ತಾಯಿಗೆ ತಕ್ಕ ಮಗನಿಗೆ ಎ ಪ್ರಮಾಣ ಪತ್ರ

Team Udayavani, Oct 27, 2018, 10:42 AM IST

tayige-takka-maga.jpg

ಅಜೇಯ್‌ರಾವ್‌ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕಮ್‌ ನಿರ್ಮಾಪಕ ಶಶಾಂಕ್‌ ಅವರು ಸೆನ್ಸಾರ್‌ ಮಂಡಳಿ ಗರಂ ಆಗಿದ್ದಾರೆ. ಚಿತ್ರದಲ್ಲಿ “ಎ’ ಪ್ರಮಾಣ ಕೊಡುವಂತಹ ದೃಶ್ಯಗಳಾಗಲಿ, ಸಂಭಾಷಣೆಯಾಗಲಿ ಇಲ್ಲ. ಆದರೂ, ಸೆನ್ಸಾರ್‌ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ. ನಾನು ನಿಜಕ್ಕೂ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಗುತ್ತೆ ಎಂದು ನಿರೀಕ್ಷಿಸಿರಲಿಲ್ಲ.

ಚಿತ್ರ ವೀಕ್ಷಿಸಿದವರು “ಎ’ ಪ್ರಮಾಣ ಪತ್ರ ನೀಡಿದ್ದಾರೆ. ಅವರ ಅವರ ದೃಷ್ಟಿಕೋನಕ್ಕೆ ಸರಿ ಎನಿಸಿರಬಹುದು. ಆದರೆ, ಅದೆಲ್ಲದ್ದಕ್ಕೂ ಅ.29 ರ ಸೋಮವಾರ ಒಂದು ಸ್ಪಷ್ಟತೆ ಸಿಗಲಿದೆ’ ಎಂದಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಶಶಾಂಕ್‌, “ಯಾಕೆ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಲಾಗಿದೆ ಎಂಬುದು ಗೊತ್ತಿಲ್ಲ. ಸದ್ಯಕ್ಕೆ ನನಗೇನೂ ಗೊತ್ತಾಗುತ್ತಿಲ್ಲ. ಆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.

ನವೆಂಬರ್‌ 16 ರಂದು ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಯಾವ ಕಾರಣಕ್ಕೂ ಬಿಡುಗಡೆ ದಿನಾಂಕ ಬದಲಾವಣೆ ಮಾಡುವುದಿಲ್ಲ. ಇಲ್ಲಿ ನಾನೇ ನಿರ್ಮಾಪಕನೂ ಆಗಿರುವುದರಿಂದ ಇನ್ನಷ್ಟು ಒತ್ತಡವಿದೆ. ಚಿತ್ರಮಂದಿರಗಳು ಈಗಾಗಲೇ ಪಕ್ಕಾ ಆಗಿವೆ. ಚಿತ್ರ ನೋಡಿದ ಸೆನ್ಸಾರ್‌ ಮಂಡಳಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲಿ ಸೂಕ್ಷ್ಮ ಅಂಶಗಳೂ ಇವೆ. ಆದರೆ, ಅದು ಅವರ ದೃಷ್ಟಿಕೋನದಲ್ಲಿ ಸರಿ ಎನಿಸಿಲ್ಲ.

ಏನು ಮಾಡೋಕ್ಕಾಗುತ್ತೆ. ಹಣ ಹಾಕಿ ಸಿನಿಮಾ ಮಾಡಿದ್ದೇವೆ. ಸದ್ಯಕ್ಕೆ ಆ ಕುರಿತು ಚರ್ಚಿಸುತ್ತಿದ್ದೇನೆ. ಸೋಮವಾರ ನನ್ನ ನಿರ್ಧಾರ ಹೇಳುತ್ತೇನೆ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ನನ್ನ ನಿರ್ದೇಶನದ “ಮೊಗ್ಗಿನ ಮನಸು’ ಚಿತ್ರಕ್ಕೂ “ಎ’ ಪ್ರಮಾಣ ಪತ್ರ ಕೊಡಲಾಗಿತ್ತು. ಆಗ ಕೂಡ ಬಿಡುಗಡೆ ದಿನಾಂಕ ಆನೌನ್ಸ್‌ ಮಾಡಲಾಗಿತ್ತು. ಆದರೆ, ನಿರ್ಮಾಪಕ ಕೃಷ್ಣಪ್ಪ ಅವರು ರಿವೈಸಿಂಗ್‌ ಕಮಿಟಿಗೆ ಹೋದರು. ಅಲ್ಲಿ ಹೋರಾಟ ನಡೆಸಿದಾಗ, ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ಸಿಕ್ಕಿತು.

ಆಮೇಲೆ ಸಿನಿಮಾ ನೋಡಿದಮೇಲೆ ಅಲ್ಲೇನಿತ್ತು ಎಂಬುದು ಗೊತ್ತಾಯ್ತು. ಇನ್ನು, “ಜರಾಸಂಧ’ ಚಿತ್ರ ಮಾಡಿದಾಗಲೇ ನನಗೆ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಗುತ್ತೆ ಎಂಬುದು ಗೊತ್ತಿತ್ತು. ಯಾಕೆಂದರೆ, ಚಿತ್ರದ ಕಂಟೆಂಟ್‌ ಹಾಗೆ ಇತ್ತು. ಆಲ್ಲಿ ಅಂಡರ್‌ವರ್ಲ್ಡ್ ವಿಷಯವಿತ್ತು. “ಎ’ ಕೊಟ್ಟಿದ್ದಕ್ಕೆ ತಕರಾರು ಇರಲಿಲ್ಲ. ಆದರೆ, “ತಾಯಿಗೆ ತಕ್ಕ ಮಗ’ ಚಿತ್ರಕ್ಕೇಕೆ “ಎ’ ಕೊಡಲಾಗಿದೆ ಎಂಬುದೇ ಪ್ರಶ್ನೆ’ ಎಂದು ಬೇಸರಿಸಿಕೊಳ್ಳುತ್ತಾರೆ ಶಶಾಂಕ್‌.

ಟಾಪ್ ನ್ಯೂಸ್

Heavy-rain

Rain Alert: ಕರಾವಳಿ ಜಿಲ್ಲೆಗಳಲ್ಲಿ ನಾಳೆಯೂ ಭಾರೀ ಮಳೆ 

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

1-sdsadasd

Kerala: 14 ವರ್ಷದ ಬಾಲಕನಲ್ಲಿ ನಿಫಾ ಸೋಂಕು ದೃಢ ; ಮುಂಜಾಗ್ರತಾ ಕ್ರಮ

Mangaluru: 2.35 ಕೋ.ರೂ. ದರೋಡೆ ಪ್ರಕರಣ, ಆರೋಪಿಗಳ ಖುಲಾಸೆ

Mangaluru: 2.35 ಕೋ.ರೂ. ದರೋಡೆ ಪ್ರಕರಣ, ಆರೋಪಿಗಳ ಖುಲಾಸೆ

Shobha-Kharandlaje

Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್‌ ಸರ್ಕಾರ: ಕೇಂದ್ರ ಸಚಿವೆ ಶೋಭಾ 

CBI

NEET-UG ಹಗರಣ ; ಮಾಸ್ಟರ್‌ಮೈಂಡ್‌, ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Ragini Prajwal; ಶ್ಯಾನುಭೋಗರ ಮಗಳು ತೆರೆಗೆ ಸಿದ್ದ

Ragini Prajwal; ಶ್ಯಾನುಭೋಗರ ಮಗಳು ತೆರೆಗೆ ಸಿದ್ದ

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

not-out

ನವತಂಡದ Not Out: ಥ್ರಿಲ್ಲರ್‌ ಹಾದಿಯಲ್ಲಿ ಅಜಯ್‌ ಹೆಜ್ಜೆ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Heavy-rain

Rain Alert: ಕರಾವಳಿ ಜಿಲ್ಲೆಗಳಲ್ಲಿ ನಾಳೆಯೂ ಭಾರೀ ಮಳೆ 

15

Dengue fever: ಡೆಂಘೀಗೆ ಬಾಲಕರು ಬಲಿ?

1-ddd

Gundlupet; ಕಾರು-ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

1-sdsadasd

Kerala: 14 ವರ್ಷದ ಬಾಲಕನಲ್ಲಿ ನಿಫಾ ಸೋಂಕು ದೃಢ ; ಮುಂಜಾಗ್ರತಾ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.