‘ಮಗು’ವೆಂಬ ದೇವರು

Team Udayavani, Nov 14, 2019, 2:25 PM IST

ನಾನಿಂದು ಕಂಡೆ

ಒಂದು

ಸೋಜಿಗ

ಜಾತಿ ಧರ್ಮವೆಂದು

ಜಗಳವಾಡುವ

ದೊಡ್ಡವರು

ಒಂದು ಕಡೆಯಾದರೆ

ಇನ್ನೂಂದು ಕಡೆ

ಮಗುವೊಂದು

ಯಾವುದರ

ಅರಿವಿಲ್ಲದೆ

ಮತ್ತೊಂದು

ಮಗುವಿನೊಡನೆ

ಆಟವಾಡುತ್ತಿತ್ತು

ಎಂಥಾ

ನಿಷ್ಕಲ್ಮಶವಾದ

ಪ್ರೀತಿ

ಹೇಳುವರು

ಮಗುವಿಗೇನು

ತಿಳಿಯುವುದೆಂದು

ಆದರೆ

ವಿಪರ್ಯಾಸವೆಂದರೆ

ದೊಡ್ಡವರೆಷ್ಟು

ಬಲ್ಲರು

ಸುಮ್ಮನೆ ಹೇಳಿಲ್ಲ

ಮಗು

ದೇವರೆಂದು

*ಸ್ವಾತಿಶ್ರೀ ಜಗನ್ನಾಥ್


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ