ಆ್ಯಕ್ಷನ್‌ನಿಂದ ಕಾಮಿಡಿಯತ್ತ ಸಂತೋಷದ ಪಯಣ


Team Udayavani, Apr 3, 2018, 11:42 AM IST

SANTHOSH.jpg

ಕನ್ನಡ ಚಿತ್ರರಂಗದ ಕೆಲವು ನಾಯಕರು ಒಂದು ಸಿನಿಮಾ ಮಾಡಿ, ಆ ಚಿತ್ರ ಬಿಡುಗಡೆಯಾದ ನಂತರ ಆ ನಟರು ಏನು ಮಾಡುತ್ತಿರುತ್ತಾರೆಂಬ ಸುಳಿವೇ ಇರೋದಿಲ್ಲ. ಆ ಸಾಲಿಗೆ ಸೇರುವ ನಾಯಕ ನಟರಲ್ಲಿ ಸಂತೋಷ್‌ ಕೂಡಾ ಒಬ್ಬರು. ಯಾವ ಸಂತೋಷ್‌ ಎಂದರೆ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಅವರ ಮಗ ಎನ್ನುವ ಜೊತೆಗೆ “ಕೆಂಪ’, “ಜನ್ಮ’, “ಗಣಪ’, “ಕರಿಯಾ-2′ ಚಿತ್ರಗಳ ನಾಯಕ ಎನ್ನಬೇಕು.

ಸಂತೋಷ್‌ ಕೂಡಾ ಗಾಂಧಿನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ತಮ್ಮ ಸಿನಿಮಾ ಬಿಡುಗಡೆಯ ಸಮಯದಲ್ಲಷ್ಟೇ ಕಾಣಿಸಿಕೊಳ್ಳುವ ಸಂತೋಷ್‌ ಈಗ “ಕಾಜಲ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದಿನ ನಾಲ್ಕು ಸಿನಿಮಾಗಳಲ್ಲಿ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ಸಂತೋಷ್‌ ಮೊದಲ ಬಾರಿಗೆ ಆ ಇಮೇಜ್‌ನಿಂದ ಹೊರಬರಲು ಮುಂದಾಗಿದ್ದಾರೆ. ಅದೇ ಕಾರಣದಿಂದ “ಕಾಜಲ್‌’ ಸಿನಿಮಾ ಮಾಡುತ್ತಿದ್ದಾರೆ.

ಇದೊಂದು ಮ್ಯೂಸಿಕಲ್‌ ಕಾಮಿಡಿ ಜರ್ನಿ. ಈ ಹಿಂದಿನ ಸಿನಿಮಾಗಳಲ್ಲಿ ಹೊಡೆದಾಡಿದ್ದ ಸಂತೋಷ್‌ ಇಲ್ಲಿ ನಗಿಸಲು ಹೊರಟಿದ್ದಾರೆ. ಯಾಕಾಗಿ ಈ ಬದಲಾವಣೆ ಎಂದು ಕೇಳಿದರೆ, ಹೊಸದೇನೋ ಮಾಡಬೇಕೆನಿಸಿತು ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ. “ಸತತವಾಗಿ ಆ್ಯಕ್ಷನ್‌ ಸಿನಿಮಾಗಳನ್ನೇ ಮಾಡಿಕೊಂಡು ಬಂದೆ. ಈಗ ಬೇರೇನೋ ಮಾಡಬೇಕೆನಿಸಿತು. ಅದಕ್ಕಾಗಿ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ಕಾಜಲ್‌’. ಕತೆ ತುಂಬಾ ಇಷ್ಟವಾಯಿತು.

ನನಗೂ ಈ ಪಾತ್ರ ಹೊಸದೆನಿಸಿ ಒಪ್ಪಿಕೊಂಡೆ’ ಎನ್ನುವ ಸಂತೋಷ್‌ ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರಂತೆ. ಸಂತೋಷ್‌ ಚಿತ್ರರಂಗಕ್ಕೆ ಬಂದು 11 ವರ್ಷವಾಗಿದೆ. ಈ 11 ವರ್ಷದಲ್ಲಿ ಅವರು ನಟಿಸಿದ್ದು ಕೇವಲ ಐದು ಸಿನಿಮಾಗಳಲ್ಲಿ. ಇಷ್ಟೊಂದು ನಿಧಾನಗತಿಯ ಪಯಣ ಯಾಕೆ ಎಂದರೆ ಅದಕ್ಕೆ ನಾನಾ ಕಾರಣಗಳಿವೆ ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ.

“ಕೆಂಪ ಚಿತ್ರದಿಂದಲೇ ನನ್ನ ಪ್ರತಿಯೊಂದು ಚಿತ್ರಗಳು ಕಾರಣಾಂತರಗಳಿಂದ ತಡವಾಗುತ್ತಾ ಹೋದುವು. ಈ ಮಧ್ಯೆ ನಾನು ಕೂಡಾ ಒಂದು ಸಿನಿಮಾ ಬಿಡುಗಡೆಯಾಗಿ ಎರಡೂರು ವರ್ಷ ಗ್ಯಾಪ್‌ ತೆಗೆದುಕೊಂಡೆ. ಬಿಝಿನೆಸ್‌ಗಾಗಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದೆ. ಆ ಕಾರಣದಿಂದ ತಡವಾಯಿತು. ಮುಂದೆ ಆ ತರಹ ಆಗಲ್ಲ. ವರ್ಷಕ್ಕೆರಡು ಸಿನಿಮಾ ಮಾಡಬೇಕೆಂದಿದ್ದೇನೆ.

ಈಗಾಗಲೇ ಒಂದೆರಡು ಸಿನಿಮಾಗಳ ಮಾತುಕತೆಯಾಗಿದೆ. ಎಂ.ಡಿ.ಶ್ರೀಧರ್‌ ಅವರ ಜೊತೆಗೊಂದು ಸಿನಿಮಾ ಮಾಡುತ್ತೇನೆ’ ಎನ್ನುವುದು ಸಂತೋಷ್‌ ಮಾತು. ಬಹುತೇಕ ತಮ್ಮದೇ ಬ್ಯಾನರ್‌ನಲ್ಲಿ ನಟಿಸುತ್ತಿದ್ದ ಸಂತೋಷ್‌ ಮುಂದಿನ ದಿನಗಳಲ್ಲಿ ಬೇರೆ ಬ್ಯಾನರ್‌ನ ಸಿನಿಮಾಗಳಲ್ಲೂ ನಟಿಸಲಿದ್ದಾರಂತೆ.

ಟಾಪ್ ನ್ಯೂಸ್

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.