ಎ ಫಿಲ್ಮ್ ಬೈ ಪ್ರವೀಣ್‌: ಇದೇ ಸಿನಿಮಾ ಶೀರ್ಷಿಕೆ

Team Udayavani, Mar 18, 2019, 5:48 AM IST

ಈಗಂತೂ ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಎನಿಸುವ ಶೀರ್ಷಿಕೆ ಇರುವ ಚಿತ್ರಗಳು ಬರುತ್ತಿವೆ. ಸೆಟ್ಟೇರುತ್ತಲೂ ಇವೆ. ಆ ಸಾಲಿಗೆ “ಎ ಫಿಲ್ಮ್ ಬೈ ಪ್ರವೀಣ್‌’ ಕೂಡ ಒಂದು. ಸಾಮಾನ್ಯವಾಗಿ ಚಿತ್ರದ ಪೋಸ್ಟರ್‌ನಲ್ಲಿ “ಎ ಫಿಲ್ಮ್ ಬೈ…’ ಎಂದು ನಿರ್ದೇಶಕರುಗಳು ತಮ್ಮ ಹೆಸರನ್ನು ಹಾಕಿಕೊಂಡಿರುವುದನ್ನು ನೋಡಿರುತ್ತೀರಿ. ಈಗ ಅದೇ ಚಿತ್ರದ ಶೀರ್ಷಿಕೆಯಾಗಿದೆ ಅನ್ನೋದು ವಿಶೇಷ. ಹೌದು, “ಎ ಫಿಲ್ಮ್ ಬೈ ಪ್ರವೀಣ್‌’ ಚಿತ್ರವೊಂದು ಸೆಟ್ಟೇರಲು ಅಣಿಯಾಗುತ್ತಿದೆ.

ಈ ಚಿತ್ರಕ್ಕೆ ಪ್ರವೀಣ್‌ ನಿರ್ದೇಶಕರು. ಕಥೆ, ಚಿತ್ರಕಥೆಯ ಜೊತೆಗೆ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದೊಂದು ಸಿನಿಮಾದೊಳಗಿನ ಸಿನಿಮಾ ನಿರ್ದೇಶಕನ ಕಥೆ ಹೊಂದಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಜೊತೆಗೆ ಕಾಮಿಡಿ ಹಾರರ್‌ ಕಥೆ ಸಾಗಲಿದೆ. ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಭಯದ ಛಾಯೆ ಜಾಸ್ತಿ. ಇಲ್ಲಿ ಅದರೊಂದಿಗೆ ಹಾಸ್ಯವೂ ಇದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರಕ್ಕೆ “ರಾಂಗ್‌ ಕಾಲ್‌’ ಚಂದ್ರು ನಾಯಕರಾದರೆ, ಅವರಿಗೆ ಖುಷಿ ಎಂಬ ಹೊಸ ಪ್ರತಿಭೆ ನಾಯಕಿ.

ಕಥೆ ಬಗ್ಗೆ ಹೇಳುವ ನಿರ್ದೇಶಕ ಪ್ರವೀಣ್‌, “ರಿವೇಂಜ್‌ ಕಥೆಯಲ್ಲ. ಹಾಗಂತ ದ್ವೇಷವೂ ಇಲ್ಲಿಲ್ಲ. ಕಥೆ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಹೀರೋ ತಾನು ನಿರ್ದೇಶಕ ಆಗಬೇಕೆಂದು ಪ್ರಯತ್ನಿಸುತ್ತಿರುತ್ತಾನೆ. ಆ ಸಂದರ್ಭದಲ್ಲಿ ಅವನಿಗೊಂದು “ಎ ಫಿಲ್ಮ್ ಬೈ ಪ್ರವೀಣ್‌’ ಎಂಬ ಪುಸ್ತಕ ಸಿಗುತ್ತದೆ. ಆ ಪುಸ್ತಕ ಇಟ್ಟುಕೊಂಡು ತನ್ನ ಗೆಳೆಯರ ಜೊತೆ ನಿರ್ಮಾಪಕರ ಬಳಿ ಹೋಗಿ ಸಿನಿಮಾ ಮಾಡುವಂತೆ ಕೇಳುತ್ತಾನೆ. ಅಲ್ಲಿಂದ ಹೆಣ್ಣು ಪ್ರೇತಾತ್ಮದ ಕಾಟ ಶುರುವಾಗುತ್ತೆ.

ಗೊತ್ತಿಲ್ಲದೆಯೇ ಆ ಹೀರೋನನ್ನು ಆ ಪ್ರೇತಾತ್ಮ ಪ್ರೀತಿಸೋಕೆ ಶುರುಮಾಡಿರುತ್ತೆ. ಅದು ಹೇಗೆ, ಯಾಕೆ ಅನ್ನೋದು ಸಸ್ಪೆನ್ಸ್‌ ಎನ್ನುತ್ತಾರೆ ನಿರ್ದೇಶಕರು.
ಚಿತ್ರದಲ್ಲಿ ರೋಬೋ ಗಣೇಶ್‌ ವಿಲನ್‌ ಪಾತ್ರ ಮಾಡುತ್ತಿದ್ದಾರೆ. ಆದರೆ, ಸಿನಿಮಾದಲ್ಲಿ ಯಾವುದೇ ಫೈಟ್‌ ಇಲ್ಲ. ಉಳಿದಂತೆ ಚಿತ್ರದಲ್ಲಿ ಕೆಂಪೇಗೌಡ, ಮಜಾ ಟಾಕೀಸ್‌ ಪವನ್‌ಕುಮಾರ್‌, ನಿರಂಜನ್‌ಕುಮಾರ್‌ ದಾವಣಗೆರೆ, ದರ್ಶನ್‌ ಇತರರು ನಟಿಸುತ್ತಿದ್ದಾರೆ. ಕೆ.ಕಲ್ಯಾಣ್‌ ಸಂಗೀತ ಸಾಹಿತ್ಯವಿದೆ. ರವಿ ಸುವರ್ಣ ಛಾಯಾಗ್ರಹಣ ಮಾಡಿದರೆ, ಚೆಲುವ ಮೂರ್ತಿ ಸಂಕಲನ ಮಾಡುತ್ತಿದ್ದಾರೆ.

ವಿನಯ್‌ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ಮಾಪಕ ಪ್ರವೀಣ್‌ಗೆ ನಿರ್ಮಾಣದಲ್ಲಿ ಸಾಧು ಮುರುಗೇಶ್‌, ಮಿಲ್‌ ಚಂದ್ರು, ಪಿ.ಎಸ್‌.ಕುಮಾರಸ್ವಾಮಿ ಮತ್ತು ಪ್ರೇಮ್‌ ಸಾಥ್‌ ನೀಡುತ್ತಿದ್ದಾರೆ. ಏಪ್ರಿಲ 10 ರಂದು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಬೆಂಗಳೂರು, ಹುಣಸೂರು ಮತ್ತು ಕುಂದಾಪುರ ಸುತ್ತಮುತ್ತ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ