• ಕಾರಹುಣ್ಣಿಮೆ ಮೇಲೆ ಬರಗಾಲ ಛಾಯೆ

  ಪರಮೇಶ್ವರ ಭೂಸನೂರ ಮಾದನ ಹಿಪ್ಪರಗಿ: ರೈತ ಮಳೆ, ಬೆಳೆ ಚೆನ್ನಾಗಿದ್ರೇನೆ ಸಂತೋಷವಾಗಿರುತ್ತಾನೆ. ಆತನ ಜಾನುವಾರುಗಳು ಚೆನ್ನಾಗಿರುತ್ತವೆ. ವರ್ಷಕ್ಕೊಮ್ಮೆ ಮಾಡುವ ದನಗಳ ಹಬ್ಬ ಕಾರಹುಣ್ಣಿಮೆಯನ್ನು ಹೌಸಿಯಿಂದ (ಖುಷಿಯಿಂದ) ಆಚರಿಸುತ್ತಾನೆ. ಆದರೆ ಪ್ರಸಕ್ತ ವರ್ಷದ ಹಬ್ಬದ ಮೇಲೆ ಬರಗಾಲದ ಕಾರ್ಮೋಡ ಬಿದ್ದಂತಿದೆ….

 • ಅಂಗನವಾಡಿ ಅಕ್ರಮದ್ದೇ ಚರ್ಚೆ

  ಕಲಬುರಗಿ: ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆಯದಂತೆ ನಿಗಾ ವಹಿಸಿದರೆ ಪ್ರತ್ಯೇಕ ಸಮಿತಿ ರಚಿಸುವ ಪ್ರಮೇಯವೇ ಬರುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಪಿ. ರಾಜಾ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ನೂತನ ಜಿಪಂ ಸಭಾಂಗಣದಲ್ಲಿ…

 • ದುಬಾರಿ ಉಡುಗೊರೆ ಕೊಟ್ಟ ಗಾನಕೋಗಿಲೆ

  ಸೊಲ್ಲಾಪುರ: ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶಕರ್‌ ಅವರು ತಾವು ಬಳಸಿದ ಕೋಟ್ಯಂತರ ರೂ. ಬೆಲೆ ಬಾಳುವ ಎರಡು ಕಾರುಗಳನ್ನು ಅಕ್ಕಲಕೋಟೆಯ ಶ್ರೀಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ಉಡುಗೊರೆ ನೀಡಿದ್ದಾರೆ. ಲತಾ…

 • ಅಫಜಲಪುರ: ಮಳೆ ಕೊರತೆಯಲ್ಲೂ ಬಿತ್ತನೆಗೆ ಸಿದ್ಧತೆ

  ಮಲ್ಲಿಕಾರ್ಜುನ ಹಿರೇಮಠ ಅಫಜಲಪುರ: ಕಳೆದ ವರ್ಷ ಮಳೆ ಕೊರತೆಯಾಗಿ ಬಿತ್ತಿದ ಬೆಳೆಗಳೆಲ್ಲ ನಾಶವಾಗಿ ಸಾಕಷ್ಟು ಹಾನಿಯಾಗಿತ್ತು. ಬೆಳೆ ಹಾನಿಯಿಂದ ರೈತಾಪಿ ವರ್ಗದವರು ಸಾಲ ಮಾಡಿಕೊಂಡು ಹೈರಾಣಾಗಿದ್ದರು. ಆದರೆ ಈ ಬಾರಿಯ ಮುಂಗಾರು ಹಂಗಾಮಿನ ಬಿತ್ತನೆಗೆ ಮಳೆ ಕೊರತೆಯಲ್ಲು ಭೂಮಿ…

 • ಇಂದು ಜಿಪಂ ಸಭೆ: ಕೆಡಿಪಿ ಸಭೆ ಯಾವಾಗ?

  ಹಣಮಂತರಾವ ಭೈರಾಮಡಗಿ ಕಲಬುರಗಿ: ಬರೊಬ್ಬರಿ ಆರು ತಿಂಗಳ ನಂತರ ಶನಿವಾರ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆ ನಡೆಯುತ್ತಿದ್ದು, ಈಗಲಾದರೂ ಆಡಳಿತದ ಕಾರ್ಯವೈಖರಿ ಚುರುಕುಗೊಳ್ಳುವುದೇ ಎಂದು ಸಭೆ ನಿರೀಕ್ಷೆ ಹುಟ್ಟಿಸಿದೆ. ಈ ವರ್ಷದ ಆರಂಭದ ಜನೆವರಿ 19ರಂದು ಸಾಮಾನ್ಯ ಸಭೆ…

 • ಸರ್ಕಾರಿ ನೌಕರರ ಚುನಾವಣೆ: ವಿಜೇತ ಅಭ್ಯರ್ಥಿಗಳ ಸಂಭ್ರಮ

  ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 2019-24ನೇ ಸಾಲಿಗೆ ಸದಸ್ಯರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಕಾರ್ಯದರ್ಶಿ ಕೆ. ಈರಣ್ಣ ಗೌಡ, ಹಿಂದಿನ ಅಧ್ಯಕ್ಷ ಬಿ.ಎಸ್‌.ದೇಸಾಯಿ ಸೇರಿದಂತೆ ಹಲವರು ಚುನಾಯಿತರಾಗಿದ್ದಾರೆ. ಜಿಲ್ಲಾ…

 • ಎಚ್ಚೆತ್ತ ಎಸಿಸಿ: ಶುಚಿಯಾಯ್ತು ಕಾರ್ಮಿಕರ ಕಾಲೋನಿ

  ವಾಡಿ: ಕೊಳೆ ಮಡುಗಟ್ಟಿ , ಗಬ್ಬು ವಾಸನೆ ಹರಡಿದ್ದ ಎಸಿಸಿ ಕಾರ್ಮಿಕರ ಕಾಲೋನಿ ಅಧಿಕಾರಿಗಳ ದಿಟ್ಟ ಕ್ರಮದಿಂದ ಸ್ವಚ್ಛಗೊಂಡಿದೆ. ಕಟ್ಟಡದ ಸಂದು-ಸಂದುಗಳಲ್ಲಿ ಬೇರು ಬಿಟ್ಟಿದ್ದ ಗಿಡಮರಗಳಿಗೆ ಕೊಡಲಿ ಪೆಟ್ಟು ಹಾಕಲಾಯಿತು. ಕಸ, ಘನತ್ಯಾಜ್ಯ, ಮುಳ್ಳುಕಂಟಿ ವಿಲೇವಾರಿ ಕಾರ್ಯ ಭರದಿಂದ…

 • ಉತ್ತರ ಕ್ಷೇತ್ರದಲ್ಲಿ ಸಂಸದ ಜಾಧವ ಸಂಚಾರ

  ಕಲಬುರಗಿ: ಸಂಸದ ಡಾ| ಉಮೇಶ ಜಾಧವ ಗುರುವಾರ ಕಲಬುರಗಿ ಮಹಾನಗರದ ಉತ್ತರ ಮತಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಪರಿಸ್ಥಿತಿ ಅವಲೋಕಿಸಿದರು. ಪ್ರಸಿದ್ಧ ಖಾಜಾ ಬಂದೇನವಾಜ್‌ ದರ್ಗಾ ದರ್ಶನ ಕೈಗೊಳ್ಳುವ ಮೂಲಕ ಕಲಬುರಗಿ ಉತ್ತರ ಮತಕ್ಷೇತ್ರದ ವಿವಿಧ ಬಡಾವಣೆಗಳಿಗೆ ಭೇಟಿ…

 • ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪಟ್ಟಿ

  ಕಲಬುರಗಿ: ಸಿಎಂ ಕುಮಾರಸ್ವಾಮಿ ಜೂ.21 ಹಾಗೂ 22ರಂದು ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಗ್ರಾಮ ವಾಸ್ತವ್ಯಕ್ಕಾಗಿ ಭೇಟಿ ನೀಡಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೂ.20ರಂದು ಸಂಜೆ 7:20ಕ್ಕೆ ಬೆಂಗಳೂರಿ ನಿಂದ ರೈಲಿನ ಮೂಲಕ ಹೊರಟು 21ರಂದು ಬೆಳಗ್ಗೆ 3:48ಕ್ಕೆ ಯಾದಗಿರಿಗೆ…

 • 64 ಪುರಾತನ ಬಾವಿಗಳ ಪುನಶ್ಚೇತನ

  ರಂಗಪ್ಪ ಗಧಾರ ಕಲಬುರಗಿ: ಮಳೆ ಕೊರತೆ ಮತ್ತು ನಿರಂತರ ರಣ ಬಿಸಿಲು ವಾತಾವರಣವಿರುವ ಜಿಲ್ಲೆಯಲ್ಲಿ ಪ್ರತಿ ವರ್ಷವೂ ನೀರಿನ ಅಭಾವ ತಲೆದೋರುತ್ತಲೇ ಇದೆ. ಬೇಸಿಗೆಯಲ್ಲಿ ನೀರು ಪೂರೈಸಲು ಆಡಳಿತ ಯಂತ್ರ ಅನೇಕ ರೀತಿಯಲ್ಲಿ ತಾಪತ್ರಯ ಪಡುತ್ತಿದೆ. ಹೀಗಾಗಿ ಮುಂದಿನ…

 • ಗಬ್ಬು ನಾರುತ್ತಿದೆ ಎಸಿಸಿ ಕಾರ್ಮಿಕರ ಕಾಲೋನಿ

  ಮಡಿವಾಳಪ್ಪ ಹೇರೂರ ವಾಡಿ: ವಿಶ್ವ ಭೂಪಟದಲ್ಲಿರುವ ಅನೇಕ ದೇಶಗಳಿಗೆ ಸಿಮೆಂಟ್ ರಫ್ತು ಮಾಡಿ ಜನಮನ್ನಣೆ ಗಳಿಸಿರುವ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರ ಬದುಕು ಅತ್ಯಂತ ದುಸ್ಥರದಿಂದ ಕೂಡಿದೆ. ಕಾರ್ಮಿಕರ ವಾಸಕ್ಕಾಗಿ ನಿರ್ಮಿಸಲಾದ ಕಾಂಕ್ರಿಟ್ ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು,…

 • ಅಭಿವೃದ್ಧಿ ಮಾಡಿದ್ರೂ ಸೋತಿದ್ದು ದುರಂತ: ಖರ್ಗೆ

  ಶಹಾಬಾದ: ಎಷ್ಟೋ ಸಂಸದರು ಗೆದ್ದು ಜನತೆಗೆ ಮುಖ ತೋರಿಸಿಲ್ಲ. ಅಭಿವೃದ್ಧಿ ಮಾಡಿಲ್ಲ. ನಾನು ರಾಷ್ಟ್ರೀಯ ಹೆದ್ದಾರಿ, ಇಎಸ್‌ಐ ಆಸ್ಪತ್ರೆ, 371 (ಜೆ) ಕಲಂ, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ರೂ ಮತ ನೀಡದೇ ಸೋಲಿಸಿದ್ದು ದುರಂತ….

 • ರಾತ್ರಿ 12ಕ್ಕೆ ಹೋಗಿ ಬೆಳಗ್ಗೆ 5ಕ್ಕೆ ಎದ್ದು ಬರೋದು ಗ್ರಾಮ ವಾಸ್ತವ್ಯ

  ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎನ್ನೋದು ಬರೀ ನಾಟಕ. ಹಿಂದಿನ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲೇ ಇದನ್ನು ನೋಡಿದ್ದೇವೆ. ರಾತ್ರಿ 12ಗಂಟೆಗೆ ಗ್ರಾಮಕ್ಕೆ ಹೋಗಿ ಬೆಳಗಿನ ಜಾವ 5ಗಂಟೆಗೆ ಎದ್ದು ಬರೋದು ಕುಮಾರಸ್ವಾಮಿ ಗ್ರಾಮವಾಸ್ತವ್ಯ ಎಂದು ಬಿಜೆಪಿ…

 • ತಪ್ಪಿದ ಆಡಳಿತ ವ್ಯವಸ್ಥೆ: ಸೂಪರ್‌ಸೀಡ್‌ ಕಾರ್ಮೋಡ

  ವಿಶೇಷ ವರದಿ ಕಲಬುರಗಿ: ಸಹಕಾರಿ ಕ್ಷೇತ್ರದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಶಾಸಕ ಎಂ.ವೈ. ಪಾಟೀಲ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್‌ನ ಆಡಳಿತ ನಿರ್ವಹಣೆ ಹಾದಿ ತಪ್ಪಿದ್ದರಿಂದ ರೈತರಿಗೆ ಯಾವುದೇ ಸಹಾಯ ಮಾಡಲಿಕ್ಕೆ ಆಗುತ್ತಿಲ್ಲ…

 • ಕಾರ್ನಾಡಗೆ ಭಾವಪೂರ್ಣ ಶ್ರದ್ಧಾಂಜಲಿ

  ಕಲಬುರಗಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ ಕಾರ್ನಾಡ್‌ ನಿಧನಕ್ಕೆ ಸೋಮವಾರ ಜಿಲ್ಲೆಯಲ್ಲಿ ಸಂತಾಪ ಸೂಚಿಸಲಾಯಿತು. ಗಿರೀಶ ಕಾರ್ನಾಡ್‌ ಅಗಲಿಕೆಗೆ ಗಣ್ಯರು, ಸಾಹಿತಿಗಳು ಶೋಕ ವ್ಯಕ್ತಪಡಿಸಿದರೆ ಸಂಘ-ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ…

 • ಸಸಿ ನೆಡುವ ಕೈಗೆ ಅರಣ್ಯ ಇಲಾಖೆ ನೆರವು

  ಆಳಂದ: ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗೆ ಅರಣ್ಯ ಇಲಾಖೆ ಮೂಲಕ ಜೂನ್‌ ತಿಂಗಳಲ್ಲಿ ಸರ್ಕಾರ ಸಸಿಗಳನ್ನು ನೆಡಲು ಅನೇಕ ಜಾಗೃತಿ, ಉಪನ್ಯಾಸ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಲಬುರಗಿ ಜಿಲ್ಲೆಯನ್ನು ಒಳಗೊಂಡು ಆಳಂದ ತಾಲೂಕಿನ ಅಲ್ಲಲ್ಲಿ ಮಳೆ ಶುರುವಾಗಿದೆ….

 • ಚಿತ್ತಾಪುರದಲ್ಲಿ ಕೈ ಹಿನ್ನಡೆಗೆ ಕಾರಣಗಳು ನಿಗೂಢ!

  ವಾಡಿ: ವಿಧಾನಸಭೆ ಚುನಾವಣೆಯಲ್ಲಿ 4,393 ಮತಗಳ ಅಂತರದಿಂದ ಪ್ರಿಯಾಂಕ್‌ ಖರ್ಗೆ ಅವರ ಕೈ ಮೇಲುಗೈ ಮಾಡಿದ್ದ ಚಿತ್ತಾಪುರ ಮೀಸಲು ಮತಕ್ಷೇತ್ರದ ಮತದಾರರು, ವರ್ಷದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ 5,365 ಮತಗಳ ಅಂತರದಿಂದ ಕಮಲ ಅರಳಿಸುವ ಮೂಲಕ ಡಾ|…

 • ಚಿಗರಳ್ಳಿ ಕ್ರಾಸ್‌ನಲ್ಲಿ ಹೆದ್ದಾರಿ ಬಂದ್‌

  ಕಲಬುರಗಿ: ರಾಜ್ಯ ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ ಜೇವರ್ಗಿ ತಾಲೂಕು ಚಿಗರಳ್ಳಿ ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ರೈತರು ಹೆದ್ದಾರಿ…

ಹೊಸ ಸೇರ್ಪಡೆ