ಪತಿ-ಪತ್ನಿ ಮತ್ತು *121#
Team Udayavani, Sep 5, 2017, 11:44 AM IST
ನಾಯಕಿ ನಟಿಯರಿಗೆ ಮದುವೆಯಾದರೆ ಅವಕಾಶ ಸಿಗೋದಿಲ್ಲ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದಕ್ಕೆ ಸರಿಯಾಗಿ ಚಿತ್ರರಂಗಕ್ಕೆ ಹೊಸದಾಗಿ ಬರುವ ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ, ಅದರಲ್ಲೂ ತಮ್ಮ ಮದುವೆಯನ್ನು ಮುಚ್ಚಿಡುತ್ತಾರೆ. ತಮಗೆ ಮದುವೆಯಾಗಿದೆ ಎಂದು ಹೇಳಿದರೆ ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳೆಯಬೇಕೆಂಬ ಕನಸು ಈಡೇರದೇ ಹೋದರೆ ಎಂಬ ಭಯದಿಂದ ಮದುವೆ ವಿಷಯವನ್ನು ಹೇಳುವವರು ವಿರಳ. ಆದರೆ, ವಿದ್ಯಾ ಎಂಬ ನವನಟಿ ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೇ ತನಗೆ ಮದುವೆಯಾಗಿದೆ ಎನ್ನುತ್ತಾ ಪತಿಯನ್ನು ಕೂಡಾ ವೇದಿಕೆಗೆ ಕರೆದು ಪರಿಚಯ ಮಾಡಿಕೊಟ್ಟರು.
ವಿದ್ಯಾ ಈಗಷ್ಟೇ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. “*121#’ ಎಂಬ ಚಿತ್ರ ವಿದ್ಯಾ ನಾಯಕಿಯಾಗಿ ನಟಿಸಿರುವ ಮೊದಲ ಸಿನಿಮಾ. ಈ ಹಿಂದೆ ವಿದ್ಯಾ ಕೆಲವು ಸಿನಿಮಾಗಳಲ್ಲಿ ನಾಯಕಿಯ ಸ್ನೇಹಿತೆಯಾಗಿ ನಟಿಸಿದ್ದಾರೆ. ಸ್ನೇಹಿತೆಯಾಗಿ ನಟಿಸುತ್ತಲೇ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಸೋಮವಾರ ಅವರು ನಾಯಕಿ ನಟಿಸಿದ “*121#’ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಈ ವೇಳೆ ಮೈಕ್ ಹಿಡಿದ ವಿದ್ಯಾ ಭಾವುಕರಾದರು.
ಅದಕ್ಕೆ ಕಾರಣ ಅವರ ಪತಿ ನೀಡಿದ ಬೆಂಬಲ. “ಚಿತ್ರರಂಗದಲ್ಲಿ ಮದುವೆಯಾದರೆ ನಾಯಕಿಯರಿಗೆ ಅವಕಾಶ ಸಿಗೋದಿಲ್ಲ ಎಂಬ ಮಾತು ಕೇಳಿಬರುತ್ತದೆ. ನನಗೆ ಮದುವೆಯಾಗಿದೆ. ನನ್ನ ಪತಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ಚಿತ್ರರಂಗದಲ್ಲಿ ಬೆಳೆಯಬೇಕೆಂಬುದು ಅವರ ಆಸೆ. ಅದೇ ಕಾರಣಕ್ಕೆ ಮದುವೆಯಾಗಿದ್ದನ್ನು ಮಾಧ್ಯಮ ಮುಂದೆ ಹೇಳಬೇಡ ಎಂದು ಅವರೇ ಹೇಳುತ್ತಿದ್ದರು. ಮುಂದೆ ಅವಕಾಶ ಸಿಗದೇ ಹೋದರೆ ಎಂಬ ಕಾರಣಕ್ಕೆ ಹಾಗೆ ಹೇಳುತ್ತಾರೆ. ಆದರೆ, ನನಗೆ ಅವರ ಸಂಪೂರ್ಣ ಪ್ರೋತ್ಸಾಹ ಇದೆ’ ಎನ್ನುತ್ತಾ ಪತಿಯನ್ನು ಕೂಡಾ ವೇದಿಕೆ ಮೇಲೆ ಕರೆದರು. ಪತ್ನಿ ಭಾವುಕರಾಗಿದ್ದನ್ನು ಕಂಡ ಪತಿ ದರ್ಶನ್ ಕೂಡಾ ಭಾವುಕರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ