3000 ಹಾರರ್‌ ಸಿನಿಮಾ

Team Udayavani, Aug 28, 2017, 10:44 AM IST

3000-(1).jpg

ಕನ್ನಡದಲ್ಲಿ ಹಾರರ್‌ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅವುಗಳ ಸಾಲಿಗೆ ಈಗ “3000′ ಎಂಬ ಸಿನಿಮಾವೂ ಒಂದು. ಇದು ಹೇಳಿ ಕೇಳಿ ಹೊಸಬರ ಚಿತ್ರ. ಬಹುತೇಕ ಹೊಸಬರೇ ಹಾರರ್‌ ಸಿನಿಮಾಗಳ ಹಿಂದೆ ಬಂದು ಗೆಲುವು ಕಂಡಿದ್ದೂ ಉಂಟು. ಈಗ ಅಂಥದ್ದೇ ಒಂದು ತಂಡ, ಹಾರರ್‌ ಸಿನಿಮಾ ಹಿಂದೆ ನಿಂತಿದೆ. “3000′ ಸಿನಿಮಾ ಮೂಲಕ ಕೀರ್ತಿ ಎಂಬ ಹೊಸ ಪ್ರತಿಭೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗುತ್ತಿದ್ದಾರೆ.

ಪ್ರಸಾದ್‌ ಎಂಬ ಹೊಸ ಪ್ರತಿಭೆ ಕೂಡ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಇಲ್ಲಿ ನಿರ್ದೇಶಕ ಕೀರ್ತಿ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಇದೊಂದು ಹಾರರ್‌ ಫೀಲ್‌ ಇರುವ ಸಿನಿಮಾ. ಗೆಳೆಯರೆಲ್ಲರೂ ಪ್ರವಾಸಕ್ಕೆ ಹೊರಟಾಗ, ಒಂದು ಘಟನೆ ಎದುರಾಗುತ್ತದೆ. ಅಲ್ಲಿ ವಿಚಿತ್ರ ಅನುಭವಗಳು ಆಗುತ್ತವೆ. ಆ ಕೆಟ್ಟ ಶಕ್ತಿಗಳಿಂದ ಅವರೆಲ್ಲರೂ ಹೇಗೆ ಹೊರಬರುತ್ತಾರೆ ಅನ್ನೋದು “3000′ ಕಥೆ.

ಇಲ್ಲಿ ಚಿತ್ರಕ್ಕೆ “3000′ ಎಂದು ನಾಮಕರಣ ಮಾಡುವುದಕ್ಕೂ ಕಾರಣವಿದೆ. ಅದಕ್ಕೊಂದು ವಿಶೇಷತೆಯೂ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ, ಸಿನಿಮಾ ಬರುವವರೆಗೂ ಕಾಯಬೇಕು ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಪ್ರಸಾದ್‌, ಕೀರ್ತಿ ಜತೆಯಲ್ಲಿ ಪ್ರಮುಖವಾಗಿ ಫಾದರ್‌ ಪಾತ್ರವೂ ಇದೆ. ಆ ಪಾತ್ರದಲ್ಲಿ ಸುಹಾನ್‌ ಎಂಬ ಹೊಸ ಪ್ರತಿಭೆ ನಟಿಸಿದ್ದಾರೆ. ಇವರೊಂದಿಗೆ ಸ್ವಾತಿ, ಉಜಾಲ, ಕಾವ್ಯಾ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಇನ್ನು, ಬಹುತೇಕ ಹೊಸತಂಡವನ್ನು ಕಟ್ಟಿಕೊಂಡು ಹಾರರ್‌ ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿರೋದು, ಶಂಕರ್‌.

ತಮ್ಮ ಶಂಕರ್‌ ಅಸೋಸಿಯೇಟ್ಸ್‌ ಬ್ಯಾನರ್‌ನಲ್ಲಿ “3000′ ಚಿತ್ರ ನಿರ್ಮಿಸಿದ್ದಾರೆ. ಅಲೆನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮನು ಕ್ಯಾಮೆರಾ ಹಿಡಿದಿದ್ದಾರೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಎರಡನೇ ಹಂತದ ಚಿತ್ರೀಕರಣ ಕನಕಪುರದಲ್ಲಿ ಹಾಕಲಾಗಿರುವ ಸೆಟ್‌ನಲ್ಲಿ ನಡೆಯಲಿದೆ. ಈಗಾಗಲೇ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಂತೂ ಹೊಸಬರ ತಂಡವೊಂದು ಹಾರರ್‌ ಚಿತ್ರದ ಹಿಂದೆ ನಿಂತು, ಗೆಲುವಿನ ನಿರೀಕ್ಷೆಯಲ್ಲಿದೆ.

ಟಾಪ್ ನ್ಯೂಸ್

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

1clean

75 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ: ನಟರಾಜ್‌

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.