• 200 ಪಂದ್ಯವಾಡಿದ ಕೊಥಜಿತ್‌

  ಹೊಸದಿಲ್ಲಿ: ರವಿವಾರ 200ನೇ ಅಂತಾರಾಷ್ಟ್ರೀಯ ಪಂದ್ಯ ವಾಡಿದ ಕೊಥಾಜಿತ್‌ ಸಿಂಗ್‌ ಅವರನ್ನು “ಹಾಕಿ ಇಂಡಿಯಾ’ ಅಭಿನಂದಿಸಿದೆ. ನ್ಯೂಜಿಲ್ಯಾಂಡ್‌ ಎದುರಿನ ಒಲಿಂಪಿಕ್‌ ಟೆಸ್ಟ್‌ ಹಾಕಿ ಪಂದ್ಯದಲ್ಲಿ ಕೊಥಜಿತ್‌ ಈ ಮೈಲುಗಲ್ಲು ನೆಟ್ಟರು. ಶನಿವಾರವಷ್ಟೇ 27ನೇ ವರ್ಷಕ್ಕೆ ಕಾಲಿಟ್ಟ ಮಣಿಪುರ ಮೂಲದ…

 • ಪೇಸರ್‌ ಪೆರಿಯಸಾಮಿಗೆ ಭಾರೀ ಬೇಡಿಕೆ

  ಚೆನ್ನೈ: “ಚಿಪಾಕ್‌ ಸೂಪರ್‌ ಗಿಲ್ಲೀಸ್‌’ 2019ನೇ ಸಾಲಿನ “ತಮಿಳುನಾಡು ಪ್ರೀಮಿಯರ್‌ ಲೀಗ್‌’ (ಟಿಎನ್‌ಪಿಎಲ್‌) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ಅದು ದಿಂಡಿಗಲ್‌ ಡ್ರ್ಯಾಗನ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು. ಈ ಕೂಟದ ಹಾಗೂ ಫೈನಲ್‌ ಪಂದ್ಯದ…

 • ಲಾರಾ ಮನೆಯಲ್ಲಿ ಭಾರತ ಕ್ರಿಕೆಟಿಗರಿಗೆ ಔತಣಕೂಟ

  ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತದ ಕ್ರಿಕೆಟಿಗರಿಗೆ ಕ್ರಿಕೆಟ್‌ ದಂತಕತೆ ಬ್ರಿಯಾನ್‌ ಲಾರಾ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದರು. ಭಾರತ ತಂಡದ ತಾರಾ ಆಟಗಾರರಾದ ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ರವೀಂದ್ರ ಜಡೇಜ…

 • ಪಂಜಾಬ್‌ ಕ್ರೀಡಾ ಕೌನ್ಸಿಲ್‌ಗೆ ಹರ್ಭಜನ್‌, ಬಿಂದ್ರಾ

  ಚಂಡೀಗಢ: ಖ್ಯಾತ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಸೇರಿದಂತೆ ಐವರು ಕ್ರೀಡಾ ತಾರೆಯರು ಪಂಜಾಬ್‌ ಇನ್‌ಸ್ಟಿಟ್ಯೂಟ್‌ ಆಫ್ ನ್ಪೋರ್ಟ್ಸ್ (ಪಿಐಎಸ್‌) ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಐವರು ತಾರೆಯರ…

 • ರಸೆಲ್‌ ಡೊಮಿಂಗೊ ಬಾಂಗ್ಲಾ ಕ್ರಿಕೆಟ್‌ ಕೋಚ್‌

  ಢಾಕಾ: ದಕ್ಷಿಣ ಆಫ್ರಿಕಾದ ಮಾಜಿ ಕೋಚ್‌ ರಸೆಲ್‌ ಡೊಮಿಂಗೊ ಅವರೀಗ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ನೂತನ ಪ್ರಧಾನ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ. ಬಿಸಿಬಿ ಶನಿವಾರ ಇದನ್ನು ಪ್ರಕಟಿಸಿತು. ತನ್ನ ನೂತನ ಕೋಚ್‌ ಸ್ಥಾನಕ್ಕೆ ಬಾಂಗ್ಲಾದೇಶ 3 ಮಂದಿಯ ಹೆಸರನ್ನು ಅಂತಿಮಗೊಳಿಸಿತ್ತು….

 • ಗಾಲೆ ಟೆಸ್ಟ್‌ : ಲಂಕಾ ಭರ್ಜರಿ ಚೇಸಿಂಗ್‌

  ಗಾಲೆ: ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರಚಂಡ ಚೇಸಿಂಗ್‌ ಆರಂಭಿಸಿದ್ದು, ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದೆ. ನ್ಯೂಜಿಲ್ಯಾಂಡ್‌ ಎದುರು ಗೆಲುವಿಗೆ 268 ರನ್‌ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 133 ರನ್‌ ಗಳಿಸಿದೆ….

 • ಟೈಗರ್ ಗೆ ಬಲೆ ಬೀಸಿದ ಶಿವಮೊಗ್ಗ

  ಬೆಂಗಳೂರು: ಕೆಪಿಎಲ್‌ ಟಿ20 ಕೂಟದಲ್ಲಿ “ನಮ್ಮ ಶಿವಮೊಗ್ಗ’ ಶುಭಾರಂಭ ಮಾಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಹುಬ್ಬಳ್ಳಿ 20 ಓವರ್‌ಗಳಲ್ಲಿ 154ಕ್ಕೆ ಆಲೌಟಾದರೆ, ನಮ್ಮ ಶಿವಮೊಗ್ಗ…

 • ಲಾರ್ಡ್ಸ್‌ ಟೆಸ್ಟ್‌: ಸ್ಟೀವ್‌ ಸ್ಮಿತ್‌ಗೆ ಬೌನ್ಸರ್‌ ಏಟು

  ಲಂಡನ್‌: ಆ್ಯಶಸ್‌ ಸರಣಿಯಲ್ಲಿ ಸತತ 3ನೇ ಶತಕದ ಹಾದಿಯಲ್ಲಿದ್ದ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಬೌನ್ಸರ್‌ ಹೊಡೆತ ಅನುಭವಿಸಿ ಕ್ರೀಸ್‌ ತೊರೆದ ಘಟನೆ ಸಂಭವಿಸಿದೆ. ಸ್ಮಿತ್‌ ಅವರಿಗೆ ಬಡಿದದ್ದು ಚೊಚ್ಚಲ ಟೆಸ್ಟ್‌ ಆಡುತ್ತಿದ್ದ ಜೋಫ‌Å ಆರ್ಚರ್‌ ಎಸೆತವಾಗಿತ್ತು. ಪಂದ್ಯದ…

 • ಪ್ರೊ ಕಬ್ಬಡಿ: 5ನೇ ಗೆಲುವು ಸಾಧಿಸಿದ ಬುಲ್ಸ್‌

  ಚೆನ್ನೆ: ಪ್ರೊ ಕಬಡ್ಡಿ ಏಳನೇ ಆವೃತ್ತಿಯ ಚೆನ್ನೈ ಚರಣದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಆತಿಥೇಯ ತಮಿಳ್‌ ತಲೈವಾಸ್‌ಗೆ ಆಘಾತವಿಕ್ಕಿ 5ನೇ ಗೆಲುವು ಒಲಿಸಿಕೊಂಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 32-21 ಅಂಕಗಳ ಅಂತರದಿಂದ…

 • ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ: ಭಾರತ ತಂಡಗಳ ಗೆಲುವಿನ ಆರಂಭ

  ಟೋಕಿಯೊ: ಒಲಿಂಪಿಕ್‌ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಗಳೆರಡೂ ಗೆಲುವಿನ ಆರಂಭ ಪಡೆದಿವೆ. ಶನಿವಾರದ ಮುಖಾಮುಖೀಗಳಲ್ಲಿ ಮೊದಲು ವನಿತೆಯರು ಆತಿಥೇಯ ಜಪಾನ್‌ಗೆ 2-1ರಿಂದ ಆಘಾತವಿಕ್ಕಿದರೆ, ಬಳಿಕ ಪುರುಷರು ಮಲೇಶ್ಯ ಮೇಲೆ ಸವಾರಿ ಮಾಡಿ 6-0 ಅಂತರದ ಪ್ರಚಂಡ ಗೆಲುವು…

 • ದೀಪಾ, ಭಜರಂಗ್ ಗೆ ಖೇಲ್ ರತ್ನ ; ಜಡೇಜಾಗೆ ಅರ್ಜುನ ಪ್ರಶಸ್ತಿ

  – ಭಜರಂಗ್‌ ಪೂನಿಯ ಜತೆಗೆ ದೀಪಾ ಮಲಿಕ್‌ಗೂ ಒಲಿಯಲಿದೆ ಪರಮೋಚ್ಛ ಕ್ರೀಡಾ ಪ್ರಶಸ್ತಿ – ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜ, ಮೊಹಮ್ಮದ್‌ ಅನಾಸ್‌ ಸೇರಿ 19 ಕ್ರೀಡಾಪಟುಗಳು ಹೊಸದಿಲ್ಲಿ: ಪ್ರತಿಷ್ಠಿತ “ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಗೆ ಭಜರಂಗ್‌…

 • ಮೊಬೈಲ್ ಬಳಸಿಲ್ಲ, ಸಿನಿಮಾಗೆ ಹೋಗಲ್ಲ: ಖೇಲ್ ರತ್ನ ಭಜರಂಗಿಯ ಸಾಧನೆಯ ಹಿಂದಿದೆ ಕಠಿಣ ಶ್ರಮ

  ಭಾರತದ ಹೆಮ್ಮಯ ಕುಸ್ತಿ ಪಟು ಭಜರಂಗ್ ಪೂನಿಯಾ ಅವರಿಗೆ ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ. ಏಶ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆದ್ದು…

 • ಭಜರಂಗ್‌ಗೆ ಒಲಿಯಲಿದೆ ಖೇಲ್‌ ರತ್ನ

  ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ಪದಕ ವಿಜೇತ ಕುಸ್ತಿಪಟು ಭಜರಂಗ್‌ ಪೂನಿಯ ಅವರನ್ನು ಪ್ರತಿಷ್ಠಿತ “ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂ.ಸಿ. ಮೇರಿ ಕೋಮ್‌, ಭೈಚುಂಗ್‌ ಭುಟಿಯ ಅವರನ್ನೊಳಗೊಂಡ 12…

 • ಭಾರತಕ್ಕೆ ಇಂದಿನಿಂದ ತ್ರಿದಿನ ಅಭ್ಯಾಸ ಪಂದ್ಯ

  ಕೂಲಿಜ್‌ (ಆ್ಯಂಟಿಗುವಾ): ವೆಸ್ಟ್‌ ಇಂಡೀಸ್‌ ವಿರುದ್ಧ ಈಗಾಗಲೇ ಟಿ20 ಮತ್ತು ಏಕದಿನ ಸರಣಿಗಳನ್ನು ಗೆದ್ದ ಭಾರತದ ಮುಂದಿನ ಗುರಿ ಟೆಸ್ಟ್‌ ಸರಣಿ. ಇದನ್ನೂ ವಶಪಡಿಸಿಕೊಂಡರೆ ವಿಂಡೀಸ್‌ ನೆಲದಲ್ಲಿ ಮೂರೂ ಪ್ರಕಾರಗಳ ಕ್ರಿಕೆಟ್‌ನಲ್ಲಿ ಮೊದಲ ಸಲ ಸರಣಿ ಗೆದ್ದ ಅಪರೂಪದ…

 • ಲಾರ್ಡ್ಸ್‌ ಪಂದ್ಯಕ್ಕೆ ಮತ್ತೆ ಮಳೆ

  ಲಂಡನ್‌: ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ ಲಾರ್ಡ್ಸ್‌ಟೆಸ್ಟ್‌ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದೆ. 3ನೇ ದಿನವಾದ ಶುಕ್ರವಾರ ಪಂದ್ಯ ಸ್ಥಗಿತಗೊಂಡಾಗ ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಸಂಕಟದಲ್ಲಿತ್ತು. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 258 ರನ್‌…

 • ಸೂರತ್‌ನಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ

  ಸೂರತ್‌: ಸೂರತ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ “ಲಾಲ್‌ಭಾç ಕಂಟ್ರಾಕ್ಟರ್‌ ಸ್ಟೇಡಿಯಂ’ ಜಾಗತಿಕ ಕ್ರಿಕೆಟಿಗೆ ತೆರದುಕೊಳ್ಳಲು ಸಜ್ಜಾಗಿದೆ. ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವೆ ಇಲ್ಲಿ ಸೆ. 5ರಿಂದ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇವೆಲ್ಲವೂ…

 • ಯುಎಸ್‌ ಓಪನ್‌: ಮರ್ರೆ ಡಬಲ್ಸ್‌ ಆಡುವುದಿಲ್ಲ

  ಲಂಡನ್‌: ಮುಂಬರುವ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಕೂಟದ ಡಬಲ್ಸ್‌ ವಿಭಾಗದಿಂದ ಆ್ಯಂಡಿ ಮರ್ರೆ ಹಿಂದೆ ಸರಿದಿದ್ದಾರೆ. “ನಾನು ಡಬಲ್ಸ್‌ ವಿಭಾಗದಲ್ಲಿ ಆಡುವುದಿಲ್ಲ. ನನ್ನ ಗುರಿ ಸಿಂಗಲ್ಸ್‌ ವಿಭಾಗದಲ್ಲಿ ಉತ್ತಮವಾಗಿ ಆಡಿ ಪ್ರಶಸ್ತಿ ಗೆಲ್ಲುವುದಾಗಿದೆ. ಆದ್ದರಿಂದ ಸಂಪೂರ್ಣವಾಗಿ ನಾನು…

 • ಕೆಪಿಎಲ್‌ ಕ್ರಿಕೆಟಿಗೆ ವರ್ಣರಂಜಿತ ಚಾಲನೆ

  ಬೆಂಗಳೂರು: ಕೆಪಿಎಲ್‌ (ಕರ್ನಾಟಕ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟಕ್ಕೆ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು. ಗಾಯಕ ಚಂದನ್‌ ಶೆಟ್ಟಿ ಸಂಗೀತ ಕಾರ್ಯಕ್ರಮ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಸಿನಿಮಾ ತಾರೆಯರ ಆಗಮನ ಕೂಟದ…

 • ಮಾಜಿ ಕೀಪರ್‌ ವಿ.ಬಿ. ಚಂದ್ರಶೇಖರ್‌ ಆತ್ಮಹತ್ಯೆ

  ಚೆನ್ನೈ: ಭಾರತದ ಮಾಜಿ ವಿಕೆಟ್‌ ಕೀಪರ್‌, ಹೊಡಿಬಡಿ ಆರಂಭಕಾರ, ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಸದಸ್ಯ ವಿ.ಬಿ. ಚಂದ್ರಶೇಖರ್‌ (57) ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆನ್ನೈಯ ಮೈಲಾ ಪುರ್‌ ನಿವಾಸದಲ್ಲಿ ಗುರುವಾರ ರಾತ್ರಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ…

 • ವಿಂಡೀಸಿಗರಿಗೆ ಲಾರಾ, ಸರವಣ್‌ ತರಬೇತಿ

  ಆ್ಯಂಟಿಗುವಾ: ಏಕದಿನ ಮತ್ತು ಟಿ-20 ಸರಣಿಗಳನ್ನು ಕಳೆದುಕೊಂಡು ನಿರಾಶೆಗೊಂಡಿರುವ ವೆಸ್ಟ್‌ ಇಂಡೀಸ್‌ ತಂಡ ಟೆಸ್ಟ್‌ ನಲ್ಲಾದರೂ ಭಾರತಕ್ಕೆ ತಿರುಗಿ ಬೀಳುವ ಸನ್ನಾಹದಲ್ಲಿದೆ. ಇದಕ್ಕಾಗಿ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜರಾದ ಬ್ರಿಯಾನ್‌ ಲಾರಾ ಮತ್ತು ರಾಮ್‌ನರೇಶ್‌ ಸರವಣ್‌ ತಂಡದ ನೆರವಿಗೆ…

ಹೊಸ ಸೇರ್ಪಡೆ