“ತೋತಾಪುರಿ’ಗೆ 100ರ ಸಂಭ್ರಮ!
Team Udayavani, Mar 12, 2019, 5:51 AM IST
ಜಗ್ಗೇಶ್ ನಾಯಕರಾಗಿರುವ “ತೋತಾಪುರಿ’ ಚಿತ್ರಕ್ಕೆ ನೂರರ ಸಂಭ್ರಮ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಸಿನಿಮಾ ಬಿಡುಗಡೆಯಾಗುವ ಮುನ್ನವೇ ನೂರರ ಸಂಭ್ರಮ ಹೇಗಾಗುತ್ತದೆ, ಚಿತ್ರ ನೂರು ದಿನ ಓಡಿದರಲ್ಲವೇ ಆ ಸಂಭ್ರಮ ಎಂದು ನೀವು ಕೇಳಬಹುದು. ಇದು ಬಿಡುಗಡೆಗಿಂತಲೂ ಮೊದಲ ಸಂಭ್ರಮ. ನಾವು ಹೇಳುತ್ತಿರುವುದು ಚಿತ್ರೀಕರಣದ ಬಗ್ಗೆ. “ತೋತಾಪುರಿ’ ಚಿತ್ರ ಈಗಾಗಲೇ 80ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಮುಗಿಸಿದ್ದು, ಇನ್ನೂ 20ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಬಾಕಿ ಇದೆ.
ಈ ಮೂಲಕ ಚಿತ್ರಕ್ಕೆ 100 ದಿನಗಳ ಚಿತ್ರೀಕರಣ ದಾಟುತ್ತದೆ. ಸಾಮಾನ್ಯವಾಗಿ ಜಗ್ಗೇಶ್ ಅವರು ಆದಷ್ಟು ಬೇಗ ನೀಟಾಗಿ ಚಿತ್ರೀಕರಣ ಮಾಡಿ ಮುಗಿಸಲು ಬಯಸುತ್ತಾರೆ. ಅನಾವಶ್ಯಕವಾಗಿ ಹೆಚ್ಚು ದಿನ ಚಿತ್ರೀಕರಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಜಗ್ಗೇಶ್ ಹೇಳುತ್ತಿರುತ್ತಾರೆ ಕೂಡಾ. ಆದರೆ, “ತೋತಾಪುರಿ’ ಚಿತ್ರದ ಕಥೆ ಅಷ್ಟೊಂದು ದಿನ ಚಿತ್ರೀಕರಣ ಬಯಸಿದ್ದರಿಂದ ಇಡೀ ಚಿತ್ರತಂಡ ಖುಷಿಯಿಂದ ಭಾಗವಹಿಸಿದೆ.
ಮಂಡ್ಯ, ಮೈಸೂರು ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಜಯ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಈಗಾಗಲೇ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಕಾಂಬಿನೇಶನ್ನಲ್ಲಿ ಬಂದಿರುವ “ನೀರ್ದೋಸೆ’ ಚಿತ್ರ ಯಶಸ್ಸು ಕಂಡಿತ್ತು. ಈಗ “ತೋತಾಪುರಿ’ಯಲ್ಲಿ ಮತ್ತೆ ಅದೇ ಜೋಡಿ ಒಂದಾಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕೆ.ಎ.ಸುರೇಶ್, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಥೆ ಬಯಸಿದ್ದರಿಂದ ಅದಕ್ಕೆ ತಕ್ಕಂತೆ ಚಿತ್ರೀರಣ ಮಾಡುತ್ತಿದ್ದೇವೆ. ಈಗಾಗಲೇ 80ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇನ್ನೊಂದಷ್ಟು ದಿನಗಳ ಚಿತ್ರೀಕರಣ ಬಾಕಿ ಇದ್ದು, 100 ದಿನ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎನ್ನುತ್ತಾರೆ. ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ, ಧನಂಜಯ್, ಸುಮನ್ ರಂಗನಾಥ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ