777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ: ರಕ್ಷಿತ್ ಶೆಟ್ಟಿ

Team Udayavani, May 17, 2022, 1:51 PM IST

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ; ರಕ್ಷಿತ್ ಶೆಟ್ಟಿ

ರಕ್ಷಿತ್‌ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಇದೇ ಜೂನ್‌ 10ರಂದು ತೆರೆಕಾಣಲಿದೆ. ಈಗಾಗಲೇ ಭರ್ಜರಿಯಾಗಿ “777 ಚಾರ್ಲಿ’ಯ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಸೋಮವಾರ (ಮೇ. 16) ಚಿತ್ರದ ಮೊದಲ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಮೊದಲೇ ನಿಗಧಿಯಾಗಿದ್ದಂತೆ, ಸೋಮವಾರ ಮಧ್ಯಾಹ್ನ 12 ಗಂಟೆ 12 ನಿಮಿಷಕ್ಕೆ ಸರಿಯಾಗಿ “777 ಚಾರ್ಲಿ’ ಟ್ರೇಲರ್‌ ಬಿಡುಗಡೆಯಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲೂ ಟ್ರೇಲರ್‌ ಹೊರಬಂದಿದೆ.

 “777 ಚಾರ್ಲಿ’ ಸಿನಿಮಾದ್ದು ವರ್ಣಿಸಲಾಗದ ಅನುಭವ: “ಈ ಹಿಂದೆ ಮಾಡಿದ್ದ ಪ್ರತಿಯೊಂದು ಸಿನಿಮಾಗಳ ಬಗ್ಗೆಯೂ ಮಾತನಾಡಬಹುದು. “ಉಳಿದವರು ಕಂಡಂತೆ’ ಮುಗ್ಧತೆಯಿಂದ ಮಾಡಿದ್ದು, “ಕಿರಿಕ್‌ ಪಾರ್ಟಿ’ ಗುರುತಿಸಿಕೊಳ್ಳಬೇಕು, ಗೆಲ್ಲಲೇಬೇಕೆಂದು ಮಾಡಿದ್ದು, “ಅವನೇ ಶ್ರೀಮನ್ನಾರಾಯಣ’ ಒಂದಷ್ಟು ತಿಳಿದುಕೊಳ್ಳಲು, ಅನುಭವಕ್ಕಾಗಿ ಮಾಡಿದ್ದು. ಆದರೆ “777 ಚಾರ್ಲಿ’ ಸಿನಿಮಾದ ಬಗ್ಗೆ ಏನೂ ಹೇಳಲಾಗದು. ಏಕೆಂದರೆ, ಇದೊಂದು ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದಂಥ ಸಿನಿಮಾ. ಅದರ ಅನುಭವಗಳು ನನಗೆ ಮಾತ್ರ ಗೊತ್ತು. ಆದರೆ ಅದನ್ನು ವಿವರಿಸಲಾಗದು. ಇಡೀ ಸಿನಿಮಾ ನನಗೆ ಮಾತ್ರವಲ್ಲ ನಮ್ಮ ಇಡೀ ತಂಡಕ್ಕೆ ಒಂದು ಎಮೋಶನಲ್‌ ಜರ್ನಿ ಅಂಥ ಹೇಳಬಹುದು. ಸಿನಿಮಾದ ಸಬ್ಜೆಕ್ಟ್ ನನಗೆ ಅಷ್ಟರ ಮಟ್ಟಿಗೆ ಹತ್ತಿರವಾಗಿದ್ದರಿಂದ, ಇಷ್ಟು ವರ್ಷ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎನ್ನುವುದು “777 ಚಾರ್ಲಿ’ಯ ಬಗ್ಗೆ ನಾಯಕ ನಟ ಕಂ ನಿರ್ಮಾಪಕ ರಕ್ಷಿತ್‌ ಶೆಟ್ಟಿ ಮಾತು.

ಮನಮುಟ್ಟುವ ಸಿನಿಮಾ ಮಾಡಿದ ತೃಪ್ತಿ: “ಇದೊಂದು ಸಂಪೂರ್ಣ ಭಾವನಾತ್ಮಕ ಕಥಾಹಂದರದ ಸಿನಿಮಾ. ಹಾಗಾಗಿ ಯಾವುದೇ ಭಾಷೆಯ ಹಂಗಿಲ್ಲದೆ ಎಲ್ಲ ಪ್ರೇಕ್ಷಕರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ. ಎಲ್ಲರ ಮನಮುಟ್ಟುವಂಥ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ’ ಎಂಬುದು “777 ಚಾರ್ಲಿ’ ಬಗ್ಗೆ ನಿರ್ದೇಶಕ ಕಿರಣ್‌ ರಾಜ್‌ ಮಾತು.

ಇದನ್ನೂ ಓದಿ:‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

ಚಿತ್ರತಂಡದ ನಿರೀಕ್ಷೆ ಇಮ್ಮಡಿಗೊಳಿಸಿದ “ಚಾರ್ಲಿ’: ನಾಯಕಿ ಸಂಗೀತಾ ಶೃಂಗೇರಿ, ನಟ ರಾಜ್‌ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌, ಛಾಯಾಗ್ರಹಕ ಅರವಿಂದ್‌ ಕಶ್ಯಪ್‌, ನಿರ್ಮಾಪಕಿ ಕೃಷ್ಣಾ ಹೀಗೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು “777 ಚಾರ್ಲಿ’ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌, ಟೀಸರ್‌ಮತ್ತು ಈಗ ಬಿಡುಗಡೆಯಾಗಿರುವ ಟ್ರೇಲರ್‌ ಎಲ್ಲದಕ್ಕೂ ನಿರೀಕ್ಷೆಗೂ ಮೀರಿದ ಸ್ಪಂದನೆ ಮತ್ತು ಬೆಂಬಲ ಸಿಗುತ್ತಿರುವುದರಿಂದ “777 ಚಾರ್ಲಿ’ ಥಿಯೇಟರ್‌ನಲ್ಲೂ ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

“777 ಚಾರ್ಲಿ’ ಟ್ರೇಲರ್‌ಗೆ ಸಾಥ್‌ ನೀಡಿದ ಸ್ಟಾರ್: ಇನ್ನು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ “777 ಚಾರ್ಲಿ’ ಸಿನಿಮಾದ ಟ್ರೇಲರ್‌ಗೆ ಬಹುತೇಕ ಇತರ ಭಾಷೆಗಳ ಸ್ಟಾರ್, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್ ಸಾಥ್‌=ನೀಡಿದ್ದಾರೆ. ತೆಲುಗಿನಲ್ಲಿ ಸಾಯಿ ಪಲ್ಲವಿ, ಲಕ್ಷ್ಮೀ ಮಂಜು, ರಾಣಾ ದಗ್ಗುಬಾಟಿ ಹಾಗೂ ವಿಕ್ಟರಿ ವೆಂಕಟೇಶ್‌ “777 ಚಾರ್ಲಿ’ ಟ್ರೇಲರ್‌ ಬಿಡುಗಡೆ ಮಾಡಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. ಇನ್ನು ತಮಿಳಿನಲ್ಲಿ ಖ್ಯಾತ ನಟ ಧನುಷ್‌ “777 ಚಾರ್ಲಿ’ ಸಿನಿಮಾದ ತಮಿಳು ಟ್ರೇಲರ್‌ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದಾರೆ. ಉಳಿದಂತೆ ಮಲಯಾಳಂನಲ್ಲಿ ಟೊವಿನೋ ಥಾಮಸ್‌, ಆಸಿಫ್ ಅಲಿ ಸೇರಿದಂತೆ ಹಲವು ಸ್ಟಾರ್ ಸಾಮಾಜಿಕ ಜಾಲತಾಣಗಳ ಮೂಲಕ ಟ್ರೇಲರ್‌ ಬಿಡುಗಡೆ ಮಾಡಿ “777 ಚಾರ್ಲಿ’ಗೆ ಶುಭ ಹಾರೈಸಿದ್ದಾರೆ

ಟಾಪ್ ನ್ಯೂಸ್

ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ

ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ

ಒನ್‌ಪ್ಲಸ್‌ ನೋರ್ಡ್‌ 2ಟಿ 5ಜಿ ಬಿಡುಗಡೆ: 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

ಒನ್‌ಪ್ಲಸ್‌ ನೋರ್ಡ್‌ 2ಟಿ 5ಜಿ ಬಿಡುಗಡೆ: 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

ಏಕಬಳಕೆ ಪ್ಲಾಸ್ಟಿಕ್‌ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್‌ ರೈ

ಏಕಬಳಕೆ ಪ್ಲಾಸ್ಟಿಕ್‌ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್‌ ರೈ

ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ

ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ “ಜವಾನ್‌’ಗೆ ಬರೋಬ್ಬರಿ 120 ಕೋಟಿ ರೂ.!

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ

ಜನತಾ ಮಿತ್ರ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನಾಡದ ಮಾತೆಲ್ಲವಾ ಕದ್ದಾಲಿಸು… ಗಣೇಶ್‌ ಬರ್ತ್‌ಡೇಗೆ ಗಾಳಿಪಟ-2 ರೊಮ್ಯಾಂಟಿಕ್‌ ಸಾಂಗ್‌

ನಾನಾಡದ ಮಾತೆಲ್ಲವಾ ಕದ್ದಾಲಿಸು… ಗಣೇಶ್‌ ಬರ್ತ್‌ಡೇಗೆ ಗಾಳಿಪಟ-2 ರೊಮ್ಯಾಂಟಿಕ್‌ ಸಾಂಗ್‌

ಸ್ನೂಕರ್‌ ಪಟುವಿನ ಸಿನಿ ಕನಸು: ಹೋಪ್ ಮೂಲಕ ಚಿತ್ರರಂಗಕ್ಕೆ ಬಂದ ವರ್ಷಾ ಸಂಜೀವ್

ಸ್ನೂಕರ್‌ ಪಟುವಿನ ಸಿನಿ ಕನಸು: ಹೋಪ್ ಮೂಲಕ ಚಿತ್ರರಂಗಕ್ಕೆ ಬಂದ ವರ್ಷಾ ಸಂಜೀವ್

ಆರು ತಿಂಗಳು ನೂರು ಸಿನಿಮಾ; ಸ್ಯಾಂಡಲ್ ವುಡ್ ನಲ್ಲಿ ಶತಕ ಸಂಭ್ರಮ

ಆರು ತಿಂಗಳು ನೂರು ಸಿನಿಮಾ; ಸ್ಯಾಂಡಲ್ ವುಡ್ ನಲ್ಲಿ ಶತಕ ಸಂಭ್ರಮ

window-seat

ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್‌’ ಜರ್ನಿ ಶುರು

ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕಿ: ಇಂದಿನಿಂದ ‘ಬೈರಾಗಿ’ ದರ್ಶನ

ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ

MUST WATCH

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಹೊಸ ಸೇರ್ಪಡೆ

ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ

ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ

ಒನ್‌ಪ್ಲಸ್‌ ನೋರ್ಡ್‌ 2ಟಿ 5ಜಿ ಬಿಡುಗಡೆ: 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

ಒನ್‌ಪ್ಲಸ್‌ ನೋರ್ಡ್‌ 2ಟಿ 5ಜಿ ಬಿಡುಗಡೆ: 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

ಏಕಬಳಕೆ ಪ್ಲಾಸ್ಟಿಕ್‌ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್‌ ರೈ

ಏಕಬಳಕೆ ಪ್ಲಾಸ್ಟಿಕ್‌ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್‌ ರೈ

ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ

ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

ಹಣದಿಂದ ವೈದ್ಯರ ಸೇವೆ ಅಳೆಯಲು ಸಾಧ್ಯವಿಲ್ಲ: ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.