“ನಾನು ನಟನಾಗಿ ಕೆಲಸ ಮಾಡುವುದಿಲ್ಲ.. : ಅಭಿಮಾನಿಗಳಿಗೆ ಶಾಕ್‌ ಕೊಟ್ಟ ಆಮಿರ್‌ ಖಾನ್‌ ಹೇಳಿಕೆ

Team Udayavani, Nov 15, 2022, 12:46 PM IST

tdy-7

ಮುಂಬಯಿ: ಮಿಸ್ಟರ್ ಫರ್ಪೆಕ್ಟ್ ಆಮಿರ್‌ ಖಾನ್‌ ಅವರ ʼಲಾಲ್‌ ಸಿಂಗ್‌ ʼ ಬಾಕ್ಸ್‌ ಆಫೀಸ್‌ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ. ಓಟಿಟಿಯಲ್ಲಿ ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು. ಸದ್ಯ ಆಮಿರ್‌ ಖಾನ್‌ ಹೊಸ ಚಿತ್ರವೊಂದರ ನಿರ್ಮಾಣಕ್ಕೆ ಸಿದ್ದರಾಗಿದ್ದಾರೆ.

ʼಕ್ಯಾಂಪಿಯೋನ್ಸ್ʼ ಎಂಬ  ಸ್ಪ್ಯಾನಿಷ್ ಚಲನಚಿತ್ರದ ರೂಪಾಂತರ( adaptation) ʼಚಾಂಪಿಯನ್ಸ್‌ʼ ಸಿನಿಮಾವನ್ನು ಆಮಿರ್‌ ಖಾನ್‌ ಅವರ ಆಮಿರ್‌ ಪ್ರೂಡಕ್ಷನ್‌, ಸೋನಿ ಪಿಕ್ಚರ್ಸ್‌ ಇಂಡಿಯಾ ಹಾಗೂ 200 ನಾಟ್ ಔಟ್ ಪ್ರೊಡಕ್ಷನ್ಸ್ ನೊಂದಿಗೆ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.

ಇದೊಂದು ಕ್ರೀಡಾ ಕಥೆಯ ಸ್ಪೂರ್ತಿದಾಯಕ ಸಿನಿಮಾವಾಗಿದ್ದು. ಆಮಿರ್‌ ಖಾನ್‌ ಅವರೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಮೊದಲು ಖಾತ್ರಿಯಾಗಿತ್ತು. ಆದರೆ ಈಗ ಯೋಜನೆ ಬದಲಾಗಿದೆ. ಇತ್ತೀಚೆಗೆ ಮಾಧ್ಯಮದ ಮುಂದೆ ಮಾತನಾಡುತ್ತಾ ಆಮಿರ್‌ ಖಾನ್‌ ʼಚಾಂಪಿಯನ್ಸ್‌ʼ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

“ನಾನು 35 ವರ್ಷಗಳಿಂದ ಸಿನಿಮಾರಂಗದಲ್ಲಿ ನಟಿಸುತ್ತಿದ್ದೇನೆ. ಈ ವರ್ಷಗಳಲ್ಲಿ ನಾನು ಸಂಪೂರ್ಣವಾಗಿ ನನ್ನ ಕೆಲಸದ ಮೇಲೆ ಗಮನ ಹರಿಸಿದ್ದೇನೆ. ನನ್ನ ಆತ್ಮೀಯರಾದವರಿಗೆ ನನ್ನ ನಿರ್ಣಯ ಸರಿಯಲ್ಲ ಎಂದು ಅನ್ನಿಸಬಹುದು. ಆದರೆ ನನ್ನ ಪ್ರಕಾರ  ನಾನು ಅವರಿಂದ ದೂರವಿರುವುದು ಸರಿ ಎಂದು ಅನ್ನಿಸುತ್ತದೆ. ಜೀವನವನ್ನು ಬೇರೊಂದು ಮಾರ್ಗದಲ್ಲಿಯೂ ಅನುಭವಿಸಬೇಕು. ಮುಂದಿನ ಒಂದೂವರೆ ವರ್ಷ ನಾನು ನಟನಾಗಿ ಕೆಲಸ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ನಾನು ನಟನೆಯಿಂದ ಬ್ರೇಕ್‌ ತೆಗೆದುಕೊಂಡು ನನ್ನ ಕುಟುಂಬ, ಮಕ್ಕಳು,ತಾಯಿಯೊಂದಿಗೆ ಸಮಯ ಕಳೆಯುತ್ತೇನೆ  ಎಂದು ಆಮಿರ್‌ ಹೇಳಿದ್ದಾರೆ.

ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರಕ್ಕೆ ಟ್ವಿಟರ್‌ ನಲ್ಲಿ ಬಾಯ್ಕಾಟ್‌ ಕೂಗು ಕೇಳಿ ಬಂದಿತ್ತು. ಇದರಿಂದ ಸಿನಿಮಾಕ್ಕೆ ಹೊಡೆತ ಬಿದ್ದಿತ್ತು. ಬಹುಶಃ ಆ ಕಾರಣದಿಂದಲೂ ಆಮಿರ್‌ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಕೆಲ ಅಭಿಮಾನಿಗಳು ಊಹಿಸಿದ್ದಾರೆ. ಕಾಜೂಲ್‌ ನಟನೆಯ ʼಸಲಾಂ ವೆಂಕಿʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಆಮಿರ್‌ ಖಾನ್‌ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

1-sad-asd

ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ; ಯಾವುದೇ ಆತುರವಿಲ್ಲ ಎಂದ ಚುನಾವಣಾ ಆಯೋಗ

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-23

ಮಾಸ್‌ ರಾಮಾಚಾರಿ 2.0

tdy-13

ಯಲಾಕುನ್ನಿಗೆ ಮುಹೂರ್ತ ಸಂಭ್ರಮ

tdy-12

ಹಾರರ್‌ ʼತಾಯ್ತʼದಲ್ಲಿ ಹರ್ಷಿಕಾ ನಟನೆ

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

part 3 trend in sandalwood

ಪಾರ್ಟ್‌-2 ಆಯ್ತು ಈಗ ಪಾರ್ಟ್‌-3 ಟ್ರೆಂಡ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

sub registrar

ಸಬ್‌ರಿಜಿಸ್ಟ್ರಾರ್‌ ಕಚೇರಿಗಳು ಇನ್ನು ಸ್ಮಾರ್ಟ್‌

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.