• ನಂದಳಿಕೆಯಲ್ಲಿ ತೋಡಿಗೆ ಬಿದ್ದ ಕಾರು: ಪ್ರಯಾಣಿಕರು ಪಾರು

  ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಗುರುವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬಿಟ್ಟು ತೋಡಿಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್‌ ಅದರಲ್ಲಿದ್ದ ಕಾರ್ಕಳ ಮೂಲದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರ್ಕಳದಿಂದ ಪಡುಬಿದ್ರಿಯತ್ತ ಸಾಗುತ್ತಿದ್ದ ಕಾರು ನಂದಳಿಕೆ…

 • ಉಡುಪಿ: ಶೆಡ್‌ ಮೇಲೆ ಉರುಳಿದ ಮರ; ತಗ್ಗು ಪ್ರದೇಶಗಳು ಜಲಾವೃತ

  ಉಡುಪಿ: ಉಡುಪಿ ದೊಡ್ಡಣಗುಡ್ಡೆಯಲ್ಲಿ ಅಧಿಕಾರಿ ಕೃಷ್ಣ ಹೆಬೂರು ಅವರ ಶೆಡ್‌ ಮೇಲೆ ಮರವೊಂದು ಗಾಳಿಮಳೆಗೆ ಬಿದ್ದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಉಡುಪಿ, ಮಣಿಪಾಲ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಕಟಪಾಡಿ, ಬೆಳ್ಮಣ್ಣು, ತೆಕ್ಕಟ್ಟೆ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಬಯಲು ಮತ್ತು…

 • ಸುಸಜ್ಜಿತ ಸ್ನಾನ-ಶೌಚಗೃಹ ಸಂಕೀರ್ಣ

  ಉಡುಪಿ: ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಸುಸಜ್ಜಿತ ಸ್ನಾನ ಮತ್ತು ಶೌಚಗೃಹ ಸಂಕೀರ್ಣ 2 ಕೋ.ರೂ. ವೆಚ್ಚದಲ್ಲಿ ಮಠದ ವಾಹನ ಪಾರ್ಕಿಂಗ್‌ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ತನ್ನ ಸಿಎಸ್‌ಆರ್‌ ನಿಧಿಯಿಂದ ಇದನ್ನು ನಿರ್ಮಿಸಿಕೊಡುತ್ತಿದೆ. ತಳಅಂತಸ್ತಿನಲ್ಲಿ…

 • ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಆಗ್ರಹ

  ಉಡುಪಿ: ಸರಕಾರಿ ಪಬ್ಲಿಕ್‌ ಶಾಲೆಯ ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರ ಜಿಲ್ಲಾ ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಪ್ರತಿಭಟನೆಕಾರರು…

 • ಬಿಜೆಪಿ ಜತೆ ರಾಜ್ಯಪಾಲರೂ ಶಾಮೀಲು: ಸೊರಕೆ

  ಉಡುಪಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿ ಜತೆಗೆ ರಾಜ್ಯಪಾಲರು ಕೂಡ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ. ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ…

 • ಉಡುಪಿ ಹಲಸು ಮೇಳಕ್ಕೆ ಬರಲಿದೆ ತೂಬುಗೆರೆಯ ಹಣ್ಣು

  ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದ ಆವರಣದಲ್ಲಿ ಜು. 13ರಿಂದ 15ರವರೆಗೆ ಆಯೋಜಿಸಿದ ಜಿಲ್ಲಾ ಮಟ್ಟದ ಹಲಸು ಮೇಳದಲ್ಲಿ ಈ ಬಾರಿ ದೊಡ್ಡಬಳ್ಳಾಪುರ ಜಿಲ್ಲೆಯ ತೂಬುಗೆರೆ ಹಲಸಿನ ಹಣ್ಣು ಪ್ರಮುಖ ಆಕರ್ಷಣೆಯಾಗಿರಲಿದೆ. ಕಳೆದ ಬಾರಿಯೂ…

 • ಬೆಳ್ಮಣ್‌: ಇನ್ನೂ ಉಳಿದಿದೆ ತರಗೆಲೆಗಳ ಬಣವೆ !

  ಬೆಳ್ಮಣ್‌: ಕೃಷಿ, ಹೈನುಗಾರಿಕೆಗೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಬೇಸಗೆಯಲ್ಲಿ ತರಗೆಲೆಗಳನ್ನು ರಾಶಿ ಮಾಡಿ, ಬಣವೆ ಮಾಡಿ ಅದನ್ನು ಮಳೆಗಾಲಕ್ಕೆ ಬಳಸುವ ಸಂಪ್ರದಾಯ ಬೆಳ್ಮಣ್‌ನಲ್ಲಿ ಇಂದಿಗೂ ಇದೆ. ಇಂತಹ ಬಣವೆಗಳು ಈಗ ತೀರಾ ಅಪರೂಪ. ಆದರೆ ಕೃಷಿಕ ಎಸ್‌.ಕೆ.ಸಾಲ್ಯಾನ್‌ ಅವರ ನಿವಾಸದಲ್ಲಿ…

 • ಮನೆ ನಿರ್ಮಾಣ: ಉಡುಪಿ ಜಿಲ್ಲೆಯಲ್ಲಿ ಮಳೆ ಕೊಯ್ಲು ಕಡ್ಡಾಯ

  ಉಡುಪಿ: ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದರೆ, ಮನೆ ನಿರ್ಮಾಣ ಅನಂತರ ಕಂಪ್ಲೀಷನ್‌ ಸರ್ಟಿಫಿಕೆಟ್‌ (ಸಿಸಿ) ಸಿಗುವುದಿಲ್ಲ. ಭಾರತ ಸರಕಾರವು ಜಲಭದ್ರತೆಗಾಗಿ “ಜಲ…

 • ಗೋಪಾಲ್ ಭಂಡಾರಿ ಅವರ ಅರ್ಪಣಾ ಮನೋಭಾವದ ಜನಸೇವೆ ಸ್ಮರಣೀಯ’

  ಕಾಪು: ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದು ಬಡವರ, ದುರ್ಬಲರ, ನಿರ್ಗತಿಕರ ಪರ ಧ್ವನಿಯೆತ್ತುವ ಜನಪರ ನಿಲುವಿನ ಜನಸೇವಕರಾಗಿದ್ದರು. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ…

 • ‘ಯುವಜನಾಂಗವನ್ನು ಟಾರ್ಗೆಟ್ ಮಾಡುವ ಮಾದಕ ದ್ರವ್ಯ ಪ್ರಪಂಚಕ್ಕೇ ಮಾರಕ’

  ಕಟಪಾಡಿ: ಕಾನೂನು ಬಾಹಿರ ಡ್ರಗ್ಸ್‌ ಜಾಲ ಮತ್ತು ಮಾದಕ ದ್ರವ್ಯ ಸೇವನೆಯು ಪ್ರಾಪಂಚಿಕವಾಗಿ ಮಾರಕವಾಗುತ್ತಿದೆ. ಡ್ರಗ್ಸ್‌ ಮಾರಾಟ ಜಾಲವು ಮುಗ್ಧ ಯುವಜನಾಂಗವನ್ನು ಟಾರ್ಗೆಟ್ ಮಾಡುವ ಮೂಲಕ ದಾರಿ ತಪ್ಪಿಸುತ್ತಿದೆ. ಕಡ್ಡಾಯ ನಿರ್ಮೂಲನೆಯಿಂದ ಸಮಾಜದ ಸಾಮರಸ್ಯ-ಶಾಂತಿಯನ್ನು ಕಾಪಾಡಲು ಸಾಧ್ಯ ಎಂದು…

 • ನಿಯಮ ಪಾಲಿಸದವರಿಗೆ ಎಸ್ಪಿ ನಿಶಾ ಜೇಮ್ಸ್‌ ಅವರಿಂದ ಗುಲಾಬಿ

  ಮಲ್ಪೆ: ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಲ್ಪೆ ಪೊಲೀಸ್‌ ಠಾಣೆಯ ವತಿಯಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಜು. 10ರಂದು ಮಲ್ಪೆಯಲ್ಲಿ ನಡೆಯಿತು. ಉಡುಪಿ ಎಸ್ಪಿ ನಿಶಾ ಜೇಮ್ಸ್‌ ಅವರು ಕಾಲೇಜಿನ…

 • ಹೊಳೆ ಮೀನುಗಳಿಗೆ ಮೀನು ಪ್ರಿಯರ ಗಾಳ!

  ಕಟಪಾಡಿ : ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗುತ್ತಿದ್ದಂತೆ, ಇತ್ತ ಮೀನು ಪ್ರಿಯರು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಖುಷಿಯಲ್ಲಿದ್ದಾರೆ. ಮಣಿಪುರ, ಉದ್ಯಾವರ, ಕಟಪಾಡಿ, ಕೆಮ್ತೂರು, ದುರ್ಗಾ ನಗರ, ನಾಯ್ಕ ತೋಟ, ಮಟ್ಟು, ಕುರ್ಕಾಲು, ರೈಲ್ವೇ ಮೇಲ್ಸೇತುವೆ, ಹೊಳೆಯ…

 • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

  ಉಡುಪಿ: ವಿವಿಧ ಬೇಡಿಕೆ ಯನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ ಮಾತನಾಡಿ, 6ನೇ ವೇತನ ಆಯೋಗದ ಅಂತಿಮ ವರದಿಯ…

 • ಬೆಳಪು : ಕಸ ಹಾಕಲು ಬಂದ ವಾಹನಕ್ಕೆ 2000 ರೂ. ದಂಡ

  ಕಾಪು: ಕಂಡ ಕಂಡಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಬೆಳಪು ಗ್ರಾ.ಪಂ. ಮುಂದಾಗಿದ್ದು ಅದರಂತೆ ತ್ಯಾಜ್ಯ ಎಸೆಯಲು ಬಂದ ವಾಹನಕ್ಕೆ 2 ಸಾವಿರ ರೂ. ದಂಡ ವಿಧಿಸಲಾಗಿದೆ. ರಿಕ್ಷಾ ಟೆಂಪೋದಲ್ಲಿ ಕಸವನ್ನು ತಂದು ಎಸೆಯುತ್ತಿದ್ದಾಗ ಮಾಹಿತಿದಾರರ…

 • ಬೀದಿ ನಾಯಿಗಳ ಶಸ್ತ್ರಚಿಕಿತ್ಸೆಗೆ ಮುಂದಾದ ಉಡುಪಿ ನಗರಸಭೆ

  ಉಡುಪಿ: ಉಡುಪಿ ನಗರದಲ್ಲಿ ಉಂಟಾಗಿರುವ ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸಲು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲು ಉಡುಪಿ ನಗರಸಭೆ ಮುಂದಾಗಿದೆ. ನಗರಸಭೆ ವ್ಯಾಪ್ತಿಯೊಳಗೆ ಸರಿಸುಮಾರು 1,500 ರಷ್ಟು ಬೀದಿನಾಯಿಗಳು ಇರಬಹುದು ಎಂಬ ಲೆಕ್ಕಾಚಾರಗಳಿವೆ. ಆ ಎಲ್ಲ ನಾಯಿಗಳಿಗೆ…

 • ತಂಬಾಕು ಕಂಪೆನಿಗಳೊಂದಿಗೆ ಸಹಭಾಗಿತ್ವ ಸಲ್ಲ: ಜಿಲ್ಲಾಧಿಕಾರಿ

  ಉಡುಪಿ: ಸರಕಾರಿ ಇಲಾಖೆಗಳು ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕಂಪೆನಿಗಳೊಂದಿಗೆ ಯಾವುದೇ ಸಮಾರಂಭ ನಡೆಸಕೂಡದು. ಅವರ ಸಹಭಾಗಿತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಅನುದಾನ, ಪರಿಕರಗಳನ್ನು ಪಡೆಯಬಾರದು. ಇದು ವಿಶ್ವ ಆರೋಗ್ಯ ಸಂಸ್ಥೆಯ ಎಫ್ಸಿಟಿಸಿ ನಿಯಮದ ಉಲ್ಲಂಘನೆಯಾಗಲಿದೆ ಎಂದು ಜಿಲ್ಲಾಧಿಕಾರಿ…

 • ಸರಕಾರ ರಚನೆಯ ಹುರುಪು! ಕರಾವಳಿ ಬಿಜೆಪಿ ಶಾಸಕರು ಬೆಂಗಳೂರಿಗೆ

  ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರ ಡೋಲಾಯಮಾನ ಪರಿಸ್ಥಿತಿಯಲ್ಲಿರುವಾಗ ಹೊಸ ಸರಕಾರ ರಚನೆಯ ಹುರುಪು ಹೊತ್ತು ಕರಾವಳಿಯ ಬಹುತೇಕ ಎಲ್ಲ ಬಿಜೆಪಿ ಶಾಸಕರು ಬೆಂಗಳೂರಿಗೆ ಸೋಮವಾರ ದೌಡಾಯಿಸಿದ್ದಾರೆ. ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರೆಲ್ಲರೂ ಪಾಲ್ಗೊಂಡಿದ್ದಾರೆ. ಹೊಸ…

 • ಉಡುಪಿ ಶ್ರೀಕೃಷ್ಣ ಮಠ: ಇನ್ನು 4 ತಿಂಗಳು ಭಿನ್ನ ಆಹಾರ ಕ್ರಮ

  ಉಡುಪಿ: ಚಾತುರ್ಮಾಸ್ಯ ವ್ರತದ ಆಹಾರ ಪದ್ಧತಿ ಉಡುಪಿ ಸಂಪ್ರದಾಯದ ಮಠಗಳಲ್ಲಿ ಆಷಾಢ ಮಾಸದ ದ್ವಾದಶಿಯಿಂದ ನಾಲ್ಕು ತಿಂಗಳು ಪರ್ಯಂತ ನಡೆಯಲಿದೆ. ಪ್ರಥಮನ ಏಕಾದಶಿಯಂದು ಉಪವಾಸವಿದ್ದು ತಪ್ತಮುದ್ರಾಧಾರಣೆ ಮಾಡಿದ ಅನಂತರ ನಾಲ್ಕು ತಿಂಗಳಲ್ಲಿ ನಾಲ್ಕು ತರಹದ ಆಹಾರ ಕ್ರಮ ಸಂಪ್ರದಾಯದಂತೆ…

 • ಕಡಿಯಾಳಿ: ಅಂಗಡಿಗೆ ನುಗ್ಗಿದ ಬಸ್‌

  ಉಡುಪಿ: ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್ಸೊಂದು ಕಡಿಯಾಳಿಯಲ್ಲಿ ನಿಯಂತ್ರಣ ತಪ್ಪಿ ಹಾಲಿನ ಅಂಗಡಿಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ರಸ್ತೆ ಗಡ್ಡ ಚಲಿಸಿ ಅಂಗಡಿಗೆ  ಢಿಕ್ಕಿಯಾಗುತ್ತಲೇ ಬಸ್‌ ನಿಲುಗಡೆಯಾದ ಪರಿಣಾಮ ಭಾರೀ…

 • ಕುತ್ಯಾರು: ಬಸ್ಸಿಗೆ ದ್ವಿಚಕ್ರ ವಾಹನ ಢಿಕ್ಕಿ

  ಶಿರ್ವ: ಇಲ್ಲಿಗೆ ಸಮೀಪದ ಕುತ್ಯಾರು ವಿದ್ಯಾದಾಯಿನಿ ಶಾಲೆಯ ಬಳಿ ಶಿರ್ವ ಕಡೆಯಿಂದ ಮೂಲ್ಕಿಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ದ್ವಿಚಕ್ರ ವಾಹನ ಢಿಕ್ಕಿಯಾಗಿ ಸವಾರ ರಾಜು ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಅವರು ಮುದರಂಗಡಿ ಕಡೆಯಿಂದ…

ಹೊಸ ಸೇರ್ಪಡೆ