ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?


Team Udayavani, Aug 4, 2020, 8:37 PM IST

Ayodhya 3

ಅಯೋಧ್ಯೆ: ಬುಧವಾರ ಭೂಮಿ ಪೂಜೆ ನೆರವೇರಲಿರುವ ಅಯೋಧ್ಯೆ ನಗರಿ ಶೃಂಗಾರಗೊಂಡಿದೆ.

ರಾಮ ದೇವಾಲಯದ ನಿರ್ಮಾಣಕ್ಕಾಗಿ ನಡೆಯುತ್ತಿರುವ ಮೂರು ದಿನಗಳ ಆಚರಣೆಯ ಭಾಗವಾಗಿ ಎರಡನೇ ದಿನವಾದ ಮಂಗಳವಾರ, ರಾಮಾರ್ಚ ಪೂಜೆ ನಡೆಯಿತು.

ಕಾಶಿ ಮತ್ತು ಅಯೋಧ್ಯೆಯ 9 ವೇದಾಚಾರ್ಯರು ಪೂಜೆ ನೆರವೇರಿಸಿದರು.

ಅಶೋಕ್‌ ಸಿಂಘಾಲ್‌ ಅವರ ಆಪ್ತ ಮಹೇಶ್‌ ಬಲ್ಚಂದಾನಿ ಮತ್ತು ಅವರ ಪತ್ನಿ ಸುನೀತಾ ಬಾಲ್ಚಂದಾನಿ ಅವರು ಪೂಜೆಯ ಸಂದರ್ಭ ಉಪಸ್ಥಿತರಿದ್ದರು.

 ಪಾರಿಜಾತದ ಗಿಡ ನಡೆಲಿರುವ ಪ್ರಧಾನಿ
ನಾಳೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ತಲುಪಲಿದ್ದಾರೆ. ಭೂಮಿ ಪೂಜೆಯ ಸಮಯದಲ್ಲಿ ಅವರು 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ರಾಮ್‌ ದೇವಾಲಯದ ಅಡಿಪಾಯದಲ್ಲಿ ಹಾಕಲಿದ್ದಾರೆ. ಬಳಿಕ ದೇಗುಲದ ಆವರಣದಲ್ಲಿ ಪಾರಿಜಾತದ ಗಿಡವನ್ನು ನೆಡಲಿದ್ದಾರೆ. ಈ ಪೂಜೆಯ ಮೊದಲು ಮೋದಿ ಹನುಮಾನ್‌ ಗರ್ಹಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಇದೇ ಸಂದರ್ಭ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಯೋಧ್ಯೆಯನ್ನು ತಲುಪಲಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

3 ಗಂಟೆಗಳನ್ನು ಕಳೆಯಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ 12: 30ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದು 10 ನಿಮಿಷಗಳ ಕಾಲ ಇರಲಿದೆ. 3 ಗಂಟೆಗಳ ಕಾಲ ಪ್ರಧಾನಿಗಳು ಅಯೋಧ್ಯೆಯಲ್ಲೇ ಇರಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ 48ಕ್ಕೂ ಹೆಚ್ಚು ಹೈಟೆಕ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ದೂರದರ್ಶನ ಮತ್ತು ಎಎನ್‌ಐ ನ್ಯೂಸ್‌ ಏಜೆನ್ಸಿಯಿಂದ ಆಗಮಿಸಿವೆ. ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವ ಮತ್ತು ಇತರ ಕಾರ್ಯಕ್ರಮಗಳಿಗಾಗಿ ಚಾನೆಲ್‌ಗ‌ಳ ಒಬಿ ವ್ಯಾನ್‌ ಮೂರು ದಿನಗಳಿಂದ ರಾಮ್‌ ಕಿ ಪೌರಿಯಲ್ಲೇ ಇವೆ.

ರಾಜನಾಥ್‌ ಮತ್ತು ಕಲ್ಯಾಣ್‌ ಸಿಂಗ್‌ ಇಲ್ಲ
ಸಮಾರಂಭಕ್ಕೆ ಶ್ರೀರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ದೇಶದ ಎಲ್ಲ ಸಂಪ್ರದಾಯಗಳ ಸಂತರು ಮತ್ತು ಇತರ ಜನರು ಸೇರಿದಂತೆ 175 ಮಂದಿಯನ್ನು ಆಹ್ವಾನಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ರದ್ದುಪಡಿಸಿದ್ದಾರೆ. ಆದರೆ ಹಿರಿಯ ನಾಯಕರಾದ ಎಲ್. ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಅವರು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಸೇರಿಕೊಳ್ಳಲಿದ್ದಾರೆ.

ಎಸ್ಪಿಜಿಗೆ ಭದ್ರತಾ ವ್ಯವಸ್ಥೆಯ ಹೊಣೆ
ಅಯೋಧ್ಯೆಯ ರಾಮ ದೇವಸ್ಥಾನದ ಭೂಮಿ ಪೂಜೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬುಧವಾರದ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರಲು ಬಿಗಿ ಭದ್ರತೆಯನ್ನು ವಹಿಸಿಕೊಳ್ಳಲಾಗಿದೆ. ಎಸ್ಪಿಜಿ ಭದ್ರತೆಯ ಹೊಣೆ ವಹಿಸಿಕೊಂಡಿದೆ. ನಗರಗಳಿಗೆ ಹೊರಗಿನವರು ಪ್ರವೇಶಿಸುವುದನ್ನು ತಡೆಯಲಾಗಿದ್ದು, ಸ್ಥಳೀಯರು ಗುರುತಿನ ಚೀಟಿ ಇಟ್ಟುಕೊಂಡು ಸಂಚರಿಸಬೇಕಾಗಿದೆ. ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬುಧವಾರ ಸಂಜೆ ಅಯೋಧ್ಯೆ ತಲುಪಲಿದ್ದಾರೆ.

ಟಾಪ್ ನ್ಯೂಸ್

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮ ಮಂದಿರಕ್ಕೆ ಶಿಲಾನ್ಯಾಸವಾದರೂ ಉಪವಾಸ ಬಿಡದ ಅಜ್ಜಿ

ರಾಮ ಮಂದಿರಕ್ಕೆ ಶಿಲಾನ್ಯಾಸವಾದರೂ ಉಪವಾಸ ಬಿಡದ ಅಜ್ಜಿ

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ಅಯೋಧ್ಯೆಯಲ್ಲಿ ಭೂಮಿಪೂಜೆ; ಕರಾವಳಿಯಲ್ಲಿ ಭಕ್ತಿಭಾವದ ಸಂಭ್ರಮ

ಅಯೋಧ್ಯೆಯಲ್ಲಿ ಭೂಮಿಪೂಜೆ; ಕರಾವಳಿಯಲ್ಲಿ ಭಕ್ತಿಭಾವದ ಸಂಭ್ರಮ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

sunil-kumar

ಹೊಸ ಉಪಕೇಂದ್ರದಿಂದ ಬಂಟ್ವಾ ಳದ 14 ಸಾವಿರ ಗ್ರಾಹಕರಿಗೆ ನಿರಂತರ ವಿದ್ಯುತ್‌

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

rain

ಹೆಸ್ಕಾತ್ತೂರು: ಭೀಕರ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ

ajri

ಆಜ್ರಿ: ಮಲ್ಲಿಗೆ ಕೃಷಿಯಲ್ಲಿ ಖುಷಿ ಕಂಡ ಕನಕಕ್ಕ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.