• ಪಾಕ್‌ ಕಪ್ಪುಪಟ್ಟಿಗೆ ಸೇರಬೇಕಿತ್ತು

  ಉಗ್ರರಿಗೆ ಅಕ್ರಮವಾಗಿ ಹಣ ವರ್ಗಾವಣೆ ಆಗುವುದನ್ನು ತಡೆಯಲು ಎಫ್ಎಟಿಎಫ್ ವಿಧಿಸಿರುವ 30 ಷರತ್ತುಗಳಲ್ಲಿ ಕೆಲವನ್ನು ಮಾತ್ರ ಪಾಕ್‌ ಈಡೇರಿಸಿದೆ. ಹಣಕಾಸು ಕ್ರಿಯಾ ಪಡೆಯ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರುವುದರಿಂದ ಪಾಕಿ ಸ್ತಾನ ಸ್ವಲ್ಪದರಲ್ಲಿಯೇ ಪಾರಾಗಿದೆ. ಮಂಗಳವಾರ ನಡೆದ ಎಫ್ಎಟಿಎಫ್ ಸಭೆಯಲ್ಲಿ ಪಾಕಿ ಸ್ತಾನಕ್ಕೆ…

 • ರಾಜ್ಯದಲ್ಲಿ ಜೆಎಂಬಿ ಉಗ್ರರು ನಿರಂತರ ಎಚ್ಚರಿಕೆ ಅಗತ್ಯ

  ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಸಂಘಟನೆಯ 22 ಅಡಗುತಾಣಗಳು ಬೆಂಗಳೂರು ಹಾಗೂ ಹೊರವಲಯದಲ್ಲಿ ಪತ್ತೆಯಾಗಿವೆ ಎಂಬ ಮಾಹಿತಿ ನಿಜಕ್ಕೂ ರಾಜಧಾನಿ ಬೆಂಗಳೂರಷ್ಟೇ ಅಲ್ಲದೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಗುಪ್ತಚರ ದಳ ಸೂಚನೆ ಮೇರೆಗೆ ಗೃಹ…

 • ಸಮರ್ಥ ವ್ಯಕ್ತಿಗೆ ಬಿಸಿಸಿಐ ಸಾರಥ್ಯ

  ಭಾರತದ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಸೌರವ್‌ ಗಂಗೂಲಿಗೆ ಇದೀಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಾರಥ್ಯ ಸಿಗುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ, ಅದರಲ್ಲೂ ತಂಡದ ನಾಯಕನೇ ಆಗಿದ್ದ ವ್ಯಕ್ತಿಯೊಬ್ಬರು ಕ್ರಿಕೆಟ್‌ ನಿಯಂತ್ರಣ ಮಂಡಳಿಯ…

 • ಸವಾಲಿನ ಸರಮಾಲೆ

  ರಾಜ್ಯ ವಿಧಾನಮಂಡಲದ ಅಧಿವೇಶನ ರಜಾ ದಿನವಾದ ಎರಡನೇ ಶನಿವಾರವೂ ಸೇರಿ ಮೂರು ದಿನಗಳ ಕಾಲ ನಡೆದು ನಿರೀಕ್ಷೆಯಂತೆ ಪ್ರವಾಹ ಪರಿಹಾರವೇ ಪ್ರಮುಖವಾಗಿ ಚರ್ಚೆಯಾಗಿ ಸರಕಾರದ ಪರವಾಗಿ ಉತ್ತರವೂ ಕೊಟ್ಟು ಬಿಜೆಪಿ ಸರಕಾರ ನಿಟ್ಟುಸಿರು ಬಿಟ್ಟಿದೆ. ಬಿಜೆಪಿ ಸರಕಾರದ ಪಾಲಿಗೆ…

 • ಕಾಂಗ್ರೆಸ್‌ ಬೇಜವಾಬ್ದಾರಿ ವರ್ತನೆ: ಸಂವೇದನಾ ರಹಿತ ನಡೆ

  ಜೆರೆಮಿ ಕಾರ್ಬಿನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್‌ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ ಮಂಡಿಸಿದ್ದಾರೆ. ಅಂಥ ವ್ಯಕ್ತಿಯನ್ನು ಭೇಟಿ ಮಾಡುವ ಅಗತ್ಯವೇನಿತ್ತು. ಕಾಂಗ್ರೆಸ್‌ನ ಸಾಗರೋತ್ತರ ವಿಭಾಗ ಬ್ರಿಟನ್‌ನ ವಿರೋಧ ಪಕ್ಷವಾಗಿರುವ ಲೇಬರ್‌ ಪಾರ್ಟಿಯ…

 • ಕಪ್ಪುಹಣ ಸೃಷ್ಟಿಗೆ ತಡೆ ಹಾಕಬೇಕು

  ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಚಿಸಿದ ಕೆಲವು ಕಾನೂನುಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಈಗ ಫ‌ಲ…

 • ಫ‌ಲಪ್ರದ ಮಾತುಕತೆಯಾದರೆ ಮಾತ್ರ ಸಾರ್ಥಕ

  ತಮಿಳುನಾಡಿನ ಮಮ್ಮಲ್ಲಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಶೃಂಗ ಸಭೆ ಇತ್ತೀಚೆಗಿನ ಕೆಲವು ಅಂತಾರಾಷ್ಟ್ರೀಯ ಮತ್ತು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕಳೆದ ವರ್ಷ…

 • ವಾಯುಸೇನೆಗೆ ರಫೇಲ್‌ ಸೇರ್ಪಡೆ: ಆಧುನೀಕರಣದ ಹೆಜ್ಜೆ

  ವಾಯುಸೇನೆ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಈಗ ರಫೇಲ್‌ ನಮ್ಮ ವಾಯು ಸೇನೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ. ತನ್ನ ಎಂಟೂವರೆ ದಶಕಕ್ಕೂ ಹೆಚ್ಚಿನ ಇತಿಹಾಸದಲ್ಲಿ ಭಾರತದ ವಾಯುಸೇನೆಯು ಅನೇಕ ಏರಿಳಿತಗಳನ್ನು ನೋಡುತ್ತಲೇ ಬಂದಿದೆ. ಚೀನಾ…

 • ರಾಜಕೀಯ ನಾಯಕರು ಪ್ರಬುದ್ಧತೆ ಪ್ರದರ್ಶಿಸಲಿ

  ಜಮ್ಮು – ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಸುಮಾರು ಎರಡು ತಿಂಗಳಿಂದ ಗೃಹ ಬಂಧನದಲ್ಲಿರುವ ಅಲ್ಲಿನ ರಾಜಕೀಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆಗೊಳಿಸಲು ಸರಕಾರ ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ 15 ಸದಸ್ಯರ ನಿಯೋಗವೊಂದು…

 • ಮದ್ಯಂತರ ಪರಿಹಾರ: ಸದ್ಬಳಕೆಯಾಗಲಿ ಹಣ

  ಕರ್ನಾಟಕಕ್ಕೆ ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ, ನಿರ್ಲಕ್ಷ್ಯ ಮಾಡುತ್ತಿದೆ, ರಾಜ್ಯ ಸರ್ಕಾರ ನಷ್ಟದ ಅಂದಾಜು ಕುರಿತು ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕರಿಸಿದೆ ಎಂಬ ವಿಷಯಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯ ಹಾಗೂ ಕೇಂದ್ರದಲ್ಲಿ…

 • ಬಂಡೀಪುರ ರಾತ್ರಿ ಸಂಚಾರ ವಿಚಾರ ರಾಜಕೀಯ ಬೇಡ

  ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಮೂಲಕ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಸದ್ಯ ಜಾರಿಯಲ್ಲಿರುವ ಇರುವ ಸಂಚಾರ ನಿಷೇಧ ತೆಗೆದು ಹಾಕಬೇಕು ಎಂಬ ಒತ್ತಾಯಕ್ಕೆ ಮತ್ತೆ ಜೀವ ಬಂದಿದೆ. ಅದಕ್ಕೆ ಮುಖ್ಯ ಕಾರಣಕರ್ತರು ಕಾಂಗ್ರೆಸ್‌ನ ಮಾಜಿ…

 • ಪ್ಲಾಸ್ಟಿಕ್‌ ನಿರ್ಮೂಲನ ಅಭಿಯಾನವೂ ಯಶಸ್ವಿಯಾಗಲಿ

  ಜನರ ಸಹಭಾಗಿತ್ವವಿದ್ದರೆ ಹೇಗೆ ಒಂದು ಯೋಜನೆ ಅಭೂತಪೂರ್ವವಾಗಿ ಯಶಸ್ವಿಯಾಗಬಹುದು ಎನ್ನುವುದಕ್ಕೆ ಸ್ವಚ್ಛ ಭಾರತ ಅಭಿಯಾನವೇ ಉತ್ತಮ ಉದಾಹರಣೆ. ಸರಿಯಾಗಿ ಐದು ವರ್ಷದ ಹಿಂದೆ ಪ್ರಾರಂಭಿಸಿದ ಸ್ವತ್ಛ ಭಾರತ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಜಾಗತಿಕ ಮಟ್ಟದಲ್ಲಿ ಈ…

 • ಮಹಾತ್ಮ ತೋರಿದ ದಾರಿಯಲ್ಲಿ…

  ಮಹಾತ್ಮ ಗಾಂಧಿ ಜನಿಸಿ 150 ವರ್ಷ ಪೂರ್ಣವಾಗಿದೆ. ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಆಸ್ಥೆಯಗಳು ಪ್ರಸ್ತುತ ದಿನಮಾನಗಳಿಗೂ ಅನ್ವಯವಾಗುತ್ತವೆ. ಈ ಬಾರಿಯ ಗಾಂಧಿ ಜಯಂತಿ ಹಿಂದಿನ ವರ್ಷಗಳ ಆಚರಣೆಗಳಿಗಿಂತ ಭಿನ್ನವಾಗಿದೆ ಎಂದರೆ ತಪ್ಪಾಗಲಾರದು. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ…

 • ಆಡಳಿತ ಯಂತ್ರ ಚುರುಕಾಗಲಿ

  ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾಯಿತು. ಈ ವಿಧಾನಸಭೆಯ ಅವಧಿಯಲ್ಲಿ ಎರಡನೇ ಸರಕಾರವಿದು. ಆದರೂ ರಾಜ್ಯದ ಜನರಿಗೆ ಇನ್ನೂ ಸರಕಾರ ಅಸ್ತಿತ್ವಕ್ಕೆ ಬಂದಂತೆ ಎನಿಸುತ್ತಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಆಡಳಿತ ನಡೆಸುತ್ತಿದ್ದಾಗಲೂ ಒಟ್ಟಂದದಲ್ಲಿ ಸರಕಾರವೊಂದು…

 • ಹೂಡಿಕೆಸ್ನೇಹಿ ವಾತಾವರಣ ತೃಪ್ತಿಕರ ನಿರ್ವಹಣೆ

  ನವೋದ್ಯಮಗಳಿಗೆ ಸರಕಾರದಿಂದ ಧಾರಾಳ ಉತ್ತೇಜನ ಮತ್ತು ನೆರವು ಸಿಗುತ್ತಿದೆ. ಕಾರ್ಪೊರೇಟ್‌ ತೆರಿಗೆ ದರದಲ್ಲಿನ ಸುಧಾರಣೆಯು ಮುಂದಿನ ದಿನಗಳಲ್ಲಿ ದೇಶವನ್ನು ಉದ್ಯಮ ಸ್ನೇಹಿಯನ್ನಾಗಿಸುತ್ತದೆ. ಭಾರತದಲ್ಲಿ ಹೂಡಿಕೆಸ್ನೇಹಿ ವಾತಾವರಣ ಇನ್ನಷ್ಟು ಉತ್ತಮಗೊಳ್ಳುತ್ತಿದೆ ಎನ್ನುತ್ತಿದೆ ವಿಶ್ವಬ್ಯಾಂಕ್‌ನ ವರದಿ. ಹೂಡಿಕೆಸ್ನೇಹಿ ವಾತಾವರಣದಲ್ಲಿ ಗಣನೀಯ ಸುಧಾರಣೆಯಾಗುತ್ತಿರುವ…

 • ಮಧ್ಯಪ್ರದೇಶ ಘಟನೆ ಜಾಗೃತಿ ಅಗತ್ಯ

  ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ, ಬಯಲು ಬಹಿರ್ದೆಸೆ ಮಾಡಿದರೆಂಬ ಕಾರಣಕ್ಕಾಗಿ ಇಬ್ಬರು ಮಕ್ಕಳನ್ನು ಕ್ರೂರವಾಗಿ ಹೊಡೆದು ಸಾಯಿಸಲಾದ ವಿದ್ರಾವಕ ಘಟನೆ ನಡೆದಿದೆ. ಈ ಹತ್ಯೆಯ ಹಿಂದೆ ಜಾತಿ ದ್ವೇಷವಿದೆ ಎಂದು ಕೆಲವು ವರದಿಗಳು ಹೇಳುತ್ತವಾದರೂ, ಪೊಲೀಸರು ಈ ಬಗ್ಗೆ…

 • ನಿಲ್ಲದ ಪಾಕ್‌ ಕುತಂತ್ರ: ಡ್ರೋನ್‌ ಬಗ್ಗೆ ಎಚ್ಚರ ಅಗತ್ಯ

  ಪಾಕಿಸ್ತಾನದ ಉಗ್ರರು ಡ್ರೋನ್‌ ಬಳಸಿ ಪಂಜಾಬಿನ ಗಡಿಯಲ್ಲಿರುವ ತರಣ್‌ ತಾರಣ್‌ನಲ್ಲಿ ಎಕೆ 47 ರೈಫ‌ಲ್‌ಗ‌ಳು, ಸ್ಫೋಟಕ, ಮದ್ದು ಗುಂಡು, ನಕಲಿ ಕರೆನ್ಸಿ ನೋಟು ಇತ್ಯಾದಿಗಳನ್ನು ಇಳಿಸಿರುವುದು ಕಳವಳ ಉಂಟುಮಾಡುವ ಘಟನೆ. ಎಂಟು ದಿನಗಳಲ್ಲಿ ಹತ್ತು ಸಲ ಡ್ರೋನ್‌ಗಳು ಗಡಿದಾಟಿ…

 • ಸೂಕ್ತ ಸಿದ್ಧತೆ ಅಗತ್ಯ

  ದೇಶಕ್ಕೊಂದೇ ಗುರುತಿನ ಕಾರ್ಡ್‌ ಪರಿಕಲ್ಪನೆಗೆ ಗೃಹ ಸಚಿವ ಅಮಿತ್‌ ಶಾ ಮರುಜೀವ ನೀಡಿದ್ದಾರೆ. ಸದ್ಯಕ್ಕೆ ಸರಕಾರದ ಮುಂದೆ ಈ ಗುರುತಿನ ಕಾರ್ಡ್‌ ಯೋಜನೆಯ ಪ್ರಸ್ತಾವ ಇಲ್ಲದಿದ್ದರೂ 2021ರಲ್ಲಿ ನಡೆಯಲಿರುವ ಜನಗಣತಿಯ ಮಾಹಿತಿಯನ್ನು ಆಧರಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಬಹುದು ಎನ್ನುವುದು…

 • ಅಪಾಯಕಾರಿ ಅಪೌಷ್ಟಿಕತೆ: ಬಲಿಯಾಗದಿರಲಿ ಮಕ್ಕಳು

  ಭಾರತದ ಅತಿದೊಡ್ಡ ಸಂಪನ್ಮೂಲವೇ ಜನರು ಎಂದು ನಾವು ಎಷ್ಟೇ ಹೆಮ್ಮೆಯ ಮಾತನಾಡಿದರೂ, ಜನರು ಈಗಲೂ ದುಃಸ್ಥಿತಿಯಲ್ಲೇ ಇದ್ದಾರೆ ಎನ್ನುವುದು ವಾಸ್ತವ. ಭಾರತದಲ್ಲಿ ಇನ್ನೂ ಅಪೌಷ್ಟಿಕತೆ ತಾಂಡವವಾಡುತ್ತಿರುವುದು ನಿಜಕ್ಕೂ ಚಿಂತಿಸಲೇಬೇಕಾದ ವಿಷಯ. ಆಫ್ರಿಕಾದ ಕೆಲ ರಾಷ್ಟ್ರಗಳ ಮಹಿಳೆಯರಿಗಿಂತಲೂ ಭಾರತದಲ್ಲಿ ಅಧಿಕ…

 • ರಾಜ ತಾಂತ್ರಿಕ ನೈಪುಣ್ಯತೆಯ ಒಂದು ಝಲಕ್‌

  ಅಮೆರಿಕದ ಹ್ಯೂಸ್ಟನ್‌ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಯಾಗಿ ಭಾಗವಹಿಸಿದ ಹೌಡಿ ಮೋದಿ ಕಾರ್ಯಕ್ರಮ ಹಲವು ಕಾರಣಗಳಿಗಾಗಿ ಮಹತ್ವಪೂರ್ಣ ಎನಿಸಿಕೊಂಡಿದೆ. ಹೌಡಿ ಮೋದಿಯ ಮೂಲಕ ಮೋದಿ ಭಾರತ ಸಾಮರ್ಥ್ಯ ಮತ್ತು ಜನಪ್ರಿಯತೆಯನ್ನು ಜಗತ್ತಿನೆದುರು…

ಹೊಸ ಸೇರ್ಪಡೆ