• ಉಳ್ಳಾಲ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಂಪತಿ

  ಉಳ್ಳಾಲ: ತೊಕ್ಕೊಟ್ಟುವಿನ ಚೆಂಬುಗುಡ್ಡೆ ಬಳಿ ದಂಪತಿಗಳಿಬ್ಬರು ಸುಟ್ಟ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ. ಇಬ್ಬರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪದ್ಮನಾಭ (72) ಮತ್ತು  ವಿಮಲಾ(60) ಆತ್ಮಹತ್ಯೆ ಮಾಡಿಕೊಂಡಿದ್ದು ಇಬ್ಬರು ಮನೆಯೊಳಗೆ ಸುಟ್ಟು…

 • ಮಂಗಳೂರಿನಲ್ಲಿ ಫ‌ರ್ರಾಡರ್‌ ಅಕಾಡೆಮಿಯ 3ನೇ ಶಾಖೆ ಉದ್ಘಾಟನೆ

  ಮಂಗಳೂರು: ಈಗಾಗಲೇ ಉಡುಪಿ ಹಾಗೂ ಮಣಿಪಾಲಗಳಲ್ಲಿ ಶಾಖೆಯನ್ನು ಹೊಂದಿರುವ ಭಾಷಾ ಕಲಿಕೆ ಹಾಗೂ ಇತರ ತರಬೇತಿ ನೀಡುವ ಫ‌ರ್ರಾಡರ್‌ ಅಕಾಡೆ‌ಮಿಯ ಮೂರನೇ ಶಾಖೆ ಇತ್ತೀಚೆಗೆ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ. ಮಂಗಳೂರು ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್‌…

 • ಮಲ್ಲಿಗೆ ದರ ಗರಿಷ್ಠ ಕುಸಿತ; ಅಟ್ಟೆಗೆ 90 ರೂ.!

  ಶಿರ್ವ: ಶಂಕರಪುರ ಮಲ್ಲಿಗೆಯ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಮಂಗಳವಾರ ಅಟ್ಟೆಗೆ ಕಟ್ಟೆಯಲ್ಲಿ 90 ರೂ.ಗೆ ತಲುಪಿದೆ. ಜೂ. 15ರಂದು ಅಟ್ಟೆಗೆ 260 ರೂ. ಇದ್ದ ದರ ರವಿವಾರ ಮತ್ತು ಸೋಮವಾರ ಇಳಿಕೆ ಕಂಡು 110 ರೂ.ಗೆ ತಲುಪಿತ್ತು,…

 • ನೂತನ ಆವಿಷ್ಕಾರದ ಮೂಲಕ ಇ-ಆರೋಗ್ಯ ಯೋಜನೆ

  ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಜಾರಿಗೊಳ್ಳುತ್ತಿರುವ ಇ-ಆರೋಗ್ಯ ಯೋಜನೆ ನೂತನ ಆವಿಷ್ಕಾರದ ಮೂಲಕ ಜನಾಕರ್ಷಣೆ ಪಡೆಯಲಿದೆ. ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್‌ಲೆ„ನ್‌ ಮುಖಾಂತರ ಲಭ್ಯವಾಗಲಿದ್ದು, ಉಳಿದ ವಿಚಾರಗಳನ್ನು ಹೆಲ್ತ್‌ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ. ಆರೋಗ್ಯ ಕೇಂದ್ರಗಳಿಗೆ…

 • ಯಾಗ, ಯಜ್ಞಗಳಿಂದ ಕಲುಷಿತ ವಾತಾವರಣ ನಿರ್ಮಲ: ವಿಷ್ಣು ಆಸ್ರ

  ಕಾಸರಗೋಡು: ಪರಮ ಶಿವನ ಸಂಪ್ರೀತಿಗಾಗಿ ನಡೆಸುವ ಅತಿರುದ್ರ ಮಹಾಯಾಗದ ಮೂಲಕ ಕಲುಷಿತ ಗೊಂಡಿರುವ ಪರಿಸರ, ವಾತಾವರಣ ನಿರ್ಮಲಗೊಳ್ಳುವುದೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು. ರಾಮದಾಸನಗರದ ಗಂಗೆ ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ…

 • “ದೇವಕಾನ ಅವರ ಬದುಕು, ಕಲಾ ಜೀವನ ಮಾದರಿ’

  ಉಪ್ಪಳ: ಯಕ್ಷಗಾನವನ್ನು ತನ್ನ ಜೀವನದ ಉಸಿರಾಗಿ ಸ್ವೀಕರಿಸಿ, ಪರಂಪರೆ ಮತ್ತು ಶಾಸ್ತ್ರೀಯತೆಗೆ ಆದ್ಯತೆ ನೀಡಿ ಹಲವಾರು ಮಂದಿಗೆ ಆಶ್ರಯದಾತರಾಗಿ ಮುನ್ನಡೆದ ದೇವಕಾನ ಕೃಷ್ಣ ಭಟ್‌ ಅವರ ಅಗಲುವಿಕೆ ತುಂಬಲಾರದ ನಷ್ಟವಾಗಿದೆ. ರಂಗ ಮೀಮಾಂಸಕರಾಗಿ ವಸ್ತುನಿಷ್ಠ ನಿಲುವುಗಳ ಅವರ ಬದುಕು-ಕಲಾ…

 • ಸ್ವರ್ಗ: ಎಐಎಸ್‌ಎಫ್‌ ಜಿಲ್ಲಾ ಸಮ್ಮೇಳನ ಉದ್ಘಾಟನೆ

  ಪೆರ್ಲ: ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ ವತಿಯಿಂದ ಕಾಸರಗೋಡು ಜಿಲ್ಲಾ ಮಟ್ಟದ ಸಮ್ಮೇಳನ ಸ್ವರ್ಗದಲ್ಲಿ ಜೂ. 15 ಮತ್ತು 16ರಂದು ನಡೆಯಿತು. ಇದರ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಉದ್ಘಾಟನೆಗೈದು ಕಾರ್ಯ…

 • ಸರ್ಪನಮನೆ ಸಸ್ಯ ಕೇಂದ್ರದಲ್ಲಿದೆ 3.52 ಲಕ್ಷ ವಿಧದ ಗಿಡಗಳು

  ಬೈಂದೂರು: ತಾಲೂಕಿನ ಪ್ರಸಿದ್ದ ಸಸ್ಯ ಕ್ಷೇತ್ರವಾದ ಶಿರೂರು ಸರ್ಪನಮನೆಯಲ್ಲಿ ಈ ವರ್ಷ 3.52 ಲಕ್ಷ ಗಿಡಗಳನ್ನು ಸಿದ್ಧಪಡಿಸಲಾಗಿದ್ದು, ಹಸಿರು ಕ್ರಾಂತಿಯ ಚಿಂತನೆಯೊಂದಿಗೆ ಅರಣ್ಯ ಇಲಾಖೆ ಕಾಡು ವೃದ್ಧಿ ಹಾಗೂ ಅರಣ್ಯ ಬೆಳೆಸಲು ಸಾರ್ವಜನಿಕರ ಸಹಕಾರದೊಂದಿಗೆ ಹತ್ತಾರು ವಿಭಿನ್ನ ಯೋಜನೆಗಳನ್ನು…

 • ‘ಕಾಫಿ ತೋಟಗಳಲ್ಲಿ ಬೆಣ್ಣೆಹಣ್ಣು ಮಿಶ್ರ ಬೆಳೆಯಾಗಿ ಬೆಳೆಯಿರಿ’

  ಮಡಿಕೇರಿ : ಭಾರತೀಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಸಂಸ್ಥೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ರಾಜ್ಯ ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಬೆಣ್ಣೆಹಣ್ಣು ಮತ್ತು…

 • ಬರ ನಿರ್ವಹಣೆ, ಚರಂಡಿ ಕಾಮಗಾರಿ ತ್ವರಿತಗೊಳಿಸಿ

  ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು, ಮಳೆನೀರು ಹರಿಯುವ ಚರಂಡಿಗಳ ನಿರ್ವಹಣೆ ಮತ್ತು ಸ್ವತ್ಛತೆಯನ್ನು ಚುರುಕುಗೊಳಿಸಬೇಕು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸೂಚನೆ ನೀಡಿದ್ದಾರೆ. ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜರಗಿದ ಪ್ರಗತಿ ಪರಿಶೀಲನ ಸಭೆಯಲ್ಲಿ…

 • ಕಾಪು: ನೆರೆ ಪರಿಹಾರ ನಿಧಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಸಚಿವ ಆರ್‌.ವಿ. ದೇಶಪಾಂಡೆ

  ಕಾಪು: 2018-19ನೇ ಸಾಲಿನ ನೆರೆ ಪರಿಹಾರ ಅನುದಾನಡಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕೈಗೆತ್ತಿ ಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮ ಗಾರಿಗಳ ಗುಣಮಟ್ಟವನ್ನು ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಬೇಡಿಕೆಗಳಿಗೆ ಸ್ಪಂದಿಸಿ ಈ…

 • ಅಡಿಕೆ ಮರ ಏರುವ “ಬೈಕ್‌’ ಮಹೀಂದ್ರ ಅಧ್ಯಕ್ಷರ ಶ್ಲಾಘನೆ

  ಮಂಗಳೂರು: ಸಜೀಪ ಮುನ್ನೂರು ಕೋಮಾಲಿನ ಪ್ರಗತಿಪರ ಕೃಷಿಕ ಗಣಪತಿ ಭಟ್‌ ಅವರು ಆವಿಷ್ಕರಿಸಿರುವ ಅಡಿಕೆ ಮರ ಏರುವ “ಬೈಕ್‌’ ಯಂತ್ರದ ಬಗ್ಗೆ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ ಮಹೀಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ರಾಜೇಶ್‌ ಎಂಬವರಿಗೆ…

 • ಸೋಮವಾರಪೇಟೆ: ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

  ಸೋಮವಾರಪೇಟೆ :ಬೆಂಗಳೂರಿನ ಮಲೆನಾಡು ಗೆಳೆಯರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಕಳೆದ ಸಾಲಿನ ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಿಸಲಾಯಿತು. ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆಸ್ತಿ, ಮನೆ ಕಳೆದುಕೊಂಡು, ದಾಖಲೆ ಇಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತ ರಾಗಿದ್ದ,…

 • ಸೋಮವಾರಪೇಟೆ: ಕಪ್ಪು ಪಟ್ಟಿ ಧರಿಸಿ ಖಾಸಗಿ ವೈದ್ಯರ ಪ್ರತಿಭಟನೆ

  ಸೋಮವಾರಪೇಟೆ : ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸೋಮವಾರಪೇಟೆಯ ಖಾಸಗಿ ವೈದ್ಯರು ಕಪ್ಪು ಪಟ್ಟಿ ಧರಿಸಿ, ತುರ್ತು ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು…

 • ಬಾಡಿಗೆ ಸಮಸ್ಯೆ: ಉಭಯ ಜಿಲ್ಲೆಗಳ ಹಲವು ಬಿಎಸ್ಸೆನ್ನೆಲ್‌ ಟವರ್‌ ಬಂದ್‌

  ಕೋಟ/ವಿಟ್ಲ: ವಾರದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್‌ ಮೊಬೈಲ್‌ ಗ್ರಾಹಕರು ನೆಟ್‌ವರ್ಕ್‌ ಸಿಗದೆ ಪರದಾಡುತ್ತಿದ್ದಾರೆ. ಬಾಕಿ ಬಾಡಿಗೆಗಾಗಿ ಖಾಸಗಿ ಸಂಸ್ಥೆಯೊಂದು ತನ್ನ ಮೂಲಕ ಕಾರ್ಯಾಚರಿಸುತ್ತಿದ್ದ ಬಿಎಸ್ಸೆನ್ನೆಲ್‌ ಟವರ್‌ಗಳನ್ನು ಸ್ಥಗಿತಗೊಳಿಸಿರುವುದೇ ಇದಕ್ಕೆ ಕಾರಣ. ಬಿಎಸ್ಸೆನ್ನೆಲ್‌ನ…

 • ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿ: ರಾಮಚಂದ್ರ ಭಟ್‌

  ಉಡುಪಿ: ಎಂಟು ವರ್ಷಗಳಿಂದ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯು ಅರ್ಹ ಬಡ ಕುಟುಂಬಗಳಿಗೆ ಕುಟುಂಬ ಚೈತನ್ಯ ನಿಧಿ, ವಿದ್ಯಾಪೋಷಕ್‌ ನಿಧಿ, ಪ್ರತಿಭಾ ಪುರಸ್ಕಾರ ಮೊದಲಾದ ಸಮಾಜಮುಖೀ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬರೂ ಇಂತಹ ಯೋಜನೆಗಳಲ್ಲಿ ಕೈಜೋಡಿಸಿದರೆ ಸಮಾಜದ ಅಭಿವೃದ್ಧಿ…

 • ಮೂವತ್ತು ಸಾವಿರಕ್ಕೂ ಮಿಕ್ಕಿ ಬೀಜದುಂಡೆ ಬಿತ್ತನೆ

  ಮಲ್ಪೆ: ಪರಿಸರ ಮತ್ತು ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿಯ ಸಂವೇದನಾ ಫೌಂಡೇಶನ್‌ ಟ್ರಸ್ಟ್‌ನ ಸದಸ್ಯರು ಮಲ್ಪೆಯಿಂದ ಮಂತ್ರಾಲಯದವರೆಗೆ ಬರೋಬ್ಬರಿ 545 ಕಿ.ಮೀ ಪಾದಯಾತ್ರೆ ಮೂಲಕ ಕ್ರಮಿಸಿ 30ಸಾವಿರ ಬೀಜದುಂಡೆಯನ್ನು ಬಿತ್ತುವ ಸಂಕಲ್ಪದೊಂದಿಗೆ ಮಂತ್ರಾಲಯದಲ್ಲಿ ಗುರುರಾಯರ ದರ್ಶನವನ್ನು ಮಾಡಲಿದ್ದಾರೆ….

 • ‘ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಯಾಗಿ ರೂಪಿಸಿ’

  ಮಡಿಕೇರಿ: ಹದಿನಾಲ್ಕು ವರ್ಷ ದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾಗಬೇಕು. ಇದರಿಂದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ…

 • ಬಗೆಹರಿಯದ ಈದು ರಸ್ತೆ ಸಮಸ್ಯೆ: ಗ್ರಾಮಸ್ಥರ ಆಕ್ರೋಶ

  ಬಜಗೋಳಿ: ಕಾರ್ಕಳ ತಾಲೂಕಿನ ಈದು ಗ್ರಾ.ಪಂ.ನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್‌ನ ವಾಜಪೇಯಿ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ವಿತರಿಸ ಲಾಯಿತು. ಈದು ರಸ್ತೆ ಸಮಸ್ಯೆ ಬಗ್ಗೆ ಹಲವು ಬಾರಿ…

 • 3 ತಿಂಗಳೊಳಗೆ ಎಲ್ಲ 94 ಸಿ, 94ಸಿಸಿ ಅರ್ಜಿ ವಿಲೇವಾರಿ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 94 ಸಿ ಮತ್ತು 94 ಸಿಸಿಯಡಿಯಲ್ಲಿ ಬಂದಿರುವ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ಶ್ರೇಣಿಯ ಅಧಿಕಾರಿಗಳು 5 ದಿನಗಳೊಳಗೆ ವಿಂಗಡಿಸಿ, ವಿಶೇಷ ಆಂದೋಲನ ನಡೆಸಿ ಮುಂದಿನ 3 ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಕಂದಾಯ…

ಹೊಸ ಸೇರ್ಪಡೆ