• ಶಾಂತಿಯುತ ಮತದಾನಕ್ಕೆ ಸಜ್ಜು

  ಗದಗ: ಹಾವೇರಿ ಮತ್ತು ಬಾಗಲಕೋಟೆ ಲೋಕಸಭೆ ಕ್ಷೇತ್ರಗಳಿಗೆ ಸಂಬಂಧಿಸಿ ಏ.23ರಂದು ಜಿಲ್ಲೆಯಲ್ಲಿ ನಡೆಯಲಿರುವ ಮತದಾನ ಪ್ರಕಿಯೆ ಶಾಂತಿಯುತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಮತದಾರು ಹೆಚ್ಚಿನ ಸಂಖ್ಯೆಯಲ್ಲಿ ಮುಕ್ತ ಮತ್ತು ನಿರ್ಭೀತಿಯಿಂದ ಮತಚಲಾಯಿಸಬೇಕು ಎಂದು ಎಂದು ಜಿಲ್ಲಾಧಿಕಾರಿ…

 • ಬಿಜೆಪಿಯಿಂದ ಅಧಿಕಾರ ದುರ್ಬಳಕೆ: ಪಾಟೀಲ

  ಗಜೇಂದ್ರಗಡ: ಸಮಗ್ರ ಅಭಿವೃದ್ಧಿ ಕಾಣದೇ ಹಿಂದುಳಿದಿರುವ ಹಾವೇರಿ ಕ್ಷೇತ್ರದ ಗ್ರಾಮಾಭಿವೃದ್ಧಿಗೆ ಡಿ.ಆರ್‌. ಪಾಟೀಲರ ಗೆಲುವು ಅನಿವಾರ್ಯ. ಹೀಗಾಗಿ ಅಭಿವೃದ್ಧಿ ಬಯಸಿರುವ ಕ್ಷೇತ್ರದ ಜನತೆ ಬದಲಾವಣೆಗೆ ನಾಂದಿ ಹಾಡಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಹೇಳಿದರು. ಪಟ್ಟಣದ ದುರ್ಗಾ…

 • ಕಳ್ಳ-ಕಾಕರ ಕೈಗೆ ದೇಶ ಕೊಡದಿರಿ: ಸೂರ್ಯ

  ಗದಗ: ಪ್ರಧಾನಿ ಮೋದಿ ಅವರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತದಿಂದ ಇಡೀ ವಿಶ್ವವೇ ಇದೀಗ ಭಾರತದತ್ತ ತಿರುಗಿ ನೋಡುತ್ತಿದೆ. 2004ರ ಲೋಕಸಭೆ ಚುನಾವಣೆ ಮಾದರಿಯಲ್ಲಿ ಮತ್ತೆ ದೇಶವನ್ನು ಕಳ್ಳ- ಕಾಕರ ಕೈಗಿಡದೇ, ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ…

 • ತುಂಗಭದ್ರಾ ನೀರು ಸರಬರಾಜಿಗೆ ಬರ

  ಲಕ್ಷ್ಮೇಶ್ವರ: ಪಟ್ಟಣಕ್ಕೆ ಸರಬರಾಜಾಗುವ ತುಂಗಭದ್ರಾ ನದಿ ನೀರು ಕಳೆದ ಕೆಲ ದಿನಗಳಿಂದಲೂ ಮರೀಚಿಕೆಯಾಗಿದ್ದು, ಜನರು ಟ್ಯಾಂಕರ್‌ ನೀರು, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮೊರೆ ಹೋಗಿದ್ದಾರೆ. ಮೇವುಂಡಿಯ ಜಾಕ್‌ವೆಲ್ನಿಂದ ತುಂಗಭದ್ರಾ ನದಿಯ ನೀರು ನೇರವಾಗಿ ಸೂರಣಗಿಯ ಶುದ್ಧೀಕರಣ ಘಟಕದಲ್ಲಿ…

 • ಕುಡಿವ ನೀರಿನ ಸಮಸ್ಯೆ ಬಗೆಹರಿಸಿ

  ಗದಗ: ತಾಲೂಕಿನ ಬಳಗಾನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅಲ್ಲದೇ, ಬಳಗಾನೂರು-ಲಿಂಗದಾಳ ರೋಡ್‌ ಮಧ್ಯೆ ಇರುವ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಡಳಿತ ಭವನ ಎದುರು ಬಳಗಾನೂರ ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ…

 • ಉದಾಸಿ ಗೆಲುವಿಗಾಗಿ ಅಭಿಮಾನಿಗಳ ದೀಡ್‌ ನಮಸ್ಕಾರ

  ಗದಗ: ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವಿಗಾಗಿ ನಗರದ ರಾಚೋಟೇಶ್ವರ ದೇವಸ್ಥಾನದಿಂದ ಜೋಡು ಮಾರುತಿ ದೇವಸ್ಥಾನದ ವರೆಗೆ ದೀಡ್‌ ನಮಸ್ಕಾರ ಹಾಕುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರಾದ ಪಂಚಾಕ್ಷರಿ ಅಂಗಡಿ, ಶ್ರೀಕಾಂತ ಹೆಬ್ಬಳ್ಳಿ,…

 • ಎಸ್‌ಎಸ್‌ಕೆ ಸಮಾಜದಿಂದ ಬೃಹತ್‌ ರ್ಯಾಲಿ

  ಗದಗ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಬೆಂಬಲ ಸೂಚಿಸಿ ನಗರದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಗುರುವಾರ ಸಂಜೆ ಬೃಹತ್‌ ಪಾದಯಾತ್ರೆ ನಡೆಸಲಾಯಿತು. ನಗರದ ಹಳೇ ಸರಾಫ್‌ ಬಜಾರ್‌ನಿಂದ ಅಂಬಾ ಭವಾನಿ ದೇವಸ್ಥಾನದಿಂದ ಚೌವಡಿ ಕೂಟ,…

 • ಫಲ ಕಂಡಿದೆ ಮೋದಿಗೆ ಹಾಕಿದ ಮತ

  ನರಗುಂದ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಕ್ತಿ ಮೋದಿಗಿದೆ ಎಂಬುದನ್ನು ಕಳೆದ ಐದು ವರ್ಷದಲ್ಲಿ ಸಾಬೀತುಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹಾಕಿದ ಮತ ಸಾಫಲ್ಯ ಕಂಡಿದೆ ಎಂಬ ಆತ್ಮ ಸಂತೋಷ ದೇಶದ ಪ್ರಜೆಗಳಲ್ಲಿದೆ. ಹೀಗಾಗಿ ಮತ್ತೂಮ್ಮೆ…

 • ಸದೃಢ ದೇಶಕ್ಕಾಗಿ ಬಿಜೆಪಿ ಗೆಲ್ಲಿಸಿ

  ಗದಗ: ಜಿಲ್ಲೆಯಲ್ಲಿ ತಮ್ಮ ಅನುಕೂಲತೆಗೆ ತಕ್ಕಂತೆ ರಾಜಕಾರಣ ಮಾಡುತ್ತಿರುವವರನ್ನು ಸೋಲಿಸಬೇಕು. ಸುಭದ್ರ ಹಾಗೂ ಸದೃಢ ದೇಶಕ್ಕಾಗಿ ಮತ್ತೂಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು. ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಹ್ಯಾಟ್ರಿಕ್‌ ಗೆಲುವಿಗೆ ಕಾರಣರಾಗಬೇಕು ಎಂದು ಬೀಳಗಿ…

 • ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂ| ಸಿದ್ಧಲಿಂಗ ಶ್ರೀ

  ಗದಗ: ಮಠಗಳು ಕೇವಲ ಧಾರ್ಮಿಕತೆಗೆ ಸೀಮಿತ ಎನ್ನುವಂಥ ಸಿದ್ಧಸೂತ್ರವನ್ನು ಮುರಿದು, ಮಠವನ್ನು ನಾಡು ನುಡಿಯ ಸಂರಕ್ಷಣೆಯ ಕೇಂದ್ರವನ್ನಾಗಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂಣ ಡಾಣ ಸಿದ್ಧಲಿಂಗ ಶ್ರೀಗಳು ಉಪಮಾತೀತರು. ಅವರ ವ್ಯಕ್ತಿತ್ವ ನಾಡಿನ ಎಲ್ಲ ಸ್ವಾಮೀಜಿಗಳಿಗೆ ಆದರ್ಶಪ್ರಾಯವಾಗಿದೆ ಎಂದು…

 • ವಾಯುಪುತ್ರ ಹನುಮನಿಗೆ ಭಕ್ತಿ ಸಮರ್ಪಣೆ

  ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಹನುಮ ಜಯಂತಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ವಿವಿಧಡೆ ಇರುವ ಮಾರುತಿ, ಆಂಜನೇಯ ದೇವಸ್ಥಾನಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ವಾಯು ಪುತ್ರ ಹನುಮನಿಗೆ ಭಕ್ತಿ ಸಮರ್ಪಿಸಿದರು. ಅವಳಿ ನಗರದಲ್ಲಿರುವ ಆಂಜನೇಯ…

 • ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಪಾಟೀಲ

  ನರಗುಂದ: ದೇಶದ ಜನರಲ್ಲಿ ದೇಶಾಭಿಮಾನ ಮೂಡಿಸುವ ಜೊತೆಗೆ ವಿಶ್ವದಲ್ಲೇ ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಬಲಿಷ್ಠ ಭಾರತ…

ಹೊಸ ಸೇರ್ಪಡೆ