂಡವರು. ಅವರಿಗೆ ಮಹಾಶಕ್ತಿಯೊಂದು ನುಡಿಯುವಂತೆ ಪ್ರೇರಣೆ ನೀಡಿತು. ಅವರು ನುಡಿದಂತೆ ಅದಕ್ಕೆ ಬೇಕಾದ ಘಟನೆಗಳು ನಡೆಯುತ್ತ ಹೋದವು ಎನ್ನಬಹುದು. ಇಂತಹ ಅನೇಕ ಉದಾಹರಣೆಗಳು
ಅವರ ಜೀವನದಲ್ಲಿ ನಡೆದಿವೆ’.

ಸಾಮಾನ್ಯ- ಅಸಾಮಾನ್ಯ ಭವಿಷ್ಯ!
2017ರ ನವೆಂಬರ್‌ನಲ್ಲಿ ಆಡಿದ ಮಾತು 2019ರ ನವೆಂಬರ್‌ನಲ್ಲಿ ಸಾಕಾರವಾಯಿತಲ್ಲ? ಇದೆಂಥ ಭವಿಷ್ಯನುಡಿ? ಎಂಬ ಕುತೂಹಲ ಯಾರಿಗೂ ಮೂಡದೆ ಇರದು. ಪತ್ನಿ, ಮಕ್ಕಳು, ಉದ್ಯೋಗ, ಭಡ್ತಿ, ವೇತನ ಹೆಚ್ಚಳ, ಪಾಸು, ಫೇಲು ಇತ್ಯಾದಿ ವಿಷಯಗಳ ಭವಿಷ್ಯವನ್ನು ಕೇಳುವುದಿದೆ. ಆದರೆ ಇದು ಅಂಥದ್ದಲ್ಲ. ಇಡೀ ದೇಶವೇ ನಿಬ್ಬೆರಗಾಗಿ ನೂರಾರು ವರ್ಷಗಳಿಂದ ಇತ್ಯರ್ಥಕ್ಕಾಗಿ ಕಾದು ಕುಳಿತಿದ್ದ ವಿಷಯ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.