• ವಿಶ್ವ ಚಾಂಪಿಯನ್‌ಶಿಪ್‌ಗೆ ಸುಶೀಲ್ ಕುಮಾರ್‌ ಅರ್ಹತೆ

  ಹೊಸದಿಲ್ಲಿ: ಜಿತೇಂದರ್‌ ಕುಮಾರ್‌ ಅವರೊಂದಿಗೆ ಮಂಗಳವಾರ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ತೀವ್ರ ಪೈಪೋಟಿಯಿಂದ ಹೋರಾಡಿದ ಸುಶೀಲ್ ಕುಮಾರ್‌ 4-2 ಅಂತರದಿಂದ ಜಯ ಸಾಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು. ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ…

 • ಜಪಾನ್‌ಗೆ ಆಘಾತವಿಕ್ಕಿದ ಭಾರತ ಫೈನಲಿಗೆ

  ಟೋಕಿಯೊ: ಸ್ಟ್ರೈಕರ್‌ ಮನ್‌ದೀಪ್‌ ಸಿಂಗ್‌ ಅವರ ಆಕರ್ಷಕ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತೀಯ ಪುರುಷರ ಹಾಕಿ ತಂಡವು ಆತಿಥೇಯ ಜಪಾನ್‌ ತಂಡವನ್ನು 6-3 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿಯ ಫೈನಲ್ ಹಂತಕ್ಕೇರಿದೆ. ಈ ಗೆಲುವಿನಿಂದ…

 • ಎರಡನೇ ಸುತ್ತಿಗೆ ಪ್ರಣೀತ್‌, ಪ್ರಣಯ್‌

  ಹೊಸದಿಲ್ಲಿ: ಬಾಸೆಲ್‌ನಲ್ಲಿ ಆರಂಭಗೊಂಡ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ದ್ವಿತೀಯ ಸುತ್ತು ತಲುಪಿದ್ದಾರೆ. ಪ್ರಣೀತ್‌ ಕೆನಡಾದ ಜಾಸನ್‌ ಹೊ ಶು ಅವರನ್ನು 21-17, 21-18ರಿಂದ ಮಣಿಸಿದರೆ, ಪ್ರಣಯ್‌ ಫಿನ್ಲಂಡಿನ ಈಟು…

 • ಮಹಿಳಾ ಕ್ರಿಕೆಟ್‌ ಲೀಗ್‌: ವ್ಯಾಟ್‌ ದಾಖಲೆ

  ಕಿಂಗ್‌ಸ್ಟನ್‌ (ಜಮೈಕಾ): ಮಹಿಳಾ ಕ್ರಿಕೆಟ್‌ ಸೂಪರ್‌ ಲೀಗ್‌ನಲ್ಲಿ ಇಂಗ್ಲೆಂಡ್‌ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಅಮೋಘ ಸಾಧನೆ ಮಾಡಿದ್ದಾರೆ. ಕೇವಲ 60 ಎಸೆತದಲ್ಲಿ 110 ರನ್‌ ಸಿಡಿಸುವ ಮೂಲಕ ಮಹಿಳಾ ಕ್ರಿಕೆಟ್‌ ಸೂಪರ್‌ ಲೀಗ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ…

 • ರೋಚಕ ಅಂತ್ಯ; ಮಳೆಪೀಡಿತ ಲಾರ್ಡ್ಸ್‌ ಟೆಸ್ಟ್‌ ಡ್ರಾ

  ಲಂಡನ್‌: ಮಳೆಯಿಂದಾಗಿ ನೀರಸ ಅಂತ್ಯ ಕಾಣಬೇಕಿದ್ದ ಆ್ಯಶಸ್‌ ಸರಣಿಯ ಲಾರ್ಡ್ಸ್‌ ಟೆಸ್ಟ್‌ ರೋಚಕವಾಗಿ ಕೊನೆಗೊಂಡಿದೆ. ಅಂತಿಮ ಹಂತದಲ್ಲಿ ತೀವ್ರ ಕುಸಿತಕ್ಕೊಳಗಾದ ಆಸ್ಟ್ರೇಲಿಯ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಗಿದೆ. 8 ರನ್ನುಗಳ ಅಲ್ಪ ಮುನ್ನಡೆ ಬಳಿಕ ದ್ವಿತೀಯ ಸರದಿ ಆರಂಭಿಸಿದ ಇಂಗ್ಲೆಂಡ್‌…

 • ಬದಲಾಗದ ಇಂಗ್ಲೆಂಡ್‌ ತಂಡ

  ಲೀಡ್ಸ್‌ನಲ್ಲಿ ನಡೆಯಲಿರುವ ಆ್ಯಶಸ್‌ ಸರಣಿಯ 3ನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರೊಂದಿಗೆ ಗಾಯಾಳು ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮೇಲೆ ಆಯ್ಕೆ ಸಮಿತಿ ವಿಶ್ವಾಸ ಇರಿಸಿದಂತಾಯಿತು. ಇಂಗ್ಲೆಂಡ್‌ ಪರ ಅತ್ಯಧಿಕ ಟೆಸ್ಟ್‌ ವಿಕೆಟ್‌ ಉರುಳಿಸಿದ…

 • ಭಾರತ ಟೆಸ್ಟ್‌ ತಂಡದೊಂದಿಗೆ ಉಳಿಯುವ ನವದೀಪ್‌ ಸೈನಿ

  ಹೊಸದಿಲ್ಲಿ: ಯುವ ವೇಗಿ ನವದೀಪ್‌ ಸೈನಿ ಅವ ರನ್ನು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತದ ಟೆಸ್ಟ್‌ ತಂಡದೊಂದಿಗೆ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಅವರು ಕೆಂಪು ಚೆಂಡಿನಲ್ಲೂ ಗಮನಾರ್ಹ ಸಾಧನೆ ತೋರಬೇಕೆಂಬುದು ತಂಡದ ಆಡಳಿತ ಮಂಡಳಿಯ ಉದ್ದೇಶ. ವೆಸ್ಟ್‌ ಇಂಡೀಸ್‌…

 • ಪ್ರವಾಸಿ ಭಾರತ ಕ್ರಿಕೆಟಿಗರಿಗೆ ಉಗ್ರರಿಂದ ಕೊಲೆ ಬೆದರಿಕೆ!

  ಮುಂಬಯಿ: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ಆಟಗಾರರನ್ನು ಉಗ್ರರು ಕೊಲೆ ನಡೆಸುವ ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯುಳ್ಳ ಇ-ಮೇಲ್‌ ಸಂದೇಶವೊಂದು ಭಾರೀ ಆತಂಕಕ್ಕೆ ಕಾರಣವಾಗಿದೆ. ಆ. 16ರಂದು ಅನಾಮಿಕ ಸಂದೇಶವೊಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕೃತ…

 • ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ

  ಕೂಲಿಜ್‌ (ಆ್ಯಂಟಿಗುವಾ): ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಬಿಗಿಯಾದ ದಾಳಿ ಸಂಘಟಿಸಿದ್ದಾರೆ. ಭಾರತ 5 ವಿಕೆಟಿಗೆ 297 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದ ಬಳಿಕ, ವೆಸ್ಟ್‌ ಇಂಡೀಸ್‌ ಎ ತಂಡವನ್ನು 56.1 ಓವರ್‌ಗಳಲ್ಲಿ 181ಕ್ಕೆ ಆಲೌಟ್‌ ಮಾಡಿದೆ….

 • ವಿಶ್ವ ಕುಸ್ತಿಗೆ ಪೂಜಾ ಧಂಡಾ, ನವಜೋತ್‌ ಕೌರ್‌ ಆಯ್ಕೆ

  ಲಕ್ನೋ: ಒಲಿಂಪಿಕ್ಸ್‌ ವಿಭಾಗದಲ್ಲಿ ಅರ್ಹತೆ ಪಡೆಯಲು ವಿಫ‌ಲರಾಗಿದ್ದ ಭಾರತ ಕುಸ್ತಿಪಟುಗಳಾದ ಪೂಜಾ ಧಂಡಾ ಮತ್ತು ನವಜೋತ್‌ ಕೌರ್‌ ಸ್ಪರ್ಧೆಗಿಳಿಯದೆಯೇ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಸೋಮವಾರ ಇವರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಎದುರಾಳಿಗಳು ಯಾರೂ ಕಣಕ್ಕೆ ಇಳಿಯದ ಕಾರಣ…

 • ಸಿನ್ಸಿನಾಟಿ:ಪ್ರಶಸ್ತಿ ಎತ್ತಿದ ಮೆಡ್ವಡೇವ್‌,ಕೀಸ್‌

  ಸಿನ್ಸಿನಾಟಿ: ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಲ್ಲಿ ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಮತ್ತು ಅಮೆರಿಕದ ಮ್ಯಾಡಿಸನ್‌ ಕೀಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ರವಿವಾರ ರಾತ್ರಿ ಭಾರೀ ಪೈಪೋಟಿಯಿಂದ ಕೂಡಿದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಮ್ಯಾಡಿಸನ್‌ ಕೀಸ್‌ ರಶ್ಯದ ಹಿರಿಯ ಆಟಗಾರ್ತಿ ಸ್ವೆತ್ಲಾನಾ…

 • ಕೆಪಿಎಲ್‌: ಬಳ್ಳಾರಿಗೆ ರೋಚಕ ಗೆಲುವು

  ಬೆಂಗಳೂರು: ಕೆಪಿಎಲ್‌ ಟಿ20 ಕ್ರಿಕೆಟ್‌ ಕೂಟದ ಸೋಮವಾರದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ ತಂಡ ಹುಬ್ಬಳ್ಳಿ ಟೈಗರ್ ವಿರುದ್ಧ 9 ರನ್‌ ರೋಚಕ ಗೆಲುವು ಸಾಧಿಸಿದೆ. ಇದು ಬಳ್ಳಾರಿಗೆ ಒಲಿದ ಸತತ 2ನೇ ಜಯವಾದರೆ, ಹುಬ್ಬಳ್ಳಿಗೆ ಎದುರಾದ 2ನೇ ಸೋಲು….

 • ಸ್ಮಿತ್‌ಗೆ ಲೇವಡಿ, ಆಸೀಸ್‌ ಪ್ರಧಾನಿ ಕಿಡಿ

  ಕ್ಯಾನ್‌ಬೆರಾ: ಮುಖಕ್ಕೆ ಗಂಭೀರವಾದ ಏಟು ಬಿದ್ದಿರುವ ಹೊರತಾಗಿಯೂ ಮರಳಿ ಬಂದು ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟೀವ್‌ ಸ್ಮಿತ್‌ ಅವರನ್ನು ಲೇವಡಿ ಮಾಡಿರುವ ಇಂಗ್ಲೆಂಡ್‌ ಕ್ರಿಕೆಟ್‌ ಅಭಿಮಾನಿಗಳ ವಿರುದ್ಧ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕಿಡಿಕಾರಿದ್ದಾರೆ. “ಸ್ಮಿತ್‌ ನಿಜವಾದ ಚಾಂಪಿಯನ್‌….

 • ದ್ವಿತೀಯ ಸುತ್ತಿಗೆ ಪ್ರಜ್ಞೇಶ್ 

  ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ ನಾರ್ತ್‌ ಕ್ಯಾರೋಲಿನಾದಲ್ಲಿ ನಡೆಯುತ್ತಿರುವ “ವಿನ್‌ಸ್ಟನ್‌ ಸಲೇಮ್‌ ಓಪನ್‌ ಎಟಿಪಿ ಟೆನಿಸ್‌’ ಪಂದ್ಯಾವಳಿ ಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ರವಿವಾರ ರಾತ್ರಿಯ ಮೊದಲ ಸುತ್ತಿನ ಪಂದ್ಯದಲ್ಲಿ 89ನೇ ರ್‍ಯಾಂಕಿಂಗ್‌ನ  ಪ್ರಜ್ಞೇಶ್ …

 • ಮುಂಬಾವನ್ನು ಮಣಿಸಿದ ಹರ್ಯಾಣ

  ಚೆನ್ನೈ: ಸೋಮವಾರದ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ ಮತ್ತು ಯುಪಿ ಯೋಧಾ ತಂಡಗಳು ಜಯ ಸಾಧಿಸಿವೆ. ಮೊದಲ ಪಂದ್ಯದಲ್ಲಿ ಹರ್ಯಾಣ 30-27 ಅಂತರದಿಂದ ಯು ಮುಂಬಾ ಸೋಲಿಸಿದರೆ, ಇನ್ನೊಂದು ಮುಖಾಮುಖೀಯಲ್ಲಿ ಯುಪಿ ಯೋಧಾ 31-24 ಅಂಕಗಳಿಂದ ಜೈಪುರ್‌…

 • ಬಾಕ್ಸಿಂಗ್‌: ರಾಜ್ಯದ ಅಂಜುಗೆ ಬೆಳ್ಳಿ, ಭಾರತಕ್ಕೆ 12 ಪದಕ

  ನವದೆಹಲಿ: ಸರ್ಬಿಯಾದಲ್ಲಿ ಮುಕ್ತಾಯಗೊಂಡ ಕಿರಿಯರ ಮಹಿಳಾ ಬಾಕ್ಸಿಂಗ್‌ ಕೂಟದಲ್ಲಿ ಭಾರತ ನಾಲ್ಕು ಚಿನ್ನದ ಪದಕ ಸೇರಿದಂತೆ ಒಟ್ಟಾರೆ 12 ಪದಕ ಗೆದ್ದಿದೆ. ತಮನ್ನಾ (48ಕೆ.ಜಿ), ಅಂಬೆಶೋರಿ ದೇವಿ (57 ಕೆ.ಜಿ), ಪ್ರೀತಿ ದಹಿಯಾ (60 ಕೆ.ಜಿ), ಪ್ರಿಯಾಂಕ (66…

 • ಮೊದಲ ಪಂದ್ಯದಲ್ಲಿ12 ರನ್‌, ಈಗ ವಿಶ್ವ ಶ್ರೇಷ್ಠ: ಕೊಹ್ಲಿಯ 11 ವರ್ಷದ ಕ್ರಿಕೆಟ್‌ ಜರ್ನಿಯ ಕಥೆ

  ಇಂದು ವಿರಾಟ್‌ ಕೊಹ್ಲಿ ವಿಶ್ವದ ಅಗ್ರ ಶ್ರೇಣಿಯ ಆಟಗಾರ. ರನ್‌ ಮಶೀನ್.‌ ಪ್ರತೀ ಪಂದ್ಯದಲ್ಲೂ ಹೊಸ ಹೊಸ ದಾಖಲೆ ಬರೆಯುತ್ತಿರುವ ಈ ಶತಕಗಳ ಸಾಮ್ರಾಟ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿರಿಸಿ ಹನ್ನೊಂದು ವರ್ಷ ಕಳೆಯಿತು. ಈ ಹನ್ನೊಂದು ವರ್ಷದ…

 • ಟೈಟಾನ್ಸ್‌ ದಾಳಿಗೆ ಹೈರಾಣಾದ ಹರ್ಯಾಣ

  ಚೆನ್ನೆ: ಏಳನೇ ಆವೃತ್ತಿ ಪ್ರೊ ಕಬಡ್ಡಿಯ ಚೆನ್ನೈ ಚರಣದ ರವಿವಾರದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 40-29 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ಸ್‌ ತಂಡವನ್ನು ಕೆಡವಿದೆ. ಇದು 9 ಪಂದ್ಯಗಳಲ್ಲಿ ತೆಲುಗು ಸಾಧಿಸಿದ ಕೇವಲ 2ನೇ ಜಯವಾಗಿದೆ. ಉಳಿದ…

 • ಬಲಿಷ್ಠ ಆಸೀಸ್‌ ವಿರುದ್ಧ ಡ್ರಾ ಸಾಧಿಸಿದ ವನಿತೆಯರು

  ಟೋಕಿಯೊ: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಎರಡು ಸಲ ಹಿನ್ನಡೆಯಿಂದ ಪಾರಾದ ಭಾರತದ ವನಿತೆಯರು, ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿಯ ರವಿವಾರದ ಪಂದ್ಯವನ್ನು 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಂಡ್‌ ರಾಬಿನ್‌ ಲೀಗ್‌ ಮುಖಾಮುಖೀಯ ಮೊದಲ ಪಂದ್ಯದಲ್ಲಿ ಆತಿಥೇಯ ಜಪಾನ್‌ಗೆ…

 • ಅಂಗಳಕ್ಕಿಳಿಯದ ಸ್ಮಿತ್‌; 3ನೇ ಟೆಸ್ಟ್‌ಗೆ ಅನುಮಾನ

  ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಶನಿವಾರದ ಆಟದ ವೇಳೆ ಜೋಫ‌್ರ  ಆರ್ಚರ್‌ ಅವರಿಂದ ಬೌನ್ಸರ್‌ ಏಟು ತಿಂದ ಆಸ್ಟ್ರೇಲಿಯದ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ಅಂತಿಮ ದಿನ ಮೈದಾನಕ್ಕಿಳಿಯಲಿಲ್ಲ. ಇವರ ಬದಲು ಮಾರ್ನಸ್‌ ಲಬುಶೇನ್‌ ಕ್ಷೇತ್ರರಕ್ಷಣೆ ನಡೆಸಿದರು. ಸ್ಮಿತ್‌ ಅವರು…

ಹೊಸ ಸೇರ್ಪಡೆ